ಸಿಹಿತಿಂಡಿ ತಿನ್ನುವ ಬಯಕೆಯಾದರೆ ಈ ಲಡ್ಡು ಮಾಡಿ ನೋಡಿ; ಹಾಲು ಬೆರೆಸಿ ತಯಾರಿಸಲಾಗುವ ರವೆ ಲಾಡು ಪಾಕವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಹಿತಿಂಡಿ ತಿನ್ನುವ ಬಯಕೆಯಾದರೆ ಈ ಲಡ್ಡು ಮಾಡಿ ನೋಡಿ; ಹಾಲು ಬೆರೆಸಿ ತಯಾರಿಸಲಾಗುವ ರವೆ ಲಾಡು ಪಾಕವಿಧಾನ ಇಲ್ಲಿದೆ

ಸಿಹಿತಿಂಡಿ ತಿನ್ನುವ ಬಯಕೆಯಾದರೆ ಈ ಲಡ್ಡು ಮಾಡಿ ನೋಡಿ; ಹಾಲು ಬೆರೆಸಿ ತಯಾರಿಸಲಾಗುವ ರವೆ ಲಾಡು ಪಾಕವಿಧಾನ ಇಲ್ಲಿದೆ

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕರು ಸಿಹಿತಿಂಡಿಯನ್ನು ಇಷ್ಟಪಡುತ್ತಾರೆ. ಕೆಲವರಿಗೆ ಊಟ ಮಾಡಿದ ನಂತರ ಏನಾದರೂ ಸಿಹಿತಿಂಡಿ ತಿನ್ನಲೇಬೇಕು. ಸಿಹಿತಿಂಡಿಯನ್ನು ಅಂಗಡಿಗಳಲ್ಲಿ ಖರೀದಿಸುವ ಬದಲು ಮನೆಯಲ್ಲೇ ಮಾಡಿಕೊಡಬಹುದು. ಇಲ್ಲಿ ಹಾಲು ಬೆರೆಸಿ ತಯಾರಿಸಲಾಗುವ ರವೆ ಲಾಡು ಪಾಕವಿಧಾನ ನೀಡಲಾಗಿದೆ.

ಹಾಲು ಬೆರೆಸಿ ತಯಾರಿಸಲಾಗುವ ರವೆ ಲಾಡು ಪಾಕವಿಧಾನ ಇಲ್ಲಿದೆ
ಹಾಲು ಬೆರೆಸಿ ತಯಾರಿಸಲಾಗುವ ರವೆ ಲಾಡು ಪಾಕವಿಧಾನ ಇಲ್ಲಿದೆ (Pinterest )

ಸಿಹಿತಿಂಡಿಗಳನ್ನು ಯಾರು ತಾನೆ ಇಷ್ಟಪಡುವುದಿಲ್ಲ ಹೇಳೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕರು ಸಿಹಿತಿಂಡಿಯನ್ನು ಇಷ್ಟಪಡುತ್ತಾರೆ. ಕೆಲವರಿಗೆ ಊಟ ಮಾಡಿದ ನಂತರ ಏನಾದರೂ ಸಿಹಿತಿಂಡಿ ತಿನ್ನಲೇಬೇಕು. ಸಿಹಿತಿಂಡಿಯನ್ನು ಅಂಗಡಿಗಳಲ್ಲಿ ಖರೀದಿಸುವ ಬದಲು ಮನೆಯಲ್ಲೇ ಮಾಡಿಕೊಡಬಹುದು. ಇಲ್ಲಿ ಹಾಲು ಬೆರೆಸಿ ತಯಾರಿಸಲಾಗುವ ರವೆ ಲಾಡು ಪಾಕವಿಧಾನ ನೀಡಲಾಗಿದೆ. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟಪಡುವಿರಿ. ಇದರ ಪಾಕವಿಧಾನ ತುಂಬಾ ಸರಳ ಹಾಗೂ ತಿನ್ನಲು ತುಂಬಾ ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ. ರವೆ ಲಾಡು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ರವೆ ಲಾಡು ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಬಾಂಬೆ ರವೆ- ಎರಡು ಕಪ್, ಹಾಲು- ಒಂದೂವರೆ ಕಪ್, ತುಪ್ಪ- 8 ಚಮಚ, ಒಣ ಹಣ್ಣುಗಳು- ಅರ್ಧ ಕಪ್, ಸಕ್ಕರೆ- ಒಂದು ಕಪ್, ಏಲಕ್ಕಿ ಪುಡಿ- ಅರ್ಧ ಚಮಚ.

ಮಾಡುವ ವಿಧಾನ: ರವೆ ಲಾಡು ತಯಾರಿಸಲು, ಮೊದಲಿಗೆ ರವೆಯನ್ನು ಹಾಲಿನಲ್ಲಿ ನೆನೆಸಿಡಿ. ಇದನ್ನು 10 ನಿಮಿಷಗಳ ಕಾಲ ನೆನೆಸಿ. ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ ಅದರಲ್ಲಿ ರವೆ ಮತ್ತು ಹಾಲಿನ ಮಿಶ್ರಣವನ್ನು ಹಾಕಿ. ಇದನ್ನು ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಬೇಯಿಸಿ. ಮಿಶ್ರಣ ದಪ್ಪವಾಗಲು ಪ್ರಾರಂಭಿಸಿದಾಗ ಅದಕ್ಕೆ ಎರಡರಿಂದ ಮೂರು ಚಮಚ ತುಪ್ಪ ಬೆರಿಸಿ. ಈಗ ಐದರಿಂದ ಏಳು ನಿಮಿಷಗಳ ಕಾಲ ಕುದಿಯಲು ಬಿಡಿ.

ಇಡೀ ಮಿಶ್ರಣವು ಗಟ್ಟಿಯಾದಾಗ ಸಕ್ಕರೆ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡರಿಂದ ಮೂರು ನಿಮಿಷಗಳ ನಂತರ ಒಲೆ ಆಫ್ ಮಾಡಿ. ಈಗ ಒಲೆಯ ಮೇಲೆ ಮತ್ತೊಂದು ಕಡಾಯಿಯನ್ನು ಇಟ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಒಣಹಣ್ಣುಗಳನ್ನು ಹಾಕಿ ಹುರಿಯಿರಿ. ನಂತರ ಅವುಗಳನ್ನು ರವೆ ಮಿಶ್ರಣಕ್ಕೆ ಬೆರೆಸಿ.

ಈಗ ಮಿಶ್ರಣಕ್ಕೆ ಎರಡು ಚಮಚ ತುಪ್ಪ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಲಾಡು ರೂಪದಲ್ಲಿ ಉಂಡೆ ಕಟ್ಟಿದರೆ ರುಚಿಕರವಾದ ರವೆ ಲಾಡು ತಿನ್ನಲು ಸಿದ್ಧ. ಇದನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಬೇಕು. ಇದನ್ನೊಮ್ಮೆ ಮಾಡಿನೋಡಿ, ಖಂಡಿತ ಇಷ್ಟವಾಗುತ್ತೆ.

Whats_app_banner