ಉಳಿದ ಅನ್ನದಿಂದ ಮಾಡಬಹುದು ಟೇಸ್ಟಿ, ಗರಿಗರಿಯಾದ ದೋಸೆ: ಇಲ್ಲಿದೆ ಸಿಂಪಲ್ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಉಳಿದ ಅನ್ನದಿಂದ ಮಾಡಬಹುದು ಟೇಸ್ಟಿ, ಗರಿಗರಿಯಾದ ದೋಸೆ: ಇಲ್ಲಿದೆ ಸಿಂಪಲ್ ರೆಸಿಪಿ

ಉಳಿದ ಅನ್ನದಿಂದ ಮಾಡಬಹುದು ಟೇಸ್ಟಿ, ಗರಿಗರಿಯಾದ ದೋಸೆ: ಇಲ್ಲಿದೆ ಸಿಂಪಲ್ ರೆಸಿಪಿ

Instant dosa from leftover rice: ನೀವು ಉಳಿದ ಅನ್ನವನ್ನು ತಿನ್ನಲು ಬಯಸದಿದ್ದರೆ ರುಚಿಕರವಾದ ದೋಸೆಯನ್ನು ಮಾಡಬಹುದು. ಈ ಚಳಿಗಾಲದಲ್ಲಿ ಬಿಸಿ ಬಿಸಿ ಅನ್ನ ತಿನ್ನಬೇಕು ಎಂದು ಬಯಸುವವರೇ ಹೆಚ್ಚು. ಹೀಗಾಗಿ ಉಳಿದಿರುವ ಅನ್ನವನ್ನು ವ್ಯರ್ಥ ಮಾಡದೆ ರುಚಿಕರವಾದ, ಗರಿಗರಿಯಾದ ದೋಸೆ ತಯಾರಿಸಬಹುದು. ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ಪಾಕವಿಧಾನ.

ಉಳಿದ ಅನ್ನದಿಂದ ಮಾಡಬಹುದು ಟೇಸ್ಟಿ, ಗರಿಗರಿಯಾದ ದೋಸೆ: ಇಲ್ಲಿದೆ ಸಿಂಪಲ್ ರೆಸಿಪಿ
ಉಳಿದ ಅನ್ನದಿಂದ ಮಾಡಬಹುದು ಟೇಸ್ಟಿ, ಗರಿಗರಿಯಾದ ದೋಸೆ: ಇಲ್ಲಿದೆ ಸಿಂಪಲ್ ರೆಸಿಪಿ

ಉಳಿದ ಅನ್ನವನ್ನು ಡಸ್ಟ್ ಬಿನ್‌ಗೆ ಹಾಕದಿರಿ. ಇದರಿಂದ ರುಚಿಕರವಾದ ದೋಸೆಗಳನ್ನು ತಯಾರಿಸಬಹುದು. ರಾತ್ರಿ ಮಾಡಿದ ಅನ್ನ ಉಳಿದಿದ್ದರೆ ಮರುದಿನ ತಿನ್ನಲು ಆಗುವುದಿಲ್ಲ. ಅದರಲ್ಲೂ ಈ ಚಳಿಗಾಲದಲ್ಲಿ ಬಿಸಿ ಬಿಸಿ ಅನ್ನ ತಿನ್ನಬೇಕು ಎಂದು ಬಯಸುವವರೇ ಹೆಚ್ಚು. ಹೀಗಾಗಿ ಉಳಿದಿರುವ ಅನ್ನವನ್ನು ವ್ಯರ್ಥ ಮಾಡದೆ ರುಚಿಕರವಾದ ದೋಸೆ ತಯಾರಿಸಬಹುದು. ಗರಿಗರಿಯಾಗಿ ಬರುವ ಈ ದೋಸೆ ತಿನ್ನಲು ಕೂಡ ರುಚಿಕರವಾಗಿರುತ್ತದೆ. ಉಳಿದ ಅನ್ನದೊಂದಿಗೆ ದೋಸೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.

