ಕಾಲು ಸೂಪ್‌ನಿಂದ ಮಸಾಲೆ ರೊಟ್ಟಿಯವರೆಗೆ: ಚಳಿಗಾಲದಲ್ಲಿ ನೀವು ತಿನ್ನಬಹುದಾದ ಆರೋಗ್ಯಕರ ಉಪಾಹಾರಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಲು ಸೂಪ್‌ನಿಂದ ಮಸಾಲೆ ರೊಟ್ಟಿಯವರೆಗೆ: ಚಳಿಗಾಲದಲ್ಲಿ ನೀವು ತಿನ್ನಬಹುದಾದ ಆರೋಗ್ಯಕರ ಉಪಾಹಾರಗಳಿವು

ಕಾಲು ಸೂಪ್‌ನಿಂದ ಮಸಾಲೆ ರೊಟ್ಟಿಯವರೆಗೆ: ಚಳಿಗಾಲದಲ್ಲಿ ನೀವು ತಿನ್ನಬಹುದಾದ ಆರೋಗ್ಯಕರ ಉಪಾಹಾರಗಳಿವು

ಚಳಿಗಾಲವು ವಿವಿಧ ರೀತಿಯ ಆಹಾರವನ್ನು ಆನಂದಿಸಲು ಉತ್ತಮ ಸಮಯ. ಏಕೆಂದರೆ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಭಾರತದ ಕೆಲವು ಸಾಂಪ್ರದಾಯಿಕ ಉಪಾಹಾರವನ್ನು ಬೆಳಗ್ಗಿನ ತಿಂಡಿಯಾಗಿ ಆಯ್ಕೆ ಮಾಡಬಹುದು. ನೀವು ಪ್ರಯತ್ನಿಸಬಹುದಾದ ಕೆಲವು ಅತ್ಯುತ್ತಮ ಚಳಿಗಾಲದ ಉಪಹಾರ ಆಯ್ಕೆಗಳು ಇಲ್ಲಿವೆ.

ಚಳಿಗಾಲದಲ್ಲಿ ನೀವು ತಿನ್ನಬಹುದಾದ ಆರೋಗ್ಯಕರ ಉಪಾಹಾರಗಳಿವು
ಚಳಿಗಾಲದಲ್ಲಿ ನೀವು ತಿನ್ನಬಹುದಾದ ಆರೋಗ್ಯಕರ ಉಪಾಹಾರಗಳಿವು (PC: Canva)

ಚಳಿಗಾಲವು ವಿವಿಧ ರೀತಿಯ ಆಹಾರವನ್ನು ಆನಂದಿಸಲು ಉತ್ತಮ ಸಮಯ. ಏಕೆಂದರೆ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಈ ಆಹಾರಗಳು ದೇಹವನ್ನು ಬೆಚ್ಚಗಾಗಲು ಮತ್ತು ಪೋಷಣೆಯನ್ನು ನೀಡಲು ಸಹಾಯ ಮಾಡುತ್ತದೆ. ಹೀಗಾಗಿ ಭಾರತದ ಕೆಲವು ಸಾಂಪ್ರದಾಯಿಕ ಉಪಾಹಾರವನ್ನು ಬೆಳಗ್ಗಿನ ತಿಂಡಿಯಾಗಿ ಆಯ್ಕೆ ಮಾಡಬಹುದು. ಇವು ದೇಹವನ್ನು ಬೆಚ್ಚಗಾಗಿಸುತ್ತದೆ. ನೀವು ಪ್ರಯತ್ನಿಸಬಹುದಾದ ಕೆಲವು ಅತ್ಯುತ್ತಮ ಚಳಿಗಾಲದ ಉಪಹಾರ ಆಯ್ಕೆಗಳು ಇಲ್ಲಿವೆ.

ಕಾಲು ಸೂಪ್

ಇದು ಮೇಕೆ ಅಥವಾ ಕುರಿಮರಿ ಕಾಲುಗಳಿಂದ ತಯಾರಿಸಿದ ಸುವಾಸನೆಭರಿತ ಮತ್ತು ರುಚಿಕರ ಸೂಪ್ ಆಗಿದೆ. ಶುಂಠಿ, ಬೆಳ್ಳುಳ್ಳಿ ಮತ್ತು ಗರಂ ಮಸಾಲೆ ಮುಂತಾದ ವಿವಿಧ ಮಸಾಲೆಗಳನ್ನು ಹಾಕಿ ಇದರ ಮಾಂಸವನ್ನು ಬೇಯಿಸಲಾಗುತ್ತದೆ. ಬೆಂಗಳೂರು, ಮಂಡ್ಯ, ಮೈಸೂರು ಭಾಗಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಸೂಪ್ ಅನ್ನು ಬೆಳಗ್ಗೆ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳಿವೆ. ಅದರಲ್ಲೂ ಚಳಿಗಾಲದ ತಿಂಗಳುಗಳಲ್ಲಿ ವ್ಯಾಪಕವಾಗಿ ಸೇವಿಸುವ ಭಕ್ಷ್ಯವಾಗಿದೆ. ಏಕೆಂದರೆ ಇದು ನಿಮ್ಮ ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ.

