ಬಾಯಲ್ಲಿ ನೀರೂರುವ ಮಾವಿನಹಣ್ಣಿನ ರಸಗುಲ್ಲಾ ತಯಾರಿಸುವುದು ತುಂಬಾ ಸುಲಭ; ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಲ್ಲಿ ನೀರೂರುವ ಮಾವಿನಹಣ್ಣಿನ ರಸಗುಲ್ಲಾ ತಯಾರಿಸುವುದು ತುಂಬಾ ಸುಲಭ; ಇಲ್ಲಿದೆ ಪಾಕವಿಧಾನ

ಬಾಯಲ್ಲಿ ನೀರೂರುವ ಮಾವಿನಹಣ್ಣಿನ ರಸಗುಲ್ಲಾ ತಯಾರಿಸುವುದು ತುಂಬಾ ಸುಲಭ; ಇಲ್ಲಿದೆ ಪಾಕವಿಧಾನ

ಬೇಸಿಗೆಯಲ್ಲಿ ಮಾವಿನ ಹಣ್ಣುಗಳು ಹೇರಳವಾಗಿ ದೊರೆಯುತ್ತವೆ. ಅವುಗಳಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಅವುಗಳಲ್ಲಿ ಮಾವಿನ ಹಣ್ಣಿನ ರಸಗುಲ್ಲಾ ಕೂಡ ಒಂದು. ಇಲ್ಲಿದೆ ಮಾವಿನಹಣ್ಣಿನ ರಸಗುಲ್ಲಾ ಪಾಕವಿಧಾನ.

ಬಾಯಲ್ಲಿ ನೀರೂರುವ ಮಾವಿನಹಣ್ಣಿನ ರಸಗುಲ್ಲಾ ತಯಾರಿಸುವುದು ತುಂಬಾ ಸುಲಭ
ಬಾಯಲ್ಲಿ ನೀರೂರುವ ಮಾವಿನಹಣ್ಣಿನ ರಸಗುಲ್ಲಾ ತಯಾರಿಸುವುದು ತುಂಬಾ ಸುಲಭ

ಬೇಸಿಗೆಯಲ್ಲಿ ಮಾವಿನ ಹಣ್ಣುಗಳು ಹೇರಳವಾಗಿ ದೊರೆಯುತ್ತವೆ. ಅವುಗಳಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಅವುಗಳಲ್ಲಿ ಮಾವಿನ ಹಣ್ಣಿನ ರಸಗುಲ್ಲಾ ಕೂಡ ಒಂದು. ಬಹುತೇಕ ಮಂದಿ ರಸಗುಲ್ಲಾ ಸಿಹಿಖಾದ್ಯವನ್ನು ಇಷ್ಟಪಟ್ಟು ತಿಂತಾರೆ. ಮಾವಿನಹಣ್ಣಿನ ರಸಗುಲ್ಲಾ ಕೂಡ ಇದರಂತೆ ಬಹಳ ರುಚಿಕರವಾಗಿರುತ್ತದೆ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮಾವಿನಹಣ್ಣಿನ ರಸಗುಲ್ಲಾ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಮಾವಿನ ಹಣ್ಣು – ಮೂರು, ಹಾಲು - ಒಂದು ಲೀಟರ್, ಸಕ್ಕರೆ - ಒಂದು ಕಪ್, ನಿಂಬೆ ರಸ – 1 ಚಮಚ, ಕೆನೆ ತೆಗೆದ ಹಾಲು – 1 ಕಪ್, ಏಲಕ್ಕಿ ಪುಡಿ- ಅರ್ಧ ಚಮಚ, ಗೋಡಂಬಿ- 1 ಹಿಡಿ.

ತಯಾರಿಸುವ ವಿಧಾನ: ಮೊದಲಿಗೆ ಮಾವಿನ ಹಣ್ಣನ್ನು ತೆಗೆದುಕೊಂಡು ಪ್ಯೂರಿ ಮಾಡಿ. ಪ್ಯೂರಿಗೆ ಅರ್ಧ ಲೀಟರ್ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಉಂಡೆಗಳಾಗದಂತೆ ಚೆನ್ನಾಗಿ ಕಲಕಿ. ನಂತರ ಹಾಲನ್ನು ಮಧ್ಯಮ ಉರಿಯಲ್ಲಿ ಕುದಿಸಿ. ಈ ವೇಳೆ ಹಾಲು ಒಡೆಯಲು ಪ್ರಾರಂಭಿಸುತ್ತದೆ.

