ಕನ್ನಡ ಸುದ್ದಿ  /  ಜೀವನಶೈಲಿ  /  Paneer Dosa: ಬೆಳಗಿನ ಉಪಾಹಾರಕ್ಕೆ ಈ ರೀತಿ ಪನೀರ್ ದೋಸೆ ಮಾಡಿ, ಮಕ್ಕಳು ಕೂಡ ಇಷ್ಟಪಟ್ಟು ತಿನ್ನೋದು ಪಕ್ಕಾ

Paneer Dosa: ಬೆಳಗಿನ ಉಪಾಹಾರಕ್ಕೆ ಈ ರೀತಿ ಪನೀರ್ ದೋಸೆ ಮಾಡಿ, ಮಕ್ಕಳು ಕೂಡ ಇಷ್ಟಪಟ್ಟು ತಿನ್ನೋದು ಪಕ್ಕಾ

ನಿಮ್ಮನೇಲಿ ಪ್ರತಿದಿನ ಉಪಾಹಾರಕ್ಕೆ ಏನ್‌ ತಿಂಡಿ ಮಾಡ್ತೀರಿ? ಕೆಲವರ ಮನೆಯಲ್ಲಂತೂ ತಿಂಡಿ ಏನು ಎಂದು ಕೇಳಿದ್ರೆ ಯಾವಾಗಲೂ ದೋಸೆ, ದೋಸೆ ಅಂತಾರೆ. ವಾರಕ್ಕೆ ಮೂರು ನಾಲ್ಕು ದಿನ ದೋಸೆ ಮಾಡಿದ್ರೆ ಬೋರ್ ಬರೋದು ಸಹಜ. ಆದ್ರೆ ದೋಸೆಯಲ್ಲೂ ವೆರೈಟಿ ಮಾಡಿದ್ರೆ ಮಕ್ಕಳಿಗೂ ಇಷ್ಟವಾಗುತ್ತೆ, ಇಲ್ಲಿದೆ ಪನೀರ್‌ ದೋಸಾ ರೆಸಿಪಿ. (ಬರಹ: ಪ್ರಿಯಾಂಕ ಗೌಡ)

ಬೆಳಗಿನ ಉಪಾಹಾರಕ್ಕೆ ಈ ರೀತಿ ಪನೀರ್ ದೋಸೆ ಮಾಡಿ, ಮಕ್ಕಳು ಕೂಡ ಇಷ್ಟಪಟ್ಟು ತಿನ್ನೋದು ಪಕ್ಕಾ
ಬೆಳಗಿನ ಉಪಾಹಾರಕ್ಕೆ ಈ ರೀತಿ ಪನೀರ್ ದೋಸೆ ಮಾಡಿ, ಮಕ್ಕಳು ಕೂಡ ಇಷ್ಟಪಟ್ಟು ತಿನ್ನೋದು ಪಕ್ಕಾ

ನೀವು ದೋಸೆ ಪ್ರಿಯರಾಗಿದ್ದರೆ ವಾರದಲ್ಲಿ ಎರಡು ಬಾರಿ ಇಲ್ಲ, ಮೂರು ಬಾರಿ ದೋಸೆ ಮಾಡಿ ತಿನ್ನುವವರಾಗಿರಬಹುದು. ಕೇವಲ ದೋಸೆ ಮಾಡುವ ಬದಲು, ಈ ದೋಸೆ ಹಿಟ್ಟಿಗೆ ಬೇರೆ ಏನನ್ನಾದರೂ ಸೇರಿಸಿ, ವಿಭಿನ್ನವಾಗಿ, ರುಚಿಕರವಾಗಿ ಮಾಡಿದರೆ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ, ಮನೆಯಲ್ಲೂ ಎಲ್ಲರಿಗೂ ರುಚಿಸುತ್ತೆ. ಮಕ್ಕಳ ಲಂಚ್ ಬಾಕ್ಸ್‌ಗೆ ಪ್ರತಿದಿನ ಏನು ಹಾಕಿ ಕೊಡುವುದು ಅನ್ನೋ ಚಿಂತಿಯಿದ್ದರೆ, ತ್ವರಿತವಾಗಿ ಮಾಡಬಹುದಾದ ತರಕಾರಿ ಪನೀರ್ ದೋಸೆಯನ್ನು ಮಾಡಿಕೊಡಬಹುದು.

ತರಕಾರಿ ಪನೀರ್ ದೋಸೆಯು ರುಚಿಕರವಾದ ಮತ್ತು ಪೌಷ್ಟಿಕಾಂಶ ಭರಿತವಾದ ದಕ್ಷಿಣ ಭಾರತೀಯ ಖಾದ್ಯವಾಗಿದ್ದು, ತರಕಾರಿಗಳು ಮತ್ತು ಪನೀರ್‌ನ ಸುವಾಸನೆಯ ಮಿಶ್ರಣದಿಂದ ತುಂಬಿದ ಗರಿಗರಿಯಾದ ದೋಸೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಈ ತ್ವರಿತ ಮತ್ತು ಸುಲಭವಾದ ಪಾಕವಿಧಾನವಾಗಿದ್ದು, ಉಪಹಾರ ಅಥವಾ ಲಘು ಊಟಕ್ಕೆ ಸೂಕ್ತವಾಗಿದೆ. ಈ ಪನೀರ್‌ ದೋಸೆಯುಪ್ರೊಟೀನ್‌ನಿಂದ ಕೂಡಿರುವ ಕಾರಣ ಆರೋಗ್ಯಕ್ಕೂ ಉತ್ತಮ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ತಿಂದರೆ ಅದರ ರುಚಿಯೇ ಅದ್ಭುತ.

