ನೀವು ಮೊಟ್ಟೆಯ ಆಮ್ಲೆಟ್ ತಿಂದಿರಬಹುದು, ಎಂದಾದರೂ ಚಿಕನ್ ಆಮ್ಲೆಟ್ ರುಚಿ ನೋಡಿದ್ದೀರಾ: ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಮೊಟ್ಟೆಯ ಆಮ್ಲೆಟ್ ತಿಂದಿರಬಹುದು, ಎಂದಾದರೂ ಚಿಕನ್ ಆಮ್ಲೆಟ್ ರುಚಿ ನೋಡಿದ್ದೀರಾ: ಇಲ್ಲಿದೆ ರೆಸಿಪಿ

ನೀವು ಮೊಟ್ಟೆಯ ಆಮ್ಲೆಟ್ ತಿಂದಿರಬಹುದು, ಎಂದಾದರೂ ಚಿಕನ್ ಆಮ್ಲೆಟ್ ರುಚಿ ನೋಡಿದ್ದೀರಾ: ಇಲ್ಲಿದೆ ರೆಸಿಪಿ

ನೀವು ಮೊಟ್ಟೆಯ ಆಮ್ಲೆಟ್ ತಿಂದಿರಬಹುದು. ಆದರೆ, ಎಂದಾದರೂ ಚಿಕನ್ ಆಮ್ಲೆಟ್ ತಿಂದಿದ್ದೀರಾ? ಇಲ್ಲವಾದಲ್ಲಿ ಒಮ್ಮೆ ಮಾಡಿ ನೋಡಿ. ಬಹಳ ರುಚಿಕರವಾಗಿರುತ್ತದೆ. ಚಿಕನ್‍ನಿಂದ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದೇ ರೀತಿ ರುಚಿಕರವಾದ ಆಮ್ಲೆಟ್ ಕೂಡ ತಯಾರಿಸಬಹುದು. ಇಲ್ಲಿದೆ ಪಾಕವಿಧಾನ.

ರುಚಿಕರ ಚಿಕನ್ ಆಮ್ಲೆಟ್ ರೆಸಿಪಿ
ರುಚಿಕರ ಚಿಕನ್ ಆಮ್ಲೆಟ್ ರೆಸಿಪಿ (Youtube)

ಮೊಟ್ಟೆಯ ಆಮ್ಲೇಟ್ ತಿಂದಿರಬಹುದು. ಸಸ್ಯಾಹಾರಿ (ಮೊಟ್ಟೆಯಿಲ್ಲದ) ಆಮ್ಲೆಟ್ ಅನ್ನು ಕೂಡ ತಯಾರಿಸಲಾಗುತ್ತದೆ. ಮಕ್ಕಳು ಇದನ್ನು ಬಹಳ ಇಷ್ಟಪಟ್ಟು ತಿಂತಾರೆ. ಮೊಟ್ಟೆ ಆಮ್ಲೆಟ್ ಮಾತ್ರವಲ್ಲ ಚಿಕನ್ ಆಮ್ಲೆಟ್ ಕೂಡ ತಯಾರಿಸಬಹುದು. ಈ ಚಿಕನ್ ಆಮ್ಲೆಟ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಬೆಳಗ್ಗಿನ ಉಪಾಹಾರ ಅಥವಾ ಸಂಜೆಯ ಸ್ನಾಕ್ಸ್ ಆಗಿಯೂ ತಿನ್ನಬಹುದು. ಊಟದ ಜತೆ ಸೈಡ್ ಡಿಶ್ ಆಗಿಯೂ ತಿನ್ನಬಹುದು, ಪ್ರೋಟೀನ್ ಭರಿತ ಆಹಾರ ಇದಾಗಿದ್ದು, ಇದನ್ನು ತಯಾರಿಸುವುದು ತುಂಬಾನೇ ಸುಲಭ. ಇಲ್ಲಿದೆ ಚಿಕನ್ ಆಮ್ಲೆಟ್ ರೆಸಿಪಿ.

