ಕನ್ನಡ ಸುದ್ದಿ  /  ಜೀವನಶೈಲಿ  /  ಕೇರಳದ ಸಾಂಪ್ರದಾಯಿಕ ತಿನಿಸು ಉಣ್ಣಿಯಪ್ಪಂ ತಿಂದಿದ್ದೀರಾ? ಈ ಸಿಹಿ ತಿನಿಸನ್ನು ಟೇಸ್ಟ್‌ ಮಾಡುವ ಮುನ್ನ ಇದರ ಇತಿಹಾಸ ತಿಳಿಯಿರಿ

ಕೇರಳದ ಸಾಂಪ್ರದಾಯಿಕ ತಿನಿಸು ಉಣ್ಣಿಯಪ್ಪಂ ತಿಂದಿದ್ದೀರಾ? ಈ ಸಿಹಿ ತಿನಿಸನ್ನು ಟೇಸ್ಟ್‌ ಮಾಡುವ ಮುನ್ನ ಇದರ ಇತಿಹಾಸ ತಿಳಿಯಿರಿ

ಕೇರಳದ ಉಣ್ಣಿಯಪ್ಪಂ ಶ್ರೀಕೃಷ್ಣನ ನೆಚ್ಚಿನ ಭಕ್ಷ್ಯಗಳಲ್ಲಿ ಒಂದಾಗಿದೆ ಎಂಬುದು ಕೇರಳಿಯನ್ನರ ನಂಬಿಕೆಯಾಗಿದೆ. ಕೇರಳದ ದೇವಾಲಯಗಳಲ್ಲಿ ಇದನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದು ಕೇರಳ ಪ್ರಸಿದ್ಧ ಸಿಹಿ ತಿನಿಸಾಗಿದೆ. ಇಷ್ಟೊಂದು ಪ್ರಖ್ಯಾತಿ ಪಡೆದಿರುವ ಈ ಅಪ್ಪಂನ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ಕೇರಳದ ಸಾಂಪ್ರದಾಯಿಕ ತಿನಿಸು ಉಣ್ಣಿಯಪ್ಪಂ ತಿಂದಿದ್ದೀರಾ? ಈ ಸಿಹಿ ತಿನಿಸನ್ನು ಟೇಸ್ಟ್‌ ಮಾಡುವ ಮುನ್ನ ಇದರ ಇತಿಹಾಸ ತಿಳಿಯಿರಿ
ಕೇರಳದ ಸಾಂಪ್ರದಾಯಿಕ ತಿನಿಸು ಉಣ್ಣಿಯಪ್ಪಂ ತಿಂದಿದ್ದೀರಾ? ಈ ಸಿಹಿ ತಿನಿಸನ್ನು ಟೇಸ್ಟ್‌ ಮಾಡುವ ಮುನ್ನ ಇದರ ಇತಿಹಾಸ ತಿಳಿಯಿರಿ

ಖಾದ್ಯಗಳ ವಿಚಾರಕ್ಕೆ ಬಂದಾಗ ಅದರಲ್ಲೂ ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಕ್ಷ್ಯಗಳ ಶೈಲಿ, ರುಚಿ ಬದಲಾಗುತ್ತದೆ. ಬೇರೆ-ಬೇರೆ ರಾಜ್ಯ, ಪ್ರದೇಶಗಳಲ್ಲಿ ತಮ್ಮದೇ ಶೈಲಿಯಲ್ಲಿ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ದಕ್ಷಿಣ ಭಾರತದ ಕೇರಳ ರಾಜ್ಯದ ಪಾಕಪದ್ಧತಿಯು ಹೆಚ್ಚು ಬೇಡಿಕೆಯಿರುವ ಪಾಕಪದ್ಧತಿಗಳಲ್ಲಿ ಒಂದಾಗಿದೆ. ಬಹುತೇಕರು ಕೇರಳ ಶೈಲಿಯ ಆಹಾರವನ್ನು ಇಷ್ಟಪಡುತ್ತಾರೆ.

