ಉಪಾಹಾರಕ್ಕಾದ್ರೂ ಓಕೆ, ಲಂಚ್ ಬಾಕ್ಸ್‌ಗಾದ್ರೂ ಸರಿ: ತಯಾರಿಸಿ ರುಚಿಕರ ಕರಿಬೇವಿನ ಎಲೆ ಚಿತ್ರಾನ್ನ; ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಉಪಾಹಾರಕ್ಕಾದ್ರೂ ಓಕೆ, ಲಂಚ್ ಬಾಕ್ಸ್‌ಗಾದ್ರೂ ಸರಿ: ತಯಾರಿಸಿ ರುಚಿಕರ ಕರಿಬೇವಿನ ಎಲೆ ಚಿತ್ರಾನ್ನ; ಇಲ್ಲಿದೆ ಪಾಕವಿಧಾನ

ಉಪಾಹಾರಕ್ಕಾದ್ರೂ ಓಕೆ, ಲಂಚ್ ಬಾಕ್ಸ್‌ಗಾದ್ರೂ ಸರಿ: ತಯಾರಿಸಿ ರುಚಿಕರ ಕರಿಬೇವಿನ ಎಲೆ ಚಿತ್ರಾನ್ನ; ಇಲ್ಲಿದೆ ಪಾಕವಿಧಾನ

ಕರಿಬೇವಿನ ಎಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ರುಚಿಕರವಾದ ಖಾದ್ಯ ತಯಾರಿಸಬಹುದು. ಬಹಳ ಸರಳವಾಗಿ ತಯಾರಾಗುವ ಕರಿಬೇವಿನ ಎಲೆ ಚಿತ್ರಾನ್ನ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಬೆಳಗ್ಗೆ ಉಪಾಹಾರಕ್ಕೂ ತಿನ್ನಬಹುದು ಅಥವಾ ಮಧ್ಯಾಹ್ನದ ಊಟಕ್ಕೂ ತಿನ್ನಬಹುದು. ಇದನ್ನು ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಉಪಾಹಾರಕ್ಕಾದ್ರೂ ಓಕೆ, ಲಂಚ್ ಬಾಕ್ಸ್‌ಗಾದ್ರೂ ಸರಿ; ತಯಾರಿಸಿ ರುಚಿಕರ ಕರಿಬೇವಿನ ಎಲೆ ಚಿತ್ರಾನ್ನ
ಉಪಾಹಾರಕ್ಕಾದ್ರೂ ಓಕೆ, ಲಂಚ್ ಬಾಕ್ಸ್‌ಗಾದ್ರೂ ಸರಿ; ತಯಾರಿಸಿ ರುಚಿಕರ ಕರಿಬೇವಿನ ಎಲೆ ಚಿತ್ರಾನ್ನ (Mana chef/Youtube)

ಕರಿಬೇವಿನ ಎಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ರುಚಿಕರವಾದ ಖಾದ್ಯ ತಯಾರಿಸಬಹುದು. ಬಹಳ ಸರಳವಾಗಿ ತಯಾರಾಗುವ ಕರಿಬೇವಿನ ಎಲೆ ಚಿತ್ರಾನ್ನ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಬಹಳ ಕಡಿಮೆ ಸಮಯದಲ್ಲಿ ಇದನ್ನು ತಯಾರಿಸಬಹುದು. ಬೆಳಗ್ಗೆ ಉಪಾಹಾರಕ್ಕೂ ತಿನ್ನಬಹುದು ಅಥವಾ ಮಧ್ಯಾಹ್ನದ ಊಟಕ್ಕೂ ತಿನ್ನಬಹುದು. ಮಕ್ಕಳ ಅಥವಾ ಆಫೀಸ್ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು. ದಿನಾ ಒಂದೇ ರೀತಿಯ ಅನ್ನದ ಖಾದ್ಯ ತಿಂದು ಬೇಜಾರಾಗಿದ್ದರೆ ಈ ರೀತಿ ಕರಿಬೇವಿನೆಲೆ ಚಿತ್ರಾನ್ನ ಪಾಕವಿಧಾನ ಪ್ರಯತ್ನಿಸಬಹುದು. ಇದನ್ನು ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಕರಿಬೇವಿನ ಎಲೆ ಚಿತ್ರಾನ್ನ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಅನ್ನ- ಎರಡು ಕಪ್, ಎಣ್ಣೆ- ಮೂರು ಚಮಚ, ಕರಿಬೇವಿನ ಎಲೆ- ಒಂದು ಕಪ್, ಸಾಸಿವೆ- ಮೂರು ಚಮಚ, ಜೀರಿಗೆ- ಒಂದು ಚಮಚ, ಕಡಲೆಬೇಳೆ- ಒಂದು ಚಮಚ, ಉದ್ದಿನ ಬೇಳೆ - ಒಂದು ಚಮಚ, ಕಡಲೆಕಾಯಿ- ¼ ಕಪ್, ಒಣಮೆಣಸಿನಕಾಯಿ- ಐದು, ಹಸಿಮೆಣಸಿನಕಾಯಿ- ಐದು, ಹುಣಸೆಹಣ್ಣು- ನಿಂಬೆ ಹಣ್ಣಿನ ಗಾತ್ರ, ಉಪ್ಪು ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ ಎಸಳು- ಎರಡು, ಅರಿಶಿನ- 1 ಟೀಚಮಚ, ಇಂಗು- ಚಿಟಿಕೆ.