ಪನೀರ್ ದೋಸೆಗೆ ಬೇಕಾಗುವ ಪದಾರ್ಥಗಳು

ದೋಸೆ ಹಿಟ್ಟು - 1 ಕಪ್, ತುರಿದ ಪನೀರ್ - 1/2 ಕಪ್, ನುಣ್ಣಗೆ ಕತ್ತರಿಸಿದ ತರಕಾರಿಗಳು - 1/4 ಕಪ್, ಜೀರಿಗೆ ಪುಡಿ - 1/2 ಟೀ ಚಮಚ, ಅರಿಶಿನ ಪುಡಿ - ಸ್ವಲ್ಪ, ಉಪ್ಪು - ರುಚಿಗೆ ತಕ್ಕಷ್ಟು, ಎಣ್ಣೆ

ಟ್ರೆಂಡಿಂಗ್​ ಸುದ್ದಿ

ಪನೀರ್‌ ದೋಸೆ ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ ದೋಸೆ ಹಿಟ್ಟು, ತುರಿದ ಪನೀರ್, ಸಣ್ಣದಾಗಿ ಹೆಚ್ಚಿದ ತರಕಾರಿಗಳು ಮತ್ತು ಮಸಾಲೆಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ನಂತರ ತವಾ ಬಿಸಿ ಮಾಡಿ ಅದರ ಮೇಲೆ ಹಿಟ್ಟನ್ನು ಸುರಿಯಿರಿ. ವೃತ್ತಾಕಾರದ ಚಲನೆಯಲ್ಲಿ ತೆಳುವಾಗಿ ದೋಸೆ ಮಾಡಿ. ತವಾಗೆ ಎಣ್ಣೆ ಸವರಿ, ದೋಸೆಯನ್ನು ಗೋಲ್ಡನ್ ಬ್ರೌನ್ ಆಗುವವರೆಗೂ ಗರಿಗರಿಯಾಗುವವರೆಗೆ ಬೇಯಿಸಿ. ನಂತರ ದೋಸೆಯನ್ನು ಮಗುಚಿ, ಇನ್ನೊಂದು ಬದಿಯಲ್ಲಿ ಒಂದು ನಿಮಿಷ ಬೇಯಿಸಿ. ಅಥವಾ ಇನ್ನೊಂದು ರೀತಿ ಮಾಡುವುದಾದರೆ ಒಂದು ಪ್ಯಾನ್‌ಗೆ ಒಗ್ಗರಣೆಯಿಟ್ಟು. ಈರುಳ್ಳಿ, ನಿಮಗೆ ಬೇಕಾದ ತರಕಾರಿ, ಪನ್ನೀರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ತವಾಗೆ ತೆಳುವಾಗಿ ದೋಸೆ ಹಿಟ್ಟನ್ನು ಸವರಿ, ಅದು ಗೋಲ್ಡನ್ ಬ್ರೌನ್‌ಗೆ ಬಂದ ನಂತರ ಅದರ ಮೇಲೆ ಪನೀರ್ ಅನ್ನು ಹರಡಿ ಮಡಚಿ ಚೆನ್ನಾಗಿ ಬೇಯಿಸಿದರೆ ಸವಿಯಲು ರುಚಿಕರವಾದ ಪನೀರ್ ದೋಸೆ ರೆಡಿ.

ತರಕಾರಿ ಪನೀರ್ ದೋಸೆಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಿಸಿಯಾಗಿ ಬಡಿಸಿ. ಗರಿಗರಿಯಾದ ದೋಸೆಯನ್ನು ಪಡೆಯಲು ಹಿಟ್ಟನ್ನು ಹಾಕವ ಪ್ಯಾನ್ ಬಿಸಿಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ದೋಸೆಯನ್ನು ಹೆಚ್ಚು ಸುವಾಸನೆಭರಿತವಾಗಿರಿಸಲು, ನೀವು ಹಿಟ್ಟಿಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಬಹುದು.

ವಯಸ್ಕರು ಮಾತ್ರವಲ್ಲ, ಈ ದೋಸೆಯನ್ನು ಮಕ್ಕಳು ಕೂಡ ಖಂಡಿತಾ ಇಷ್ಟಪಟ್ಟು ತಿನ್ನೋದರಲ್ಲಿ ಸಂಶಯವೇ ಇಲ್ಲ. ನೀವು ಒಂದು ಬಾರಿ ಈ ದೋಸೆಯನ್ನು ಮನೆಯಲ್ಲೇ ಟ್ರೈ ಮಾಡಿ, ಬಳಿಕ ಪದೇ ಪದೇ ಮಾಡಬೇಕು ಎಂದೆನಿಸಬಹುದು.