Rava Bonda Recipe: ತಿಂಡಿಗೆ ಏನು ಮಾಡಲಿ ಅನ್ನೋ ಯೋಚನೆ ಮಾಡ್ತಿದ್ದೀರಾ? 15 ನಿಮಿಷದಲ್ಲಿ ರವೆ ಬೋಂಡಾ ಹೀಗೆ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Rava Bonda Recipe: ತಿಂಡಿಗೆ ಏನು ಮಾಡಲಿ ಅನ್ನೋ ಯೋಚನೆ ಮಾಡ್ತಿದ್ದೀರಾ? 15 ನಿಮಿಷದಲ್ಲಿ ರವೆ ಬೋಂಡಾ ಹೀಗೆ ಮಾಡಿ

Rava Bonda Recipe: ತಿಂಡಿಗೆ ಏನು ಮಾಡಲಿ ಅನ್ನೋ ಯೋಚನೆ ಮಾಡ್ತಿದ್ದೀರಾ? 15 ನಿಮಿಷದಲ್ಲಿ ರವೆ ಬೋಂಡಾ ಹೀಗೆ ಮಾಡಿ

ರವೆ ಬೋಂಡಾ ಮಾಡುವ ವಿಧಾನ: ಸಂಜೆಯ ತಿಂಡಿಗೆ ರವೆ ಬೋಂಡಾ ಜೊತೆಗೆ ಚಹಾ ಕೆಲವರಿಗೆ ಸೂಪರ್ ಕಾಂಬಿನೇಷನ್. ಸಂಜೆ ವೇಳೆ ರವೆ ಬೋಂಡಾ ತಿನ್ನುವವರ ಸಂಖ್ಯೆಯೇ ಹೆಚ್ಚು. ಮನೆಯಲ್ಲಿ ಬಿಸಿ ಬಿಸಿ ಹಾಗೂ ರುಚಿಯಾದ ರವೆ ಬೋಂಡಾ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇವೆ.

ಕೇವಲ 15 ನಿಮಿಷದಲ್ಲಿ ರುಚಿಯಾದ ರವೆ ಬೋಂಡಾ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ನೀಡಲಾಗಿದೆ
ಕೇವಲ 15 ನಿಮಿಷದಲ್ಲಿ ರುಚಿಯಾದ ರವೆ ಬೋಂಡಾ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ನೀಡಲಾಗಿದೆ

ರವೆ ಬೋಂಡಾ ಮಾಡುವ ವಿಧಾನ: ಸಾಮಾನ್ಯವಾಗಿ ಸಂಜೆಯ ವೇಳೆ ತಿನ್ನೋದಿಕ್ಕೆ ಏನಾದರೂ ಬಿಸಿ ಬಿಸಿ ಇರಬೇಕೆಂದು ಬಹುತೇಕರು ಬಯಸುತ್ತಾರೆ. ಅದರಲ್ಲೂ ಟೀ, ಕಾಫಿ ಜೊತೆಗೆ ತಿಂಡಿ ಇರಬೇಕು. ಚಳಿಯ ವಾತಾವರಣದಲ್ಲಿ ಬಿಸಿ ಬಿಸಿ ತಿಂಡಿ ಇದ್ದರೆ ಚೆಂದ. ಹೀಗಾಗಿ ಬೆಳಗಿನ ತಿಂಡಿಯಾಗಿ ಅಥವಾ ಸಂಜೆಯ ತಿಂಡಿಯಾಗಿಯೂ ರವೆ ಬೋಂಡಾವನ್ನು ಬಳಸಬಹುದು. ನೀವು ಹೇಗೆ ತಿಂದರೂ ಇದು ತುಂಬಾ ರುಚಿಯಾಗಿರುತ್ತದೆ. ಇದಕ್ಕೆ ಕೆಲವೊಂದು ಪದಾರ್ಥಗಳನ್ನು ಸೇರಿಸಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ರವಾ ಬೋಂಡಾ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ರವೆ ಬೋಂಡಾ ಮಾಡಲು ಬೇಕಾಗುವ ಸಾಮಾಗ್ರಿಗಳು

