ಹಾಲು, ಪನೀರ್ ಸಸ್ಯಾಹಾರಿ ಆಹಾರವಲ್ಲ, ಕೋಳಿಯಂತೆಯೇ ಮಾಂಸಾಹಾರಿ; ವಿವಾದಕ್ಕೆ ಕಾರಣವಾದ ವೈದ್ಯರೊಬ್ಬರ ಹೇಳಿಕೆ
ಕನ್ನಡ ಸುದ್ದಿ  /  ಜೀವನಶೈಲಿ  /  ಹಾಲು, ಪನೀರ್ ಸಸ್ಯಾಹಾರಿ ಆಹಾರವಲ್ಲ, ಕೋಳಿಯಂತೆಯೇ ಮಾಂಸಾಹಾರಿ; ವಿವಾದಕ್ಕೆ ಕಾರಣವಾದ ವೈದ್ಯರೊಬ್ಬರ ಹೇಳಿಕೆ

ಹಾಲು, ಪನೀರ್ ಸಸ್ಯಾಹಾರಿ ಆಹಾರವಲ್ಲ, ಕೋಳಿಯಂತೆಯೇ ಮಾಂಸಾಹಾರಿ; ವಿವಾದಕ್ಕೆ ಕಾರಣವಾದ ವೈದ್ಯರೊಬ್ಬರ ಹೇಳಿಕೆ

ಭಾರತೀಯ ವೈದ್ಯರೊಬ್ಬರು ಹಾಲು ಮತ್ತು ಪನೀರ್ ಅನ್ನು ಮಾಂಸಾಹಾರಿ ಆಹಾರವೆಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಹೇಳಿಕೆ ಸಸ್ಯಾಹಾರಿಗಳನ್ನು ಕೆರಳಿಸಿದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಹಾಲು, ಪನೀರ್ ಸಸ್ಯಾಹಾರಿ ಆಹಾರವಲ್ಲ, ಕೋಳಿಯಂತೆಯೇ ಮಾಂಸಾಹಾರಿ; ವಿವಾದಕ್ಕೆ ಕಾರಣವಾದ ವೈದ್ಯರೊಬ್ಬರ ಹೇಳಿಕೆ
ಹಾಲು, ಪನೀರ್ ಸಸ್ಯಾಹಾರಿ ಆಹಾರವಲ್ಲ, ಕೋಳಿಯಂತೆಯೇ ಮಾಂಸಾಹಾರಿ; ವಿವಾದಕ್ಕೆ ಕಾರಣವಾದ ವೈದ್ಯರೊಬ್ಬರ ಹೇಳಿಕೆ (PC: Canva)

ಹಾಲು ಮತ್ತು ಪನೀರ್ ಅನ್ನು ಮಾಂಸಾಹಾರಿ ಆಹಾರ ಎಂದು ಭಾರತೀಯ ವೈದ್ಯರೊಬ್ಬರು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಡಾ. ಸಿಲ್ವಿಯಾ ಕಾರ್ಪಗಮ್ ಅವರು ಹಾಲು ಮತ್ತು ಪನೀರ್ ಅನ್ನು ಪ್ರಾಣಿ ಮೂಲಗಳಿಂದ ಪಡೆಯಲಾಗಿದೆ. ಹೀಗಾಗಿ ಅವುಗಳನ್ನು ಸಸ್ಯಾಹಾರಿ ಆಹಾರಗಳೆಂದು ವರ್ಗೀಕರಿಸಲಾಗುವುದಿಲ್ಲ ಎಂದು ಹೇಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಸ್ಯಾಹಾರಿಗಳನ್ನು ಕೆರಳಿಸಿದ್ದಾರೆ.

ವೈದ್ಯರೊಬ್ಬರ ಪತ್ನಿ ಸುನೀತಾ ಸಾಯಮ್ಮ ಎಂಬಾಕೆಯು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಊಟದ ತಟ್ಟೆಯ ಫೋಟೋ ಹಂಚಿಕೊಳ್ಳುತ್ತಾ, ಇದರಲ್ಲಿ ಪ್ರೋಟೀನ್, ಉತ್ತಮ ಕೊಬ್ಬು ಮತ್ತು ನಾರಿನಂಶವಿದೆ ಎಂದು ಬರೆದಿದ್ದರು. ಊಟದ ತಟ್ಟೆಯಲ್ಲಿ ಪನೀರ್, ಹೆಸರು ಬೇಳೆ, ಕ್ಯಾರೆಟ್, ಸೌತೆಕಾಯಿ ಮತ್ತು ಈರುಳ್ಳಿ ಸಲಾಡ್, ಹಸಿ ತೆಂಗಿನಕಾಯಿ, ವಾಲ್ನಟ್ಸ್ ಮತ್ತು ಖೀರ್ ಅನ್ನು ಒಳಗೊಂಡಿತ್ತು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್‌ನ ಕಾರ್ಯನಿರತ ಸಂಪಾದಕಿ ಡಾ. ಸಿಲ್ವಿಯಾ ಕಾರ್ಪಗಮ್, ಹಾಲು ಮತ್ತು ಪನೀರ್ ಸಸ್ಯಾಹಾರಿ ಆಹಾರವಲ್ಲ ಎಂದಿದ್ದಾರೆ. ಪನೀರ್ ಮತ್ತು ಹಾಲು ಸಸ್ಯಾಹಾರಿಯಲ್ಲ. ಅವು ಪ್ರಾಣಿ ಮೂಲದ ಆಹಾರಗಳು. ಕೋಳಿ, ಮೀನು, ಗೋಮಾಂಸದಂತೆಯೇ ಪನೀರ್ ಹಾಗೂ ಹಾಲು ಕೂಡ ಮಾಂಸಾಹಾರಿ ಎಂದು ಪ್ರತ್ರಿಕ್ರಿಯಿಸಿದ್ದಾರೆ. ಈ ಪೋಸ್ಟ್ ಇದೀಗ ಭಾರಿ ವಿವಾದ ಹುಟ್ಟುಹಾಕಿದೆ. ಕೆಲವರು ಕಾರ್ಪಗಮ್ ಪರವಾಗಿ ಮಾತನಾಡಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

