ಬಾಯಲ್ಲಿ ನೀರೂರುವ ಮಂಡಕ್ಕಿ ಮಸಾಲೆ ಮಾಡುವುದು ತುಂಬಾ ಸಿಂಪಲ್: ಐದು ನಿಮಿಷದಲ್ಲಿ ತಯಾರಾಗುತ್ತೆ ಈ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಲ್ಲಿ ನೀರೂರುವ ಮಂಡಕ್ಕಿ ಮಸಾಲೆ ಮಾಡುವುದು ತುಂಬಾ ಸಿಂಪಲ್: ಐದು ನಿಮಿಷದಲ್ಲಿ ತಯಾರಾಗುತ್ತೆ ಈ ರೆಸಿಪಿ

ಬಾಯಲ್ಲಿ ನೀರೂರುವ ಮಂಡಕ್ಕಿ ಮಸಾಲೆ ಮಾಡುವುದು ತುಂಬಾ ಸಿಂಪಲ್: ಐದು ನಿಮಿಷದಲ್ಲಿ ತಯಾರಾಗುತ್ತೆ ಈ ರೆಸಿಪಿ

ಬಾಯಲ್ಲಿ ನೀರೂರುವ ಮಂಡಕ್ಕಿ ಮಸಾಲೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಂಜೆ ಚಹಾ ಜತೆ ಸಮೋಸ, ಬಜ್ಜಿ ಮಾತ್ರವಲ್ಲ ಮಂಡಕ್ಕಿ ಮಸಾಲೆ ತಿನ್ನಲು ಒಂಥರಾ ಮಜಾವಾಗಿರುತ್ತದೆ. ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾಗಿದೆ. ಮಂಡಕ್ಕಿ ಮಸಾಲೆ ತಯಾರಿಸುವ ವಿಧಾನ ಇಲ್ಲಿದೆ.

ಬಾಯಲ್ಲಿ ನೀರೂರುವ ಮಂಡಕ್ಕಿ ಮಸಾಲೆ ಮಾಡುವುದು ತುಂಬಾ ಸಿಂಪಲ್: ಐದು ನಿಮಿಷದಲ್ಲಿ ತಯಾರಾಗುತ್ತೆ ಈ ರೆಸಿಪಿ
ಬಾಯಲ್ಲಿ ನೀರೂರುವ ಮಂಡಕ್ಕಿ ಮಸಾಲೆ ಮಾಡುವುದು ತುಂಬಾ ಸಿಂಪಲ್: ಐದು ನಿಮಿಷದಲ್ಲಿ ತಯಾರಾಗುತ್ತೆ ಈ ರೆಸಿಪಿ

ಮಂಡಕ್ಕಿ ಮಸಾಲೆ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಸಂಜೆ ವೇಳೆ ಸಮೋಸ, ಬಜ್ಜಿ ಮಾತ್ರವಲ್ಲ ಮಂಡಕ್ಕೆ ಮಸಾಲೆಗಳನ್ನು ಸೇವಿಸುವವರು ಅನೇಕರಿದ್ದಾರೆ. ಮಂಡಕ್ಕಿಯು ಆರೋಗ್ಯಕ್ಕೂ ಪೂರಕವಾಗಿದೆ. ಇದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಸಹ ಹೊಂದಿದೆ. ಪಾನಿ ಪುರಿಗೆ ಹೋಲಿಸಿದರೆ ಮಂಡಕ್ಕೆ ಮಸಾಲೆಯು ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಮಂಡಕ್ಕಿ ಮಸಾಲೆ ತಿನ್ನಲು ಯಾವ ಹೋಟೆಲ್ ಅಥವಾ ಅಂಗಡಿಗೆ ಹೋಗುವುದು ಎಂದು ಯೋಚಿಸಬೇಕಾಗಿಲ್ಲ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಮೊದಲಿಗೆ ಮಂಡಕ್ಕೆ ಮಸಾಲೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮಂಡಕ್ಕಿ ಮಸಾಲೆ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಕಾರ್ನ್ ಫ್ಲೇಕ್ಸ್- ಅರ್ಧ ಕಪ್, ಮಂಡಕ್ಕಿ- ಎರಡು ಕಪ್‍ಗಳು, ಈರುಳ್ಳಿ- ಒಂದು, ಟೊಮೆಟೊ- ಒಂದು, ಮೆಣಸಿನ ಪುಡಿ- ಎರಡು ಚಮಚ, ಕೊತ್ತಂಬರಿ ಪುಡಿ- ಎರಡು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕಡಲೆಕಾಯಿ- ಕಾಲು ಕಪ್, ಹಸಿರು ಮೆಣಸಿನಕಾಯಿ- 2, ಜೀರಿಗೆ ಪುಡಿ- ಅರ್ಧ ಟೀ ಚಮಚ, ಚಾಟ್ ಮಸಾಲ- ಒಂದು ಟೀ ಚಮಚ, ನಿಂಬೆ ರಸ- ಒಂದು ಟೀ ಚಮಚ, ತುಪ್ಪ- ಎರಡು ಟೀ ಚಮಚ.

