ಈ ದೀಪಾವಳಿ ಹಬ್ಬಕ್ಕೆ ತಯಾರಿಸಿ ಹರಳಿನಂತಿರುವ ಬೂಂದಿ ಲಾಡು: ಕ್ಷಣಾರ್ಧದಲ್ಲಿ ಸಿದ್ಧವಾಗುವ ಈ ರೆಸಿಪಿ ತಯಾರಿಸುವುದು ತುಂಬಾನೇ ಸಿಂಪಲ್
ಕನ್ನಡ ಸುದ್ದಿ  /  ಜೀವನಶೈಲಿ  /  ಈ ದೀಪಾವಳಿ ಹಬ್ಬಕ್ಕೆ ತಯಾರಿಸಿ ಹರಳಿನಂತಿರುವ ಬೂಂದಿ ಲಾಡು: ಕ್ಷಣಾರ್ಧದಲ್ಲಿ ಸಿದ್ಧವಾಗುವ ಈ ರೆಸಿಪಿ ತಯಾರಿಸುವುದು ತುಂಬಾನೇ ಸಿಂಪಲ್

ಈ ದೀಪಾವಳಿ ಹಬ್ಬಕ್ಕೆ ತಯಾರಿಸಿ ಹರಳಿನಂತಿರುವ ಬೂಂದಿ ಲಾಡು: ಕ್ಷಣಾರ್ಧದಲ್ಲಿ ಸಿದ್ಧವಾಗುವ ಈ ರೆಸಿಪಿ ತಯಾರಿಸುವುದು ತುಂಬಾನೇ ಸಿಂಪಲ್

ಈ ಹಬ್ಬದ ಋತುವಿನಲ್ಲಿ ಹರಳಿನಂತೆ ಬೂಂದಿ ಲಾಡು ಬೇಕು ಎಂದು ಅನಿಸುತ್ತಾ. ಹಾಗಿದ್ದರೆ, ಇಲ್ಲಿ ನಾವು ತಿಳಿಸುವ ತಂತ್ರವನ್ನು ಅನುಸರಿಸಿದರೆ ನೀವು ಅದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಮನೆಯಲ್ಲಿಯೇ ಸುಲಭವಾಗಿ ಬೂಂದಿ ಲಾಡು ಮಾಡುವುದು ಹೇಗೆ, ಇಲ್ಲಿದೆ ರೆಸಿಪಿ.

ಮನೆಯಲ್ಲಿಯೇ ಸುಲಭವಾಗಿ ಬೂಂದಿ ಲಾಡು ಮಾಡುವುದು ಹೇಗೆ, ಇಲ್ಲಿದೆ ರೆಸಿಪಿ.
ಮನೆಯಲ್ಲಿಯೇ ಸುಲಭವಾಗಿ ಬೂಂದಿ ಲಾಡು ಮಾಡುವುದು ಹೇಗೆ, ಇಲ್ಲಿದೆ ರೆಸಿಪಿ. (PC: Canva)

ಬೂಂದಿ ಲಾಡು ಅಚ್ಚುಮೆಚ್ಚಿನ ಭಾರತೀಯ ಸಿಹಿ ತಿನಿಸಾಗಿದ್ದು, ಯಾವುದೇ ಶುಭಸಮಾರಂಭಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಇದು ರುಚಿ ಹಾಗೂ ವಿಶಿಷ್ಟ ವಿನ್ಯಾಸಕ್ಕಾಗಿ ಬಹುತೇಕ ಎಲ್ಲರೂ ಇದನ್ನು ಇಷ್ಟಪಟ್ಟು ಸವಿಯುತ್ತಾರೆ. ಕಡಲೇ ಹಿಟ್ಟಿನಿಂದ ತಯಾರಿಸಲಾಗುವ ಈ ಸಿಹಿ ಖಾದ್ಯವನ್ನು, ಕಾದ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿ, ಸಕ್ಕರೆ ಪಾಕದಲ್ಲಿ ನೆನೆಸಿ ವಿಶೇಷವಾಗಿ ತಯಾರಿಸಲಾಗುತ್ತದೆ. ಪರಿಮಳ ಹಾಗೂ ರುಚಿಗೆ ಏಲಕ್ಕಿ, ಲವಂಗ ಹಾಗೂ ಒಣಹಣ್ಣುಗಳನ್ನು ಅಲಂಕರಿಸಲಾಗುತ್ತದೆ. ಶುಭ ಕಾರ್ಯಕ್ರಮಗಳು ಮಾತ್ರವಲ್ಲದೆ ಹಬ್ಬಗಳಲ್ಲೂ ಇದನ್ನೂ ತಯಾರಿಸಲಾಗುತ್ತದೆ.

