ಹವಾಮಾನ ತಂಪಾಗಿದ್ದು, ಏನಾದರೂ ಖಾರವಾದ ತಿಂಡಿ ತಿನ್ನಬೇಕು ಎನಿಸಿದರೆ ಮಸಾಲೆ ಪುಳಿಯೋಗರೆ ತಯಾರಿಸಿ; ಇಲ್ಲಿದೆ ರೆಸಿಪಿ
ಹವಾಮಾನ ತಂಪಾಗಿರುವುದರಿಂದ ಬಹುತೇಕರು ಮಸಾಲೆಯುಕ್ತ ಆಹಾರದತ್ತ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಬೆಳಗ್ಗಿನ ತಿಂಡಿಗೆ ಮಸಾಲೆ ಪುಳಿಯೋಗರೆ ಮಾಡಬಹುದು. ರಾತ್ರಿ ಅನ್ನ ಉಳಿದಿದ್ದರೆ ಅದನ್ನು ವ್ಯರ್ಥ ಮಾಡದೆ ಮಸಾಲೆ ಪುಳಿಯೋಗರೆ ತಯಾರಿಸಬಹುದು. ಇಲ್ಲಿದೆ ರೆಸಿಪಿ.

ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹವಾಮಾನ ತಂಪಾಗಿದೆ. ಹೀಗಾಗಿ ಮಸಾಲೆಯುಕ್ತ ಆಹಾರದತ್ತ ಬಹುತೇಕರು ಮೊರೆ ಹೋಗುತ್ತಿದ್ದಾರೆ. ಬೆಳಗ್ಗಿನ ತಿಂಡಿಗೆ ಮಸಾಲೆ ಪುಳಿಯೋಗರೆ ಮಾಡಬಹುದು. ರಾತ್ರಿ ಅನ್ನ ಉಳಿದಿದ್ದರೆ ಅದನ್ನು ವ್ಯರ್ಥ ಮಾಡದೆ ಬೆಳಗ್ಗಿನ ತಿಂಡಿಗೆ ಮಸಾಲೆ ಪುಳಿಯೋಗರೆ ತಯಾರಿಸಬಹುದು. ಕೇವಲ ಐದು ರಿಂದ ಹತ್ತು ನಿಮಿಷಗಳಲ್ಲಿ ತಯಾರಾಗುವ ಈ ಉಪಾಹಾರ ತಿಂಡಿ ಅದ್ಭುತ ರುಚಿಯನ್ನು ಹೊಂದಿದೆ. ಬೆಳಗ್ಗಿನ ತಿಂಡಿ ಮಾತ್ರ ಅಲ್ಲ, ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೂ ತಯಾರಿಸಬಹುದು. ಈ ಮಸಾಲೆ ಪುಳಿಯೋಗರೆ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.
ಮಸಾಲೆ ಪುಳಿಯೋಗರೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ಬೇಯಿಸಿದ ಅನ್ನ - ಎರಡು ಕಪ್, ಹಸಿಮೆಣಸಿನಕಾಯಿ ಪೇಸ್ಟ್ - ಒಂದು ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಸಾಸಿವೆ - ಅರ್ಧ ಚಮಚ, ಅರಿಶಿನ – ಅರ್ಧ ಚಮಚ, ಮೆಣಸಿನ ಪುಡಿ - ಅರ್ಧ ಚಮಚ, ಹಸಿ ಮೆಣಸಿನಕಾಯಿ - ಅರ್ಧ ಚಮಚ, ಕೊತ್ತಂಬರಿ ಸೊಪ್ಪು - ಒಂದು ಚಮಚ, ಕರಿಬೇವು - ಒಂದು ಹಿಡಿ, ಎಣ್ಣೆ - ಒಂದು ಚಮಚ, ಜೀರಿಗೆ - ಒಂದು ಚಮಚ, ಕಡಲೆಕಾಯಿ - ಒಂದು ಹಿಡಿ, ಈರುಳ್ಳಿ – ಒಂದು.
ಮಾಡುವ ವಿಧಾನ: ಅನ್ನ ಬೇಯಿಸಿ ಒಂದು ತಟ್ಟೆಯಲ್ಲಿ ಹರಡಿ ಒಣಗಿಸಿ (ಉಳಿದ ಅನ್ನದಿಂದಲೂ ಮಾಡಬಹುದು). ಅನ್ನಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸಿನ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ ಮತ್ತು ಜೀರಿಗೆಯನ್ನು ಹಾಕಿ ಹುರಿಯಿರಿ. ನಂತರ ಹಸಿ ಮೆಣಸಿನಕಾಯಿ, ಅರಿಶಿನ, ಹಸಿಮೆಣಸಿನಕಾಯಿ ಪೇಸ್ಟ್, ಕರಿಬೇವು ಮತ್ತು ಕಡಲೆಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
ಈ ಮಿಶ್ರಣಕ್ಕೆ ಮೊದಲು ಮೆಣಸಿನ ಪುಡಿಯನ್ನು ಸೇರಿಸಿ, ನಂತರ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಪುಳಿಯೋಗರಕ್ಕೆ ಸೇರಿಸಿ ಮಿಶ್ರಣ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಒಲೆ ಆಫ್ ಮಾಡಿದರೆ ರುಚಿಕರವಾದ ಮಸಾಲೆ ಪುಳಿಯೋಗರೆ ಸಿದ್ಧ. ಇದನ್ನು ರಾಯಿತ ಅಥವಾ ಚಟ್ನಿಯೊಂದಿಗೂ ಸವಿಯಬಹುದು.
ಮಸಾಲೆ ಪುಳಿಯೋಗರೆಯನ್ನು ಉಪಹಾರ, ಊಟ ಮತ್ತು ರಾತ್ರಿಯ ಊಟಕ್ಕೂ ತಿನ್ನಬಹುದು. ಮನೆಯಲ್ಲಿ ತರಕಾರಿಗಳು ಇಲ್ಲದಿದ್ದಾಗ ಈ ಮಸಾಲೆ ಪುಳಿಯೋಗರೆಯನ್ನು ತಯಾರಿಸಿ ಸವಿಯಬಹುದು. ಮಕ್ಕಳಿಗೆ ಅಥವಾ ಆಫೀಸ್ ಲಂಚ್ ಬಾಕ್ಸ್‌ಗೆ ಕೂಡ ಇದು ಉತ್ತಮ.
ಹಿರಿಯರು ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಮಕ್ಕಳಿಗೆ ಇದು ಸ್ವಲ್ಪ ಖಾರವಾಗಬಹುದು. ಮಕ್ಕಳಿಗಾಗಿ ತಯಾರಿಸಲು ಬಯಸಿದರೆ ಹಸಿಮೆಣಸಿನಕಾಯಿಯನ್ನು ಸೇರಿಸಬೇಡಿ. ಎಣ್ಣೆಯ ಬದಲಿಗೆ ತುಪ್ಪವನ್ನು ಬಳಸಬಹುದು.
ವಿಭಾಗ