ಭಾನುವಾರದ ಬಾಡೂಟಕ್ಕೆ ಮಾಡಿ ಸೀಗಡಿ ಸುಕ್ಕ; ಮಂಗಳೂರು ಶೈಲಿಯ ಈ ರೆಸಿಪಿ ತಯಾರಿಸುವುದು ತುಂಬಾನೇ ಸರಳ, ಇಲ್ಲಿದೆ ಪಾಕವಿಧಾನ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾನುವಾರದ ಬಾಡೂಟಕ್ಕೆ ಮಾಡಿ ಸೀಗಡಿ ಸುಕ್ಕ; ಮಂಗಳೂರು ಶೈಲಿಯ ಈ ರೆಸಿಪಿ ತಯಾರಿಸುವುದು ತುಂಬಾನೇ ಸರಳ, ಇಲ್ಲಿದೆ ಪಾಕವಿಧಾನ

ಭಾನುವಾರದ ಬಾಡೂಟಕ್ಕೆ ಮಾಡಿ ಸೀಗಡಿ ಸುಕ್ಕ; ಮಂಗಳೂರು ಶೈಲಿಯ ಈ ರೆಸಿಪಿ ತಯಾರಿಸುವುದು ತುಂಬಾನೇ ಸರಳ, ಇಲ್ಲಿದೆ ಪಾಕವಿಧಾನ

ಭಾನುವಾರದ ಬಾಡೂಟಕ್ಕೆ ಏನು ಖಾದ್ಯ ಮಾಡುವುದು ಎಂದು ಯೋಚಿಸುತ್ತಿದ್ದೀರಾ. ನೀವು ಮೀನಿನ ಖಾದ್ಯಗಳನ್ನು ಇಷ್ಟಪಟ್ಟರೆ ರುಚಿಕರವಾದ ಸೀಗಡಿ ಸುಕ್ಕ ರೆಸಿಪಿ ಮಾಡಿ ನೋಡಿ. ಖಂಡಿತ ನಿಮಗೆ ಇಷ್ಟವಾಗಬಹುದು. ಮಂಗಳೂರು ಶೈಲಿಯ ಜನಪ್ರಿಯ ಈ ಸುಕ್ಕ ರೆಸಿಪಿ ಮಾಡುವುದು ತುಂಬಾನೇ ಸುಲಭ. ಈ ರೆಸಿಪಿ ತಯಾರಿಸುವುದು ಹೇಗೆ ಎಂಬುದು ಇಲ್ಲಿದೆ.

ಭಾನುವಾರದ ಬಾಡೂಟಕ್ಕೆ ಮಾಡಿ ಸೀಗಡಿ ಸುಕ್ಕ; ಮಂಗಳೂರು ಶೈಲಿಯ ಈ ರೆಸಿಪಿ ಮಾಡುವುದು ತುಂಬಾನೇ ಸರಳ, ಇಲ್ಲಿದೆ ಪಾಕವಿಧಾನ
ಭಾನುವಾರದ ಬಾಡೂಟಕ್ಕೆ ಮಾಡಿ ಸೀಗಡಿ ಸುಕ್ಕ; ಮಂಗಳೂರು ಶೈಲಿಯ ಈ ರೆಸಿಪಿ ಮಾಡುವುದು ತುಂಬಾನೇ ಸರಳ, ಇಲ್ಲಿದೆ ಪಾಕವಿಧಾನ (PC: Pinterest )

ವೀಕೆಂಡ್ ಬಂತು ಅಂದ್ರೆ ಮಾಂಸಾಹಾರ ಪ್ರಿಯರು, ಚಿಕನ್ ಮಾಡುವುದೋ, ಮಟನ್ ಅಥವಾ ಮೀನಿನ ಖಾದ್ಯ ಮಾಡುವುದೋ ಅಂತಾ ಯೋಚಿಸುತ್ತಿರುತ್ತಾರೆ. ನೀವು ಮೀನಿನ ಖಾದ್ಯಗಳನ್ನು ಮಾಡಲು ಬಯಸಿದರೆ ತುಂಬಾ ಬೇಗ ಸಿದ್ಧವಾಗುವ ಸೀಗಡಿ ಸುಕ್ಕ ರೆಸಿಪಿಯನ್ನು ಮಾಡಿ ನೋಡಿ. ಖಂಡಿತ ನಿಮಗೆ ಇಷ್ಟವಾಗಬಹುದು. ಮಂಗಳೂರು ಶೈಲಿಯ ಜನಪ್ರಿಯ ಸುಕ್ಕ ರೆಸಿಪಿ ಮಾಡುವುದು ತುಂಬಾನೇ ಸುಲಭ. ಈ ರೆಸಿಪಿ ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಸೀಗಡಿ ಸುಕ್ಕ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಸೀಗಡಿ- 1 ಕೆ.ಜಿ, ಬ್ಯಾಡಗಿ ಮೆಣಸು- 10, ಖಾರದ ಮೆಣಸು- 4, ಮೆಣಸಿನ ಪುಡಿ- 1/2 ಟೀ ಚಮಚ, ಅರಿಶಿನ ಪುಡಿ- 1 ಟೀ ಚಮಚ, ಕೊತ್ತಂಬರಿ ಬೀಜ- 3 ಟೀ ಚಮಚ, ಜೀರಿಗೆ- 2 ಟೀ ಚಮಚ, ಮೆಂತ್ಯ- 5 ಕಾಳು, 12 ಬೆಳ್ಳುಳ್ಳಿ ಎಸಳು, ಶುಂಠಿ- 1 ಸಣ್ಣ ಇಂಚಿನಷ್ಟು, ಈರುಳ್ಳಿ- 1, ಟೊಮೆಟೊ- 1, ಕರಿಬೇವು- 12 ಎಲೆ, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನತುರಿ- 1 ಕಪ್, ಎಣ್ಣೆ- ಬೇಕಾದಷ್ಟು.

