ಮೂಲಂಗಿ ಎಂದು ಮೂಗು ಮುರಿಯದಿರಿ: ಇದರಿಂದ ತಯಾರಿಸಬಹುದು ರುಚಿಕರ ತಿನಿಸು ಮುರೌರಿ, ಸಂಜೆ ಸ್ನಾಕ್ಸ್‌ಗೆ ಬೆಸ್ಟ್ ರೆಸಿಪಿಯಿದು
ಕನ್ನಡ ಸುದ್ದಿ  /  ಜೀವನಶೈಲಿ  /  ಮೂಲಂಗಿ ಎಂದು ಮೂಗು ಮುರಿಯದಿರಿ: ಇದರಿಂದ ತಯಾರಿಸಬಹುದು ರುಚಿಕರ ತಿನಿಸು ಮುರೌರಿ, ಸಂಜೆ ಸ್ನಾಕ್ಸ್‌ಗೆ ಬೆಸ್ಟ್ ರೆಸಿಪಿಯಿದು

ಮೂಲಂಗಿ ಎಂದು ಮೂಗು ಮುರಿಯದಿರಿ: ಇದರಿಂದ ತಯಾರಿಸಬಹುದು ರುಚಿಕರ ತಿನಿಸು ಮುರೌರಿ, ಸಂಜೆ ಸ್ನಾಕ್ಸ್‌ಗೆ ಬೆಸ್ಟ್ ರೆಸಿಪಿಯಿದು

ಪ್ರತಿದಿನ ಒಂದೇ ರೀತಿಯ ಖಾದ್ಯಗಳನ್ನ ತಿಂದು ಬೇಸರವೆನಿಸಿದ್ದರೆ ವಿಭಿನ್ನ ಖಾದ್ಯಗಳನ್ನು ಪ್ರಯತ್ನಿಸಬಹುದು.ಮೂಲಂಗಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಬಹುತೇಕರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ, ಇದರಿಂದವಿಭಿನ್ನ ತಿನಿಸುಗಳನ್ನು ತಯಾರಿಸಬಹುದು. ಮೂಲಂಗಿಯಿಂದ ಮಾಡಲಾಗುವ ಮುರೌರಿ ರೆಸಿಪಿ ಖಂಡಿತಾ ನಿಮಗೆ ಇಷ್ಟವಾಗಬಹುದು.

ಮೂಲಂಗಿ ಎಂದು ಮೂಗು ಮುರಿಯದಿರಿ: ಇದರಿಂದ ತಯಾರಿಸಬಹುದು ರುಚಿಕರವಾದ ಮುರೌರಿ ಖಾದ್ಯ, ಸಂಜೆ ಸ್ನಾಕ್ಸ್‌ಗೆ ಬೆಸ್ಟ್ ರೆಸಿಪಿಯಿದು
ಮೂಲಂಗಿ ಎಂದು ಮೂಗು ಮುರಿಯದಿರಿ: ಇದರಿಂದ ತಯಾರಿಸಬಹುದು ರುಚಿಕರವಾದ ಮುರೌರಿ ಖಾದ್ಯ, ಸಂಜೆ ಸ್ನಾಕ್ಸ್‌ಗೆ ಬೆಸ್ಟ್ ರೆಸಿಪಿಯಿದು

ಪ್ರತಿದಿನ ಒಂದೇ ರೀತಿಯ ಆಹಾರ ತಿಂದು ಬೇಸರವೆನಿಸಿದ್ದರೆ ವಿಭಿನ್ನ ಖಾದ್ಯಗಳನ್ನು ಪ್ರಯತ್ನಿಸಬಹುದು. ಮೂಲಂಗಿ ಅಂದ್ರೆ ಸಾಕು ಬಹುತೇಕರು ಮಾರುದೂರ ಓಡುತ್ತಾರೆ. ಹಾಸ್ಟೆಲ್, ಪಿಜಿಗಳಲ್ಲಿರುವವರಿಗೆ ಮೂಲಂಗಿ ಸಾಂಬಾರು ತಿಂದು ತಿಂದು ಬೇಸರ ಬಂದಿರಬಹುದು. ಮೂಲಂಗಿಯಿಂದ ಸಾಂಬಾರ್, ಪಲ್ಯ ಮಾತ್ರವಲ್ಲ ವಿಭಿನ್ನ ಖಾದ್ಯಗಳನ್ನು ಸಹ ತಯಾರಿಸಬಹುದು. ಉತ್ತರ ಪ್ರದೇಶ ಹಾಗೂ ಬಿಹಾರದ ಜನರು ಮೂಲಂಗಿ ಹಾಗೂ ಅಕ್ಕಿ ಹಿಟ್ಟಿನಿಂದ ಮಾಡಲಾಗುವ ಖಾದ್ಯ ಮುರೌರಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಇಲ್ಲಿನ ಬಹಳ ಜನಪ್ರಿಯ ಖಾದ್ಯವಾಗಿದೆ. ಉಪಾಹಾರ ಅಥವಾ ಸಂಜೆ ಸ್ನಾಕ್ಸ್‌ಗೂ ಇದನ್ನು ಸವಿಯಬಹುದು. ಹೊಸ ರುಚಿಯನ್ನು ಹುಡುಕುತ್ತಿರುವವರಿಗೆ ಇದು ಬೆಸ್ಟ್ ತಿನಿಸು ಎಂದರೆ ತಪ್ಪಿಲ್ಲ. ಮೂಲಂಗಿ ಇಷ್ಟವಿಲ್ಲದವರೂ ಕೂಡ ಈ ಖಾದ್ಯ ಮಾಡಿದರೆ ಬಾಯಿ ಚಪ್ಪರಿಸಿಕೊಂಡು ತಿನ್ನುವುದರಲ್ಲಿ ಡೌಟಿಲ್ಲ. ಬೆಳಗಿನ ಉಪಾಹಾರವಾಗಿಯೂ ಸೇವಿಸಬಹುದು ಅಥವಾ ಸಂಜೆ ಸ್ನಾಕ್ಸ್ ಆಗಿಯೂ ಸವಿಯಬಹುದು. ಈ ರೆಸಿಪಿ ಮಾಡುವುದು ತುಂಬಾ ಸಿಂಪಲ್. ಇದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಮೂಲಂಗಿ ಮುರೌರಿ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ತುರಿದ ಮೂಲಂಗಿ- 2 ಕಪ್, ನೀರು -ಅರ್ಧ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಅಕ್ಕಿ ಹಿಟ್ಟು- 3 ಕಪ್, ಜೀರಿಗೆ- 1 ಟೀ ಚಮಚ, ಶುಂಠಿ- 1 ಟೀ ಚಮಚ, ಅರಿಶಿನ- 1 ಟೀ ಚಮಚ, ಕೊತ್ತಂಬರಿ ಪುಡಿ- ಅರ್ಧ ಟೀ ಚಮಚ, ಕಾಳುಮೆಣಸಿನ ಪುಡಿ- ಅರ್ಧ ಟೀ ಚಮಚ, ಮೆಣಸಿನಕಾಯಿ- 3, ಎಣ್ಣೆ- ಬೇಕಾದಷ್ಟು, ಕೊತ್ತಂಬರಿ ಸೊಪ್ಪು- 1 ಹಿಡಿ. ಕಪ್ಪು ಜೀರಿಗೆ- 1 ಟೀ ಚಮಚ.

