ಬಾಳೆಕಾಯಿಯಿಂದ ತಯಾರಿಸಿ ರುಚಿಕರ ಆಮ್ಲೆಟ್; ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡುವಿರಿ: ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಳೆಕಾಯಿಯಿಂದ ತಯಾರಿಸಿ ರುಚಿಕರ ಆಮ್ಲೆಟ್; ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡುವಿರಿ: ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಬಾಳೆಕಾಯಿಯಿಂದ ತಯಾರಿಸಿ ರುಚಿಕರ ಆಮ್ಲೆಟ್; ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡುವಿರಿ: ತಯಾರಿಸುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಬಾಳೆಹಣ್ಣನ್ನು ಬಹುತೇಕರು ಇಷ್ಟಪಟ್ಟು ತಿಂತಾರೆ. ಇದರಿಂದ ರುಚಿಕರವಾದ ಸಿಹಿ ಭಕ್ಷ್ಯಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲ ಬಾಳೆಕಾಯಿಯಿಂದಲೂ ಚಿಪ್ಸ್, ಬಜ್ಜಿ ಇತ್ಯಾದಿ ಸ್ನಾಕ್ಸ್ ತಿಂಡಿಗಳನ್ನು ತಯಾರಿಸಿ ತಿಂದಿರಬಹುದು. ಆದರೆ, ಎಂದಾದರೂ ಬಾಳೆಕಾಯಿ ಆಮ್ಲೆಟ್ ತಿಂದಿದ್ದೀರಾ? ಇದರಪಾಕವಿಧಾನ ತುಂಬಾ ಸರಳ, ಇದನ್ನು ತಯಾರಿಸುವುದು ಹೇಗೆ ಇಲ್ಲಿ ತಿಳಿದುಕೊಳ್ಳಿ.

ಬಾಳೆಕಾಯಿಯಿಂದ ತಯಾರಿಸಿ ರುಚಿಕರ ಆಮ್ಲೆಟ್
ಬಾಳೆಕಾಯಿಯಿಂದ ತಯಾರಿಸಿ ರುಚಿಕರ ಆಮ್ಲೆಟ್

ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಬಾಳೆಹಣ್ಣಿನಿಂದ ದೋಸೆ, ಪಡ್ಡು, ಬೋಂಡಾ ಇತ್ಯಾದಿ ಖಾದ್ಯ ತಯಾರಿಸಬಹುದು. ಅಷ್ಟೇ ಅಲ್ಲ, ಬಾಳೆಕಾಯಿಯಿಂದಲೂ ಸಾಂಬಾರ್, ಚಿಪ್ಸ್, ಬಜ್ಜಿ ಇತ್ಯಾದಿ ಭಕ್ಷ್ಯಗಳನ್ನು ತಿಂದಿರಬಹುದು. ಅಷ್ಟೇ ಅಲ್ಲ, ಬಾಳೆಕಾಯಿಯಿಂದ ಆಮ್ಲೆಟ್ ಕೂಡ ಮಾಡಬಹುದು. ನೀವು ಮೊಟ್ಟೆ ಆಮ್ಲೆಟ್, ಚಿಕನ್ ಆಮ್ಲೆಟ್, ತರಕಾರಿ ಆಮ್ಲೆಟ್ ತಿಂದಿರಬಹುದು. ಬಾಳೆಕಾಯಿ ಆಮ್ಲೆಟ್ ಬಗ್ಗೆ ಕೇಳಿದ್ದೀರಾ? ಮೊಟ್ಟೆ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಹಾಗಿದ್ದರೆ ಬಾಳೆಕಾಯಿ ಆಮ್ಲೆಟ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬಾಳೆಹಣ್ಣಿನ ಆಮ್ಲೆಟ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಬಾಳೆಹಣ್ಣು- 1, ಮೊಟ್ಟೆ- 4, ಕೊತ್ತಂಬರಿ ಪುಡಿ- ¼ ಚಮಚ, ಗರಂ ಮಸಾಲೆ- ¼ ಚಮಚ, ಮೆಣಸಿನ ಪುಡಿ- ಅರ್ಧ ಟೀ ಚಮಚ, ಹಸಿಮೆಣಸಿನಕಾಯಿ- 2, ಶುಂಠಿ- ಒಂದು ಸಣ್ಣ ತುಂಡು, ಕ್ಯಾಪ್ಸಿಕಂ- ಅರ್ಧ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ.

ತಯಾರಿಸುವ ವಿಧಾನ: ಬಾಳೆಕಾಯಿ ಆಮ್ಲೆಟ್ ತಯಾರಿಸಲು ಮೊದಲಿಗೆ ಬಾಳೆಕಾಯಿ ತೆಗೆದುಕೊಂಡು ಮಧ್ಯಮ ಗಾತ್ರದಲ್ಲಿ ಮೂರು ಭಾಗ ಮಾಡಿ. ಬಿಸಿ ನೀರಿನಲ್ಲಿ ಹಾಕಿಡಿ. 5 ನಿಮಿಷದ ನಂತರ ಇದನ್ನು ಒಂದು ಮಿಕ್ಸರ್ ಜಾರ್‌ಗೆ ಹಾಕಿ ಮೃದುವಾದ ಪೇಸ್ಟ್ ಮಾಡಿ. ಈಗ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಮೊಟ್ಟೆ ಒಡೆದು ಹಾಕಿ ಅದನ್ನು ಚಮಚದಿಂದ ಚೆನ್ನಾಗಿ ಕಲಸಿ.

ಈಗ ಗರಂ ಮಸಾಲೆ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ನುಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ನುಣ್ಣಗೆ ಕತ್ತರಿಸಿದ ಶುಂಠಿ ತುಂಡು, ಸಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಬಾಳೆಕಾಯಿ ಪೇಸ್ಟ್ ಹಾಕಿ ಚೆನ್ನಾಗಿ ಬೆರೆಸಿದ ನಂತರ ಅದನ್ನು ಪಕ್ಕಕ್ಕೆ ಇಡಿ. ಈಗ ಒಂದು ತವಾ ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿ. ಎಣ್ಣೆ ಬಿಸಿಯಾದ ನಂತರ ಆಮ್ಲೆಟ್ ಹುಯ್ಯಿರಿ. ಆಮ್ಲೆಟ್ ಅನ್ನು ಎರಡೂ ಬದಿಗೆ ಚೆನ್ನಾಗಿ ಬೇಯಿಸಿದರೆ ರುಚಿಕರವಾದ ಬಾಳೆಕಾಯಿ ಆಮ್ಲೆಟ್ ಸಿದ್ಧ. ಇದು ಬೆಳಗ್ಗಿನ ಉಪಾಹಾರವಾಗಿರಬಹುದು ಅಥವಾ ಸಂಜೆ ತಿಂಡಿಗೂ ತಿನ್ನಬಹುದು. ಮಕ್ಕಳಿಂದ ವಯಸ್ಕರವೆಗೆ ಎಲ್ಲರೂ ಇಷ್ಟಪಡುತ್ತಾರೆ. ಒಮ್ಮೆ ಮಾಡಿ ನೋಡಿ ಖಂಡಿತ ಇಷ್ಟವಾಗಬಹುದು.

Whats_app_banner