ಕಿತ್ತಳೆ ತಿಂದು ಸಿಪ್ಪೆ ಎಸಿಬೇಡಿ, ಇದರಿಂದ ತಯಾರಿಸಬಹುದು ರುಚಿಕರ ಚಟ್ನಿ; ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಿತ್ತಳೆ ತಿಂದು ಸಿಪ್ಪೆ ಎಸಿಬೇಡಿ, ಇದರಿಂದ ತಯಾರಿಸಬಹುದು ರುಚಿಕರ ಚಟ್ನಿ; ಇಲ್ಲಿದೆ ರೆಸಿಪಿ

ಕಿತ್ತಳೆ ತಿಂದು ಸಿಪ್ಪೆ ಎಸಿಬೇಡಿ, ಇದರಿಂದ ತಯಾರಿಸಬಹುದು ರುಚಿಕರ ಚಟ್ನಿ; ಇಲ್ಲಿದೆ ರೆಸಿಪಿ

ಕಿತ್ತಳೆತಿಂದು ಅದರ ಸಿಪ್ಪೆ ಎಸೆಯುವವರೇ ಹೆಚ್ಚು. ಆದರೆ, ಕಿತ್ತಳೆ ಸಿಪ್ಪೆಯಿಂದ ರುಚಿಕರವಾದ ಚಟ್ನಿ ತಯಾರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ.ಇದರಿಂದ ರುಚಿಕರವಾದ ಚಟ್ನಿ ತಯಾರಿಸಬಹುದು. ಇದನ್ನು ಒಮ್ಮೆ ಮಾಡಿದರೆ ಮತ್ತೆಂದೂ ನೀವು ಕಿತ್ತಳೆ ಸಿಪ್ಪೆ ಎಸೆಯುವುದೇ ಇಲ್ಲ. ಹಾಗಿದ್ದರೆ ಕಿತ್ತಳೆ ಸಿಪ್ಪೆ ಚಟ್ನಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಿತ್ತಳೆ ತಿಂದು ಸಿಪ್ಪೆ ಎಸಿಬೇಡಿ, ಇದರಿಂದ ತಯಾರಿಸಬಹುದು ರುಚಿಕರ ಚಟ್ನಿ; ಇಲ್ಲಿದೆ ರೆಸಿಪಿ
ಕಿತ್ತಳೆ ತಿಂದು ಸಿಪ್ಪೆ ಎಸಿಬೇಡಿ, ಇದರಿಂದ ತಯಾರಿಸಬಹುದು ರುಚಿಕರ ಚಟ್ನಿ; ಇಲ್ಲಿದೆ ರೆಸಿಪಿ (Freepik)

ಕಿತ್ತಳೆ ತಿಂದು ಅದರ ಸಿಪ್ಪೆ ಎಸೆಯುವವರೇ ಹೆಚ್ಚು. ಆದರೆ, ಕಿತ್ತಳೆ ಸಿಪ್ಪೆಯಿಂದ ರುಚಿಕರವಾದ ಚಟ್ನಿ ತಯಾರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ. ಬಹಳ ಬೇಗನೆ ಸಿದ್ಧವಾಗುವ ಈ ರೆಸಿಪಿ ತಯಾರಿಸುವುದು ಕೂಡ ತುಂಬಾ ಸುಲಭ. ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುವ ಈ ಚಟ್ನಿಯು ಅನ್ನ, ರೊಟ್ಟಿ ಅಥವಾ ಪರೋಟ ಜತೆ ತಿನ್ನಲು ರುಚಿಕರವಾಗಿರುತ್ತದೆ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಕಿತ್ತಳೆ ಚಟ್ನಿ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಕಿತ್ತಳೆ ಸಿಪ್ಪೆ- 2 ಹಣ್ಣಿನ ಸಿಪ್ಪೆ, ಎಣ್ಣೆ- ಅಗತ್ಯ ತಕ್ಕಷ್ಟು, ಉದ್ದಿನ ಬೇಳೆ- 1 ಟೀ ಚಮಚ, ಒಣಮೆಣಸಿನಕಾಯಿ- 2, ಇಂಗು- ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಹುಣಸೆಹಣ್ಣು- ಅರ್ಧ ನಿಂಬೆ ಗಾತ್ರ, ಬೆಲ್ಲ- ಸ್ವಲ್ಪ.