ಮಾಡುವ ವಿಧಾನ: ಮೊದಲಿಗೆ ಅಗಲವಾದ ಬಾಣಲೆಯನ್ನು ಸ್ಟೌವ್ ಮೇಲೆ ಇರಿಸಿ. ಅದಕ್ಕೆ ನೀರು ಹಾಕಿ, ಉಪ್ಪು ಸೇರಿಸಿ.

- ಬಾಣಲೆಯಲ್ಲಿ ನೀರು ಕುದಿಯುತ್ತಿರುವಾಗ, ಸಿಪ್ಪೆ ಸುಲಿದು ತುರಿದ ಮೂಲಂಗಿಯನ್ನು ಸೇರಿಸಿ.

- ಇದನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಮುಚ್ಚಳ ಮುಚ್ಚಿ. ಮೂಲಂಗಿಯನ್ನು ಮಧ್ಯಮ ಉರಿಯಲ್ಲಿ ಬೇಯಿಸಲು ಬಿಡಿ.

- ಮೂಲಂಗಿಯನ್ನು ಐದಾರು ನಿಮಿಷಗಳ ಕಾಲ ಕುದಿಸಿದ ನಂತರ ಮಸಾಲೆ, ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

- ನಂತರ ಈ ಮಿಶ್ರಣಕ್ಕೆ ಅಕ್ಕಿಹಿಟ್ಟು ಹಾಕಿ ಕಲಸಬೇಕು. ಕಲಸದಿದ್ದರೆ ಹಿಟ್ಟು ಉಂಡೆಯಾಗುತ್ತದೆ.

- ಹಿಟ್ಟು ತಣ್ಣಗಾದ ನಂತರ ಇನ್ನೊಂದು ಪಾತ್ರೆಗೆ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.

- ಹಿಟ್ಟನ್ನು ಕೈಗಳಿಗೆ ಅಂಟಿಕೊಳ್ಳದಂತೆ ಸ್ವಲ್ಪ ಒಣ ಹಿಟ್ಟನ್ನು ತೆಗೆದುಕೊಂಡು ಮಿಶ್ರಣ ಮಾಡಿ.

- ಕೈಗಳಿಗೆ ಸ್ವಲ್ಪ ಎಣ್ಣೆ ಹಚ್ಚಿ, ಸಣ್ಣ ಉಂಡೆಗಳನ್ನು ಮಾಡಿ. ಬಾಳೆಕಾಯಿ ಬೋಂಡಾ ಮಾಡುವಷ್ಟು ಅಗಲಕ್ಕೆ ಉಂಡೆಗಳನ್ನು ತೆಗೆದುಕೊಳ್ಳಿ.

- ಬಾಣಲೆಯನ್ನು ಸ್ಟೌವ್ ಮೇಲೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಈ ಉಂಡೆಯನ್ನು ಅದರಲ್ಲಿ ಬಿಡಿ.

- ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ನಂತರ ಅದನ್ನು ಟಿಶ್ಯೂ ಪೇಪರ್‌ಗೆ ತೆಗೆದುಹಾಕಿ. ಇಷ್ಟು ಮಾಡಿದರೆ ರುಚಿಕರವಾದ ಹಾಗೂ ಗರಿಗರಿಯಾದ ಮುರೌರಿ ರೆಸಿಪಿ ಸವಿಯಲು ಸಿದ್ಧ.

- ಮೂಲಂಗಿಯಿಂದ ಮಾಡಿರುವ ಈ ರೆಸಿಪಿಯನ್ನು ಸಾಸ್ ಜತೆಗೆ ತಿನ್ನಬಹುದು. ಸಂಜೆ ಚಹಾ ಹೀರುತ್ತಾ ಇದನ್ನು ತಿನ್ನಲು ರುಚಿಕರವಾಗಿರುತ್ತದೆ.

Whats_app_banner