ಕನ್ನಡ ಸುದ್ದಿ  /  ಜೀವನಶೈಲಿ  /  Tomato Soup: ರೆಸ್ಟೋರೆಂಟ್​ ಶೈಲಿಯಲ್ಲಿ ಟೊಮೆಟೊ ಸೂಪ್​ ಮಾಡುವ ಸುಲಭ ವಿಧಾನ ಇಲ್ಲಿದೆ; ಇದರ ಆರೋಗ್ಯ ಪ್ರಯೋಜನಗಳೂ ಹೀಗಿವೆ

Tomato Soup: ರೆಸ್ಟೋರೆಂಟ್​ ಶೈಲಿಯಲ್ಲಿ ಟೊಮೆಟೊ ಸೂಪ್​ ಮಾಡುವ ಸುಲಭ ವಿಧಾನ ಇಲ್ಲಿದೆ; ಇದರ ಆರೋಗ್ಯ ಪ್ರಯೋಜನಗಳೂ ಹೀಗಿವೆ

Tomato Soup Recipe in Kannada: ಹತ್ತಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ರುಚಿಕರ ಟೊಮೆಟೊ ಸೂಪ್ ಅನ್ನು ರೆಸ್ಟೋರೆಂಟ್​ ಶೈಲಿಯಲ್ಲಿ ಹೇಗೆ ಮಾಡೋದು ನೋಡೋಣ ಬನ್ನಿ.

ರೆಸ್ಟೋರೆಂಟ್​ ಶೈಲಿಯಲ್ಲಿ ಟೊಮೆಟೊ ಸೂಪ್
ರೆಸ್ಟೋರೆಂಟ್​ ಶೈಲಿಯಲ್ಲಿ ಟೊಮೆಟೊ ಸೂಪ್

ಟೊಮೆಟೊ ಸೂಪ್​ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಕೊಬ್ಬನ್ನು ಕಡಿಮೆ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಮಧುಮೇಹವನ್ನು ನಿಯಂತ್ರಿಸುತ್ತದೆ. ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ಮೂಳೆಯನ್ನು ಬಲವಾಗಿರಿಸುತ್ತದೆ. ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ರುಚಿಕರ ಟೊಮೆಟೊ ಸೂಪ್ ಅನ್ನು ರೆಸ್ಟೋರೆಂಟ್​ ಶೈಲಿಯಲ್ಲಿ ಹೇಗೆ ಮಾಡೋದು ನೋಡೋಣ ಬನ್ನಿ.

ಟ್ರೆಂಡಿಂಗ್​ ಸುದ್ದಿ

ಟೊಮೆಟೊ ಸೂಪ್​ ಮಾಡಲು ಬೇಕಾಗುವ ಪದಾರ್ಥಗಳು

ಸಿಹಿ ಟೊಮೆಟೊ

ಬೆಣ್ಣೆ

ಬೆಳ್ಳುಳ್ಳಿ

ಪಲಾವ್​ ಎಲೆ

ಕಾಳು ಮೆಣಸು

ಈರುಳ್ಳಿ

ಪೀಸ್​ ಬ್ರೆಡ್

ಕ್ಯಾರೆಟ್

ಬೀಟ್​​ರೂಟ್

ಸಕ್ಕರೆ

ಉಪ್ಪು

ನೀರು

ಟೊಮೆಟೊ ಸೂಪ್​ ಮಾಡುವ ವಿಧಾನ

ಸ್ಟವ್ ಮೇಲೆ ಪ್ಯಾನ್​ ಇಟ್ಟು 2 ಟೇಬಲ್​ ಸ್ಪೂನ್​ ಬೆಣ್ಣೆಯನ್ನು ಹಾಕಿ. ಬೆಣ್ಣೆ ಕರಗಿದ ನಂತರ ಸಣ್ಣಗೆ ಕತ್ತಿರಿಸ 4 ಬೆಳ್ಳುಳ್ಳಿ ಎಸಳನ್ನು ಹಾಕಿ. ಅರ್ಧ ಪಲಾವ್​ ಎಲೆ, ಕಾಲು ಟೀ ಸ್ಪೂನ್​ ಕಾಳು ಮೆಣಸು, ಸಣ್ಣದಾಗಿ ಕತ್ತರಿಸಿದ ಅರ್ಧ ಈರುಳ್ಳಿ ಹಾಕಿ. ಮೀಡಿಯಂ ಉರಿಯಲ್ಲಿ ಸ್ಟವ್​ ಇಟ್ಟುಕೊಂಡು ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವ ವರೆಗೆ ಹುರಿದುಕೊಳ್ಳಿ.

