ಬಳಸಿ ಉಳಿದ ಬ್ರೆಡ್ ತುಂಡುಗಳನ್ನು ಹೇಗೆಲ್ಲ ಬಳಸಬಹುದು? ಇಲ್ಲಿರುವುದನ್ನು ಟ್ರೈ ಮಾಡಿ, ನೀವೆಂದೂ ಬ್ರೆಡ್ ಎಸೆಯಲ್ಲ-food how to use leftover bread sides kitchen tips to use bread slices in recipes jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಳಸಿ ಉಳಿದ ಬ್ರೆಡ್ ತುಂಡುಗಳನ್ನು ಹೇಗೆಲ್ಲ ಬಳಸಬಹುದು? ಇಲ್ಲಿರುವುದನ್ನು ಟ್ರೈ ಮಾಡಿ, ನೀವೆಂದೂ ಬ್ರೆಡ್ ಎಸೆಯಲ್ಲ

ಬಳಸಿ ಉಳಿದ ಬ್ರೆಡ್ ತುಂಡುಗಳನ್ನು ಹೇಗೆಲ್ಲ ಬಳಸಬಹುದು? ಇಲ್ಲಿರುವುದನ್ನು ಟ್ರೈ ಮಾಡಿ, ನೀವೆಂದೂ ಬ್ರೆಡ್ ಎಸೆಯಲ್ಲ

ಮನೆಯಲ್ಲಿ ಸ್ಯಾಂಡ್ ವಿಚ್ ತಯಾರಿಸಿದ ನಂತರ ಬ್ರೆಡ್‌ನ ಬದಿಯ ಭಾಗ ಹಾಗೆಯೇ ಉಳಿಯುತ್ತವೆ. ಅದನ್ನು ಎಸೆಯುವ ಬದಲು ಕೆಲವೊಂದು ಸರಳ ಅಡುಗೆಗಳಲ್ಲಿ ಬಳಸಬಹುದು. ಕೆಲವೊಂದು ಮೋಜಿನ ಪ್ರಯತ್ನಗಳನ್ನು ನೀವು ಟ್ರೈ ಮಾಡಿ ನೋಡಿ.

ಬಳಸಿ ಉಳಿದ ಬ್ರೆಡ್ ತುಂಡುಗಳನ್ನು ಹೇಗೆಲ್ಲ ಬಳಸಬಹುದು ನೋಡಿ
ಬಳಸಿ ಉಳಿದ ಬ್ರೆಡ್ ತುಂಡುಗಳನ್ನು ಹೇಗೆಲ್ಲ ಬಳಸಬಹುದು ನೋಡಿ (Pexel)

ಆಧುನಿಕ ಪಾಕಪದ್ಧತಿಯಲ್ಲಿ ಬ್ರೆಡ್‌ ಬಳಕೆ ಹೆಚ್ಚು. ಬ್ರೆಡ್‌ನಿಂದ ಸುಲಭವಾಗಿ ಹಲವು ತಿಂಡಿ-ತಿನಿಸುಗಳನ್ನು ತಯಾರಿಸಬಹುದು. ಹೆಚ್ಚಿನ ಅಡುಗೆಗಳಲ್ಲಿ ಸ್ಯಾಂಡ್ ವಿಚ್‌ ತಯಾರಿಸುವಾಗ ಬ್ರೆಡ್‌ನ ಮಧ್ಯಭಾಗವನ್ನು ಮಾತ್ರ ಬಳಸಲಾಗುತ್ತದೆ. ಉಳಿದಂತೆ ಕಂದು ಬಣ್ಣದ ಅಂಚುಗಳನ್ನು ತೆಗೆದು ಎಸೆಯುವವರೇ ಹೆಚ್ಚು. ಆದರೆ ಈ ಬದಿಯ ಭಾಗವನ್ನು ಎತ್ತಿಟ್ಟುಕೊಂಡು ವಿವಿಧ ಅಡುಗೆಗಳಲ್ಲಿ ಬಳಸಬಹುದು. ಎಸೆದು ವ್ಯರ್ಥ ಮಾಡುವ ಬದಲಿಗೆ ಸದುಪಯೋಗಪಡಿಸಿಕೊಳ್ಳಬಹುದು. ಈವರೆಗೆ ನೀವು ಎಸೆಯುತ್ತಿದ್ದ ಭಾಗಗಳಿಂದ ತಯಾರಿಸಬಹುದಾದ ಅಡುಗೆಗಳನ್ನು ಓದಿದ ಮೇಲೆ ಮುಂದೆ ನೀವು ತಪ್ಪಿಯೂ ಕಂದು ಬಣ್ಣದ ಅಂಚನ್ನು ಎಸೆಯುವುದಿಲ್ಲ.

ಬ್ರೆಡ್‌ನ ಅಂಚುಗಳನ್ನು ಬಳಸುವ ವಿಧಾನಗಳು ಯಾವುವು ಎಂಬುದನ್ನು ನೋಡೋಣ.

