ಚಿಕನ್, ಮೀನು ಉಪ್ಪಿನಕಾಯಿ ತಿಂದಿರಬಹುದು: ಮೊಟ್ಟೆ ಉಪ್ಪಿನಕಾಯಿ ಸವಿದಿದ್ದೀರಾ, ಇದನ್ನು ಮಾಡುವುದು ಹೀಗೆ
ಕನ್ನಡ ಸುದ್ದಿ  /  ಜೀವನಶೈಲಿ  /  ಚಿಕನ್, ಮೀನು ಉಪ್ಪಿನಕಾಯಿ ತಿಂದಿರಬಹುದು: ಮೊಟ್ಟೆ ಉಪ್ಪಿನಕಾಯಿ ಸವಿದಿದ್ದೀರಾ, ಇದನ್ನು ಮಾಡುವುದು ಹೀಗೆ

ಚಿಕನ್, ಮೀನು ಉಪ್ಪಿನಕಾಯಿ ತಿಂದಿರಬಹುದು: ಮೊಟ್ಟೆ ಉಪ್ಪಿನಕಾಯಿ ಸವಿದಿದ್ದೀರಾ, ಇದನ್ನು ಮಾಡುವುದು ಹೀಗೆ

ಮೊಟ್ಟೆಯಿಂದ ಹಲವಾರು ಬಗೆಯ ಖಾದ್ಯಗಳನ್ನು ಮಾಡಬಹುದು. ಎಂದಾದರೂ ಮೊಟ್ಟೆ ಉಪ್ಪಿನಕಾಯಿ ಸೇವಿಸಿದ್ದೀರಾ. ಇದು ಬಹಳ ರುಚಿಕರವಾಗಿರುತ್ತದೆ. ಚಿಕನ್, ಮೀನು, ತರಕಾರಿ ಉಪ್ಪಿನಕಾಯಿಗಳಂತೆ ಮೊಟ್ಟೆ ಉಪ್ಪಿನಕಾಯಿಯನ್ನು ಕೂಡ ಮಾಡಬಹುದು. ಇದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಮೊಟ್ಟೆ ಉಪ್ಪಿನಕಾಯಿ ರೆಸಿಪಿ ವಿಧಾನ ಇಲ್ಲಿದೆ
ಮೊಟ್ಟೆ ಉಪ್ಪಿನಕಾಯಿ ರೆಸಿಪಿ ವಿಧಾನ ಇಲ್ಲಿದೆ (Crazy Spice/YouTube )

ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಮೊಟ್ಟೆಯಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅಂದಹಾಗೆ, ಎಂದಾದರೂ ಮೊಟ್ಟೆ ಉಪ್ಪಿನಕಾಯಿ ಸೇವಿಸಿದ್ದೀರಾ. ಇದು ಬಹಳ ರುಚಿಕರವಾಗಿರುತ್ತದೆ. ಚಿಕನ್, ಮೀನು, ತರಕಾರಿ ಉಪ್ಪಿನಕಾಯಿಗಳಂತೆ ಮೊಟ್ಟೆ ಉಪ್ಪಿನಕಾಯಿಯನ್ನು ಕೂಡ ಮಾಡಬಹುದು. ಇದನ್ನು ತಯಾರಿಸುವುದು ತುಂಬಾನೇ ಸಿಂಪಲ್. ಒಮ್ಮೆ ಮಾಡಿ ತಿಂದರೆ, ನಿಮಗೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸಬಹುದು. ತಿಂಗಳಿಗಿಂತ ಹೆಚ್ಚು ಕಾಲ ಇದನ್ನು ಸಂಗ್ರಹಿಸಿಡಬಹುದು. ಈ ರೆಸಿಪಿ ತಯಾರಿಸುವುದು ಕೂಡ ತುಂಬಾ ಸರಳ. ಈ ರೆಸಿಪಿ ಮಾಡುವುದು ಹೇಗೆ, ಇಲ್ಲಿದೆ ಪಾಕವಿಧಾನ.

ಮೊಟ್ಟೆ ಉಪ್ಪಿನಕಾಯಿ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಮೊಟ್ಟೆ- 7, ಕಾಳುಮೆಣಸಿನ ಪುಡಿ- 1 ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ನೀರು- ಬೇಕಾದಷ್ಟು, ಎಣ್ಣೆ- 1 ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಟೀ ಚಮಚ, ಮೆಂತ್ಯ ಪುಡಿ- ಕಾಲು ಟೀ ಚಮಚ, ಸಾಸಿವೆ- ಎರಡು ಟೀ ಚಮಚ, ಅರಿಶಿನ- ಅರ್ಧ ಟೀ ಚಮಚ, ಮೆಣಸಿನಪುಡಿ- 3 ಟೀ ಚಮಚ, ಕರಿಬೇವು- ಅರ್ಧ ಹಿಡಿಯಷ್ಟು, ನಿಂಬೆ ರಸ- ಅರ್ಧ ಕಪ್.

ಮಾಡುವ ವಿಧಾನ: ಕುಕ್ಕರ್ ಅನ್ನು ಸ್ಟೌವ್ ಮೇಲೆ ಇಟ್ಟು ಅದರಲ್ಲಿ ನೀರು ಸುರಿಯಿರಿ.

