ಸಂಜೆ ಚಹಾ ಹೀರುತ್ತಾ ರುಚಿಕರ ಮೊಳಕೆ ಕಾಳು-ಪನೀರ್ ಟಿಕ್ಕಿ ತಿನ್ನಿ; ಇದನ್ನು ಮಾಡುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಜೆ ಚಹಾ ಹೀರುತ್ತಾ ರುಚಿಕರ ಮೊಳಕೆ ಕಾಳು-ಪನೀರ್ ಟಿಕ್ಕಿ ತಿನ್ನಿ; ಇದನ್ನು ಮಾಡುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಸಂಜೆ ಚಹಾ ಹೀರುತ್ತಾ ರುಚಿಕರ ಮೊಳಕೆ ಕಾಳು-ಪನೀರ್ ಟಿಕ್ಕಿ ತಿನ್ನಿ; ಇದನ್ನು ಮಾಡುವುದು ತುಂಬಾ ಸುಲಭ, ಇಲ್ಲಿದೆ ರೆಸಿಪಿ

ಸಂಜೆ ಚಹಾ ಹೀರುತ್ತಾಸ್ನಾಕ್ಸ್‌ಗೆ ಏನಾದರೂ ತಿನ್ನಬೇಕು ಎಂದೆನಿಸುವುದು ಸಹಜ. ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಸಹಕಾರಿಯಾಗಿರುವ ಮೊಳಕೆ ಕಾಳುಗಳು ಹಾಗೂ ಪನೀರ್ ಬೆರೆಸಿ ಮಾಡುವ ಟಿಕ್ಕಿ ತಯಾರಿಸಿ ತಿನ್ನಿ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೊಳಕೆ ಕಾಳು-ಪನೀರ್ ಟಿಕ್ಕಿ ರೆಸಿಪಿ
ಮೊಳಕೆ ಕಾಳು-ಪನೀರ್ ಟಿಕ್ಕಿ ರೆಸಿಪಿ

ಸಂಜೆ ಸ್ನಾಕ್ಸ್‌ಗೆ ಏನಾದರೂ ತಿನ್ನಬೇಕು ಎಂದೆನಿಸುವುದು ಸಹಜ. ಮಕ್ಕಳು ಶಾಲೆಯಿಂದ ಬಂದ ಕೂಡಲೇ ಏನಾದರೂ ತಿಂಡಿ ಬೇಕು ಎಂದು ಹಠ ಹಿಡಿಯುತ್ತಾರೆ. ಹೀಗಾಗಿ ದಿನಾ ಬೇರೆ-ಬೇರೆ ಬಗೆಯ ತಿಂಡಿಗಳನ್ನು ತಯಾರಿಸಬೇಕಾಗುತ್ತದೆ. ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿರುವ ಮೊಳಕೆ ಕಾಳುಗಳು ಹಾಗೂ ಪನೀರ್‌ ಎರಡನ್ನೂ ಬೆರೆಸಿ ಟಿಕ್ಕಿ ತಯಾರಿಸಬಹುದು. ಇದು ತುಂಬಾ ರುಚಿಕರವಾಗಿರುತ್ತದೆ. ಈ ಮೊಳಕೆ ಕಾಳುಗಳು ಮತ್ತು ಪನೀರ್ ಟಿಕ್ಕಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮೊಳಕೆ ಕಾಳು-ಪನೀರ್ ಟಿಕ್ಕಿ ಪಾಕವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಮೊಳಕೆ ಕಾಳುಗಳು- 1 ಕಪ್, ಪನೀರ್- 1/2 ಕಪ್, ಹಸಿಮೆಣಸು- 5 ರಿಂದ 6, ಶುಂಠಿ- 1 ಸಣ್ಣ ಇಂಚು, ಬೆಳ್ಳುಳ್ಳಿ- 2 ಲವಂಗ- 1, ಈರುಳ್ಳಿ- 1 ಸಣ್ಣ ಗಾತ್ರ, ಅರಿಶಿನ- 1/2 ಟೀ ಚಮಚ, ಜೀರಿಗೆ ಪುಡಿ- 1/2 ಟೀ ಚಮಚ, ಮೆಣಸಿನ ಪುಡಿ- 1 ಚಮಚ, ಚಾಟ್ ಮಸಾಲಾ- 1/2 ಟೀ ಚಮಚ, ಗರಂ ಮಸಾಲೆ- 1/2 ಟೀ ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು.

