ಇದು ಮಾಂಸಾಹಾರವಲ್ಲ, ಶುದ್ಧ ತರಕಾರಿ ರೆಸಿಪಿ; ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ರುಚಿಕರ ಸೋಯಾಬಿನ್ ಕಬಾಬ್; ಪಾಕವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಇದು ಮಾಂಸಾಹಾರವಲ್ಲ, ಶುದ್ಧ ತರಕಾರಿ ರೆಸಿಪಿ; ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ರುಚಿಕರ ಸೋಯಾಬಿನ್ ಕಬಾಬ್; ಪಾಕವಿಧಾನ ಇಲ್ಲಿದೆ

ಇದು ಮಾಂಸಾಹಾರವಲ್ಲ, ಶುದ್ಧ ತರಕಾರಿ ರೆಸಿಪಿ; ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ರುಚಿಕರ ಸೋಯಾಬಿನ್ ಕಬಾಬ್; ಪಾಕವಿಧಾನ ಇಲ್ಲಿದೆ

ಆರೋಗ್ಯಕ್ಕೆ ಉತ್ತಮವಾದ ಸೋಯಾಬೀನ್‍ನೊಂದಿಗೆ ನೀವು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ನೀವು ಕಬಾಬ್ ಪ್ರಿಯರಾಗಿದ್ದರೆ ಸೋಯಾ ಕಬಾಬ್ ತಯಾರಿಸಬಹುದು. ಬಹಳ ಸುಲಭ ಹಾಗೂ ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುವ ರೆಸಿಪಿಯಿದು. ಸೋಯಾಬಿನ್ ಕಬಾಬ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ರುಚಿಕರ ಸೋಯಾಬಿನ್ ಕಬಾಬ್
ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುತ್ತೆ ರುಚಿಕರ ಸೋಯಾಬಿನ್ ಕಬಾಬ್

ಸೋಯಾಬಿನ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದನ್ನು ಪಲಾವ್‌ನಂತಹ ವಿವಿಧ ಭಕ್ಷ್ಯಗಳಲ್ಲಿ ಬಳಸುತ್ತಾರೆ. ಅಥವಾ ಸೋಯಾದಿಂದ ಏನಾದರೂ ರುಚಿಕರ ಪಾಕವಿಧಾನ ಪ್ರಯತ್ನಿಸುವವರು ಹಲವರಿದ್ದಾರೆ. ನೀವು ಎಂದಾದರೂ ಸೋಯಾ ಕಬಾಬ್ ತಿಂದಿದ್ದೀರಾ? ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ತಯಾರಿಸುವುದು ಕೂಡ ತುಂಬಾನೇ ಸುಲಭ. ಕೇವಲ 15 ನಿಮಿಷಗಳಲ್ಲಿ ಈ ರೆಸಿಪಿ ಸಿದ್ಧವಾಗುತ್ತೆ. ಮಕ್ಕಳು ಮಾತ್ರವಲ್ಲದೆ ವಯಸ್ಕರು ಕೂಡ ಇಷ್ಟಪಟ್ಟು ತಿಂತಾರೆ. ಹಾಗಿದ್ದರೆ ರುಚಿಕರವಾದ ಸೋಯಾಬಿನ್ ಕಬಾಬ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.

ಸೋಯಾಬಿನ್ ಕಬಾಬ್ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಸೋಯಾಬಿನ್- 2 ಕಪ್, ಆಲೂಗಡ್ಡೆ- 2, ಶುಂಠಿ- 1 ಇಂಚು, ಬೆಳ್ಳುಳ್ಳಿ ಎಸಳು- 5 ರಿಂದ 6, ಹಸಿ ಮೆಣಸಿನಕಾಯಿ- 3, ಮೆಣಸಿನ ಪುಡಿ ಅರ್ಧ ಟೀ ಚಮಚ, ಕೊತ್ತಂಬರಿ ಪುಡಿ- ಒಂದೂವರೆ ಚಮಚ, ಜೀರಿಗೆ ಪುಡಿ- ಅರ್ಧ ಟೀ ಚಮಚ, ಗರಂ ಮಸಾಲೆ- ಅರ್ಧ ಟೀ ಚಮಚ, ಆಮ್ಚೂರ್ ಪುಡಿ- ಒಂದು ಟೀ ಚಮಚ, ಅರಿಶಿನ- ಅರ್ಧ ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು- ಅರ್ಧ ಕಪ್, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು.