ಮಾಡುವ ವಿಧಾನ: ಮೊದಲಿಗೆ ಅಕ್ಕಿಯನ್ನು ಬೇಯಿಸಿ, ಅಥವಾ ಉಳಿದಿರುವ ಅನ್ನದಿಂದಲೂ ತಯಾರಿಸಬಹುದು. ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ, ಮೂರು ಚಮಚ ಎಣ್ಣೆ ಹಾಕಿ. ಒಂದು ಕಪ್ ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮಿಕ್ಸರ್ ಜಾರ್‌ನಲ್ಲಿ ಹಾಕಿ. ಇದಕ್ಕೆ ಎರಡು ಚಮಚ ಸಾಸಿವೆ ಮತ್ತು ಎರಡು ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ರುಬ್ಬಿಕೊಳ್ಳಿ.

ಈಗ ಕಡಾಯಿಗೆ ಅಗತ್ಯವಿದ್ದರೆ ಎಣ್ಣೆ ಹಾಕಬಹುದು. ಇದಕ್ಕೆ ಒಂದು ಚಮಚ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಹಸಿ ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿಯನ್ನು, ಸ್ವಲ್ಪ ಕರಿಬೇವಿನ ಎಲೆ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ರುಬ್ಬಿರುವ ಕರಿಬೇವಿನ ಎಲೆಯ ಮಿಶ್ರಣ ಹಾಗೂ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಹುಣಸೆಹಣ್ಣನ್ನು ಮುಂಚಿತವಾಗಿ ನೆನೆಸಿ ಅದರ ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಿಟಿಕೆ ಶುಂಠಿಯನ್ನು ಬೆರಿಸಿ, ಮಿಶ್ರಣವನ್ನು ಹುರಿಯಿರಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ಟೌವ್ ಆಫ್ ಮಾಡಿ.

ಇನ್ನು ತಯಾರಾಗಿರುವ ಈ ಮಿಶ್ರಣಕ್ಕೆ ಅನ್ನವನ್ನು ಬೆರೆಸಿ ಪುಳಿಯೋಗರೆ ಮಿಶ್ರಣ ಮಾಡುವಂತೆ ಚೆನ್ನಾಗಿ ಮಿಶ್ರಣ ಮಾಡಿ. ಕೈಯಲ್ಲೇ ಮಿಶ್ರಣ ಮಾಡಬಹುದು ಅಥವಾ ಚಮಚದಲ್ಲೂ ಮಾಡಬಹುದು. ಇಷ್ಟು ಮಾಡಿದರೆ ರುಚಿಕರವಾದ ಕರಿಬೇವಿನ ಎಲೆ ಚಿತ್ರಾನ್ನ ತಿನ್ನಲು ಸಿದ್ಧ.

ಈ ಖಾದ್ಯ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಬೆಳಗ್ಗೆ ಉಪಾಹಾರಕ್ಕೆ ತಿನ್ನಲೂ ಓಕೆ, ಮಧ್ಯಾಹ್ನದ ಊಟಕ್ಕೂ ತಿನ್ನಬಹುದು. ಮಕ್ಕಳ ಅಥವಾ ಆಫೀಸ್ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು. ದಿನಾ ಒಂದೇ ರೀತಿಯ ಅನ್ನ ತಿಂದು ಬೇಜಾರಾಗಿದ್ದರೆ ಈ ರೀತಿ ಕರಿಬೇವಿನ ಎಲೆ ಚಿತ್ರಾನ್ನ ಪ್ರಯತ್ನಿಸಬಹುದು. ಕರಿಬೇವು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಕರಿಬೇವು ಹೃದಯದ ಆರೋಗ್ಯದಿಂದ ಹಿಡಿದು ತಲೆಗೂದಲು, ಚರ್ಮದ ಕಾಳಜಿಗೂ ಬಹಳ ಪ್ರಯೋಜನಕಾರಿಯಾಗಿದೆ.

Whats_app_banner