ಪಾಕವಿಧಾನ: ಮೊಳಕೆ ಕಾಳುಗಳ ಪನೀರ್ ಟಿಕ್ಕಿ ತಯಾರಿಸಲು, ಮೊಳಕೆ ಕಾಳುಗಳನ್ನು ರಾತ್ರಿಯಿಡೀ ನೆನೆಸಿಡಬೇಕು. ಮರುದಿನ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ನುಣ್ಣಗೆ ಕತ್ತರಿಸಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಶುಂಠಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಉಪ್ಪು, ಮೆಣಸಿನ ಪುಡಿ, ಗರಂ ಮಸಾಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಖಾರ ಕಡಿಮೆ ಬೇಕು ಅಂತಿದ್ದರೆ ಹಸಿಮೆಣಸಿನಕಾಯಿ ಸೇರಿಸಬೇಕೆಂದಿಲ್ಲ. ನಂತರ ಸಣ್ಣಗೆ ಕತ್ತರಿಸಿದ ಪನೀರ್ ಹಾಗೂ ನೆನೆಸಿಟ್ಟ ಮೊಳಕೆ ಕಾಳುಗಳನ್ನು ಹಾಕಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣಕ್ಕೆ ಸ್ವಲ್ಪ 2 ಚಮಚದಷ್ಟು ಕಡಲೆ ಹಿಟ್ಟನ್ನು ಬೆರೆಸಬಹುದು. ಕಡಲೆ ಹಿಟ್ಟು ಬೆರೆಸುವುದು ಕಡ್ಡಾಯವಿಲ್ಲ. ಪನೀರ್ ಟಿಕ್ಕಿ ಗರಿಗರಿಯಾಗಲು ಕಡಲೆ ಹಿಟ್ಟು ಬೆರೆಸಬಹುದು. ನಂತರ ಒಂದು ತವಾವನ್ನು ಒಲೆ ಮೇಲಿಟ್ಟು, ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಹಿಟ್ಟಿನ ಮಿಶ್ರಣವನ್ನು ತೆಗೆದುಕೊಂಡು ತವಾ ಮೇಲೆ ಹಾಕಿ ಕರಿಯಿರಿ. ಎರಡೂ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿಯಿರಿ. ನಂತರ ಇದನ್ನು ಪ್ಲೇಟ್‌ಗೆ ವರ್ಗಾಯಿಸಿ. ಇಷ್ಟು ಮಾಡಿದರೆ ರುಚಿಕರವಾದ ಮತ್ತು ಆರೋಗ್ಯಕರ ಮೊಳಕೆ ಕಾಳುಗಳ ಪನೀರ್ ಟಿಕ್ಕಿ ಸಿದ್ಧ. ಇದನ್ನು ಹಸಿರು ಚಟ್ನಿ ಅಥವಾ ಟೊಮೆಟೊ ಸಾಸ್‌ನೊಂದಿಗೆ ಬಡಿಸಬಹುದು. ಚಹಾ ಹೀರುತ್ತಾ ಮೊಳಕೆ ಕಾಳು-ಪನೀರ್ ಟಿಕ್ಕಿ ಸವಿಯಲು ಮಜಾವಾಗಿರುತ್ತದೆ.

ಮೊಳಕೆ ಕಾಳುಗಳು ಮತ್ತು ಪನೀರ್ ಟಿಕ್ಕಿಯ ಆರೋಗ್ಯ ಪ್ರಯೋಜನಗಳು

ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಾರಿನಂಶದಲ್ಲಿ ಸಮೃದ್ಧವಾಗಿರುವ ಮೊಳಕೆ ಕಾಳುಗಳು, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸಲು ಅವು ತುಂಬಾ ಉಪಯುಕ್ತವಾಗಿವೆ. ಇದನ್ನು ತಿನ್ನುವುದರಿಂದ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೀಗಾಗಿ ಇದು ಹಸಿವನ್ನು ಕಡಿಮೆ ಮಾಡುತ್ತದೆ. ಪನೀರ್ ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕೀಲು ನೋವುಗಳನ್ನು ತಡೆಗಟ್ಟುವಲ್ಲಿ ಪನೀರ್ ಬಹಳ ಉಪಯುಕ್ತವಾಗಿದೆ. ಟಿಕ್ಕಿ ತಯಾರಿಸಲು ಎರಡನ್ನೂ ಬೆರೆಸಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

Whats_app_banner