ಕೊಡಗು ಮೂಲದ ಸಾಂಪ್ರದಾಯಿಕ ತಿನಿಸು ಕಡಂಬುಟ್ಟು ರೆಸಿಪಿ ಇಲ್ಲಿದೆ, ಒಮ್ಮೆ ರುಚಿ ನೋಡಿದ್ರೆ ಮತ್ತೆ ಮತ್ತೆ ಬೇಕು ಅಂತಾರೆ
ಅಕ್ಕಿಯಿಂದ ತಯಾರಿಸುವ ಸಾಂಪ್ರದಾಯಿಕ ತಿನಿಸುಗಳು ನಿಮಗೆ ಇಷ್ಟ ಎಂದರೆ ನೀವೊಮ್ಮೆ ಕಡಂಬುಟ್ಟು ಟ್ರೈ ಮಾಡಬಹುದು. ಕೊಡಗು ಮೂಲದ ಈ ಸಾಂಪ್ರದಾಯಿಕ ತಿನಿಸಿನ ರುಚಿಯನ್ನು ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ತಿನ್ನಬೇಕು ಅಂತ ಕೇಳ್ತೀರಾ.

ಅಕ್ಕಿ ಪುಡಿಯಿಂದ ಸಖತ್ ಆಗಿರುವ ತಿನಿಸುಗಳನ್ನು ತಯಾರಿಸಬಹುದು ಅನ್ನೋದು ಹಲವರಿಗೆ ತಿಳಿದಿಲ್ಲ. ಅಕ್ಕಿ ರುಬ್ಬಿಯೇ ತಿಂಡಿ ಮಾಡಬೇಕು ಅಂತಿಲ್ಲ. ಅಕ್ಕಿಯನ್ನು ತರಿತರಿಯಾಗಿ ರುಬ್ಬಿ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅಂತಹ ತಿನಿಸುಗಳಲ್ಲಿ ಕಡಂಬುಟ್ಟು ಕೂಡ ಒಂದು. ಇದು ಕರ್ನಾಟಕದ ಕೊಡಗು ಮೂಲದ ತಿನಿಸು. ಕರಾವಳಿ ಭಾಗದಲ್ಲೂ ಈ ತಿಂಡಿಯನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ.
ಅಕ್ಕಿಯನ್ನು ಹುರಿದು ಪುಡಿ ಮಾಡಿ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸುವ ಈ ತಿಂಡಿ ತಯಾರಿಸಲು ಸಾಕಷ್ಟು ಐಟಂಗಳು ಬೇಕು ಅಂತಿಲ್ಲ. ಆದರೆ ಇದರ ರುಚಿ ಮಾತ್ರ ಸಖತ್ ಆಗಿರುತ್ತೆ. ಮೊದಲೇ ಅಕ್ಕಿ ಪುಡಿ ಮಾಡಿಟ್ಟುಕೊಂಡರೆ ಕೆಲವು ನಿಮಿಷಗಳಲ್ಲಿ ಈ ತಿಂಡಿಯನ್ನು ತಯಾರಿಸಬಹುದು. ಅಕ್ಕಿಯನ್ನು ತೊಳೆದು ಒಣಗಿಸಿ ಪುಡಿ ಮಾಡಿ ಇದನ್ನು ತಯಾರಿಸಬಹುದು.
ನೀವು ಪ್ರತಿದಿನ ಕೆಲಸಕ್ಕೆ ಹೋಗುವವರಾದರೆ ಈ ತಿಂಡಿಯನ್ನು ಆಗಾಗ ಮಾಡಬಹುದು. ಇದನ್ನು ಸುಲಭವಾಗಿ ತಯಾರಿಸಬಹುದಾದ ಕಾರಣ ಕೆಲಸಕ್ಕೆ ಹೋಗುವ ಗೃಹಿಣಿಯರಿಗೆ ಇದು ಬೆಸ್ಟ್. ಇದನ್ನು ನಾನ್‌ವೆಜ್ ಜೊತೆ ತಿನ್ನಲು ಸಖತ್ ಆಗಿರುತ್ತೆ. ಆದರೂ ಚಟ್ನಿಯೂ ಇದಕ್ಕೆ ಬೆಸ್ಟ್ ಕಾಂಬಿನೇಷನ್ ಅನ್ನೋದು ಸುಳ್ಳಲ್ಲ. ಹಬೆಯಲ್ಲಿ ಬೇಯಿಸುವ ಕಾರಣ ಈ ತಿನಿಸಿನ ರುಚಿ ದುಪ್ಪಟ್ಟಾಗುತ್ತದೆ. ಕೆಲವೇ ಕೆಲವು ಸಾಮಗ್ರಿಗಳನ್ನು ಬಳಸಿ ತಯಾರಿಸುವ ಕಡಂಬುಟ್ಟು ರುಚಿಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.