ಮಾಡುವ ವಿಧಾನ: ಮೊದಲಿಗೆ ಸೀಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಒಂದು ಪಾತ್ರೆಗೆ ವರ್ಗಾಯಿಸಿ.

- ಸ್ವಚ್ಛಗೊಳಿಸಿದ ಸೀಗಡಿಗೆ ಮೆಣಸಿನ ಪುಡಿ, ಅರಿಶಿನ ಪುಡಿ ಹಾಗೂ ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕೆ ಇಡಿ.

- ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ. ಅದಕ್ಕೆ ಬ್ಯಾಡಗಿ ಮೆಣಸು, ಖಾರದ ಮೆಣಸು ಹಾಕಿ ಹುರಿಯಿರಿ, ಖಾರದ ಮೆಣಸು ಬದಲಿಗೆ ಕಾಳುಮೆಣಸು ಸೇರಿಸಬಹುದು.

- ನಂತರ ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ ಕಾಳು ಹಾಕಿ ಹುರಿದು ಪಕ್ಕಕ್ಕೆ ಇಡಿ.

- ಈಗ 6 ಬೆಳ್ಳುಳ್ಳು ಎಸಳನ್ನು ಹುರಿದು ಪಕ್ಕಕ್ಕೆ ಇಡಿ.

- ನಂತರ ತೆಂಗಿನತುರಿಯನ್ನು ಹುರಿದು ಪಕ್ಕಕ್ಕೆ ಇಡಿ.

- ತೆಂಗಿನತುರಿಯನ್ನು ಬಿಟ್ಟು ಹುರಿದ ಮಸಾಲೆಗಳನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಪುಡಿಯಾಗಿ ರುಬ್ಬಿಕೊಳ್ಳಿ. ನೀರು ಸೇರಿಸಬೇಡಿ.

- ನಂತರ ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ.

- ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ. ಇದಾದ ನಂತರ ಸಣ್ಣಗೆ ಕತ್ತರಿಸಿದ ಟೊಮೆಟೋವನ್ನು ಹಾಕಿ ಹುರಿಯಿರಿ.

- ನಂತರ ಕರಿಬೇವಿನ ಎಲೆ, ಸಣ್ಣಗೆ ಹೆಚ್ಚಿದ ಶುಂಠಿ ಹಾಗೂ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯನ್ನು ಹಾಕಿ ಮಿಕ್ಸ್ ಮಾಡಿ.

- ಇದಾದ ನಂತರ ಸೀಗಡಿ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಸೇರಿಸಿ ಬೇಯಲು ಬಿಡಿ.

- ಸೀಗಡಿ ಬೆಂದಾಗ, ರುಬ್ಬಿರುವ ಮಸಾಲೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಲೇ ಇರಿ. ಇಲ್ಲದಿದ್ದರೆ ತಳ ಹಿಡಿಯಬಹುದು.

- ಕೊನೆಗೆ ಹುರಿದಿಟ್ಟಿರುವ ತೆಂಗಿನತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪು ಸೇರಿಸಬಹುದು. ತೆಂಗಿನತುರಿ ಇಷ್ಟವಿಲ್ಲದಿದ್ದರೆ ಸೇರಿಸಬೇಕೆಂದು ಇಲ್ಲ.

ಇಷ್ಟು ಮಾಡಿದರೆ ರುಚಿಕರವಾದ ಸೀಗಡಿ ಸುಕ್ಕ ಸವಿಯಲು ಸಿದ್ಧ. ಅನ್ನ, ದೋಸೆ, ಚಪಾತಿ ಜತೆಯೂ ಇದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಮೀನಿನ ಖಾದ್ಯಗಳನ್ನು ಮಾಡುವಾಗ ಸೈಡ್ ಡಿಶ್ ಆಗಿಯೂ ಇದನ್ನು ಬಡಿಸಬಹುದು. ಭಾನುವಾರದ ಬಾಡೂಟಕ್ಕೆ ಏನು ಮಾಡುವುದು ಎಂದು ಯೋಚಿಸುತ್ತಿದ್ದರೆ ಈ ರೆಸಿಪಿ ಮಾಡಬಹುದು. ಮಂಗಳೂರು ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಸೀಗಡಿ ಸುಕ್ಕ ರೆಸಿಪಿ ಮಾಡುವುದು ಕೂಡ ತುಂಬಾನೇ ಸುಲಭ. ಒಮ್ಮೆ ಮಾಡಿ ನೋಡಿ ಖಂಡಿತಾ ಇಷ್ಟಪಡುವಿರಿ.

Whats_app_banner