ಚಳಿಗಾಲದಲ್ಲಿ ನಾಲಿಗೆ ಖಾರವಿರುವ ಪದಾರ್ಥ ಹುಡುಕುತ್ತಿದ್ದರೆ ಮಾಡಿ ಈ ರೆಸಿಪಿ: ಇಲ್ಲಿದೆ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ನಾಲಿಗೆ ಖಾರವಿರುವ ಪದಾರ್ಥ ಹುಡುಕುತ್ತಿದ್ದರೆ ಮಾಡಿ ಈ ರೆಸಿಪಿ: ಇಲ್ಲಿದೆ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

ಚಳಿಗಾಲದಲ್ಲಿ ನಾಲಿಗೆ ಖಾರವಿರುವ ಪದಾರ್ಥ ಹುಡುಕುತ್ತಿದ್ದರೆ ಮಾಡಿ ಈ ರೆಸಿಪಿ: ಇಲ್ಲಿದೆ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

ಚಳಿಗಾಲದಲ್ಲಿ ಉಪ್ಪಿನಕಾಯಿ ತಿನ್ನಲು ಕೆಲವರ ಮನಸ್ಸು ಹಾತೊರೆಯಬಹುದು.ಶೀತ ವಾತಾವರಣದಲ್ಲಿ ನಾಲಿಗೆ ಖಾರವಾಗಿರುವ ಪದಾರ್ಥಗಳನ್ನು ಹುಡುಕುತ್ತಿರುತ್ತದೆ. ಹೀಗಾಗಿ ಉಪ್ಪಿನಕಾಯಿ ತಿನ್ನುವುದರಿಂದ ಮನಸ್ಸಿಗೆ ಹಿತವೆನಿಸುತ್ತದೆ. ಕೆಮ್ಮು, ನೆಗಡಿಯನ್ನು ಪರಿಹರಿಸಲು ಶುಂಠಿ ಪರಿಣಾಮಕಾರಿ. ಇದರ ಉಪ್ಪಿನಕಾಯಿಯನ್ನು ಸಹ ತಯಾರಿಸಬಹುದು. ಇಲ್ಲಿದೆ ರೆಸಿಪಿ.

ಚಳಿಗಾಲದಲ್ಲಿ ನಾಲಿಗೆ ಖಾರವಿರುವ ಪದಾರ್ಥ ಹುಡುಕುತ್ತಿದ್ದರೆ ಮಾಡಿ ಶುಂಠಿ ಉಪ್ಪಿನಕಾಯಿ ರೆಸಿಪಿ
ಚಳಿಗಾಲದಲ್ಲಿ ನಾಲಿಗೆ ಖಾರವಿರುವ ಪದಾರ್ಥ ಹುಡುಕುತ್ತಿದ್ದರೆ ಮಾಡಿ ಶುಂಠಿ ಉಪ್ಪಿನಕಾಯಿ ರೆಸಿಪಿ