ಕೇರಳದ ಪ್ರಸಿದ್ಧ ಪಾಕಪದ್ಧತಿಗಳಲ್ಲೊಂದಾದ ಉಣ್ಣಿಯಪ್ಪಂ ಅಥವಾ ಅನ್ನಪಲ್ಲಿಯಪ್ಪಂ ಅನ್ನು ಇಂದು ನಿಮಗೆ ಪರಿಚಯಿಸುತ್ತಿದ್ದೇವೆ. ಇದು ಕೇರಳದ ಶುಭ ಸಮಾರಂಭಗಳಲ್ಲಿ ಸಾಮಾನ್ಯವಾಗಿ ತಯಾರಿಸಲಾಗುವ ಜನಪ್ರಿಯ ಖಾದ್ಯ. ಬಾಳೆಹಣ್ಣು, ತೆಂಗಿನಕಾಯಿ ಮತ್ತು ಇತರ ಉತ್ಕೃಷ್ಟ ಪದಾರ್ಥಗಳೊಂದಿಗೆ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ಈ ಭಕ್ಷ್ಯದ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

ಉಣ್ಣಿಯಪ್ಪಂ ಮೂಲ

ಕೇರಳದ ಉಣ್ಣಿಯಪ್ಪಂ ಒಂದು ರುಚಿಕರವಾದ ಖಾದ್ಯವಾಗಿದ್ದು, ಇದು ಹುಟ್ಟಿಕೊಂಡಿದ್ದು ದೇವಾಲಯಗಳಲ್ಲಿ ಎಂದು ನಂಬಲಾಗಿದೆ. ಇಂದಿಗೂ, ಶುಭ ಸಮಾರಂಭಗಳಲ್ಲಿ ಇದನ್ನು ದೇವರಿಗೆ ಪ್ರಸಾದವಾಗಿ (ನೈವೇದ್ಯ) ಅರ್ಪಿಸಲಾಗುತ್ತದೆ. ಮಲಯಾಳಂನಲ್ಲಿ ಉನ್ನಿ ಅಂದರೆ ಚಿಕ್ಕವರು ಎಂದರ್ಥ. ಈ ಅಪ್ಪಂ ಬೆಲ್ಲ ಮತ್ತು ಅಕ್ಕಿ ಹಿಟ್ಟು ಬಳಸಿ ತಯಾರಿಸಲಾದ ಖಾದ್ಯ.

ಟ್ರೆಂಡಿಂಗ್​ ಸುದ್ದಿ

ಇದನ್ನು ನೆಯ್ಯಪ್ಪಂ ಅಥವಾ ಕರೋಲಪ್ಪಂ ಎಂದೂ ಕರೆಯಲಾಗುತ್ತದೆ. ಓಣಂ, ವಿಷು, ಮದುವೆಗಳ ಹೊರತಾಗಿ, ಈ ಭಕ್ಷ್ಯವನ್ನು ಸಿಹಿ ತಿನಿಸಾಗಿಯೂ ಸೇವಿಸಲಾಗುತ್ತದೆ. ಹಿಂದೂ ದೇವಾಲಯಗಳಲ್ಲಿ, ಈ ಭಕ್ಷ್ಯವನ್ನು ಪ್ರಸಾದವಾಗಿ ನೀಡಲಾಗುತ್ತದೆ. ನೀವು ಕೇರಳ ಕಡೆಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದರೆ, ಇದನ್ನು ನೀವು ಸೇವಿಸಿರಬಹುದು.

ಉಣ್ಣಿಯಪ್ಪಂನ ಮಹತ್ವ

ಸಿಹಿ ಪದಾರ್ಥಗಳು, ತುಪ್ಪ ಮತ್ತು ಬಾಳೆಹಣ್ಣಿನಿಂದ ತಯಾರಿಸಿದ ಈ ಖಾದ್ಯವು ಹೆಚ್ಚು ಪೌಷ್ಟಿಕವಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ಈ ಭಕ್ಷ್ಯ ಭಗವಂತ ಶ್ರೀಕೃಷ್ಣನ ಅಚ್ಚುಮೆಚ್ಚಿನವುಗಳಲ್ಲಿ ಒಂದಾಗಿದೆಯಂತೆ. ಹೀಗಾಗಿ ಇದನ್ನು ವಿಶೇಷ ಸಂದರ್ಭಗಳಲ್ಲಿ ಜಗದೋದ್ಧಾರಕ ಶ್ರೀ ಕೃಷ್ಣನಿಗೆ ಪ್ರಸಾದವಾಗಿ ನೀಡಲಾಗುತ್ತದೆ.

