ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರ ಕ್ಯಾರೆಟ್ ಚಿಪ್ಸ್: ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರ ಕ್ಯಾರೆಟ್ ಚಿಪ್ಸ್: ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರ ಕ್ಯಾರೆಟ್ ಚಿಪ್ಸ್: ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಕ್ಯಾರೆಟ್‍ನಿಂದಲೂ ರುಚಿಕರವಾದ ಚಿಪ್ಸ್ ತಯಾರಿಸಬಹುದು. ಬೇಕರಿಯಲ್ಲಿ ಸಿಗುವ ಚಿಪ್ಸ್ ತಿನ್ನುವುದಕ್ಕಿಂತ ಮನೆಯಲ್ಲೇ ಆರೋಗ್ಯಕರ ಚಿಪ್ಸ್ ಮಾಡುವುದು ಉತ್ತಮ. ಮಕ್ಕಳು ಕೂಡ ಈ ಚಿಪ್ಸ್ ಅನ್ನು ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ.ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರ ಕ್ಯಾರೆಟ್ ಚಿಪ್ಸ್
ಸಂಜೆ ಸ್ನಾಕ್ಸ್‌ಗೆ ಮಾಡಿ ರುಚಿಕರ ಕ್ಯಾರೆಟ್ ಚಿಪ್ಸ್

ಚಿಪ್ಸ್ ಅಂದಾಕ್ಷಣ ನೆನಪಿಗೆ ಬರುವುದು ಬಾಳೆಕಾಯಿ ಮತ್ತು ಆಲೂಗಡ್ಡೆ ಚಿಪ್ಸ್. ಇವು ಮಾತ್ರವಲ್ಲ ಕ್ಯಾರೆಟ್‍ನಿಂದಲೂ ರುಚಿಕರವಾದ ಚಿಪ್ಸ್ ತಯಾರಿಸಬಹುದು. ಬೇಕರಿಯಲ್ಲಿ ಸಿಗುವ ಚಿಪ್ಸ್ ತಿನ್ನುವುದಕ್ಕಿಂತ ಮನೆಯಲ್ಲೇ ಆರೋಗ್ಯಕರ ಚಿಪ್ಸ್ ಮಾಡುವುದು ಉತ್ತಮ. ಮಕ್ಕಳು ಕೂಡ ಈ ಚಿಪ್ಸ್ ಅನ್ನು ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ. ಸಂಜೆ ಚಹಾ ಹೀರುತ್ತಾ ಏನಾದರೂ ತಿಂಡಿ ಬೇಕು ಅಂತೆನಿಸಿದರೆ ಈ ಕ್ಯಾರೆಟ್ ಚಿಪ್ಸ್ ಅನ್ನು ದಿಢೀರನೇ ತಯಾರಿಸಬಹುದು. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕ್ಯಾರೆಟ್ ಚಿಪ್ಸ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಕ್ಯಾರೆಟ್- 2 ರಿಂದ 3 , ತುಪ್ಪ- 2 ಚಮಚ, ಎಣ್ಣೆ- ಕರಿಯಲು, ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ- ½ ಟೀ ಚಮಚ, ಕಾಳುಮೆಣಸಿನಪುಡಿ- ½ ಟೀ ಚಮಚ, ನಿಂಬೆ ರಸ- 1 ಟೀ ಚಮಚ, ತುರಿದ ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಮಧ್ಯಮ ಗಾತ್ರದ ಕ್ಯಾರೆಟ್ ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿ. ಬಳಿಕ ಅದನ್ನು ತೆಳುವಾಗಿ ಕತ್ತರಿಸಿ. ತುಂಬಾ ತೆಳುವಾಗಿ ಕತ್ತರಿಸಿದಷ್ಟು ಚಿಪ್ಸ್ ಗರಿಗರಿಯಾಗಿ ಬರುತ್ತದೆ. ಈಗ ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಅದಕ್ಕೆ ಉಪ್ಪು, ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗಾಗಿ ನಿಂಬೆ ರಸವನ್ನು ಸಹ ಸೇರಿಸಬಹುದು.