ಚಿಕನ್ ಆಮ್ಲೆಟ್ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು: ಚಿಕನ್- 1/2 ಕಪ್, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಮೊಟ್ಟೆ- 2, ಕೊತ್ತಂಬರಿ ಸೊಪ್ಪು- 2 ಟೀ ಚಮಚ, ಕಾಳುಮೆಣಸಿನ ಪುಡಿ- ½ ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ- ಅರ್ಧ ಟೀ ಚಮಚ, ಹಸಿಮೆಣಸಿನಕಾಯಿ- 2, ಈರುಳ್ಳಿ- 1. ಮೆಣಸಿನಪುಡಿ- ಅರ್ಧ ಟೀ ಚಮಚ.

ಮಾಡುವ ವಿಧಾನ: ಮೊದಲಿಗೆ ಬೋನ್‌ಲೆಸ್ ಅಥವಾ ಮೂಳೆಗಳಿಲ್ಲದ ಚಿಕನ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಹಾಕಿ. ನಂತರ ಇದಕ್ಕೆ ಅರ್ಧ ಚಮಚ ಉಪ್ಪು, ಕಾಲು ಚಮಚ ಅರಿಶಿನ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ, ಸ್ವಲ್ಪ ಎಣ್ಣೆ ಹಾಕಿ. ಈ ಚಿಕನ್ ತುಂಡುಗಳನ್ನು ಎಣ್ಣೆಯಲ್ಲಿ ಹಾಕಿ ಬೇಯಿಸಿ. ಚಿಕನ್‍ನಿಂದ ಹೊರಬಂದ ನೀರು ಹೊರತೆಗೆದು ಸಣ್ಣ ಉರಿಯಲ್ಲಿ ಎಲ್ಲವೂ ಒಣಗುವವರೆಗೆ ಬೇಯಿಸಿ ನಂತರ ಒಲೆ ಆಫ್ ಮಾಡಿ. ಮಾಂಸವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಅವುಗಳನ್ನು ಸಣ್ಣಗೆ ಕತ್ತರಿಸಿ.

ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿದಂತೆಯೇ, ಚಿಕನ್ ತುಂಡುಗಳನ್ನು ಸಹ ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಬೇಕು. ಅದೇ ತಟ್ಟೆಗೆ ಸ್ವಲ್ಪ ಮೆಣಸಿನ ಪುಡಿ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಬಾಣಲೆಯನ್ನು ಒಲೆಯ ಮೇಲೆ ಇರಿಸಿ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದಾಗ ಈ ಮಿಶ್ರಣವನ್ನು ಆಮ್ಲೆಟ್ ಸುರಿಯುವಂತೆ ಬಾಣಲೆಗೆ ಹುಯ್ಯಿರಿ. ಅದರ ಮೇಲೆ ಸಣ್ಣಗೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು ಹಾಕಿ. ಒಲೆಯನ್ನು ಮಧ್ಯಮ ಉರಿಯಲ್ಲಿಟ್ಟು ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ರುಚಿಕರವಾದ ಚಿಕನ್ ಆಮ್ಲೆಟ್ ತಿನ್ನಲು ಸಿದ್ಧವಾಗಿದೆ.

ಚಿಕನ್ ಆಮ್ಲೆಟ್ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಒಮ್ಮೆಯಾದರೂ ಪ್ರಯತ್ನಿಸಿ ನೋಡಿ. ಖಂಡಿತ ಇಷ್ಟವಾಗಬಹುದು. ಈ ಆಹಾರದಲ್ಲಿ ಪ್ರೋಟೀನ್ ಅಧಿಕವಾಗಿದೆ. ಹೀಗಾಗಿ ಬೆಳಗ್ಗೆ ಉಪಾಹಾರವಾಗಿಯೂ ಇದನ್ನು ಸೇವಿಸಬಹುದು.

Whats_app_banner