ಹಿಂದಿನ ದಿನ ನೆನೆಸದೆ ತ್ವರಿತವಾಗಿ ಹೀಗೆ ವಡೆ ತಯಾರಿಸಿ: ಮಾಡುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಿಂದಿನ ದಿನ ನೆನೆಸದೆ ತ್ವರಿತವಾಗಿ ಹೀಗೆ ವಡೆ ತಯಾರಿಸಿ: ಮಾಡುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಹಿಂದಿನ ದಿನ ನೆನೆಸದೆ ತ್ವರಿತವಾಗಿ ಹೀಗೆ ವಡೆ ತಯಾರಿಸಿ: ಮಾಡುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಇಡ್ಲಿ ಜತೆ ವಡೆ ಇದ್ದರೆ ಅದರ ರುಚಿಯೇ ಬೇರೆ. ಬಹಳಷ್ಟು ಮಂದಿ ವಡೆ ಇಷ್ಟಪಡುತ್ತಾರೆ. ಉದ್ದಿನ ವಡೆ ತಯಾರಿಸುವುದು ಅಂದ್ರೆ ಅದು ಕೆಲವು ಗಂಟೆಗಳ ಕಾಲ ನಡೆಯುವ ಪ್ರಕ್ರಿಯೆ. ಆದರೆ, ತ್ವರಿತವಾಗಿಯೂ ವಡೆ ತಯಾರಿಸಬಹುದು. ತ್ವರಿತವಾಗಿ ವಡೆ ತಯಾರಿಸುವುದು ಹೇಗೆ ಅನ್ನೋದು ಇಲ್ಲಿ ತಿಳಿದುಕೊಳ್ಳಿ.

ಹಿಂದಿನ ದಿನ ನೆನೆಸದೆ ತ್ವರಿತವಾಗಿ ಹೀಗೆ ವಡೆ ತಯಾರಿಸಿ, ಇಲ್ಲಿದೆ ರೆಸಿಪಿ
ಹಿಂದಿನ ದಿನ ನೆನೆಸದೆ ತ್ವರಿತವಾಗಿ ಹೀಗೆ ವಡೆ ತಯಾರಿಸಿ, ಇಲ್ಲಿದೆ ರೆಸಿಪಿ

ಬಹಳಷ್ಟು ಜನರು ವಡೆಯನ್ನು ಇಷ್ಟಪಡುತ್ತಾರೆ. ಅದರಲ್ಲೂ ಇಡ್ಲಿ ಜೊತೆ ವಡೆ ಇದ್ದರೆ ಅದರ ರುಚಿಯೇ ಬೇರೆ. ಆದರೆ, ವಡೆ ತಯಾರಿಸುವುದು ಅಂದ್ರೆ ದೊಡ್ಡ ಪ್ರಕ್ರಿಯೆ. ಸಾಮಾನ್ಯವಾಗಿ ವಡೆ ತಯಾರಿಸಲು ಹಿಂದಿನ ದಿನ ಅಥವಾ ಮೂರು ನಾಲ್ಕು ಗಂಟೆಗಳ ಕಾಲ ಉದ್ದಿನ ಬೇಳೆಯನ್ನು ನೆನೆಸಿಡಬೇಕು. ಮಿಕ್ಸಿ ಜಾರ್‌ನಲ್ಲಿ ಸ್ವಲ್ಪ ನೆನೆಸಿದ ಅಕ್ಕಿ, ಉದ್ದಿನ ಬೇಳೆ ಹಾಕಿ ಗಟ್ಟಿಯಾಗಿ ರುಬ್ಬಬೇಕು. ಆದರೆ, ಕೆಲವೊಮ್ಮೆ ಉದ್ದಿನ ಬೇಳೆ ನೆನೆಸಿಡಲು ಮರೆತುಹೋಗಬಹುದು. ದಿಢೀರನೆ ವಡೆ ಬೇಕು ಅಂತಿದ್ದರೆ ಈ ಪಾಕವಿಧಾನವನ್ನು ಅನುಸರಿಸಿ. ತ್ವರಿತವಾಗಿ ಗರಿಗರಿಯಾದ ವಡೆ ತಯಾರಿಸಬಹುದು. ಇದನ್ನು ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ತ್ವರಿತ ವಡೆ ರೆಸಿಪಿ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಕಡಲೆಬೇಳೆ- 1 ಕಪ್, ಅಕ್ಕಿ ಹಿಟ್ಟು- 2 ಚಮಚ, ಈರುಳ್ಳಿ- ಕಾಲು ಕಪ್, ಹಸಿಮೆಣಸಿನಕಾಯಿ- 2, ಶುಂಠಿ ಪೇಸ್ಟ್- 1 ಟೀ ಚಮಚ, ಕರಿಬೇವಿನ ಎಲೆ- ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ನೀರು- ಅಗತ್ಯವಿದ್ದಷ್ಟು, ಎಣ್ಣೆ- ಕರಿಯಲು ಬೇಕಾದಷ್ಟು.

ತಯಾರಿಸುವುದು ವಿಧಾನ: ಒಂದು ಪಾತ್ರೆಯಲ್ಲಿ ಕಡಲೆಬೇಳೆ, ಅಕ್ಕಿ ಹಿಟ್ಟು, ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ ಪೇಸ್ಟ್, ಕರಿಬೇವಿನ ಎಲೆ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟನ್ನು ದಪ್ಪವಾಗಿಸಲು ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ. ಈರುಳ್ಳಿ ಇಷ್ಟವಿಲ್ಲದಿದ್ದರೆ ಹಾಕಬೇಕು ಅಂತಿಲ್ಲ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಹಿಟ್ಟು ತುಂಬಾ ದಪ್ಪವಿರಬಾರದು ಹಾಗೆಯೇ ತೆಳುವಿರಬಾರದು.

ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ, ಅದರಲ್ಲಿ ಕರಿಯಲು ಸಾಕಷ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ನಂತರ ಕೈಗಳನ್ನು ಒದ್ದೆ ಮಾಡಿ, ಹಿಟ್ಟನ್ನು ಸಣ್ಣ ಉಂಡೆಗಳಂತೆ ತೆಗೆದುಕೊಂಡು ಮಧ್ಯದಲ್ಲಿ ರಂಧ್ರ ಮಾಡಿ ಕಾದ ಎಣ್ಣೆಯಲ್ಲಿ ಬಿಡಬೇಕು. ಎರಡೂ ಕಡೆ ಚೆನ್ನಾಗಿ ಕರಿದ ನಂತರ ಒಂದು ತಟ್ಟೆಗೆ ಹಾಕಿ. ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಕರಿಯಿರಿ. ತಟ್ಟೆಗೆ ಟಿಶ್ಯೂ ಪೇಪರ್ ಹಾಕಿ ಅದಕ್ಕೆ ಕರಿದ ವಡೆಯನ್ನು ಹಾಕಿ. ಇದರಿಂದ ವಡೆಯಲ್ಲಿರುವ ಎಣ್ಣೆ ಟಿಶ್ಯೂ ಹೀರಿಕೊಳ್ಳುತ್ತದೆ. ಎಲ್ಲಾ ಹಿಟ್ಟನ್ನು ಕರಿದ ನಂತರ ಬಿಸಿಬಿಸಿಯಾಗಿ ವಡೆ ಬಡಿಸಿ. ಇದನ್ನು ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

Whats_app_banner