ಉಳಿದಿರುವ ಇಡ್ಲಿಯನ್ನು ವ್ಯರ್ಥ ಮಾಡದೆ ರುಚಿಕರ ರೆಸಿಪಿ ತಯಾರಿಸಿ: ಈ ರೀತಿ ಮಸಾಲೆ ಇಡ್ಲಿ ಮಾಡಿದ್ರೆ ಮಕ್ಕಳು ಇಷ್ಟಪಟ್ಟು ತಿಂತಾರೆ
ಕನ್ನಡ ಸುದ್ದಿ  /  ಜೀವನಶೈಲಿ  /  ಉಳಿದಿರುವ ಇಡ್ಲಿಯನ್ನು ವ್ಯರ್ಥ ಮಾಡದೆ ರುಚಿಕರ ರೆಸಿಪಿ ತಯಾರಿಸಿ: ಈ ರೀತಿ ಮಸಾಲೆ ಇಡ್ಲಿ ಮಾಡಿದ್ರೆ ಮಕ್ಕಳು ಇಷ್ಟಪಟ್ಟು ತಿಂತಾರೆ

ಉಳಿದಿರುವ ಇಡ್ಲಿಯನ್ನು ವ್ಯರ್ಥ ಮಾಡದೆ ರುಚಿಕರ ರೆಸಿಪಿ ತಯಾರಿಸಿ: ಈ ರೀತಿ ಮಸಾಲೆ ಇಡ್ಲಿ ಮಾಡಿದ್ರೆ ಮಕ್ಕಳು ಇಷ್ಟಪಟ್ಟು ತಿಂತಾರೆ

ಬಹುತೇಕ ಮಂದಿ ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಇಡ್ಲಿ ಉಳಿದಿದ್ದರೆ, ಸಂಜೆ ವೇಳೆಗೆ ಇದನ್ನು ತಿನ್ನಲು ಇಷ್ಟವಾಗುವುದಿಲ್ಲ. ಹೀಗಾಗಿ ವಿಶಿಷ್ಟವಾಗಿ ಮಸಾಲೆ ಇಡ್ಲಿ ತಯಾರಿಸಬಹುದು. ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಇದನ್ನು ತಯಾರಿಸುವುದು ತುಂಬಾ ಸರಳ. ಇಲ್ಲಿದೆ ಪಾಕವಿಧಾನ.

ಉಳಿದಿರುವ ಇಡ್ಲಿಯನ್ನು ವ್ಯರ್ಥ ಮಾಡದೆ ತಯಾರಿಸಿ ರುಚಿಕರ ರೆಸಿಪಿ: ಈ ರೀತಿ ಮಾಡಿ ಮಾಡಿ ಮಸಾಲೆ ಇಡ್ಲಿ, ಮಕ್ಕಳು ಇಷ್ಟಪಟ್ಟು ತಿಂತಾರೆ (ಸಾಂಕೇತಿಕ ಚಿತ್ರ)
ಉಳಿದಿರುವ ಇಡ್ಲಿಯನ್ನು ವ್ಯರ್ಥ ಮಾಡದೆ ತಯಾರಿಸಿ ರುಚಿಕರ ರೆಸಿಪಿ: ಈ ರೀತಿ ಮಾಡಿ ಮಾಡಿ ಮಸಾಲೆ ಇಡ್ಲಿ, ಮಕ್ಕಳು ಇಷ್ಟಪಟ್ಟು ತಿಂತಾರೆ (ಸಾಂಕೇತಿಕ ಚಿತ್ರ) (PC: Canva)

ಇಡ್ಲಿಗೂ ದಕ್ಷಿಣ ಭಾರತೀಯರಿಗೂ ಇನ್ನಿಲ್ಲದ ನಂಟು. ಇಡ್ಲಿ ತಿನ್ನದ ದಕ್ಷಿಣ ಭಾರತೀಯರು ಬಹುಶಃ ಇರಲಿಕ್ಕಿಲ್ಲ. ಆದರೆ, ಬೆಳಗ್ಗೆ ಮಾಡಿದ ಇಡ್ಲಿ ಉಳಿದಿದ್ದರೆ ಏನು ಮಾಡುವುದು? ಮತ್ತೆ ಅದೇ ತಣ್ಣನೆಯ ಇಡ್ಲಿಯನ್ನು ತಿನ್ನಲು ಇಷ್ಟವಾಗದೇ ಇರಬಹುದು. ಹೀಗಾಗಿ ಇದರಿಂದ ಮಸಾಲೆ ಇಡ್ಲಿಯನ್ನು ತಯಾರಿಸಬಹುದು. ಸಂಜೆ ಶಾಲೆಯಿಂದ ಹಿಂತಿರುಗಿ ಬರುವ ಮಕ್ಕಳಿಗೆ ಈ ರೆಸಿಪಿ ಮಾಡಿಕೊಡಬಹುದು. ಇದನ್ನು ತಯಾರಿಸುವುದು ಹೇಗೆ? ಇಲ್ಲಿದೆ ಪಾಕವಿಧಾನ.

