ಉಳಿದ ಚಪಾತಿಯಿಂದ ತಯಾರಿಸಿ ರುಚಿಕರ ಉಪ್ಪಿಟ್ಟು; ಮಕ್ಕಳು ತುಂಬಾ ಇಷ್ಟಪಟ್ಟು ತಿಂತಾರೆ, ಇಲ್ಲಿದೆ ರೆಸಿಪಿ
ರಾತ್ರಿ ಊಟಕ್ಕೆ ತಯಾರಿಸಿದ ಚಪಾತಿ ಉಳಿದಿದ್ದರೆ ಅದನ್ನು ಎಸೆಯುವ ಬದಲು ರುಚಿಕರ ಉಪಾಹಾರ ತಿಂಡಿ ತಯಾರಿಸಬಹುದು. ಉಳಿದ ಚಪಾತಿಯಿಂದ ಉಪ್ಪಿಟ್ಟು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ರಾತ್ರಿ ವೇಳೆ ಅನೇಕ ಮಂದಿ ಊಟಕ್ಕೆ ಚಪಾತಿ ಮಾಡುತ್ತಾರೆ. ರಾತ್ರಿ ವೇಳೆ ಮಾಡಿಟ್ಟ ಚಪಾತಿ ಉಳಿಯುವುದೇ ಹೆಚ್ಚು. ಉಳಿದ ಚಪಾತಿ ನೇರ ಹೋಗುವುದು ಡಸ್ಟ್ ಬಿನ್‍ಗೆ. ಆದರೆ, ಈ ಚಪಾತಿಯವನ್ನು ವ್ಯರ್ಥ ಮಾಡದೆ ರುಚಿಕರವಾದ ಉಪಾಹಾರ ತಯಾರಿಸಬಹುದು. ಬೆಳಗ್ಗಿನ ಉಪಾಹಾರಕ್ಕೂ ಈ ಉಳಿದ ಚಪಾತಿಯಿಂದ ತಯಾರಿಸಿದ ಉಪ್ಪಿಟ್ಟು ತಿನ್ನಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಸಾಮಾನ್ಯ ಉಪ್ಪಿಟ್ಟಿಗೆ ಹೋಲಿಸಿದರೆ ಈ ಚಪಾತಿ ಉಪ್ಪಿಟ್ಟು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವುದು ಸಹ ತುಂಬಾ ಸುಲಭ. ಉಳಿದ ಚಪಾತಿಯಿಂದ ಉಪ್ಪಿಟ್ಟು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಚಪಾತಿ ಉಪ್ಪಿಟ್ಟು ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಚಪಾತಿ – 4, ಈರುಳ್ಳಿ – 1, ಟೊಮೆಟೊ – 1, ಕ್ಯಾರೆಟ್ – 1, ಕ್ಯಾಪ್ಸಿಕಂ - ½, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ½, ಕೊತ್ತಂಬರಿ ಪುಡಿ - 1/2 ಕಪ್, ಗರಂ ಮಸಾಲಾ - 1/2 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು - ರುಚಿಗೆ ತಕ್ಕಷ್ಟು, ಕರಿಬೇವಿನ ಎಲೆ – ಅಗತ್ಯಕ್ಕೆ ತಕ್ಕಷ್ಟು, ಅಡುಗೆ ಎಣ್ಣೆ - 2 ಚಮಚ, ಸಾಸಿವೆ - 1/2 ಚಮಚ, ಜೀರಿಗೆ - 1/2 ಚಮಚ.
ಮಾಡುವ ವಿಧಾನ: ಚಪಾತಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಲೆಯ ಮೇಲೆ ಎಣ್ಣೆಯನ್ನು ಹಾಕಿ. ಅದಕ್ಕೆ ಸಾಸಿವೆ ಮತ್ತು ಜೀರಿಗೆಯನ್ನು ಸೇರಿಸಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊವನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ. ಅವು ಮೃದುವಾಗುವವರೆಗೆ ಬೇಯಿಸಿ.
ಈಗ ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ತುಂಡುಗಳನ್ನು ಸೇರಿಸಿ ಹುರಿಯಿರಿ. ಅರಿಶಿನ, ಮೆಣಸಿನ ಪುಡಿ, ಉಪ್ಪು ಮತ್ತು ಕೊತ್ತಂಬರಿ ಪುಡಿ ಸೇರಿಸಿ ಎರಡು ನಿಮಿಷಗಳ ಕಾಲ ಬೇಯಿಸಿ. ಈಗ ಕತ್ತರಿಸಿದ ಚಪಾತಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ಗರಂ ಮಸಾಲೆ, ಕರಿಬೇವಿನ ಎಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣಕ್ಕೆ ನೀರು ಸೇರಿಸುವ ಅಗತ್ಯವಿಲ್ಲ. ಇದು ಒಣ ಪುಡಿಯಂತೆ ಇರುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬೆರೆಸಿದರೆ ರುಚಿಕರವಾದ ಚಪಾತಿ ಉಪ್ಮಿಟ್ಟು ತಿನ್ನಲು ಸಿದ್ಧ. ಈ ಉಪ್ಪಿಟ್ಟನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೂ ತಿನ್ನಬಹುದು. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗುತ್ತದೆ. ಮಕ್ಕಳು ಕೂಡ ತುಂಬಾ ಇಷ್ಟಪಟ್ಟು ತಿಂತಾರೆ.
ವಿಭಾಗ