ಸಮಯ ಕಡಿಮೆ ರುಚಿ ಜಾಸ್ತಿ; ಮನೆಗೆ ಅತಿಥಿಗಳು ಬಂದಾಗ ದಿಢೀರ್ ಮಾಡಬಹುದಾದ ಸಾಂಬಾರ್ ರೆಸಿಪಿಯಿದು
ಮಧ್ಯಾಹ್ನ ಅಥವಾ ರಾತ್ರಿ ವೇಳೆ ಅಡುಗೆ ಮಾಡಲು ಜಾಸ್ತಿ ಸಮಯವಿಲ್ಲದಿದ್ದಾಗ ಇಲ್ಲಿ ತಿಳಿಸಿರುವ ಸಾಂಬಾರ್ ಪಾಕವಿಧಾನ ಪ್ರಯತ್ನಿಸಬಹುದು. ಹೆಸರುಬೇಳೆ ಹಾಗೂ ಸೋರೆಕಾಯಿ ಬೆರೆಸಿ ಮಾಡಲಾಗುವ ಈ ಸಾಂಬಾರ್ ಖಾದ್ಯ ಬಹಳ ರುಚಿಕರವಾಗಿರುತ್ತದೆ. ಮನೆಗೆ ಅತಿಥಿಗಳು ಬಂದಾಗ ದಿಢೀರ್ ಮಾಡಬಹುದಾದ ಸಾಂಬಾರ್ ರೆಸಿಪಿಯಿದು. ಇಲ್ಲಿದೆ ಪಾಕವಿಧಾನ.

ದಿಢೀರನೇ ಸಾಂಬಾರ್ ಮಾಡಬೇಕು ಅಂದುಕೊಂಡರೆ ಇಲ್ಲಿ ತಿಳಿಸಿರುವ ಪಾಕವಿಧಾನವನ್ನು ಪ್ರಯತ್ನಿಸಬಹುದು. ಹೆಸರುಬೇಳೆಯನ್ನು ಬಳಸಿ ಈ ಸಾಂಬಾರ್ ತಯಾರಿಸುವುದರಿಂದ ಮುಂಚಿತವಾಗಿ ನೆನೆಸಿಡುವ ಅಗತ್ಯವಿಲ್ಲ. ಬೇಕಿದ್ದರೆ ಸೋರೆಕಾಯಿ ಅಥವಾ ಮಂಗಳೂರು ಸೌತೆಕಾಯಿಯನ್ನು ಸಹ ಬಳಸಬಹುದು. ಮಧ್ಯಾಹ್ನ ಅಥವಾ ರಾತ್ರಿ ವೇಳೆ ಅಡುಗೆ ಮಾಡಲು ಜಾಸ್ತಿ ಸಮಯವಿಲ್ಲದಿದ್ದಾಗ ಈ ರೆಸಿಪಿಯನ್ನು ಪ್ರಯತ್ನಿಸಬಹುದು. ಮನೆಗೆ ದಿಢೀರನೇ ಅತಿಥಿಗಳು ಬಂದಾಗಲೂ ಈ ರೆಸಿಪಿ ಟ್ರೈ ಮಾಡಬಹುದು. ಹಾಗಿದ್ದರೆ ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.
