ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರೆ ತಯಾರಿಸಿ ಟೇಸ್ಟಿ ಬಾರ್ಬೆಕ್ಯೂ ಚಿಕನ್: ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರೆ ತಯಾರಿಸಿ ಟೇಸ್ಟಿ ಬಾರ್ಬೆಕ್ಯೂ ಚಿಕನ್: ಇಲ್ಲಿದೆ ರೆಸಿಪಿ

ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರೆ ತಯಾರಿಸಿ ಟೇಸ್ಟಿ ಬಾರ್ಬೆಕ್ಯೂ ಚಿಕನ್: ಇಲ್ಲಿದೆ ರೆಸಿಪಿ

ಚಿಕನ್ ಸಾಂಬಾರ್, ಗ್ರೇವಿ, ಕಬಾಬ್, ಲಾಲಿಪಪ್ ಈ ತರಹದ ಖಾದ್ಯ ನೀವು ತಯಾರಿಸಿ ತಿಂದಿರಬಹುದು. ಆದರೆ, ಎಂದಾದರೂ ಬಾರ್ಬೆಕ್ಯೂ ಚಿಕನ್ ಪ್ರಯತ್ನಿಸಿದ್ದೀರಾ. ಮನೆಯಲ್ಲಿ ಏನಾದರೂ ಪಾರ್ಟಿ ಆಯೋಜಿಸಿದ್ದರೆ ಈ ಖಾದ್ಯ ತಯಾರಿಸಬಹುದು. ಇಲ್ಲಿದೆ ರೆಸಿಪಿ.

ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರೆ ತಯಾರಿಸಿ ಟೇಸ್ಟಿ ಬಾರ್ಬೆಕ್ಯೂ ಚಿಕನ್
ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರೆ ತಯಾರಿಸಿ ಟೇಸ್ಟಿ ಬಾರ್ಬೆಕ್ಯೂ ಚಿಕನ್ (PC: Canva)

ಮಾಂಸಾಹಾರ ಪ್ರಿಯರು ಚಿಕನ್‌ನಲ್ಲಿ ಏನಾದರೂ ವಿಶೇಷ ಖಾದ್ಯ ತಯಾರಿಸೋಕೆ ಇಷ್ಟಪಡುತ್ತಾರೆ. ಚಿಕನ್ ಸಾಂಬಾರ್, ಗ್ರೇವಿ, ಕಬಾಬ್, ಲಾಲಿಪಪ್ ಈ ತರಹದ ಖಾದ್ಯ ನೀವು ತಯಾರಿಸಿ ತಿಂದಿರಬಹುದು. ಆದರೆ, ಎಂದಾದರೂ ಬಾರ್ಬೆಕ್ಯೂ ಚಿಕನ್ ಪ್ರಯತ್ನಿಸಿದ್ದೀರಾ. ಬಹುಷಃ ನೀವು ಈ ಖಾದ್ಯವನ್ನು ರೆಸ್ಟೋರೆಂಟ್‌ಗಳಲ್ಲಿ ತಿಂದಿರಬಹುದು. ಆದರೆ, ಇದನ್ನು ಮನೆಯಲ್ಲೇ ಸರಳವಾಗಿ ತಯಾರಿಸಬಹುದು. ಇದೊಂದು ಬಹಳ ರುಚಿಕರ ಮಾಂಸಾಹಾರ ಖಾದ್ಯ. ಹಾಗಿದ್ದರೆ ಮನೆಯಲ್ಲೇ ಬಾರ್ಬೆಕ್ಯೂ ಚಿಕನ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಮನೆಯಲ್ಲೇ ಬಾರ್ಬೆಕ್ಯೂ ಚಿಕನ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಅರ್ಧ ಕೆಜಿ ಕೋಳಿ ಮಾಂಸ (ಮೂಳೆಗಳಿಲ್ಲದ), 2 ಚಮಚ ಬೆಳ್ಳುಳ್ಳಿ ಪುಡಿ, 2 ಚಮಚ ಕೆಂಪುಮೆಣಸಿನ ಪುಡಿ, ಅರ್ಧ ಚಮಚ ಚಿಲ್ಲಿ ಫ್ಲೇಕ್ಸ್, 1/2 ಕಪ್ ಬಾರ್ಬೆಕ್ಯೂ ಸಾಸ್ , 1 ಚಮಚ ಜೀರಿಗೆ ಪುಡಿ , ಉಪ್ಪು ರುಚಿಗೆ ತಕ್ಕಷ್ಟು .

ತಯಾರಿಸುವ ವಿಧಾನ: ಬಾರ್ಬೆಕ್ಯೂ ಚಿಕನ್ ಅನ್ನು ಮನೆಯಲ್ಲೇ ಬಹಳ ಸರಳವಾಗಿ ತಯಾರಿಸಬಹುದು. ರೆಸ್ಟೋರೆಂಟ್ ಶೈಲಿಯಂತೆ ಅಲ್ಲದಿದ್ದರೂ ಬೇಕ್ ಮಾಡಿ ಅಥವಾ ಓವೆನ್‌ನಲ್ಲಿ ಇದನ್ನು ತಯಾರಿಸುವ ಹಂತ-ಹಂತದ ವಿಧಾನ ಇಲ್ಲಿದೆ.