ಮಸಾಲೆ ಇಡ್ಲಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ- 2 ಟೀ ಚಮಚ, ಉದ್ದಿನಬೇಳೆ- 2 ಟೀ ಚಮಚ, ಒಣ ಕೊಬ್ಬರಿ- 2 ಟೀ ಚಮಚ, ಅಕ್ಕಿ- 1 ಟೀ ಚಮಚ, ಕಾಳುಮೆಣಸು- ಅರ್ಧ ಟೀ ಚಮಚ, ಒಣ ಮೆಣಸಿನಕಾಯಿ- 5, ಹುರಿಗಡಲೆ- 1 ಟೀ ಚಮಚ, ಹುಣಸೆಹಣ್ಣು- ಅರ್ಧ ನಿಂಬೆ ಗಾತ್ರದಷ್ಟು, ಇಡ್ಲಿ- 6 ರಿಂದ 7, ಬೆಣ್ಣೆ ಅಥವಾ ತುಪ್ಪ- 2 ಟೀ ಚಮಚ, ಸಾಸಿವೆ- ½ ಟೀ ಚಮಚ, ಜೀರಿಗೆ- ½ ಟೀ ಚಮಚ, ಕರಿಬೇವಿನ ಎಲೆ- ಸ್ವಲ್ಪ, ಈರುಳ್ಳಿ- 1, ಟೊಮೆಟೊ- 1, ಹಸಿ ಮೆಣಸಿನಕಾಯಿ, ಅರಶಿನ- ½ ಟೀ ಚಮಚ, ಮೆಣಸಿನಪುಡಿ- 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು- ಸ್ವಲ್ಪ.

ಮಾಡುವ ವಿಧಾನ: ಕಡಲೆಬೇಳೆ, ಉದ್ದಿನ ಬೇಳೆ, ಒಣ ಕೊಬ್ಬರಿ, ಹುರಿಗಡಲೆ, ಕಾಳುಮೆಣಸು, ಒಣಮೆಣಸಿನಕಾಯಿಯನ್ನು ನಂತರ ಒಂದರಂತೆ ತೆಗೆದುಕೊಂಡು ಹುರಿಯಿರಿ.

- ಈ ಎಲ್ಲಾ ಮಸಾಲೆಗಳು ತಣ್ಣಗಾದ ನಂತರ, ಅದನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿ.

- ಈಗ ಇಡ್ಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಯಾವ ಆಕಾರ ಇಷ್ಟಪಡುವಿರೋ ಆ ಆಕಾರದಲ್ಲಿ ಕತ್ತರಿಸಬೇಕು.

- ಅವುಗಳನ್ನು ಮಗುವಿನ ಇಷ್ಟಕ್ಕೆ ತಕ್ಕಂತೆ ವಿವಿಧ ಆಕಾರಗಳಲ್ಲಿ ಕತ್ತರಿಸಬಹುದು. ಇದರಿಂದ ಮಕ್ಕಳು ಕೇಳಿ ಹಾಕಿಸಿಕೊಂಡು ತಿನ್ನಬಹುದು.

- ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎರಡು ಚಮಚ ಬೆಣ್ಣೆ ಅಥವಾ ತುಪ್ಪವನ್ನು ಹಾಕಿ.

- ತುಪ್ಪ ಅಥವಾ ಬೆಣ್ಣೆ ಬಿಸಿಯಾದ ನಂತರ, ಅದಕ್ಕೆ ಕತ್ತರಿಸಿದ ಇಡ್ಲಿ ಹಾಕಿ ಹುರಿಯಿರಿ. ಇಡ್ಲಿ ಸ್ವಲ್ಪ ಗರಿಗರಿಯಾದಾಗ, ಬಣ್ಣ ಬದಲಾಗುವವರೆಗೆ ಹುರಿದು ಬೇರೆ ತಟ್ಟೆಗೆ ವರ್ಗಾಯಿಸಿ.

- ನಂತರ ಅದೇ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ತುಪ್ಪ ಬಿಸಿಯಾದಾಗ ಜೀರಿಗೆ, ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ.

- ಈಗ ಹಸಿ ಮೆಣಸಿನಕಾಯಿಯನ್ನು ಸೇರಿಸಿ, ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ನುಣ್ಣಗೆ ಕತ್ತರಿಸಿದ ಟೊಮೆಟೊ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.

- ಟೊಮೆಟೊ ಬೆಂದ ನಂತರ ಮೊದಲೇ ತಯಾರಿಸಿದ ಮಸಾಲೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಜತೆಗೆ ಹುಣಸೆಹಣ್ಣಿನ ನೀರು ಸೇರಿಸಿ ಮಿಶ್ರಣ ಮಾಡಿ,

- ಹಸಿ ವಾಸನೆ ಹೋಗುವವರೆಗೆ ಅವುಗಳನ್ನು ಹುರಿದು ನಂತರ ಕತ್ತರಿಸಿಟ್ಟಿರುವ ಇಡ್ಲಿ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.

- ಇಡ್ಲಿಗೆ ಮಸಾಲೆ ಪದಾರ್ಥ ಚೆನ್ನಾಗಿ ಅಂಟಿಕೊಳ್ಳಬೇಕು ಅಲ್ಲಿವರೆಗೂ ಮಿಶ್ರಣ ಮಾಡಿ. ಉಪ್ಪು ಕಡಿಮೆಯಾದರೆ ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಖಾರ ಸೇರಿಸಿ.

- ಮಸಾಲೆಯನ್ನು ಇಡ್ಲಿ ಹೀರಿಕೊಂಡ ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಕರವಾದ ಮಸಾಲೆ ಇಡ್ಲಿ ಸವಿಯಲು ಸಿದ್ಧ.

ಈ ರೆಸಿಪಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಒಮ್ಮೆ ಈ ಪಾಕವಿಧಾನ ಮಾಡಿ ನೋಡಿ, ಖಂಡಿತ ನಿಮಗೆ ಇಷ್ಟವಾಗಬಹುದು. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವಿಲ್ಲ.

Whats_app_banner