ಬೂಂದಿ ಲಡ್ಡು ಭಾರತೀಯ ಪಾಕಶಾಲೆಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದರ ರೋಮಾಂಚಕ ಬಣ್ಣ ಮತ್ತು ಸಿಹಿಗೆ ಬಹುತೇಕ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಇನ್ನೇನು ದೀಪಾವಳಿ ಹಬ್ಬ ಕೂಡ ಸಮೀಪಿಸಿದೆ. ಏನಾದರೂ ಸಿಹಿ ಖಾದ್ಯ ಮಾಡಲೇಬೇಕು. ಹೀಗಾಗಿ ಅತ್ಯಂತ ಸುಲಭ ಹಾಗೂ ಸರಳವಾಗಿ ತಯಾರಾಗುವ ಬೂಂದಿ ಲಡ್ಡುವನ್ನು ನೀವು ಪ್ರಯತ್ನಿಸಬಹುದು. ಒಂದು ಲಡ್ಡು ತಿಂದಂತೆ ಆಗುವುದಿಲ್ಲ. ಹೀಗಾಗಿ ಬೂಂದಿ ಲಾಡನ್ನು ತಯಾರಿಸಬಹುದು. ಮಕ್ಕಳಿಂದ ವೃದ್ಧರವರೆಗೆ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

ಈ ಹಬ್ಬದ ಋತುವಿನಲ್ಲಿ ಹರಳಿನಂತೆ ಬೂಂದಿ ಲಾಡು ಬೇಕು ಎಂದು ಅನಿಸುತ್ತಾ. ಹಾಗಿದ್ದರೆ, ಇಲ್ಲಿ ನಾವು ತಿಳಿಸುವ ತಂತ್ರವನ್ನು ಅನುಸರಿಸಿದರೆ ನೀವು ಅದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದಕ್ಕಾಗಿ ಕೆಲವು ವಿಷಯಗಳನ್ನು ಅನುಸರಿಸಬೇಕು. ಮನೆಯಲ್ಲಿಯೇ ಬೂಂದಿ ಲಾಡೂ ರೆಸಿಪಿಯನ್ನು ಮಾಡಬಹುದು. ಬೂಂದಿ ಲಾಡು ಮಾಡುವ ರೆಸಿಪಿ ಇಲ್ಲಿದೆ ನೋಡಿ.

ಬೂಂದಿ ಲಾಡು ತಯಾರಿಸುವ ವಿಧಾನ

ಬೂಂದಿ ಲಾಡೂಗೆ ಬೇಕಾಗುವ ಸಾಮಗ್ರಿಗಳು: ಕಡಲೇ ಬೇಳೆ ಹಿಟ್ಟು- 2 ಕಪ್, ಸಕ್ಕರೆ- 3 ಕಪ್, ರವೆ- 1 ಕಪ್, ನೀರು- 5 ಕಪ್, ಏಲಕ್ಕಿ, ತುಪ್ಪ ಮತ್ತು ಕರಿಯಲು ಎಣ್ಣೆ.

ಬೂಂದಿ ಲಾಡೂ ಮಾಡುವ ವಿಧಾನ: ಬೂಂದಿ ಲಾಡೂ ಮಾಡುವುದು ತುಂಬಾನೇ ಸುಲಭ. ಇಲ್ಲಿದೆ ಸರಳ ವಿಧಾನ.

ಹಂತ 1: ಬೂಂದಿ ಲಾಡು ಮಾಡುವುದು ತುಂಬಾ ಕಷ್ಟವಲ್ಲ. ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ ರವೆ, ಕಡಲೇಬೇಳೆ ಹಿಟ್ಟು ಮತ್ತು 1 ಕಪ್ ಸಕ್ಕರೆಯನ್ನು ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ಕೇಸರಿ ಬಣ್ಣ ಅಥವಾ ಅರಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 2: ಗ್ಯಾಸ್ ಆನ್ ಮಾಡಿ, ಪ್ಯಾನ್ ತೆಗೆದುಕೊಂಡು ಅದರಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ. ಈಗ ಒಂದು ಪೂರಿ ಸ್ಟ್ರೈನರ್ ತೆಗೆದುಕೊಂಡು ಅದರಲ್ಲಿ ಬೇಳೆ ಹಿಟ್ಟು ಸೇರಿಸಿ. ದುಂಡಗಿನ ಆಕಾರದ ಬೂಂದಿಯನ್ನು ಮಾಡಿ. ಎಲ್ಲಾ ಬೂಂದಿಯನ್ನು ಫ್ರೈ ಮಾಡಿ. ನಂತರ ಅವುಗಳನ್ನು ಒಂದು ಪಾತ್ರೆಯಲ್ಲಿ ಇಟ್ಟುಕೊಳ್ಳಿ.

ಹಂತ 2: ಈಗ ಮತ್ತೊಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇರಿಸಿ. ಅದರಲ್ಲಿ 5 ಕಪ್ ನೀರು ಸೇರಿಸಿ. ನಂತರ 2 ಬೌಲ್ ಸಕ್ಕರೆ, ಸ್ವಲ್ಪ ಏಲಕ್ಕಿ ಪುಡಿ ಮತ್ತು ಸ್ವಲ್ಪ ಬಣ್ಣವನ್ನು ಸೇರಿಸಿ ಸಿರಪ್ ತಯಾರಿಸಿ. ಸಿರಪ್ ದಪ್ಪವಾದಾಗ, ಅದಕ್ಕೆ ಬೂಂದಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಬೂಂದಿ ಲಾಡು ಸಿದ್ಧವಾಗಿರುತ್ತದೆ. ಇದನ್ನು ಲಾಡು ರೀತಿ ಉಂಡೆ ಕಟ್ಟಿಕೊಳ್ಳಬೇಕು ಎಂದಾದರೆ ನಿಮ್ಮ ಕೈಗಳಿಗೆ ತುಪ್ಪವನ್ನು ಹಚ್ಚಿ,ಲಡ್ಡುವನ್ನು ಬೂಂದಿಯೊಂದಿಗೆ ಕಟ್ಟಿಕೊಳ್ಳಿ. ಸ್ವಾದಿಷ್ಟ ಲಡ್ಡು ಸವಿಯಲು ಸಿದ್ಧ.

Whats_app_banner