ಭಕ್ಷ್ಯವು ಸಮುದಾಯದ ಬಾಂಧವ್ಯ, ಸಮೃದ್ಧಿ ಮತ್ತು ಏಕತೆಯನ್ನು ಸಂಕೇತಿಸುತ್ತದೆ. ಹಬ್ಬ- ಹರಿದಿನಗಳಲ್ಲಿ ಕುಟುಂಬಗಳು ಒಟ್ಟಾಗಿ ಸೇರಿ ಈ ಖಾದ್ಯ ಮತ್ತು ಇತರ ಭೋಜನಗಳನ್ನು ಮೊದಲು ದೇವರಿಗೆ ಅರ್ಪಿಸಿ ನಂತರ ಸೇವಿಸುತ್ತಾರೆ. ಇದು ಕೇರಳದ ಪಾಕಶಾಲೆಯ ಪರಂಪರೆಯ ಭಾಗವಾಗಿದೆ.

ಉಣ್ಣಿಯಪ್ಪಂ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಉಣ್ಣಿಯಪ್ಪಂ ಮಾಡಲು ಬೇಕಾಗುವ ಪದಾರ್ಥಗಳು: ತುರಿದ ತೆಂಗಿನಕಾಯಿ - ¼ ಕಪ್, ಅಕ್ಕಿ ಹಿಟ್ಟು - 1 ಕಪ್, ಹಿಸುಕಿದ ಬಾಳೆಹಣ್ಣು - ½ ಕಪ್, ಏಲಕ್ಕಿ ಪುಡಿ- ¼ ಟೀ ಚಮಚ, ಮೈದಾ - ¼ ಕಪ್, ಪುಡಿ ಮಾಡಿಟ್ಟ ಬೆಲ್ಲ- ½ ಕಪ್, ಎಣ್ಣೆ - ಫ್ರೈ ಮಾಡಲು, ರುಚಿಗೆ ತಕ್ಕಷ್ಟು ಉಪ್ಪು.

ಉಣ್ಣಿಯಪ್ಪಂ ಮಾಡುವ ವಿಧಾನ: ಮೊದಲಿಗೆ ಬೆಲ್ಲದ ಪಾಕವನ್ನು ತಯಾರಿಸಿ. ಬಳಿಕ ಅಕ್ಕಿಹಿಟ್ಟು, ಮೈದಾ, ಹಿಸುಕಿದ ಬಾಳೆಹಣ್ಣು, ತುರಿದ ತೆಂಗಿನಕಾಯಿ ಮತ್ತು ಏಲಕ್ಕಿ ಪುಡಿಯನ್ನು ಬಳಸಿ ಹಿಟ್ಟನ್ನು ತಯಾರಿಸುವಾಗ ಬೆಲ್ಲದ ಪಾಕ ಸ್ವಲ್ಪ ಸ್ವಲ್ವವೇ ಹಾಕುತ್ತಾ ಚೆನ್ನಾಗಿ ಮಿಶ್ರಣ ಮಾಡಿ. ಅವು ಉಂಡೆಗಳ ರಚನೆ ಪಡೆಯುವವರೆಗೂ ನಿರಂತರವಾಗಿ ಮಿಕ್ಸ್ ಮಾಡುತ್ತಿರಬೇಕು. ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು, ಅಪ್ಪಂ ಮಾಡುವ ಪ್ಯಾನ್ ಅನ್ನು ಸ್ಟೌವ್ ಮೇಲಿಡಿ. ಅಚ್ಚು ಬಿಸಿಯಾದ ಕೂಡಲೇ ಪ್ರತಿ ಅಚ್ಚುಗೆ ತುಪ್ಪವನ್ನು ಹಾಕಿ, ಪ್ರತಿಯೊಂದಕ್ಕೂ ಹಿಟ್ಟನ್ನು ಸುರಿಯಿರಿ. ಇದನ್ನು ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಬೇಯಿಸಿ. ಒಂದು ಕಡೆ ಬೆಂದ ಬಳಿಕ ಉಣ್ಣಿಯಪ್ಪಮ್ ಅನ್ನು ಇನ್ನೊಂದು ಬದಿಯಲ್ಲಿ ಬೇಯಿಸಲು ತಿರುಗಿಸಿ (ಪಡ್ಡು ಮಾಡುವಂತೆ). ಅಪ್ಪಂ ಗರಿಗರಿಯಾಗಿ, ಕಂದು ಬಣ್ಣಕ್ಕೆ ತಿರುಗಿದಾಗ ಅವುಗಳನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿದರೆ, ಸವಿಯಲು ರುಚಿಕರವಾದ ಉಣ್ಣಿಯಪ್ಪಮ್ ರೆಡಿ.