ತಯಾರಿಸುವ ವಿಧಾನ: ರುಚಿಕರವಾದ ಸೋಯಾಬಿನ್ ಕಬಾಬ್‌ಗಳನ್ನು ತಯಾರಿಸಲು, ಮೊದಲು ಒಲೆ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ನೀರು ಹಾಕಿ ಚೆನ್ನಾಗಿ ಕುದಿಸಿ. ಕುದಿಯುವ ನೀರಿನಲ್ಲಿ ಸೋಯಾ ಬೆರೆಸಿ, ಬೇಯಿಸಿ. ಇನ್ನೊಂದೆಡೆ ಪ್ರತ್ಯೇಕವಾಗಿ ಆಲೂಗಡ್ಡೆ ಬೇಯಿಸಿ. ಅವುಗಳನ್ನು 2 ರಿಂದ 3 ನಿಮಿಷಗಳ ಕಾಲ ಬೇಯಿಸಿದ ನಂತರ, ಅವುಗಳಿಂದ ಎಲ್ಲಾ ನೀರನ್ನು ಹೊರಹಾಕಲು ಸೋಸಿ ಹಾಗೂ ಅವನ್ನು ಗಟ್ಟಿಯಾಗಿ ಹಿಂಡಿ. ಈಗ ಸೋಯಾವನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ಶುಂಠಿ, ಬೆಳ್ಳುಳ್ಳಿ ಲವಂಗ, ಹಸಿ ಮೆಣಸಿನಕಾಯಿ ಬೆರಿಸಿ ಮೃದುವಾದ ಪೇಸ್ಟ್ ಮಾಡಿ.

ಈ ಮಿಶ್ರಣವನ್ನು ಒಂದು ತಟ್ಟೆಗೆ ಹಾಕಿ. ಅದೇ ಮಿಶ್ರಣಕ್ಕೆ ಬೇಯಿಸಿದ ಆಲೂಗಡ್ಡೆಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಮಿಶ್ರಣ ಮಾಡಿ. ಈಗ ಕೊತ್ತಂಬರಿ ಸೊಪ್ಪು ಮತ್ತು ಎಲ್ಲಾ ಮಸಾಲೆಗಳನ್ನು ಬೆರಿಸಿ ಮೃದುವಾದ ಹಿಟ್ಟಿನಂತೆ ಮಿಶ್ರಣ ಮಾಡಿ. ಈಗ ಈ ಹಿಟ್ಟು ಮಿಶ್ರಣದಿಂದ ಸಣ್ಣ-ಸಣ್ಣ ತುಂಡುಗಳನ್ನು ತೆಗೆದುಕೊಂಡು ಕಬಾಬ್‌ನಂತೆ ಟಿಕ್ಕಿ ಆಕಾರದಲ್ಲಿ ಮಾಡಿ.

ನಂತರ ಒಲೆ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಕಬಾಬ್‌ನಂತೆ ಮಿಶ್ರಣ ಮಾಡಿರುವ ಸೋಯಾ ಮಿಶ್ರಣವನ್ನು ತೆಗೆದುಕೊಂಡು ಎಣ್ಣೆಯಲ್ಲಿ ಕರಿಯಿರಿ. ಇದು ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ. ನಂತರ ಇದನ್ನು ಒಂದು ತಟ್ಟೆಗೆ ಎತ್ತಿಡಿ. ಇಷ್ಟೇ, ರುಚಿಕರವಾದ ಸೋಯಾಬಿನ್ ಕಬಾಬ್ ತಿನ್ನಲು ಸಿದ್ಧ.

ಈ ಆರೋಗ್ಯಕರ ಸೋಯಾಬಿನ್ ಕಬಾಬ್ ಅನ್ನು ಟೊಮೆಟೊ ಚಟ್ನಿ, ಸಾಸ್ ಅಥವಾ ನಿಮ್ಮ ಆಯ್ಕೆಯ ಯಾವುದೇ ಚಟ್ನಿಯೊಂದಿಗೆ ತಿನ್ನಬಹುದು. ಒಮ್ಮೆ ಮಾಡಿ ನೋಡಿ ನಿಮಗೆ ಇಷ್ಟವಾಗಬಹುದು. ಮಕ್ಕಳು ಕೂಡ ಖಂಡಿತ ಇಷ್ಟಪಟ್ಟು ತಿನ್ನುವುದರಲ್ಲಿ ಸಂಶಯವಿಲ್ಲ.

Whats_app_banner