ಸಖತ್ ಟೇಸ್ಟಿಯಾಗಿರುವ ಗ್ರೀನ್ ಚಿಲ್ಲಿ ಚಿಕನ್ ಹೀಗೆ ತಯಾರಿಸಿ; ಮನೆಮಂದಿಯೆಲ್ಲಾ ಬಾಯಿಚಪ್ಪರಿಸಿಕೊಂಡು ತಿಂತಾರೆ, ಇಲ್ಲಿದೆ ರೆಸಿಪಿ
ಚಿಕನ್‍ನಲ್ಲಿ ಏನಾದರೂ ವಿಭಿನ್ನ ಖಾದ್ಯವನ್ನು ಪ್ರಯತ್ನಿಸುತ್ತಿದ್ದರೆ ಗ್ರೀನ್ ಚಿಲ್ಲಿ ಚಿಕನ್ ಮಾಡಿ ನೋಡಿ. ಖಂಡಿತ ಇಷ್ಟವಾಗಬಹುದು. ಖಾರ ಖಾರವಾಗಿರುವ ಈ ಖಾದ್ಯ ಅಷ್ಟೇ ರುಚಿಕರವಾಗಿರುತ್ತದೆ. ಅನ್ನ, ದೋಸೆ, ಚಪಾತಿಯೊಂದಿಗೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಗ್ರೀನ್ ಚಿಲ್ಲಿ ಚಿಕನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಗ್ರೀನ್ ಚಿಲ್ಲಿ ಚಿಕನ್ ರುಚಿಕರ ಹಾಗೂ ಸುವಾಸನೆಭರಿತ ಖಾದ್ಯವಾಗಿದ್ದು, ಇದನ್ನು ಮುಖ್ಯವಾಗಿ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು ಬಳಸಿ ತಯಾರಿಸಲಾಗುತ್ತದೆ. ಚಿಕನ್‍ನಲ್ಲಿ ಏನಾದರೂ ವಿಭಿನ್ನ ಖಾದ್ಯವನ್ನು ಪ್ರಯತ್ನಿಸುತ್ತಿದ್ದರೆ ಈ ರೆಸಿಪಿಯನ್ನು ಟ್ರೈ ಮಾಡಬಹುದು. ಖಂಡಿತ ನಿಮಗೆ ಇಷ್ಟವಾಗುತ್ತದೆ. ಅನ್ನ, ದೋಸೆ, ಚಪಾತಿಯೊಂದಿಗೆ ತಿನ್ನುತ್ತಿದ್ದರೆ ನಿಮಗೆ ನೀವೇ ಕಳೆದುಹೋಗುವಿರಿ. ಯಾಕೆಂದರೆ ಅಷ್ಟು ರುಚಿಕರವಾಗಿರುತ್ತದೆ ಈ ಖಾದ್ಯ. ಒಮ್ಮೆ ಮಾಡಿ ನೋಡಿ. ಹಾಗಿದ್ದರೆ ಗ್ರೀನ್ ಚಿಲ್ಲಿ ಚಿಕನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ಗ್ರೀನ್ ಚಿಲ್ಲಿ ಚಿಕನ್ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- 1 ಕೆಜಿ, ಕೊತ್ತಂಬರಿ ಸೊಪ್ಪು- 1 ½ ಕಪ್, ಪುದೀನಾ ಸೊಪ್ಪು- 1 ½ ಕಪ್, ಹಸಿಮೆಣಸಿನಕಾಯಿ- 10, ಬೆಳ್ಳುಳ್ಳಿ ಎಸಳು- 15, ಶುಂಠಿ- 1 ಇಂಚು, ಈರುಳ್ಳಿ- 2, ಟೊಮೆಟೊ- 1, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- 1 ಚಮಚ, ಗರಂ ಮಸಾಲೆ- 1 ಚಮಚ, ನಿಂಬೆ ರಸ- 2 ಚಮಚ, ಕಾಳುಮೆಣಸಿನ ಪುಡಿ- 1 ಚಮಚ, ಗೋಡಂಬಿ- 4.