ಕಡಂಬುಟ್ಟುಗೆ ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು - 1 ಕಪ್, ನೀರು - ಅಗತ್ಯ ಇರುವಷ್ಟು, ಉಪ್ಪು - ರುಚಿಗೆ ತಕ್ಕಷ್ಟು, ತುರಿದ ತೆಂಗಿನಕಾಯಿ - 2 ಕಪ್, ತುಪ್ಪ - ಕಾಲು ಕಪ್
ಕಡಂಬುಟ್ಟು ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ ಕುದಿಸಿ. ಇದಕ್ಕೆ ಸ್ವಲ್ಪ ಉಪ್ಪು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಬೆರೆಸಿ, ಹಿಟ್ಟು ದಪ್ಪವಾಗುವವರೆಗೂ ಕೈಯಾಡಿಸುತ್ತಲೇ ಇರಿ. ಅಗತ್ಯಕ್ಕೆ ತಕ್ಕಷ್ಟು ತುಪ್ಪ ಮತ್ತು ತೆಂಗಿನಕಾಯಿ ಸೇರಿಸಿ. ಹಿಟ್ಟು ಸ್ವಲ್ಪ ಹೊತ್ತು ಗಟ್ಟಿಯಾದ ನಂತರ, ಅದರಿಂದ ಸಣ್ಣ ಉಂಡೆಗಳನ್ನು ಮಾಡಿ ತೆಂಗಿನಕಾಯಿ ತುರಿಯಲ್ಲಿ ಸುತ್ತಿಕೊಳ್ಳಿ. ತೆಂಗಿನಕಾಯಿ ತುರಿ ಉಂಡೆಗೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡಿ. ನೀವು ಇದನ್ನು ಸ್ಟೀಮರ್ ಅಥವಾ ಇಡ್ಲಿ ಪಾತ್ರೆಗೆ ಸೇರಿಸಿ ಹಬೆಯಲ್ಲಿ ಬೇಯಿಸಿದರೆ ನಿಮಗೆ ಸೂಪರ್ ರುಚಿಕರವಾದ ಕರ್ನಾಟಕದ ಕೊಡಗು ಸ್ಪೆಷಲ್ ಕಡಂಬುಟ್ಟು ಸಿದ್ಧವಾಗುತ್ತದೆ.
ಇದನ್ನು ಬೆಳಗಿನ ಉಪಾಹಾರ ಅಥವಾ ಸಂಜೆ ತಿಂಡಿಯಾಗಿ ತಿನ್ನಲು ರುಚಿಕರವಾಗಿರುತ್ತದೆ. ಇದರ ಜೊತೆ ಏನನ್ನೂ ನೆಂಜಿಕೊಳ್ಳದೇ ಬೇಕಾದರೂ ತಿನ್ನಬಹುದು. ಬೇಕಾದರೆ ತೆಂಗಿನಕಾಯಿ ಅಥವಾ ಖಾರದ ಚಟ್ನಿಗಳು ಹೊಂದುತ್ತವೆ. ಶಾಲೆಯಿಂದ ಮನೆಗೆ ಬರುವ ಚಿಕ್ಕ ಮಕ್ಕಳಿಗಾಗಿ ನೀವು ಇದನ್ನು ಮಾಡಿದರೆ, ಅವರಿಗೆ ಇದು ತುಂಬಾ ಇಷ್ಟವಾಗುತ್ತದೆ.
ಒಮ್ಮೆ ರುಚಿ ನೋಡಿದ ಮೇಲೆ, ಮತ್ತೆ ಮತ್ತೆ ತಿನ್ನಲು ಬಯಸುತ್ತಾರೆ. ಹಾಗಾಗಿ ಒಮ್ಮೆ ಮಾಡಿ ತಿನ್ನಿ, ಖಂಡಿತ ಇದನ್ನು ಮತ್ತೆ ಮತ್ತೆ ಮಾಡಿ ಅಂತ ತಿಂದವರು ಕೇಳಿಕೊಳ್ಳುತ್ತಾರೆ. ಏಕೆಂದರೆ ನಿಮ್ಮ ಮನೆಯಲ್ಲಿರುವ ಮಕ್ಕಳು ಮಾತ್ರವಲ್ಲದೆ ದೊಡ್ಡವರು ಕೂಡ ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇದು ಮೃದುವಾಗಿರುವ ಕಾರಣ ವೃದ್ಧರಿಗೂ ಇಷ್ಟವಾಗುತ್ತದೆ.
ವಿಭಾಗ