ಉಪ್ಪಿಟ್ಟು ರವೆ - ಒಂದು ಕಪ್

ಅಕ್ಕಿ ಹಿಟ್ಟು - ಅರ್ಧ ಕಪ್

ಮೈದಾ - ಕಾಲು ಕಪ್

ಉಪ್ಪು - ರುಚಿಗೆ ತಕ್ಕಷ್ಟು

ಅಡಿಗೆ ಸೋಡಾ - ಅರ್ಧ ಚಮಚ

ಈರುಳ್ಳಿ - ಎರಡು

ಮೆಣಸಿನಕಾಯಿ - ಮೂರು

ಶುಂಠಿ - ಸಣ್ಣ ತುಂಡು

ಕರಿಬೇವು - ಸ್ವಲ್ಪ

ಕೊತ್ತಂಬರಿ ಪುಡಿ - ಎರಡು ಚಮಚ

ಮೊಸರು - ಅರ್ಧ ಕಪ್

ನೀರು - ಅಗತ್ಯಕ್ಕೆ ತಕ್ಕಷ್ಟು

ಎಣ್ಣೆ - ಹುರಿಯಲು ಬೇಕಾಗುವಷ್ಟು

ರವೆ ಬೋಂಡಾ ಮಾಡುವ ವಿಧಾನ

1. ಒಂದು ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು ಮತ್ತು ಮೈದಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ

2. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ

3. ಈಗ ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಹಸಿ ಮೆಣಸಿನಕಾಯಿ, ಸಣ್ಣದಾಗಿ ಕತ್ತರಿಸಿ ಇಟ್ಟುಕೊಂಡಿರುವ ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ

4. ಜೊತೆಗೆ ಬೇಕಿಂಗ್ ಸೋಡಾ ಹಾಕಿ ಮಿಕ್ಸ್ ಮಾಡಿ

5. ಈಗ ಅದಕ್ಕೆ ಮೊಸರು ಮತ್ತು ನೀರನ್ನು ಸೇರಿಸಿ, ಪೇಸ್ಟ್ ಮಾಡಲು ಅಗತ್ಯವಿರುವಷ್ಟು ದಪ್ಪವಾಗುವವರೆಗೆ ಮಿಶ್ರಣ ಮಾಡಿ

6. ಬಾಣಲೆಯನ್ನು ಒಲೆಯ ಮೇಲೆ ಇಡಿ. ಹುರಿಯಲು ಬೇಕಾದಷ್ಟು ಎಣ್ಣೆ ಹಾಕಿ

7. ಎಣ್ಣೆ ಬಿಸಿಯಾದ ನಂತರ ರವೆ ಮಿಶ್ರಣವನ್ನು ಸಣ್ಣ ಉಂಡೆಗಳಲ್ಲಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ

8. ಕಡು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ

9. ರುಚಿಕರವಾದ ರವೆ ಬೋಂಡಾ ಸಿದ್ಧವಾಗುತ್ತೆ

10. ಪುದೀನಾ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿದರೆ ರವೆ ಬೋಂಡಾ ತುಂಬಾ ರುಚಿಯಾಗಿರುತ್ತದೆ.

11. ನೀವು ನಿಮ್ಮ ಮನೆಯಲ್ಲಿ ಒಮ್ಮೆ ರವೆ ಬೋಂಡಾ ಪ್ರಯತ್ನಿಸಿ. ಮನೆಯವರೆಲ್ಲಾ ಇಷ್ಟ ಪಟ್ಟು ತಿನ್ನುತ್ತಾರೆ.

ಮಕ್ಕಳು ಈ ರೀತಿಯ ತಿಂಡಿಗಳನ್ನು ಇಷ್ಟಪಡುತ್ತಾರೆ. ಬೆಳಗಿನ ಉಪಾಹಾರದ ಸಮಯದಲ್ಲಿ ಈ ರವೆ ಬೋಂಡಾಗಳನ್ನು ಕೊಟ್ಟರೆ ತಿನ್ನುತ್ತಾರೆ. ಅಥವಾ ಶಾಲೆಯಿಂದ ಬಂದ ಮೇಲೆ ಸಂಜೆ ಹೀಗೆ ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನು ಎಣ್ಣೆಯಲ್ಲಿ ಕರಿದಿರುವುದರಿಂದ ಹೆಚ್ಚಾಗಿ ತಿನ್ನುವುದಕ್ಕಿಂತ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಮಾತ್ರ ತಿನ್ನುವುದು ಉತ್ತಮ. ಏಕೆಂದರೆ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಹೆಚ್ಚು ಸೇವಿಸಬೇಡಿ ಎಂದು ವೈದ್ಯರು ಹೇಳುತ್ತಲೇ ಇರುತ್ತಾರೆ.

Whats_app_banner