ಮಾಡುವ ವಿಧಾನ: ಕಿತ್ತಳೆ ಸಿಪ್ಪೆಗಳನ್ನು ಚಿಕ್ಕದಾಗಿ ಕತ್ತರಿಸಿ. ಒಲೆ ಮೇಲೆ ಒಂದು ಕಡಾಯಿ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಉದ್ದಿನಬೇಳೆ, ಒಣ ಮೆಣಸಿನಕಾಯಿ, ಇಂಗು ಬೆರೆಸಿ. ಉದ್ದಿನಬೇಳೆ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ ಕತ್ತರಿಸಿದ ಕಿತ್ತಳೆ ಸಿಪ್ಪೆಗಳನ್ನು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. 2 ರಿಂದ 3 ನಿಮಿಷಗಳ ಕಾಲ ಮಿಶ್ರಣ ಮಾಡಿ ಹುಣಸೆಹಣ್ಣು ಮತ್ತು ಉಪ್ಪು ಬೆರೆಸಿ ಸ್ವಲ್ಪ ಸಮಯ ಬೇಯಲು ಬಿಡಿ.

ಇದು ತಣ್ಣಗಾದ ನಂತರ, ಈ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ಬೆಲ್ಲ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ. ಇಷ್ಟು ಮಾಡಿದರೆ ರುಚಿಕರವಾದ ಚಟ್ನಿ ಸವಿಯಲು ಸಿದ್ಧ. ತ್ವರಿತವಾಗಿ ಸಿದ್ಧವಾಗುತ್ತೆ ಈ ರೆಸಿಪಿ. ಇದನ್ನು ಅನ್ನ, ರೊಟ್ಟಿ, ಚಪಾತಿ ಜತೆ ತಿನ್ನಲು ರುಚಿಕರವಾಗಿರುತ್ತದೆ.

ಕಿತ್ತಳೆ ಸಿಪ್ಪೆಯ ಚಟ್ನಿ ತಯಾರಿಸುವ ಸಲಹೆ ಮತ್ತು ಆರೋಗ್ಯ ಪ್ರಯೋಜನಗಳು

ಸಿಪ್ಪೆಗಳನ್ನು ಕುದಿಸಿ: ಕಿತ್ತಳೆ ಸಿಪ್ಪೆ ನೈಸರ್ಗಿಕವಾಗಿ ಕಹಿಯಾಗಿರಬಹುದು. ಅಡುಗೆ ಮಾಡುವ ಮೊದಲು ಕೆಲವು ನಿಮಿಷಗಳ ಕಾಲ ಕಿತಳೆ ಸಿಪ್ಪೆಯನ್ನು ನೀರಿನಲ್ಲಿ ಕುದಿಸುವುದು ಉತ್ತಮ. ಇದು ಕಹಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಿತ್ತಳೆ ಸಿಪ್ಪೆ ಚರ್ಮದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಫ್ಲೇವನಾಯ್ಡ್‌ಗಳು ಮತ್ತು ಲಿಮೋನಾಯ್ಡ್‌ಗಳಲ್ಲಿ ಸಮೃದ್ಧವಾಗಿರುವ ಕಿತ್ತಳೆ ಸಿಪ್ಪೆ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಕಿತ್ತಳೆ ಸಿಪ್ಪೆಯ ಚಟ್ನಿಯ ಸೇವನೆಯು ಸುಕ್ಕು, ಕಪ್ಪು ಕಲೆಗಳಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

Whats_app_banner