ಚಳಿಗಾಲದಲ್ಲಿ ಉಪ್ಪಿನಕಾಯಿ ತಿನ್ನುವುದರಿಂದ ಮನಸಿಗೆ ಒಂಥರಾ ನೆಮ್ಮದಿಯೆನಿಸುತ್ತದೆ. ಶೀತ ವಾತಾವರಣದಲ್ಲಿ ನಾಲಿಗೆ ಖಾರವಾಗಿರುವ ಪದಾರ್ಥಗಳನ್ನು ಹುಡುಕುತ್ತಿರುತ್ತದೆ. ಹೀಗಾಗಿ ಉಪ್ಪಿನಕಾಯಿ ತಿನ್ನುವುದರಿಂದ ಮನಸ್ಸಿಗೆ ಹಿತವೆನಿಸಿದ್ರೆ, ನಾಲಿಗೆ ರುಚಿ ಪಡೆಯುತ್ತದೆ. ಅದರಲ್ಲೂ ಶೀತ ವಾತಾವರಣದಲ್ಲಿ ಕೆಮ್ಮು, ನೆಗಡಿಯನ್ನು ಪರಿಹರಿಸಲು ಹೆಚ್ಚಿನ ಜನರು ಶುಂಠಿ ಸೇವನೆ ಮಾಡುವುದು ಸಾಮಾನ್ಯ. ಶುಂಠಿಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಕೀಲು ನೋವಿಗೆ ಪರಿಹಾರ ಸಿಗುತ್ತದೆ. ಇದನ್ನು ಚಹಾ ಮತ್ತು ಖಾದ್ಯಗಳಿಗೆ ಸೇರಿಸುವುದರ ಹೊರತಾಗಿಯೂ ಅದರ ರುಚಿಕರವಾದ ಉಪ್ಪಿನಕಾಯಿಯನ್ನು ಸಹ ತಯಾರಿಸಬಹುದು. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಶುಂಠಿ ಉಪ್ಪಿನಕಾಯಿ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಶುಂಠಿ- 100 ಗ್ರಾಂ, ಹುಣಸೆಹಣ್ಣು- 100 ಗ್ರಾಂ, ಬೆಳ್ಳುಳ್ಳಿ- 10, ಎಣ್ಣೆ- ಅಗತ್ಯ ತಕ್ಕಷ್ಟು, ಕಾಳುಮೆಣಸು- ಅರ್ಧ ಟೀ ಚಮಚ, ಜೀರಿಗೆ- 1 ಟೀ ಚಮಚ, ಸಾಸಿವೆ- 1 ಟೀ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉದ್ದಿನ ಬೇಳೆ- 1 ಟೀ ಚಮಚ, ಕಡಲೆಬೇಳೆ- ಒಂದು ಟೀ ಚಮಚ, ಬೆಲ್ಲ- ಸ್ವಲ್ಪ, ಒಣ ಮೆಣಸಿನಕಾಯಿ- 6, ಕರಿಬೇವು- 12 ರಿಂದ 15 ಎಲೆ, ಉಪ್ಪು ರುಚಿಗೆ ತಕ್ಕಷ್ಟು, ವಿನೆಗರ್- ಸ್ವಲ್ಪ.

ಮಾಡುವ ವಿಧಾನ

  • ಶುಂಠಿಯನ್ನು ಚೆನ್ನಾಗಿ ತೊಳೆದ ನಂತರ, ಅದನ್ನು ಸಿಪ್ಪೆ ಸುಲಿದು ಕತ್ತರಿಸಿ. ನಂತರ ಹುಣಸೆಹಣ್ಣನ್ನು ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ ಮೃದುವಾಗಲು ಬಿಡಿ. 
  • ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಮೆಣಸು, ಜೀರಿಗೆ, ಕೊತ್ತಂಬರಿ ಸೊಪ್ಪು, ಉದ್ದಿನ ಬೇಳೆ, ಕಡಲೆಬೇಳೆ ಹಾಕಿ ಹುರಿಯಿರಿ. ಇದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ. 
  • ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಅದಕ್ಕೆ ಒಣ ಮೆಣಸನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ತಣ್ಣಗಾಗಲು ಬಿಡಿ. ನಂತರ ಅದಕ್ಕೆ ಹುಣಸೆ ತಿರುಳು, ಬೆಲ್ಲವನ್ನು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. 
  • ಈಗ ಮತ್ತೆ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ನಂತರ ಅದಕ್ಕೆ ರುಬ್ಬಿಕೊಂಡಿರುವ ಮಿಶ್ರಣವನ್ನು ಸೇರಿಸಿ. 
  • ಕೊನೆಯಲ್ಲಿ ಉಪ್ಪು ಮತ್ತು ವಿನೆಗರ್ ಸೇರಿಸಿದರೆ ರುಚಿಕರವಾದ ಶುಂಠಿ ಉಪ್ಪಿನಕಾಯಿ ಸವಿಯಲು ಸಿದ್ಧ.

ಈ ಶುಂಠಿ ಉಪ್ಪಿನಕಾಯಿಯನ್ನು ಗಾಜಿನ ಡಬ್ಬದಲ್ಲಿ ತುಂಬಿಸಿಡಿ. ಬಿಸಿ ಬಿಸಿ ಅನ್ನದೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಒಮ್ಮೆ ಈ ರೆಸಿಪಿ ಮಾಡಿ ನೋಡಿ ಖಂಡಿತ ನಿಮಗೆ ಇಷ್ಟವಾಗಬಹುದು.

Whats_app_banner