ಬ್ರೆಡ್‌ ಚೂರು ಮಾಡಿಕೊಳ್ಳಿ

ಬ್ರೆಡ್‌ನ ಅಂಚಿನ ಕಂದು ಭಾಗ ರುಚಿಹೀನವಂತೂ ಅಲ್ಲ. ಈ ಭಾಗದಿಂದ ಬ್ರೆಡ್‌ ಚೂರುಗಳು ಮಾಡಬಹುದು. ಬ್ರೆಡ್ ಚೂರುಗಳನ್ನು ತಯಾರಿಸಲು ಬದಿಯ ಭಾಗಗಳನ್ನು ಬಾಣಲೆ ಮೇಲೆ ಹಾಕಿ ಲೋ ಫ್ಲೇಮ್‌ನಲ್ಲಿ ಹುರಿಯಿರಿ. ಅದು ತಣ್ಣಗಾದ ನಂತರ, ಮಿಕ್ಸರ್‌ ಗ್ರೈಂಡರ್‌ನಲ್ಲಿ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಿ. ಮುಂದೆ ನೀವು ಗರಿಗರಿ ತಿಂಡಿ ಮಾಡುವಾಗ ಈ ಪುಡಿಯನ್ನು ಬಳಸಿಕೊಳ್ಳಬಹುದು.

ಸೂಪ್‌ ಜೊತೆಗೆ ಸವಿಯಿರಿ

ಬ್ರೆಡ್‌ನ ಅಂಚುಗಳನ್ನು ಸ್ವಲ್ಪ ಎಣ್ಣೆ ಹಾಕಿ ಹುರಿಯಿರಿ. ನೀವು ಮನೆಯಲ್ಲಿ ಟೊಮೆಟೊ ಸೂಪ್ ಅಥವಾ ಇನ್ಯಾವುದೇ ಸೂಪ್ ಮಾಡಿದಾಗ, ಹುರಿದ ಈ ಬ್ರೆಡ್ ತುಂಡುಗಳನ್ನು ಅದರ ಮೇಲೆ ಹರಡಿ. ನಿಮ್ಮ ಸೂಪ್ ರುಚಿಯನ್ನು ಖಂಡಿತವಾಗಿಯೂ ದ್ವಿಗುಣಗೊಳಿಸುತ್ತವೆ. ಒಮ್ಮೆ ಟ್ರೈ ಮಾಡಿ ನೋಡಿ. ನಿಮಗೆ ಆ ರುಚಿ ಇಷ್ಟವಾಗುತ್ತದೆ.

ಮಿಕ್ಷರ್‌ ಜೊತೆ ಸವಿಯಿರಿ

ಪ್ಯಾನ್‌ಗೆ ಬ್ರೆಡ್‌ ಚೂರುಗಳನ್ನು ಹಾಕಿ ಹುರಿಯಿರಿ. ನೀವು ಬಯಸಿದರೆ ಅದಕ್ಕೆ ಸ್ವಲ್ಪ ಬೆಣ್ಣೆ ಸೇರಿಸಿ. ಹೆಚ್ಚುವರಿಯಾಗಿ ಮಸಾಲೆ ಹಾಕಬಹುದು. ರೆಡಿ ಮಿಕ್ಷರ್‌ ಇದ್ದರೆ ಅದಕ್ಕೆ ಬ್ರೆಡ್‌ ಚೂರುಗಳನ್ನು ಬೆರೆಸಿ. ಬಿಸಿ ಬಿಸಿ ಚಹಾದೊಂದಿಗೆ ಇದು ರುಚಿಕರ ತಿಂಡಿಯಾಗುತ್ತದೆ.

ಸಲಾಡ್ ಅಥವಾ ಬೇಳೆ ಸಾರನ್ನೂ ರುಚಿಕರವಾಗಿಸುತ್ತದೆ

ನೀವು ಬ್ರೆಡ್ ಚೂರುಗಳನ್ನು ಹುರಿದು ಅದನ್ನು ಸಾಂಬಾರ ಮಸಾಲೆ ಜೊತೆಗೆ ಬೆರೆಸಿದರೆ, ಅದನ್ನು ಸಲಾಡ್ ಅಥವಾ ಸಾಂಬಾರ್‌ಗೆ ಗಾರ್ನಿಶಿಂಗ್‌ಗೆ ಬಳಸಬಹುದು. ಹಲವು ಬಾರಿ ಮಕ್ಕಳು ಸಾಂಬಾರಿನಲ್ಲಿರುವ ಬೇಳೆಕಾಳುಗಳನ್ನು ತಿನ್ನುವುದಿಲ್ಲ. ಹೀಗಾಗಿ ಈ ಮಸಾಲೆ ಬ್ರೆಡ್‌ ಚೂರುಗಳನ್ನು ಹಾಕಿದರೆ, ಮಕ್ಕಳಿಗೆ ಆ ರುಚಿ ಇಷ್ಟವಾಗುತ್ತದೆ. ಆಗ ಬೇಳೆ ಸೇರಿದಂತೆ ಸಾಂಬಾರ್‌ ಸುಲಭವಾಗಿ ಸೇವಿಸುತ್ತಾರೆ.

mysore-dasara_Entry_Point