ಬೆಳಗಿನ ಉಪಾಹಾರಕ್ಕೂ ಲಂಚ್ ಬಾಕ್ಸ್‌ಗೂ ಬೆಸ್ಟ್ ಎನ್ನಿಸುವ ರೆಸಿಪಿ ಕೊಕೊನಟ್ ಮಸಾಲ ರೈಸ್, 5 ನಿಮಿಷದಲ್ಲಿ ತಯಾರಾಗುವ ತಿಂಡಿಯಿದು
ಬೆಳಗಿನ ಉಪಾಹಾರಕ್ಕೆ ಒಂದೇ ರೀತಿಯ ತಿಂಡಿ ತಿಂದು ಬೇಸರ ಆಗಿದ್ರೆ ಈ ರೈಸ್ ಐಟಂ ಟ್ರೈ ಮಾಡಿ. ಕಡಿಮೆ ಸಾಮಗ್ರಿ ಬಳಸಿ, ಥಟ್ಟಂತ ಮಾಡಬಹುದಾದ ಈ ರೆಸಿಪಿ ಮಕ್ಕಳಿಂದ ಹಿಡಿದು ದೊಡ್ಡವವರೆಗೂ ಇಷ್ಟವಾಗುತ್ತದೆ. ಹಾಗಾದ್ರೆ ಯಾವುದದು ರೆಸಿಪಿ ಅಂತೀರಾ? ಅದುವೇ ಕೊಕೊನಟ್ ಮಸಾಲ ರೈಸ್. ಇದನ್ನು ಮಾಡೋದು ಹೇಗೆ ನೋಡಿ.
ಬೆಳಗಿನ ತಿಂಡಿಗೆ ಏನಪ್ಪಾ ಮಾಡೋದು ಅನ್ನೋದು ಬಹುತೇಕ ಗೃಹಿಣಿಯರನ್ನು ಕಾಡುವ ಪ್ರಶ್ನೆ. ಪ್ರತಿದಿನ ಒಂದೇ ರೀತಿ ತಿಂಡಿ ಇದ್ರೆ ಮಕ್ಕಳು, ಮನೆಯವರು ಬೇಸರ ಮಾಡಿಕೊಳ್ಳುತ್ತಾರೆ. ಅದರಲ್ಲೂ ಪಲಾವ್, ಪುಳಿಯೋಗರೆ ಅಂತ ರೈಸ್ ಬಾತ್ ಮಾಡಿದ್ರೆ ಖಂಡಿತ ಅವರಿಗೆ ಇಷ್ಟ ಆಗೊಲ್ಲ. ಅದಕ್ಕಾಗಿ ನೀವು ಡಿಫ್ರೆಂಟ್ ಆಗಿ, ತುಂಬಾ ರುಚಿಯಾಗಿ ಸುಲಭವಾಗಿ ಏನಾದ್ರೂ ತಿಂಡಿ ಮಾಡಬೇಕು ಅಂದುಕೊಂಡಿದ್ರೆ ಕೊಕೊನಟ್ ಮಸಾಲ ರೈಸ್ ಟ್ರೈ ಮಾಡಬಹುದು. ಇದು ಲಂಚ್ ಬಾಕ್ಸ್‌ಗೂ ಬೆಸ್ಟ್ ರೆಸಿಪಿ ಎನ್ನಿಸುತ್ತದೆ.
ತುಂಬಾ ಕಡಿಮೆ ಸಾಮಗ್ರಿ ಬಳಸಿ, ಕಡಿಮೆ ಸಮಯದಲ್ಲಿ ರುಚಿಯಾಗಿ ಮಾಡಬಹುದಾದ ರೆಸಿಪಿ ಇದು. ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಈ ರೆಸಿಪಿಯನ್ನು ಪೋಸ್ಟ್ ಮಾಡಿದವರು Sandhya Shetty's Kitchen ಎನ್ನುವ ಫೇಸ್‌ಬುಕ್ ಪುಟ ನಿರ್ವಹಿಸುತ್ತಿರುವವರು. ಹಾಗಾದರೆ ಈ ರೈಸ್‌ಬಾತ್ ರೆಸಿಪಿಯನ್ನು ಮಾಡೋದು ಹೇಗೆ ನೋಡಿ
ಕೊಕೊನಟ್ ಮಸಾಲ ರೈಸ್ ಬಾತ್
ಬೇಕಾಗುವ ಸಾಮಗ್ರಿಗಳು: ತೆಂಗಿನೆಣ್ಣೆ – 4 ರಿಂದ 5 ಚಮಚ, ಕರಿಬೇವು – 1 ಎಸಳು, ಸಾಸಿವೆ – ಸ್ವಲ್ಪ, ಉದ್ದಿನಬೇಳೆ– ಅರ್ಧ ಚಮಚ, ಇಂಗು – 2–3 ಚಿಟಿಕೆ, ಶುಂಠಿ – ಅರ್ಧ ಇಂಚು, ಗೋಡಂಬಿ – 5 ರಿಂದ 6, ಹಸಿಮೆಣಸು – 3 ರಿಂದ 4, ಅನ್ನ– 3 ರಿಂದ 4 ಕಪ್, ತೆಂಗಿನತುರಿ – 2 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ
ಕೊಕೊನಟ್ ಮಸಾಲ ರೈಸ್ ಮಾಡುವ ವಿಧಾನ
ಬಾಣಲಿಗೆ ತೆಂಗಿನೆಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕರಿಬೇವು, ಸಾಸಿವೆ, ಉದ್ದಿನಬೇಳೆ, ಇಂಗು, ಶುಂಠಿ ಚಿಕ್ಕದಾಗಿ ಹೆಚ್ಚಿಕೊಂಡಿದ್ದನ್ನು ಸೇರಿಸಿ, ಫ್ರೈ ಮಾಡಿಕೊಳ್ಳಿ. ಅದರ ಜೊತೆಗೆ ಗೋಡಂಬಿ ಹಾಕಿ ಎಲ್ಲವನ್ನೂ ಹುರಿದುಕೊಳ್ಳಿ. ನಂತರ ಇದಕ್ಕೆ 3 ರಿಂದ 4 ಕತ್ತರಿಸಿಟ್ಟುಕೊಂಡ ಹಸಿಮೆಣಸು ಸೇರಿಸಿ. ಈ ಎಲ್ಲವೂ ಚೆನ್ನಾಗಿ ಫ್ರೈ ಆದ ನಂತರ ಬೇಯಿಸಿಕೊಂಡ ಅನ್ನವನ್ನು ಸೇರಿಸಿ. ಅದರ ಮೇಲೆ ತೆಂಗಿನತುರಿಯನ್ನೂ ಹಾಕಿ. ಇದನ್ನು ಒಗ್ಗರಣೆ ಮಾಡಿಟ್ಟುಕೊಂಡ ಸಾಮಗ್ರಿ ಜೊತೆಗೆ ಚೆನ್ನಾಗಿ ಮಿಶ್ರಣ ಮಾಡಿ, ಇದನ್ನು ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ. ನಂತರ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಉದುರಿಸಿದ್ರೆ ರುಚಿಯಾದ ಕೊಕೊನಟ್ ಮಸಾಲ ರೈಸ್ ತಿನ್ನಲು ಸಿದ್ಧ.
ಈ ರೀತಿ ಮಸಾಲ ರೈಸ್ ಮಾಡಿದ್ರೆ ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಇದನ್ನು ಮಾಡೋದು ಕೂಡ ಸುಲಭ. ನೀವು ಮನೆಯಲ್ಲಿ ಟ್ರೈ ಮಾಡಿ.
ವಿಭಾಗ