ನಂತರ ಇದಕ್ಕೆ ಸಣ್ಣಗೆ ತುರಿದ ಅರ್ಧ ಕ್ಯಾರೆಟ್​ ಹಾಕಿ, ಸಣ್ಣಗೆ ತುರಿದ ಕಾಲು ಭಾಗ ಬೀಟ್​​ರೂಟ್ ಹಾಕಿ.. ಬೀಟ್​ರೂಟ್​ ಹಾಕುವುದರಿಂದ ಟೊಮೆಟೋ ಸೂಪ್​ಗೆ ನೈಸರ್ಗಿಕ ಬಣ್ಣದ ಜೊತೆ ಒಳ್ಳೆಯ ಸುವಾಸನೆ ಕೂಡ ಬರತ್ತೆ. ಇದನ್ನ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ ಆದ ಮೇಲೆ ಕತ್ತರಿಸಿದ 4-5 ಸಿಹಿ ಟೊಮೆಟೊ ಹಾಕಿ, ಒಂದು ಟೀ ಸ್ಪೂನ್​ ಸಕ್ಕರೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 2 ಕಪ್​ ನೀರು ಹಾಕಿ ಮುಚ್ಚಿಡಿ.

ಟೊಮೆಟೊ ಚೆನ್ನಾಗಿ ಮೆತ್ತಗೆ ಆಗುವವರೆಗೆ ಕುದಿಸಿ. ಮೆತ್ತಗೆ ಆಗುವಷ್ಟು ಟೊಮೆಟೊ ಬಂದಮೇಲೆ ಅದನ್ನು ಮುಚ್ಚಿ ಸ್ಟವ್​​ನಿಂದ ಇಳಿಸಿ ತಣ್ಣಗಾಗಲು ಬಿಡಿ.

ಈಗ ಒಂದು ಹೆಂಚಿನ ಮೇಲೆ ಒಂದು ಟೀ ಸ್ಪೂನ್​ ಬೆಣ್ಣೆ ಹಾಕಿ ಕರಗಲು ಬಿಡಿ. ಅದಕ್ಕೆ 4 ಬದಿ ಕತ್ತರಿಸಿದ 2 ಪೀಸ್​ ಬ್ರೆಡ್​ ಹಾಕಿ ರೋಸ್ಟ್ ಮಾಡಿಕೊಳ್ಳಿ. ಇದಕ್ಕೆ ಹೆಂಚಿನ ಮೇಲೆ ಹಾಗೆಯೇ ಇರಲು ಬಿಡಿ. ಸೂಪ್​ಗೆ ಬ್ರೆಡ್​​ ಅನ್ನು ಸೇರಿಸಲೇ ಬೇಕು ಎಂದೇನಿಲ್ಲ. ನಿಮಗೆ ಬೇಡವಾದಲ್ಲಿ ಅದನ್ನು ಸ್ಕಿಪ್​ ಮಾಡಬಹುದು.

ಈಗ ಟೊಮೆಟೊ ಮಿಶ್ರಣ ತಣ್ಣಗಾಗಿದೆಯಾ ಚೆಕ್ ಮಾಡಿಕೊಂಡು ತಣ್ಣಗಾಗಿದ್ದರೆ ಅದನ್ನು ಒಂದು ಮಿಕ್ಸ್​ ಜಾರ್​ಗೆ ಸುರಿದುಕೊಂಡು ನುಣ್ಣಗೆ ರುಬ್ಬಿ. ಇದನ್ನ ಪ್ಯಾನ್​​ಗೆ ಸೋಸಿಕೊಳ್ಳಿ. ಆಗ ಇದರಲ್ಲಿರುವ ಟೊಮೆಟೊ ಸಿಪ್ಪೆ, ಬೀಜ ತೆಗೆದಂತಾಗುತ್ತದೆ.

ಈಗ ಸ್ಟವ್​ ಆನ್​ ಮಾಡಿ ಟೊಮೆಟೊ ಮಿಶ್ರಣವಿರುವ ಪ್ಯಾನ್​ ಅನ್ನು ಇಡಿ. ಇದಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿಕೊಳ್ಳಿ. ಉಪ್ಪು ಕಮ್ಮಿ ಆಗಿದ್ದರೆ ಉಪ್ಪು ಹಾಕಿ ಕುದಿಸಿ. ಇದು ತುಂಬಾ ತೆಳುವಾಗಿಯೂ ಇರಬಾರದು ದಪ್ಪನೂ ಇರಬಾರದು. ಈಗ ಸ್ಟವ್​ ಆಫ್​ ಮಾಡಿ. ಈಗ ಕ್ರಿಸ್ಪಿಯಾಗಿ ಗಟ್ಟಿಯಾಗಿರುವ ಬ್ರೆಡ್​ ಅನ್ನು ತುಂಡರಿಸಿ ಅದರೊಳಗೆ ಹಾಕಿ. ಕೊನೆಯಲ್ಲಿ ಅದರ ಮೇಲೆ ಬೇಕಾದರೆ ಪುದೀನ ಎಲೆ ಅಥವಾ ಕೊತ್ತಂಬರಿ ಸೊಪ್ಪನ್ನು ಹಾಕಿ. ಈಗ ಟೊಮೆಟೊ ಸೂಪ್​ ಸವಿಯಲು ರೆಡಿ.

ವಿಭಾಗ