- ಒಂದು ಪಾತ್ರೆಯಲ್ಲಿ ಮೊಟ್ಟೆಗಳನ್ನು ಒಡೆದು ಅದಕ್ಕೆ ಕಾಳುಮೆಣಸಿನಪುಡಿ ಮತ್ತು ಒಂದು ಚಮಚ ಉಪ್ಪು ಹಾಕಿ ಮಿಶ್ರಣ ಮಾಡಿ.

- ಕುಕ್ಕರ್‌ನಲ್ಲಿ ಒಂದು ಚಿಕ್ಕ ಸ್ಟ್ಯಾಂಡ್ ಹಾಕಿ ಅದರ ಮೇಲೆ ಬೌಲ್ ಇಡಿ.

- ಅರ್ಧ ಗಂಟೆಯವರೆಗೆ ಅದನ್ನು ಮುಚ್ಚಿಟ್ಟು ಬೇಯಿಸಿ.

- ಕುಕ್ಕರ್ ಸೀಟಿ ಹೊಡೆದು ಸ್ವಲ್ವ ಸಮಯದ ನಂತರ ಮುಚ್ಚಳವನ್ನು ತೆಗೆಯಿರಿ ಮೊಟ್ಟೆಯ ಮಿಶ್ರಣವನ್ನು ಬೇಕಾದ ಗಾತ್ರಕ್ಕೆ ಕತ್ತರಿಸಿ, ಅವುಗಳನ್ನು ಪಕ್ಕಕ್ಕೆ ಇರಿಸಿ.

- ಸ್ಟೌವ್ ಮೇಲೆ ಬಾಣಲೆಯಿಟ್ಟು ಅದಕ್ಕೆ ಒಂದು ಕಪ್ ಎಣ್ಣೆ ಹಾಕಿ.

- ಎಣ್ಣೆ ಬಿಸಿಯಾದಾಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಂತ್ಯ ಪುಡಿ, ಸಾಸಿವೆ, ಗರಂ ಮಸಾಲೆ, ಕೊತ್ತಂಬರಿ ಪುಡಿ ಮತ್ತು ಅರಶಿನ ಸೇರಿಸಿ ಮಿಶ್ರಣ ಮಾಡಿ.

- ಅದಕ್ಕೆ ಕರಿಬೇವಿನ ಎಲೆಗಳು, ಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಸ್ಟೌವ್ ಆಫ್ ಮಾಡಿ.

- ಈಗ ಇನ್ನೊಂದು ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಅದಕ್ಕೆ 3 ಚಮಚ ಎಣ್ಣೆ ಹಾಕಿ.

- ಎಣ್ಣೆಗೆ ಮೊಟ್ಟೆಯ ತುಂಡುಗಳನ್ನು ಸೇರಿಸಿ, ಕಡಿಮೆ ಉರಿಯಲ್ಲಿ ಫ್ರೈ ಮಾಡಿ.

- ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ, ಸ್ಟೌವ್ ಆಫ್ ಮಾಡಿ.

- ಸಿದ್ಧಪಡಿಸಿದ ಮೆಣಸಿನಪುಡಿ ಮಿಶ್ರಣಕ್ಕೆ ಕತ್ತರಿಸಿದ ಮೊಟ್ಟೆಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

- ಬಿಸಿ ಸ್ವಲ್ಪ ಆರಿದ ನಂತರ ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಸಂಪೂರ್ಣ ತಣ್ಣಗಾದ ನಂತರ ಗಾಳಿಯಾಡದ ಡಬ್ಬದಲ್ಲಿ ಮೊಟ್ಟೆಯ ಉಪ್ಪಿನಕಾಯಿಯನ್ನು ಹಾಕಿಡಿ.

ಈ ರೆಸಿಪಿ ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ಮಾಡಿ ನೋಡಿ, ಖಂಡಿತಾ ಇಷ್ಟಪಡುವಿರಿ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ, ಅಷ್ಟು ರುಚಿಕರವಾಗಿರುತ್ತದೆ.

ಚಿಕನ್, ಮಟನ್, ಮೀನು ಉಪ್ಪಿನಕಾಯಿ ತಿಂದಿದ್ದರೆ ಈ ಮೊಟ್ಟೆ ಉಪ್ಪಿನಕಾಯಿಯೂ ಅಷ್ಟೇ ಬಹಳ ರುಚಿಕರವಾಗಿರುತ್ತದೆ. ಇದನ್ನು ಬೇಯಿಸಿ ಮಾಡುವುದರಿಂದ ಅಷ್ಟು ಬೇಗ ಹಾಳಾಗುವುದಿಲ್ಲ. ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ.

ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ವೈದ್ಯರು ಪ್ರತಿದಿನ ಮೊಟ್ಟೆ ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಮೊಟ್ಟೆಯಲ್ಲಿ ಪೊಟ್ಯಾಸಿಯಂ, ಕಬ್ಬಿಣ, ಸತು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದು ಪ್ರೋಟೀನ್‍ನಿಂದ ಕೂಡಿದೆ. ಈ ಮೊಟ್ಟೆ ಉಪ್ಪಿನಕಾಯಿ ರೆಸಿಪಿಯನ್ನು ಬಿಸಿ ಬಿಸಿ ಅನ್ನದೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದಕ್ಕೆ ನಿಂಬೆರಸವನ್ನು ಹಾಕುವುದರಿಂದ 1 ತಿಂಗಳು ಕೆಡದೆ ತಾಜಾವಾಗಿರುತ್ತದೆ. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು.

Whats_app_banner