ಖಾರ ಪೊಂಗಲ್

ಖಾರ ಪೊಂಗಲ್ ಖಾದ್ಯವನ್ನು ಅನ್ನ ಮತ್ತು ಹೆಸರುಬೇಳೆ ಅಥವಾ ಕಡಲೆಬೇಳೆಯಿಂದ ಸರಳವಾಗಿ ತಯಾರಿಸಬಹುದಾದ ಪೌಷ್ಟಿಕ ಭಕ್ಷ್ಯವಾಗಿದೆ. ಇದನ್ನು ತುಪ್ಪ, ಕರಿಮೆಣಸು, ಜೀರಿಗೆ, ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿ ಅಥವಾ ಮೊಸರಿನೊಂದಿಗೆ ಸವಿಯಲು ರುಚಿಕರವಾಗಿರುತ್ತದೆ. ಬಡಿಸಲಾಗುತ್ತದೆ. ಚಳಿಗಾಲದಲ್ಲಿ ಉಪಾಹಾರಕ್ಕೆ ಪೊಂಗಲ್ ತಿನ್ನುವುದು ಸೂಕ್ತವಾದ ಆಯ್ಕೆಯಾಗಿದೆ. ಏಕೆಂದರೆ ಇದು ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.

ಕಚೋರಿ

ಕಚೋರಿ ಎಂಬುದು ಸಾಂಪ್ರದಾಯಿಕ ಬಂಗಾಳಿ ಖಾದ್ಯವಾಗಿದ್ದು, ಇದನ್ನು ಮಸಾಲೆಯುಕ್ತ ಬಟಾಣಿ ತುಂಬಿದ ಆಳವಾದ ಕರಿದ ಬ್ರೆಡ್‌ನಿಂದ ತಯಾರಿಸಲಾಗುತ್ತದೆ. ಚಳಿಗಾಲದಲ್ಲಿ ಇದು ಜನಪ್ರಿಯ ಉಪಹಾರವಾಗಿದೆ. ಹೊರಪದರ ಗರಿಗರಿಯಾಗಿದ್ದು, ಒಳಗೆ ಮೃದುವಾಗಿರುತ್ತದೆ. ಸಂಜೆಯ ಸ್ನಾಕ್ಸ್ ಆಗಿಯೂ ಇದನ್ನು ತಿನ್ನುವವರು ಅನೇಕರಿದ್ದಾರೆ.

ಆಲೂ ಪರೋಟ

ಚಪಾತಿಗೆ ಬೇಯಿಸಿ, ಹಿಸುಕಿದ ಆಲೂಗಡ್ಡೆಯನ್ನು ಮಧ್ಯಕ್ಕೆ ತುಂಬಿಸಿ ಮತ್ತೆ ಅದನ್ನು ಲಟ್ಟಣಿಗೆಯಿಂದ ಲಟ್ಟಿಸಿ ತವಾದಲ್ಲಿ ಬೇಯಿಸಬೇಕು. ಚಳಿಗಾಲದ ತಿಂಗಳುಗಳಲ್ಲಿ ಇದು ವಿಶೇಷವಾಗಿ ಜನಪ್ರಿಯವಾಗಿದೆ. ಏಕೆಂದರೆ ಇದನ್ನು ಬೆಣ್ಣೆ ಅಥವಾ ಮೊಸರಿನೊಂದಿಗೆ ಬಿಸಿ ಬಿಸಿಯಾಗಿ ಬಡಿಸಲಾಗುತ್ತದೆ. ಇದು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ನಿಮಗೆ ದಿನವಿಡೀ ಶಕ್ತಿಯನ್ನು ನೀಡುತ್ತದೆ. ಆಲೂಗಡ್ಡೆ ಬದಲಿಗೆ, ಸಿಹಿ ಗೆಣಸು ಅಥವಾ ಪನೀರ್ ಅನ್ನು ಸಹ ಬಳಸಬಹುದು.

ಚನ್ನ ಮಸಾಲೆ

ಚನ್ನ ಮಸಾಲೆ ಪಂಜಾಬಿ ಶೈಲಿಯ ಜನಪ್ರಿಯ ಖಾದ್ಯವಾಗಿದ್ದು, ಇದನ್ನು ಚಪಾತಿ ಅಥವಾ ರೊಟ್ಟಿ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಕಡಲೆಕಾಳಿನಿಂದ ಚನ್ನ ಮಸಾಲೆಯನ್ನು ತಯಾರಿಸಲಾಗುತ್ತದೆ. ಬೆಳಗ್ಗಿನ ಉಪಾಹಾರಕ್ಕೆ ಇದು ಬೆಸ್ಟ್ ಖಾದ್ಯ. ಒಮ್ಮೆ ತಿಂದು ನೋಡಿದರೆ ನೀವು ಮತ್ತೆ ಮತ್ತೆ ಮಾಡಬೇಕು ಎಂದೆನಿಸುತ್ತದೆ. ಅಷ್ಟು ರುಚಿಕರವಾಗಿರುತ್ತದೆ. ಚಳಿಗಾಲದ ತಿಂಗಳುಗಳಲ್ಲಿ, ಈ ಭಕ್ಷ್ಯವು ದೇಹವನ್ನು ಬೆಚ್ಚಗಾಗಿಸಲು ಸಹಾಯ ಮಾಡುತ್ತದೆ.

ಮಸಾಲೆ ರೊಟ್ಟಿ

ಮಸಾಲೆ ರೊಟ್ಟಿಯನ್ನು ರಾಗಿ, ರವೆ ಅಥವಾ ಅಕ್ಕಿ ಹಿಟ್ಟಿನಿಂದಲೂ ತಯಾರಿಸಬಹುದು. ಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪಿನ ಜೊತೆ ವಿವಿಧ ಮಸಾಲೆಗಳನ್ನು ಹಾಕಿ ತಯಾರಿಸಲಾಗುತ್ತದೆ. ಇದು ತುಂಬಾ ರುಚಿಕರವಾಗಿರುತ್ತದೆ. ಸಾಗ್, ತರಕಾರಿ ಭಕ್ಷ್ಯ ಅಥವಾ ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.

Whats_app_banner