‘ಸಸ್ಯಾಹಾರಿ’ ಬಗ್ಗೆ ಒಂದು ವಿವಾದ

ಹಲವಾರು ಮಂದಿ ಎಕ್ಸ್ ಬಳಕೆದಾರರು, ಪನೀರ್ ಮತ್ತು ಹಾಲು ಸಸ್ಯಾಹಾರಿ ಉತ್ಪನ್ನಗಳಾಗಿವೆ. ಏಕೆಂದರೆ ಅವುಗಳನ್ನು ಪಡೆಯಲು ಯಾವುದೇ ಪ್ರಾಣಿಗಳನ್ನು ಕೊಲ್ಲುವುದಿಲ್ಲ, ಹೀಗಾಗಿ ಇವು ಸಸ್ಯಾಹಾರ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಕೋಳಿಗಳನ್ನು ಕೊಲ್ಲದೆಯೇ ಮೊಟ್ಟೆ ಪಡೆಯಲಾಗುತ್ತದೆ. ಹಾಗಿದ್ದರೆ ಮೊಟ್ಟೆಯನ್ನೇಕೆ ಮಾಂಸಾಹಾರವೆಂದು ಪರಿಗಣಿಸಲಾಗಿದೆ ಎಂದು ಕಾರ್ಪಗಮ್ ತರ್ಕ ಮುಂದಿಟ್ಟಿದ್ದಾರೆ.

ಹಾಲನ್ನು ಮಾಂಸಾಹಾರಿ ಎಂದು ಹೇಳಿದ ಕಾರ್ಪಗಮ್ ವಿರುದ್ಧ ಎಕ್ಸ್‌ನಲ್ಲಿ ತೀವ್ರ ಟೀಕೆ ವ್ಯಕ್ತವಾಯಿತು. ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಹಲವಾರು ಬಳಕೆದಾರರು ಕಾರ್ಪಗಮ್ ಅವರನ್ನು ಟೀಕಿಸಿದ್ದಾರೆ. ಜನರನ್ನು ಕೆರಳಿಸಲೆಂದೇ ಪ್ರಚೋದನಕಾರಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆಯೇ ಎಂದು ಕೂಡ ಕೆಲವರು ಅನುಮಾನ ಹೊರಹಾಕಿದ್ದಾರೆ.

ಸಸ್ಯಾಹಾರಿ ಎಂಬ ಪದದ ವ್ಯಾಖ್ಯಾನವು ಪ್ರಪಂಚದ ಇತರ ಭಾಗಗಳಿಗೆ ಹೋಲಿಸಿದರೆ ಭಾರತದಲ್ಲಿ ಮುಖ್ಯವಾಗಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಕೊಂಚ ಭಿನ್ನವಾಗಿದೆ. ಭಾರತದಲ್ಲಿ ಸಸ್ಯಾಹಾರಿಗಳು ಸಾಮಾನ್ಯವಾಗಿ ಲ್ಯಾಕ್ಟೋ-ಸಸ್ಯಾಹಾರಿತ್ವವನ್ನು ಅನುಸರಿಸುತ್ತಾರೆ. ಅಂದರೆ, ಸಸ್ಯಾಹಾರಿಗಳು ಡೈರಿ ಉತ್ಪನ್ನಗಳನ್ನು (ಹಾಲು, ಪನೀರ್, ತುಪ್ಪ, ಮೊಸರು, ಇತ್ಯಾದಿ) ಸೇವಿಸುತ್ತಾರೆ. ಆದರೆ ಮೊಟ್ಟೆಗಳನ್ನು ತಿನ್ನುವುದಿಲ್ಲ.

ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಲ್ಲಿ, ಸಸ್ಯಾಹಾರಿ ಎಂಬ ಪದವು ಓವೊ-ಲ್ಯಾಕ್ಟೋ ಸಸ್ಯಾಹಾರಿ ತತ್ವವನ್ನು ಒಳಗೊಂಡಿದೆ. ಅಂದರೆ ಹಾಲು, ಹಾಲಿನ ಉತ್ಪನ್ನಗಳು ಮತ್ತು ಮೊಟ್ಟೆಗಳನ್ನು ತಿನ್ನುವವರನ್ನು ಸಸ್ಯಾಹಾರಿಗಳೆಂದು ಕರೆಯಲಾಗುತ್ತದೆ. ಕೆಲವು ದೇಶಗಳಲ್ಲಿ, ಪೆಸ್ಕಟೇರಿಯನ್ಸ್ (ಮೀನು ಮತ್ತು ಸಮುದ್ರಾಹಾರವನ್ನು ತಿನ್ನುವವರು, ಆದರೆ ಕೋಳಿಯಂತಹ ಮಾಂಸವನ್ನು ತಿನ್ನದಿರುವವರು) ಸಹ ಸಸ್ಯಾಹಾರಿ ಎಂದು ಪರಿಗಣಿಸಲಾಗುತ್ತದೆ.

Whats_app_banner