ಮೊಟ್ಟೆಯಿಲ್ಲದೆ ಮಾಡಿ ಸಸ್ಯಾಹಾರಿ ಆಮ್ಲೆಟ್; ಕಡಿಮೆ ಸಮಯದಲ್ಲಿ ತಯಾರಾಗುವ ಟೇಸ್ಟಿ ರೆಸಿಪಿಯಿದು, ಇಲ್ಲಿದೆ ಪಾಕವಿಧಾನ
ಮೊಟ್ಟೆರಹಿತ ಅಥವಾ ಸಸ್ಯಾಹಾರಿ ಆಮ್ಲೆಟ್ ಹೆಸರು ಕೇಳಲು ಸ್ವಲ್ಪ ವಿಚಿತ್ರವೆನಿಸಬಹುದು. ಆಮ್ಲೆಟ್ ಎಂದರೆ ನೆನಪಿಗೆ ಬರುವುದೇ ಮೊಟ್ಟೆ. ಹಾಗಂತ ಎಲ್ಲರೂ ಮೊಟ್ಟೆ ತಿನ್ನಲು ಇಷ್ಟಪಡುವುದಿಲ್ಲ. ಇದಕ್ಕಾಗಿ ಮೊಟ್ಟೆ ರಹಿತ ಅಥವಾ ಸಸ್ಯಾಹಾರಿ ಆಮ್ಲೆಟ್ ತಿನ್ನಬಹುದು. ನಿಮಗೆ ಮೊಟ್ಟೆ ಇಷ್ಟವಾಗದಿದ್ದರೆ ಈ ಸಸ್ಯಾಹಾರಿ ಆಮ್ಲೆಟ್ ಪಾಕವಿಧಾನವನ್ನು ಪ್ರಯತ್ನಿಸಿ.
ಮೊಟ್ಟೆಯ ಆಮ್ಲೆಟ್ ತಿನ್ನಲು ಬಹಳ ರುಚಿಯಾಗಿರುತ್ತದೆ. ಬೀದಿ ಆಹಾರ ಅಥವಾ ಸ್ಟ್ರೀಟ್ ಸ್ಟೈಲ್ ಮೊಟ್ಟೆ ಆಮ್ಲೆಟ್ ತಿನ್ನಲು ಬಹಳ ಮಂದಿ ಮುಗಿಬೀಳುತ್ತದೆ. ಆದರೆ, ಹೆಚ್ಚು ಮೊಟ್ಟೆ ಆಮ್ಲೆಟ್ ತಿಂದರೆ ನಂತರ ಬೋರ್ ಬರುತ್ತದೆ. ತಿನ್ನುವುದು ಬೇಡ ಎಂದೆನಿಸುತ್ತದೆ. ಅಂಥವರು ವೆಜ್ ಅಥವಾ ಸಸ್ಯಾಹಾರಿ ಆಮ್ಲೆಟ್ ಮಾಡಿ ತಿನ್ನಬಹುದು. ಈ ಎಗ್‍ಲೆಸ್ (ಮೊಟ್ಟೆ ರಹಿತ) ಆಮ್ಲೆಟ್ ಕೂಡ ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು. ಇದನ್ನು ತಯಾರಿಸುವುದು ಕೂಡ ಅಷ್ಟೇ ಸುಲಭ. ಈ ಪಾಕವಿಧಾನ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವೆಜ್ (ಸಸ್ಯಾಹಾರಿ) ಆಮ್ಲೆಟ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಕಡಲೆ ಹಿಟ್ಟು - ಒಂದು ಕಪ್, ಬೇಕಿಂಗ್ ಪೌಡರ್ - ಒಂದು ಟೀ ಚಮಚ, ಮೈದಾ- ಎರಡು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನೀರು- ಅಗತ್ಯ ತಕ್ಕಷ್ಟು, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಹಸಿಮೆಣಸಿನಕಾಯಿ- ಎರಡು, ಕೊತ್ತಂಬರಿ ಸೊಪ್ಪು- ಸ್ವಲ್ಪ, ಈರುಳ್ಳಿ- ಒಂದು, ಟೊಮೆಟೊ- ಒಂದು, ಚಾಟ್ ಮಸಾಲೆ- ಅರ್ಧ ಟೀ ಚಮಚ.
ಮಾಡುವ ವಿಧಾನ: ಸಸ್ಯಾಹಾರಿ ಆಮ್ಲೆಟ್ ಮಾಡಲು ಒಂದು ದೊಡ್ಡ ಪಾತ್ರೆಯಲ್ಲಿ ಬೇಳೆ ಹಿಟ್ಟು, ಉಪ್ಪು, ಬೇಕಿಂಗ್ ಪೌಡರ್, ಮೈದಾ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಇದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೇರಿಸಿ.
- ಸ್ಟೌವ್ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಇಡಿ.
- ಈಗ ಈ ಹಿಟ್ಟಿನ ಮಿಶ್ರಣವನ್ನು ಆಮ್ಲೆಟ್ ರೀತಿಯಲ್ಲಿ ಹಾಕಿ.
- ಎರಡೂ ಕಡೆ ಚೆನ್ನಾಗಿ ಫ್ರೈ ಮಾಡಿದರೆ ವೆಜ್ ಅಥವಾ ಸಸ್ಯಾಹಾರಿ ಆಮ್ಲೆಟ್ ತಿನ್ನಲು ಸಿದ್ಧ.
– ಬೇಕಿದ್ದರೆ ಚಾಟ್ ಮಸಾಲೆ ಹಾಕಬಹುದು, ರುಚಿ ಮತ್ತಷ್ಟು ಚೆನ್ನಾಗಿರುತ್ದೆ.
- ಈ ಆಮ್ಲೆಟ್ ಅನ್ನು ಹಸಿರು ಚಟ್ನಿ ಅಥವಾ ಟೊಮೆಟೊ ಸಾಸ್ ಜತೆ ತಿಂದರೆ ಬಹಳ ರುಚಿಕರವಾಗಿರುತ್ತದೆ. ಬಿಸಿಬಿಸಿಯಾಗಿ ತಿಂದರೆ ರುಚಿ ಇನ್ನೂ ಅದ್ಭುತ.
ಮೊಟ್ಟೆ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಆಮ್ಲೆಟ್. ಆದರೆ, ಎಲ್ಲರೂ ಮೊಟ್ಟೆ ತಿನ್ನುವುದಿಲ್ಲ. ಕೆಲವರಿಗೆ ಆಮ್ಲೆಟ್ ಅಂದ್ರೆ ವಾಕರಿಕೆ ಬರುತ್ತದೆ. ಅಂಥವರು ಈ ವೆಜ್ ಆಮ್ಲೆಟ್ ಅನ್ನು ಪ್ರಯತ್ನಿಸಬಹುದು. ನೀವು ಕೂಡ ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು. ತುಂಬಾ ಬೇಗ ಹಾಗೂ ಸುಲಭವಾಗಿ ಸಿದ್ಧವಾಗುವ ಈ ರೆಸಿಪಿಯನ್ನು ಉಪಾಹಾರವಾಗಿಯೂ ಅಥವಾ ಸಂಜೆ ಸ್ನಾಕ್ಸ್ ಆಗಿಯೂ ತಿನ್ನಬಹುದು.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
kannada.hindustantimes.com/astrology/yearly-horoscope
ವಿಭಾಗ