ಉಳಿದ ಅನ್ನದೊಂದಿಗೆ ದೋಸೆ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಅನ್ನ- ಎರಡು ಕಪ್, ರವೆ- ಒಂದು ಕಪ್, ಹುಳಿ ಮೊಸರು- ಒಂದು ಕಪ್, ಗೋಧಿ ಹಿಟ್ಟು- ಅರ್ಧ ಕಪ್, ನೀರು- ರುಬ್ಬಲು ಬೇಕಾಗುವಷ್ಟು, ಎಣ್ಣೆ- ಸ್ವಲ್ಪ, ಅಡುಗೆ ಸೋಡಾ- ಚಿಟಿಕೆ, ಉಪ್ಪು- ರುಚಿಗೆ ತಕ್ಕಷ್ಟು.

ಉಳಿದ ಅನ್ನದಿಂದ ದೋಸೆ ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ಅನ್ನ, ರವೆ, ಗೋಧಿ ಹಿಟ್ಟು, ಮೊಸರು ಮತ್ತು ನೀರನ್ನು ಹಾಕಿ. ಅವುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ.

- ಇವುಗಳೊಂದಿಗೆ ಬೆರೆಸಿದರೆ ಸ್ವಲ್ಪ ಗಟ್ಟಿಯಾಗುತ್ತದೆ. ಅದಕ್ಕೆ ಮಿಕ್ಸಿಂಗ್ ನಿಲ್ಲಿಸಿ ಸ್ವಲ್ಪ ನೀರು ಹಾಕಿ ರುಬ್ಬಬೇಕು. ಹಿಟ್ಟನ್ನು ನುಣ್ಣಗೆ ರುಬ್ಬಿಕೊಳ್ಳಿ.

- ಅದರ ನಂತರ ರುಬ್ಬಿದ ಹಿಟ್ಟಿಗೆ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ, ಮಿಶ್ರಣ ಮಾಡಿ. ದೋಸೆ ಹಿಟ್ಟನ್ನು ನಯವಾಗಿಸಲು ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ.

- ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ, 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.

- ಅದರ ನಂತರ ಸ್ಟೌವ್ ಮೇಲೆ ತವಾ ಇಟ್ಟು ಹಾಕಿ ಬಿಸಿ ಮಾಡಿ. ಅಡುಗೆ ಎಣ್ಣೆಗೆ ಅರ್ಧ ಕತ್ತರಿಸಿದ ಈರುಳ್ಳಿಯನ್ನು ಮುಳುಗಿಸಿ ತವಾ ಮೇಲೆ ಸವರಿ.

- ತವಾ ಬಿಸಿಯಾದ ನಂತರ, ಸಿದ್ಧಪಡಿಸಿದ ದೋಸೆ ಹಿಟ್ಟನ್ನು ಹುಯ್ಯಿರಿ. ಇದು ಸ್ವಲ್ಪ ದಪ್ಪವಾಗಿರಬೇಕು.

- ದೋಸೆ ಸ್ವಲ್ಪ ಬೆಂದ ನಂತರ, ಎಣ್ಣೆ ಅಥವಾ ತುಪ್ಪವನ್ನು ಮಧ್ಯದಲ್ಲಿ ಮತ್ತು ಅಂಚುಗಳ ಉದ್ದಕ್ಕೂ ಹಾಕಬೇಕು.

- ದೋಸೆಯನ್ನು ಒಂದು ಕಡೆ ಬೇಯಿಸಿದಾಗ, ಇನ್ನೊಂದು ಬದಿಯಲ್ಲಿ ಸ್ವಲ್ಪ ಸಮಯ ಬೇಯಿಸಬೇಕು. ನಂತರ, ದೋಸೆಯನ್ನು ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿದರೆ ರುಚಿಕರವಾದ ಅನ್ನದಿಂದ ಮಾಡಿದ ದೋಸೆ ಸವಿಯಲು ಸಿದ್ಧ.

ಈ ದೋಸೆಗಳನ್ನು ತೆಂಗಿನಕಾಯಿ ಚಟ್ನಿ ಅಥವಾ ಶುಂಠಿ ಚಟ್ನಿಯೊಂದಿಗೆ ತಿನ್ನಬಹುದು. ಉಳಿದ ಅನ್ನವನ್ನು ಏನು ಮಾಡುವುದು ಎಂಬ ಚಿಂತೆಯಿದ್ದರೆ, ಈ ರೀತಿ ಗರಿಗರಿಯಾದ ದೋಸೆಗಳನ್ನು ತಯಾರಿಸಬಹುದು. ಬೆಳಗ್ಗೆ ತಿನ್ನಲು ಇದು ಉತ್ತಮ ಉಪಹಾರವೂ ಹೌದು.

Whats_app_banner