ದಿಢೀರ್ ಸಾಂಬಾರ್ ಪಾಕವಿಧಾನ ಇಲ್ಲಿದೆ
ಬೇಕಾಗುವ ಸಾಮಾಗ್ರಿಗಳು: ಹೆಸರು ಬೇಳೆ- ಅರ್ಧ ಕಪ್, ಹಸಿ ಮೆಣಸಿನಕಾಯಿ- ಒಂದು, ಅರಿಶಿನ- ಅರ್ಧ ಟೀ ಚಮಚ, ಸಾಸಿವೆ- ಒಂದು ಚಮಚ, ಕರಿಬೇವು- ಒಂದು ಹಿಡಿ, ಈರುಳ್ಳಿ- ಎರಡು, ಮೆಣಸಿನ ಪುಡಿ- ಒಂದು ಚಮಚ, ಅರಿಶಿನ- ಅರ್ಧ ಚಮಚ, ಟೊಮೆಟೊ- ಎರಡು, ಎಣ್ಣೆ- ಎರಡು ಚಮಚ, ಜೀರಿಗೆ- ಒಂದು ಚಮಚ, ಒಣ ಮೆಣಸಿನಕಾಯಿ- ಎರಡು, ಬೆಳ್ಳುಳ್ಳಿ ಎಸಳು- ಐದು, ಇಂಗು- ಒಂದು ಚಿಟಿಕೆ, ಸೋರೆಕಾಯಿ- ಅರ್ಧ ತುಂಡು, ನೀರು- ಅಗತ್ಯಕ್ಕೆ ತಕ್ಕಷ್ಟು, ಸಾಂಬಾರ್ ಪುಡಿ- ಎರಡು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- ಒಂದು ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ.
ಮಾಡುವ ವಿಧಾನ: ಹೆಸರು ಬೇಳೆಯನ್ನ ಕುಕ್ಕರ್‌ನಲ್ಲಿ ಹಾಕಿ, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಮೂರು ಶಿಳ್ಳೆ ಬರುವವರೆಗೆ ಬೇಯಿಸಿ. ಈಗ ಒಲೆಯ ಮೇಲೆ ಬಾಣಲೆಯಿಟ್ಟು ಅದರ ಮೇಲೆ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದಾಗ ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಸೇರಿಸಿ ಹುರಿಯಿರಿ. ನಂತರ ಟೊಮೆಟೊ ಮತ್ತು ಸೋರೆಕಾಯಿ ಬೇಕಿದ್ದರೆ ಮಂಗಳೂರು ಸೌತೆಕಾಯಿಯನ್ನು ಸಹ ಬಳಸಬಹುದು. ಇದನ್ನು ಸಣ್ಣ ತುಂಡಾಗಿ ಕತ್ತರಿಸಿ ಇದಕ್ಕೆ ಬೆರೆಸಿ. ಇವೆರಡು ಅಲ್ಲದೆಯೂ ಸಾಂಬಾರ್ ಮಾಡಬಹುದು.
ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರ್ ಪುಡಿ, ಅರಿಶಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡು ಲೋಟ ನೀರು ಸೇರಿಸಿ ಚೆನ್ನಾಗಿ ಬೇಯಿಸಿ ಮತ್ತು ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಬೆರೆಸಿ. ಈಗ ಮೊದಲೇ ಬೇಯಿಸಿದ ಹೆಸರು ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಚೆನ್ನಾಗಿ ಕುದಿಸಿ. ಈಗ ಇನ್ನೊಂದು ಬಾಣಲೆಯನ್ನು ಒಲೆ ಮೇಲಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಕರಿಬೇವಿನ ಎಲೆಗಳು, ಶುಂಠಿ, ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳುಗಳನ್ನು ಬೆರೆಸಿ ಹುರಿಯಿರಿ. ನಂತರ ಮುಚ್ಚಳವನ್ನು ಮುಚ್ಚಿಟ್ಟು ಐದು ನಿಮಿಷಗಳ ಕಾಲ ಕುದಿಸಿ ಸ್ಟವ್ ಆಫ್ ಮಾಡಿದರೆ ರುಚಿಕರವಾದ ಸಾಂಬಾರ್ ಸಿದ್ಧವಾಗಿದೆ.
ಹೆಸರು ಬೇಳೆಯಿಂದ ಮಾಡಿದ ಈ ಸಾಂಬಾರ್ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಅನ್ನ, ದೋಸೆ, ಇಡ್ಲಿಯೊಂದಿಗೂ ತಿನ್ನಲು ರುಚಿಕರವಾಗಿರುತ್ತದೆ. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗಬಹುದು.

ವಿಭಾಗ