Hurda Bhel Recipe: ಸಂಜೆ ಸ್ನ್ಯಾಕ್ಸ್‌ಗೆ ಸೂಪರ್ ಆಗಿರುತ್ತೆ ಹುರ್ದಾ ಬೇಲ್; ಈ ಸ್ಪೆಷಲ್ ರೆಸಿಪಿ ಮಾಡೋದು ಹೇಗೆ ನೋಡಿ
ಹುರ್ದಾ ಬೇಲ್ ಎನ್ನುವುದು ಮಹಾರಾಷ್ಟ್ರ ಮೂಲದ ವಿಶೇಷ ರೆಸಿಪಿ. ಸಂಜೆ ಸ್ಯ್ನಾಕ್ಸ್‌ಗೆ ಹೇಳಿ ಮಾಡಿಸಿದ ಈ ರೆಸಿಪಿ ರುಚಿಕರ ಮಾತ್ರವಲ್ಲ ಪೌಷ್ಟಿಕಾಂಶ ಸಮೃದ್ಧವೂ ಆಗಿದೆ. ಇದನ್ನು ಮಾಡೋದು ಹೇಗೆ ನೋಡಿ.

ಸಂಜೆ ಸ್ನ್ಯಾಕ್ಸ್‌ಗೆ ಪ್ರತಿದಿನ ಒಂದೇ ಥರ ತಿಂಡಿ ತಿಂದು ಬೇಸರ ಮೂಡಿದ್ರೆ ಹೊಸ ರೀತಿಯ ತಿನಿಸುಗಳನ್ನು ನಾಲಿಗೆ ಬಯಸುತ್ತೆ. ಹಾಗಂತ ಎಣ್ಣೆಯಲ್ಲಿ ಕರಿದ ತಿನಿಸುಗಳು ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಅದಕ್ಕಾಗಿ ಬಾಯಿಗೆ ರುಚಿಸುವ ಜೊತೆ ಆರೋಗ್ಯವನ್ನೂ ಚೆನ್ನಾಗಿರಿಸುವ ಖಾದ್ಯಗಳನ್ನು ತಿನ್ನಲು ಪ್ರಾಶಸ್ತ್ಯ ಕೊಡಬೇಕಾಗುತ್ತದೆ.
ರುಚಿಯ ಜೊತೆ ಆರೋಗ್ಯವೂ ಚೆನ್ನಾಗಿರಬೇಕು ಅಂದ್ರೆ ನೀವು ಈ ಮಹಾರಾಷ್ಟ್ರ ಶೈಲಿಯ ಹುರ್ದಾ ಬೇಲ್ ರೆಸಿಪಿ ಟ್ರೈ ಮಾಡಬೇಕು. ಹುರ್ದಾ ಭೇಲ್ ಮಹಾರಾಷ್ಟ್ರದ ವಿಶೇಷ ಖಾದ್ಯವಾಗಿದ್ದು, ಇದು ತುಂಬಾ ರುಚಿಕರ ಮಾತ್ರವಲ್ಲದೆ ಪೌಷ್ಟಿಕವೂ ಆಗಿದೆ. ಹುರ್ದಾ ಭೇಲ್ ಅನ್ನು ಪಾಪ್ಡಿ ಮತ್ತು ಮಸಾಲೆಯುಕ್ತ ಚಟ್ನಿಯಿಂದ ತಯಾರಿಸಲಾಗುತ್ತದೆ. ಇದನ್ನು ಮಕ್ಕಳಿಂದ ದೊಡ್ಡವರೆಗೆ ಎಲ್ಲರೂ ಇಷ್ಟಪಡುತ್ತಾರೆ.
ಹುರ್ದಾ ಬೇಲ್ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಹುರ್ದಾ (ಹೆಸರು ಕಾಳು– 1ಕಪ್, ಮಂಡಕ್ಕಿ – 1ಕಪ್, ಹುರಿದ ಶೇಂಗಾ – ಅರ್ಧ ಕಪ್, ಬೇಯಿಸಿದ ಆಲೂಗೆಡ್ಡೆ – ಕಾಲು ಕಪ್, ಹೆಚ್ಚಿದ ಈರುಳ್ಳಿ – ಕಾಲು ಕಪ್, ಹೆಚ್ಚಿದ ಟೊಮೆಟೊ – ಕಾಲು ಕಪ್, ಸೌತೆಕಾಯಿ – ಕಾಲು ಕಪ್, ಹೆಚ್ಚಿದ ಹಸಿಮೆಣಸು – 1 ಟೀ ಚಮಚ, ಪಾನಿಪುರಿ ಚಟ್ನಿ – 1 ಟೀ ಚಮಚ, ಖಾರದಪುಡಿ – ಅರ್ಧ ಚಮಚ, ಚಾಟ್ ಮಸಾಲ – ಅರ್ಧ ಚಮಚ, ಜೀರಿಗೆ ಪುಡಿ – ಅರ್ಧ ಚಮಚ, ಶುಂಠಿ ಪೇಸ್ಟ್ – ಅರ್ಧ ಚಮಚ, ಉಪ್ಪು – ರುಚಿಗೆ
ಹುರ್ದಾ ಬೇಲ್ ಮಾಡುವ ವಿಧಾನ
ಹೆಸರುಕಾಳನ್ನು ಚೆನ್ನಾಗಿ ತೊಳೆದು ಒಣಗಿಸಿಡಿ. ಪ್ಯಾನ್ ಬಿಸಿ ಮಾಡಿ ಶೇಂಗಾವನ್ನು ಹುರಿದುಕೊಳ್ಳಿ. ಒಂದು ದೊಡ್ಡ ಬಟ್ಟಲಿನಲ್ಲಿ, ಶೇಂಗಾ, ಮಂಡಕ್ಕಿ, ಆಲೂಗೆಡ್ಡೆ, ಈರುಳ್ಳಿ, ಟೊಮೆಟೊ, ಸೌತೆಕಾಯಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈ ಮಿಶ್ರಣಕ್ಕೆ ಹೆಸರುಕಾಳು ಹಾಗೂ ಪಾನಿಪುರಿ ಚಟ್ನಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಾಟ್ ಮಸಾಲಾ, ಮೆಣಸಿನ ಪುಡಿ, ಜೀರಿಗೆ ಪುಡಿ, ಶುಂಠಿ ಪೇಸ್ಟ್ ಮತ್ತು ಉಪ್ಪು ಸೇರಿಸಿ ಮತ್ತೆ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ. ಈ ನಿಮ್ಮ ಮುಂದೆ ಹುರ್ದಾ ಬೇಲೆ ತಿನ್ನಲು ಸಿದ್ಧವಾಗಿದೆ.
ಮಹಾರಾಷ್ಟ್ರದಲ್ಲಿ ವಿಶೇಷವಾಗಿರುವ ಈ ರೆಸಿಪಿಯನ್ನು ನೀವು ಒಮ್ಮೆ ಮನೆಯಲ್ಲಿ ಮಾಡಿ ನೋಡಿ. ಇದರ ರುಚಿಗೆ ನೀವು ಖಂಡಿತ ಫಿದಾ ಆಗ್ತೀರಿ. ಚಾಟ್‌ಮಸಾಲೆ ಮುಂತಾದವನ್ನು ಸೇರಿಸುವ ಕಾರಣ ಮಕ್ಕಳಿಗೂ ಇದು ತುಂಬಾನೇ ಇಷ್ಟವಾಗುತ್ತದೆ.

ವಿಭಾಗ