ಮಂಡಕ್ಕಿ ಮಸಾಲೆ ತಯಾರಿಸುವ ವಿಧಾನ: ಮೊದಲಿಗೆ ಈರುಳ್ಳಿ ಮತ್ತು ಟೊಮೆಟೊವನ್ನು ನುಣ್ಣಗೆ ಕತ್ತರಿಸಿ ಪಕ್ಕಕ್ಕೆ ಇರಿಸಿ. ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಯನ್ನು ಕತ್ತರಿಸಿ ಇಡಿ. ಒಂದು ಬಾಣಲೆ ತೆಗೆದುಕೊಂಡು ಸ್ಟೌವ್ ಮೇಲಿಟ್ಟು ಸಣ್ಣ ಉರಿಯಲ್ಲಿಟ್ಟು ಹುರಿಯಿರಿ. ನಂತರ ಅವುಗಳನ್ನು ಹೊರತೆಗೆದು ಪಕ್ಕಕ್ಕೆ ಇರಿಸಿ. ಈಗ ಅದೇ ಬಾಣಲೆಯಲ್ಲಿ ಕಾಲು ಕಪ್ ಎಣ್ಣೆಯನ್ನು ಹಾಕಿ. ಕಾರ್ನ್ ಫ್ಲೇಕ್ಸ್ ಅನ್ನು ಫ್ರೈ ಮಾಡಿ, ಪಕ್ಕಕ್ಕೆ ಇರಿಸಿ.

ನಂತರ, ಅದೇ ಬಿಸಿಯಾದ ಎಣ್ಣೆಯಲ್ಲಿ, ಕಡಲೆಕಾಯಿಗಳನ್ನು ಫ್ರೈ ಮಾಡಿ, ಪಕ್ಕಕ್ಕೆ ಇರಿಸಿ. ನಂತರ ಒಲೆ ಆಫ್ ಮಾಡಿ. ಈಗ ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಆ ಪಾತ್ರೆಯಲ್ಲಿ ಹುರಿದ ಮಂಡಕ್ಕಿ ಮತ್ತು ಕಾರ್ನ್ ಫ್ಲೇಕ್ಸ್ ಹಾಕಿ. ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹುರಿದ ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಮೆಣಸಿನಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ, ಧನಿಯಾ ಪುಡಿ ಹಾಕಿ ಮಿಶ್ರಣ ಮಾಡಿ. ಮೇಲೆ ನಿಂಬೆ ರಸವನ್ನು ಸೇರಿಸಿ, ಮತ್ತೊಮ್ಮೆ ಮಿಶ್ರಣ ಮಾಡಿ. ಇಷ್ಟು ಮಾಡಿದರೆ ರುಚಿಯಾದ ಮಂಡಕ್ಕಿ ಮಸಾಲೆ ರೆಸಿಪಿ ಸವಿಯಲು ಸಿದ್ಧ.

ಈ ರೆಸಿಪಿಯನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಖಾರ ಇಷ್ಟಪಡುವವರು ಬೇಕಿದ್ದರೆ ಹಸಿಮೆಣಸಿನಕಾಯಿ ಅಥವಾ ಮೆಣಸಿನಪುಡಿಯನ್ನು ಇನ್ನೂ ಹೆಚ್ಚು ಹಾಕಿಕೊಳ್ಳಬಹುದು. ಮಕ್ಕಳಿಗೆ ಕೊಡುವಾಗ ಸ್ವಲ್ಪ ತುಪ್ಪ ಹಾಕಿದರೆ ರುಚಿಯಾಗಿರುತ್ತದೆ.

ಮಂಡಕ್ಕಿ ಮಸಾಲೆಯಲ್ಲಿ ನಿಂಬೆ ರಸ, ಕೊತ್ತಂಬರಿ ಸೊಪ್ಪು, ಟೊಮೆಟೊ, ಹಸಿಮೆಣಸಿನಕಾಯಿ, ಈರುಳ್ಳಿ ಎಲ್ಲವನ್ನೂ ಹಸಿಯಾಗಿಯೇ ಬಳಸಲಾಗುತ್ತದೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಕೊತ್ತಂಬರಿ ಪುಡಿ, ಜೀರಿಗೆ ಪುಡಿಯಲ್ಲಿ ಹಲವು ಪೋಷಕಾಂಶಗಳಿವೆ. ಕಡಲೆಕಾಯಿ ನಮಗೆ ಶಕ್ತಿಯನ್ನು ನೀಡುತ್ತದೆ. ಸಂಜೆ ಏನಾದರೂ ತಿನ್ನಬೇಕು ಎನಿಸಿದಾಗ ಈ ರೆಸಿಪಿ ಟ್ರೈ ಮಾಡಬಹುದು. ತುಂಬಾ ರುಚಿಕರವಾಗಿರುತ್ತದೆ. ಚಹಾ ಜತೆ ತಿನ್ನಲು ಇನ್ನೂ ಮಜಾವಾಗಿರುತ್ತದೆ.

Whats_app_banner