ನಂತರ ಅದಕ್ಕೆ 7 ರಿಂದ 8 ಹನಿ ನಿಂಬೆ ರಸವನ್ನು ಸೇರಿಸಿ. ಹಾಲು ಒಡೆದು ಹೋಗುತ್ತದೆ. ಇದನ್ನು ಸೋಸಿಕೊಂಡು ಪಕ್ಕಕ್ಕೆ ಇರಿಸಿ. ಮಿಶ್ರಣದಲ್ಲಿ ಕೊಂಚವೂ ನೀರುಳಿಸದೆ ಚೆನ್ನಾಗಿ ಹಿಸುಕಿ.

ಈ ಮಿಶ್ರಣವು ಮೃದುವಾಗುವವರೆಗೆ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಮಿಶ್ರಣದೊಂದಿಗೆ ಸಣ್ಣ ಉಂಡೆಗಳನ್ನು ಮಾಡಿ ಪಕ್ಕಕ್ಕೆ ಇರಿಸಿ. ಈಗ, ಸಿರಪ್ ತಯಾರಿಸಲು, ಕಡಾಯಿಯನ್ನು ಒಲೆಯ ಮೇಲೆ ಇರಿಸಿ. ಸಕ್ಕರೆ ಮತ್ತು ನೀರು ಸೇರಿಸಿ ಚೆನ್ನಾಗಿ ಕುದಿಸಿ.

ಸಕ್ಕರೆ ನೀರಿನಲ್ಲಿ ಸಂಪೂರ್ಣವಾಗಿ ಕರಗುವವರೆಗೆ ಕಾಯಿರಿ. ಸ್ವಲ್ಪ ಸಕ್ಕರೆ ಪಾಕ ಆಗುವವರೆಗೆ ಕಾಯಿರಿ. ಬಳಿಕ ಈಗಾಗಲೇ ತಯಾರಿಸಿದ ಉಂಡೆಗಳನ್ನು ಸೇರಿಸಿ. ಪ್ಯಾನ್ ಮುಚ್ಚಳವನ್ನು ಮುಚ್ಚಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಕುದಿಸಿ.

ಈಗ, ಕಡಾಯಿಯನ್ನು ಒಲೆಯ ಮೇಲೆ ಇರಿಸಿ, ಹಾಲನ್ನು ಸೇರಿಸಿ. ಸಣ್ಣ ಉರಿಯಲ್ಲಿ ಹಾಲನ್ನು ಕುದಿಸಿದ ನಂತರ, ಸಕ್ಕರೆಯನ್ನು ಸೇರಿಸಿ ಕರಗಿಸಿ. ಮಿಶ್ರಣವನ್ನು ಸಣ್ಣ ಉರಿಯಲ್ಲಿ ಕುದಿಸಿ ನಂತರ ಏಲಕ್ಕಿ ಪುಡಿಯನ್ನು ಸೇರಿಸಿ ಒಲೆಯನ್ನು ಆಫ್ ಮಾಡಿ.

ಕೊನೆಗೆ ಈ ಮಿಶ್ರಣಕ್ಕೆ ಮಾವಿನ ಪ್ಯೂರಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸಕ್ಕರೆ ಪಾಕಕ್ಕೆ ಅದ್ದಿ. ತಣ್ಣಗಾದ ನಂತರ ರಸಗುಲ್ಲಾವನ್ನು ಫ್ರಿಜ್ ಒಳಗೆ ಇರಿಸಿ. ಇದಕ್ಕೆ ನುಣ್ಣಗೆ ಕತ್ತರಿಸಿದ ಗೋಡಂಬಿಯಿಂದ ಅಲಂಕರಿಸಿದರೆ, ರುಚಿಕರವಾದ ಮಾವಿನ ರಸಗುಲ್ಲಾ ಸಿದ್ಧ. ಈ ಮಾವಿನ ರಸಗುಲ್ಲಾ ತುಂಬಾ ರುಚಿಕರವಾಗಿರುತ್ತದೆ. ಅತಿಥಿಗಳು ಮನೆಗೆ ಬಂದಾಗ ಮಾಡಿ ಕೊಡಬಹುದಿ. ಖಂಡಿತ ಇಷ್ಟಪಟ್ಟು ತಿಂತಾರೆ.

Priyanka Gowda

eMail