ಬಾಯಲ್ಲಿ ನೀರೂರುವ ಟೊಮೆಟೊ ಉಪ್ಪಿನಕಾಯಿ ಮಾಡುವುದು ತುಂಬಾ ಸರಳ: ಅನ್ನ, ದೋಸೆ, ಇಡ್ಲಿಗೆ ಸೂಪರ್ ಕಾಂಬಿನೇಷನ್, ಇಲ್ಲಿದೆ ರೆಸಿಪಿ
ತರಹೇವಾರಿ ಉಪ್ಪಿನಕಾಯಿಗಳನ್ನು ನೀವು ತಿಂದಿರಬಹುದು. ಆದರೆ, ಎಂದಾದರೂ ಟೊಮೆಟೊ ಉಪ್ಪಿನಕಾಯಿ ತಿಂದಿದ್ದೀರಾ. ಇದು ಬಹಳ ರುಚಿಕರವಾಗಿರುತ್ತದೆ. ಹುಳಿ-ಖಾರದ ಸಮ್ಮಿಶ್ರಣವಿರುವ ಈ ಉಪ್ಪಿನಕಾಯಿ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ದೋಸೆ, ಇಡ್ಲಿ, ಅನ್ನದೊಂದಿಗೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಇಲ್ಲಿದೆ ಟೊಮೆಟೊ ಉಪ್ಪಿನಕಾಯಿ ಮಾಡುವ ವಿಧಾನ.

ಮಾವಿನಕಾಯಿ, ನಿಂಬೆ, ಹುಣಸೆಹಣ್ಣು, ತರಕಾರಿ, ಮಾಂಸಾಹಾರಿ ಉಪ್ಪಿನಕಾಯಿಗಳನ್ನು ನೀವು ತಿಂದಿರಬಹುದು. ಆದರೆ ಟೊಮೆಟೊ ಉಪ್ಪಿನಕಾಯಿಯನ್ನು ಎಂದಾದರೂ ತಿಂದಿದ್ದೀರಾ. ಒಮ್ಮೆ ಇದರ ರುಚಿ ನೋಡಿದರೆ ಖಂಡಿತಾ ಪ್ರತಿದಿನ ತಿನ್ನುವಿರಿ. ಬಿಸಿ ಬಿಸಿ ಅನ್ನದೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ದೋಸೆ, ಇಡ್ಲಿ, ಚಪಾತಿಯೊಂದಿಗೂ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಒಮ್ಮೆ ಮಾಡಿದರೆ ಇದನ್ನು ಎರಡರಿಂದ ಮೂರು ತಿಂಗಳವರೆಗೆ ಶೇಖರಿಸಿಡಬಹುದು. ಇಲ್ಲಿದೆ ಟೊಮೆಟೊ ಉಪ್ಪಿನಕಾಯಿ ಪಾಕವಿಧಾನ.
ಟೊಮೆಟೊ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಟೊಮೆಟೊ- 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಅರಿಶಿನ- 1 ಟೀ ಚಮಚ, ಬೆಳ್ಳುಳ್ಳಿ ಎಸಳು- 30, ಮೆಂತ್ಯ ಪುಡಿ- ಒಂದು ಚಮಚ, ಸಾಸಿವೆ ಪುಡಿ- ಎರಡು ಚಮಚ, ಕಡಲೆಕಾಯಿ ಎಣ್ಣೆ- ಮೂರು ಕಪ್, ಕಡಲೆ ಬೇಳೆ- ಎರಡು ಚಮಚ, ಸಾಸಿವೆ- ಎರಡು ಚಮಚ, ಮೆಣಸಿನಕಾಯಿ- ಐದು, ಕರಿಬೇವು- ಒಂದು ಹಿಡಿ, ಹಸಿಮೆಣಸು- ಅರ್ಧ ಕಪ್, ಕಪ್ಪು ಬೇಳೆ- ಎರಡು ಚಮಚ, ಹುಣಸೆ ಹಣ್ಣು- 1 ನಿಂಬೆ ಗಾತ್ರದಷ್ಟು.
ತಯಾರಿಸುವ ವಿಧಾನ: ಟೊಮೆಟೊವನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಕಡಾಯಿಯನ್ನು ಒಲೆಯ ಮೇಲೆ ಇರಿಸಿ, ಕತ್ತರಿಸಿದ ಟೊಮೆಟೊವನ್ನು ಹಾಕಿ. ಇದಕ್ಕೆ ಹುಣಸೆಹಣ್ಣು ಬೆರೆಸಿ ಮುಚ್ಚಳ ಮುಚ್ಚಿಟ್ಟು ಬೇಯಿಸಿ. ಅರ್ಧ ಚಮಚ ಉಪ್ಪು ಹಾಕಿ, ಟೊಮೆಟೊ ಬೇಗನೆ ಬೇಯುತ್ತದೆ. ಮಿಶ್ರಣವು ಮೃದುವಾಗುವವರೆಗೆ ಬೇಯಿಸಿ ನಂತರ ಒಲೆ ಆಫ್ ಮಾಡಿ.
ಈ ಮಿಶ್ರಣ ತಣ್ಣಗಾದ ನಂತರ ಇದನ್ನು ಮಿಕ್ಸರ್ ಜಾರ್‌ಗೆ ಹಾಕಿ. ಇದಕ್ಕೆ ಹಸಿಮೆಣಸು, ಅರಿಶಿನ, ಬೆಳ್ಳುಳ್ಳಿ ಎಸಳು, ಮೆಂತ್ಯ ಪುಡಿ, ಸಾಸಿವೆ ಪುಡಿಯನ್ನು ಬೆರೆಸಿ ಮಿಕ್ಸಿಯಲ್ಲಿ ರುಬ್ಬಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈಗ ಕಡಾಯಿಯನ್ನು ಒಲೆಯ ಮೇಲೆ ಇರಿಸಿ, ಮೂರು ಕಪ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಕಡಲೆಬೇಳೆ, ಕಪ್ಪು ಬೇಳೆ, ಸಾಸಿವೆ, ಜೀರಿಗೆ, ಕೆಂಪು ಮೆಣಸಿನಕಾಯಿ, 10 ಬೆಳ್ಳುಳ್ಳಿ ಎಸಳು ಮತ್ತು ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. ನಂತರ ರುಬ್ಬಿರುವ ಟೊಮೆಟೊ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಇದು ತಣ್ಣಗಾದ ನಂತರ, ಗಾಳಿಯಾಡದ ಪಾತ್ರೆಯಲ್ಲಿ ಈ ಟೊಮೆಟೊ ಉಪ್ಪಿನಕಾಯಿಯನ್ನು ಸಂಗ್ರಹಿಸಿ. ಇದನ್ನು ಬಿಸಿ ಬಿಸಿ ಅನ್ನದೊಂದಿಗೆ ತಿನ್ನಿರಿ. ತುಂಬಾ ರುಚಿಕರವಾಗಿರುತ್ತದೆ. ದೋಸೆ, ಇಡ್ಲಿ, ಚಪಾತಿಯೊಂದಿಗೂ ತಿನ್ನಲು ಬಹಳ ಚೆನ್ನಾಗಿರುತ್ತದೆ. ಖಂಡಿತ ಈ ಉಪ್ಪಿನಕಾಯಿ ನಿಮಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಒಮ್ಮೆ ಮಾಡಿ ನೋಡಿ.

ವಿಭಾಗ