ಈಗ ಡೀಪ್ ಫ್ರೈ (ಕರಿಯಲು) ಮಾಡಲು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ತೆಳುವಾಗಿ ಕತ್ತರಿಸಿದ ಕ್ಯಾರೆಟ್ ತುಂಡುಗಳನ್ನು ಒಂದೊಂದಾಗಿ ಕರಿಯಿರಿ. ಎಲ್ಲವನ್ನೂ ಕರಿದ ನಂತರ ಮಿಶ್ರಣ ಮಾಡಿರುವ ಮಸಾಲೆಯನ್ನು ಕರಿದ ಕ್ಯಾರೆಟ್‍ಗೆ ಬೆರೆಸಿ. ನೀವು ಮೈಕ್ರೋಓವೆನ್‍ನಲ್ಲಿ ತಯಾರಿಸುವುದಾದರೆ ಅದನ್ನು 180 ° ಸೆಲ್ಸಿಯಸ್‍ನಲ್ಲಿ 15 ರಿಂದ 20 ನಿಮಿಷಗಳ ಕಾಲ ಇರಿಸಿ. ಚಿಪ್ಸ್ ಚಿನ್ನದ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಕ್ ಮಾಡಿ. ಇಷ್ಟಾದರೆ ರುಚಿಕರ ಹಾಗೂಆರೋಗ್ಯಕರ ಕ್ಯಾರೆಟ್ ಚಿಪ್ಸ್ ತಿನ್ನಲು ಸಿದ್ಧ. ಇದನ್ನು ಹಾಗೆಯೇ ತಿನ್ನಬಹುದು ಅಥವಾ ಈ ಕೆಲವು ಸೈಡ್ ಡಿಶ್‍ಗಳೊಂದಿಗೂ ತಿನ್ನಬಹುದು.

ಈ ಸೈಡ್ ಡಿಶ್‍ಗಳೊಂದಿಗೆ ಕ್ಯಾರೆಟ್ ಚಿಪ್ಸ್ ತಿನ್ನಿ

ಮೊಸರು: ಕ್ಯಾರೆಟ್ ಚಿಪ್ಸ್‌ಗೆಮೊಸರು ಉತ್ತಮ ಸೈಡ್ ಡಿಶ್ ಆಗಿದೆ. ಮೊಸರು ಪ್ರೋಬಯಾಟಿಕ್‍ಗಳನ್ನು ಹೊಂದಿರುತ್ತದೆ. ಇದು ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.

ಸೊಪ್ಪು ತರಕಾರಿಯ ಸಲಾಡ್: ಕ್ಯಾರೆಟ್ ಚಿಪ್ಸ್‌ಗೆ ಉತ್ತಮ ಹೊಂದಾಣಿಕೆಯ (ಕಾಂಬಿನೇಶನ್) ಆಹಾರವೆಂದರೆ ಸೊಪ್ಪು ತರಕಾರಿಗಳ ಸಲಾಡ್. ಸೊಪ್ಪು ತರಕಾರಿ, ಟೊಮೆಟೊ, ಕ್ಯಾಪ್ಸಿಕಂ, ಮತ್ತು ಆಲಿವ್ ಎಣ್ಣೆ ಬಳಸಿ ಸಲಾಡ್ ಸೇವಿಸಬಹುದು.

ಆವಕಾಡೊ: ಕ್ಯಾರೆಟ್ ಚಿಪ್ಸ್‌ನೊಂದಿಗೆ ಆವಕಾಡೊ ತಿನ್ನಲು ಉತ್ತಮ ಆಯ್ಕೆಯಾಗಿದೆ. ಆವಕಾಡೊವನ್ನು ಜಜ್ಜಿ ಚಟ್ನಿ ರೀತಿ ಕ್ಯಾರೆಟ್ ಚಿಪ್ಸ್‌ ತಿನ್ನಬಹುದು.

ಹಣ್ಣುಗಳೊಂದಿಗೆ: ಬಾಳೆಹಣ್ಣು, ಸೇಬು, ದಾಳಿಂಬೆ ಇತ್ಯಾದಿ ಹಣ್ಣುಗಳೊಂದಿಗೂ ಕ್ಯಾರೆಟ್ ಚಿಪ್ಸ್ ತಿನ್ನಲು ರುಚಿಕರವಾಗಿರುತ್ತದೆ.

ಒಂದು ಚಿಟಿಕೆ ಉಪ್ಪು: ಮಸಾಲೆ ಇತ್ಯಾದಿ ಏನೂ ಬೇಡ ಎಂದೆನಿಸದರೆ ಚಿಪ್ಸ್ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ತಿನ್ನಬಹುದು. ಇದು ಕೂಡ ತುಂಬಾ ರುಚಿಕರವಾಗಿರುತ್ತದೆ.

Whats_app_banner