ಹಂತ 1 ಓವನ್ ಬಿಸಿ ಮಾಡಬೇಕು: ಮೊದಲಿಗೆ ಓವನ್ ಅನ್ನು 200 ಡಿಗ್ರಿ ಸೆಲ್ಸಿಯಸ್‌ಗೆ ಬಿಸಿ ಮಾಡಿ. ಈಗ ಒಂದು ಬಟ್ಟಲಿನಲ್ಲಿ ಜೀರಿಗೆ ಪುಡಿ, ಕೆಂಪುಮೆಣಸು ಪುಡಿ ಮತ್ತು ಬೆಳ್ಳುಳ್ಳಿ ಪುಡಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

ಹಂತ 2 ಕೋಳಿ ಮಾಂಸವನ್ನು ಮ್ಯಾರಿನೇಟ್ ಮಾಡಬೇಕು: ಕೋಳಿ ತುಂಡುಗಳನ್ನು ಮ್ಯಾರಿನೇಟ್ ಮಾಡುವುದಕ್ಕಾಗಿ ಒಂದು ತಟ್ಟೆಯಲ್ಲಿಡಿ. ಕೋಳಿ ಮಾಂಸದ ಮೇಲೆ ಮಸಾಲೆಯನ್ನು ಚೆನ್ನಾಗಿ ಲೇಪಿಸಿ. ಕೋಳಿ ಮಾಂಸಕ್ಕೆ ಮಸಾಲೆ ಸಮವಾಗಿ ಲೇಪಿತವಾಗುವಂತೆ ನೋಡಿಕೊಳ್ಳಿ.

ಹಂತ 3 ಕೋಳಿ ಮಾಂಸವನ್ನು ಬೇಯಿಸಬೇಕು: ಕೋಳಿ ಮಾಂಸದ ಮೇಲೆ ಮಸಾಲೆ ಲೇಪಿತವಾದ ನಂತರ, ಸುಮಾರು 20 ರಿಂದ 25 ನಿಮಿಷ ಬೇಯಿಸಿ.

ಹಂತ 4 ಕೋಳಿ ತುಂಡುಗಳ ಮೇಲೆ ಬಾರ್ಬೆಕ್ಯೂ ಸಾಸ್ ಹಾಕಬೇಕು: ಬೇಯಿಸಿದ ನಂತರ ಹೊರತೆಗೆದು ಚಿಕನ್ ತುಂಡುಗಳ ಮೇಲೆ ಈಗ ಬಾರ್ಬೆಕ್ಯೂ ಸಾಸ್ ಅನ್ನು ಬ್ರಷ್ ಸಹಾಯದಿಂದ ಹಾಕಬೇಕು. ನಂತರ ಅದನ್ನು 20 ರಿಂದ 25 ನಿಮಿಷಗಳ ಕಾಲ ಮತ್ತೆ ಬೇಯಿಸಬೇಕು.

ಹಂತ 5 ಬಾರ್ಬೆಕ್ಯೂ ಚಿಕನ್ ಬಡಿಸಲು ಸಿದ್ಧ: ಎರಡನೇ ಬಾರಿ ಮತ್ತೆ ಬೇಯಿಸಿದ ನಂತರ ಅದನ್ನು ಹೊರತೆಗೆದು ಸರ್ವಿಂಗ್ ಪ್ಲೇಟ್‌ಗೆ ಹಾಕಿದರೆ ರುಚಿಕರ ಬಾರ್ಬೆಕ್ಯೂ ಚಿಕನ್ ತಿನ್ನಲು ಸಿದ್ಧ. ಇದನ್ನು ಬಿಸಿ ಬಿಸಿಯಾಗಿ ಬಡಿಸಿ ತಿನ್ನಿ. ಬಹಳ ರುಚಿಕರವಾಗಿರುತ್ತದೆ.

ಚಿಕನ್‌ನಲ್ಲಿ ಏನಾದರೂ ವೆರೈಟಿ ಅಥವಾ ರೆಸ್ಟೋರೆಂಟ್ ಶೈಲಿಯ ಖಾದ್ಯ ತಯಾರಿಸಬೇಕು ಅಂತಾ ಇದ್ದರೆ ಬಾರ್ಬೆಕ್ಯೂ ಚಿಕನ್ ತಯಾರಿಸಬಹುದು. ಇದರ ಪಾಕವಿಧಾನ ತುಂಬಾ ಸರಳ. ಬೇಕಾಗುವ ಸಾಮಗ್ರಿಗಳು ಕೂಡ ತುಂಬಾ ಕಡಿಮೆ. ಮನೆಗೆ ಸ್ನೇಹಿತರು, ಸಂಬಂಧಿಕರು ಬಂದಾಗ ಅಥವಾ ಮನೆಯಲ್ಲಿ ಏನಾದರೂ ಪಾರ್ಟಿ ಆಯೋಜಿಸಿದ್ದರೆ ಈ ರುಚಿಕರ ಬಾರ್ಬೆಕ್ಯೂ ಚಿಕನ್ ಪ್ರಯತ್ನಿಸಬಹುದು. ಹಾಗಿದ್ದರೆ ಇನ್ಯಾಕೆ ತಡ, ನೀವು ಒಮ್ಮೆ ಮಾಡಿ ನೋಡಿ.

Priyanka Gowda

eMail
Whats_app_banner