ಮಾಡುವ ವಿಧಾನ: ಮೊದಲಿಗೆ 1 ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ. ಒಲೆ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿಯನ್ನು ಹುರಿಯಿರಿ. ನಂತರ ಇದನ್ನು ತಣ್ಣಗಾಗಲು ಬಿಡಿ. ಮಿಕ್ಸಿ ಜಾರ್‌ನಲ್ಲಿ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿಮೆಣಸಿನಕಾಯಿ (ಖಾರ ಜಾಸ್ತಿ ಬೇಕಾದಲ್ಲಿ ಇನ್ನೂ ಹೆಚ್ಚು ಹಾಕಬಹುದು), ಬೆಳ್ಳುಳ್ಳಿ ಎಸಳು, ಶುಂಠಿ, ಗೋಡಂಬಿಯನ್ನು ಹಾಕಿ ರುಬ್ಬಿಕೊಳ್ಳಿ.
ನಂತರ ಇನ್ನೊಂದು ಈರುಳ್ಳಿಯನ್ನು ಕತ್ತರಿಸಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಈರುಳ್ಳಿ ಹಾಕಿ ಹುರಿಯಿರಿ. 2 ನಿಮಿಷದ ನಂತರ ಟೊಮೆಟೊ ಹಾಕಿ ಹುರಿಯಿರಿ. ನಂತರ ಇದಕ್ಕೆ ಸ್ವಚ್ಛಗೊಳಿಸಿದ ಕೋಳಿ ಮಾಂಸ ಹಾಕಿ. ಅದಕ್ಕೆ ಉಪ್ಪು ಹಾಗೂ ಅರಶಿನ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಇದಕ್ಕೆ ರುಬ್ಬಿರುವ ಗ್ರೀನ್ ಮಸಾಲೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಹಸಿ ವಾಸನೆ ಹೋಗುವವರೆಗೆ ಗ್ರೀನ್ ಮಸಾಲೆಯನ್ನು ಹುರಿಯಿರಿ. ನಂತರ ಇದಕ್ಕೆ ಗರಂ ಮಸಾಲೆ ಪುಡಿ, ಕೊತ್ತಂಬರಿ ಪುಡಿ ಹಾಗೂ ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದೆರಡು ನಿಮಿಷ ತಳ ಹಿಡಿಯದಂತೆ ಮಿಶ್ರಣ ಮಾಡುತ್ತಿರಿ. ನಂತರ ಸ್ವಲ್ಪ ನೀರು ಬೆರೆಸಿ. ಒಂದೂವರೆ ಲೋಟದಷ್ಟು ನೀರು ಬೆರೆಸಿ ಮಿಶ್ರಣ ಮಾಡಿ. ನಂತರ ಮುಚ್ಚಳವನ್ನು ಮುಚ್ಚಿ, 15 ರಿಂದ 20 ನಿಮಿಷ ಬೇಯಲು ಬಿಡಿ. ಆದರೆ, ಹಾಗೆಯೇ ಬಿಡಬೇಡಿ. ತಳಹಿಡಿಯುವ ಸಾಧ್ಯತೆಯಿರುವುದರಿಂದ ಆಗಾಗ ಚಮಚದಿಂದ ಕಲಸುತ್ತಿರಿ. ನಂತರ ಸ್ಟವ್ ಆಫ್ ಮಾಡಿ. ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ 2 ಚಮಚದಷ್ಟು ಹಾಕಿ ಮಿಶ್ರಣ ಮಾಡಿದರೆ ರುಚಿಕರ ಗ್ರೀನ್ ಚಿಲ್ಲಿ ಚಿಕನ್ ಸವಿಯಲು ಸಿದ್ಧ.
ಈ ಖಾದ್ಯವನ್ನು ಅನ್ನ, ಚಪಾತಿ, ದೋಸೆ ಜೊತೆಯೂ ತಿನ್ನಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಚಿಕನ್‍ನಲ್ಲಿ ವಿಭಿನ್ನ ಖಾದ್ಯ ಮಾಡಬೇಕು ಅಂತಾ ಪ್ರಯತ್ನಿಸುತ್ತಿದ್ದರೆ ಈ ಗ್ರೀನ್ ಚಿಲ್ಲಿ ಚಿಕನ್ ಅನ್ನು ಟ್ರೈ ಮಾಡಬಹುದು. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.
