Aloo Sagu Recipe: ಪೂರಿಗೆ ಬೆಸ್ಟ್ ಕಾಂಬಿನೇಷನ್​ ಅಂದ್ರೆ ಸಾಗು; ಆಲೂಗಡ್ಡೆ ಸಾಗು ಮಾಡುವ ಸರಳ ವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Aloo Sagu Recipe: ಪೂರಿಗೆ ಬೆಸ್ಟ್ ಕಾಂಬಿನೇಷನ್​ ಅಂದ್ರೆ ಸಾಗು; ಆಲೂಗಡ್ಡೆ ಸಾಗು ಮಾಡುವ ಸರಳ ವಿಧಾನ ಇಲ್ಲಿದೆ

Aloo Sagu Recipe: ಪೂರಿಗೆ ಬೆಸ್ಟ್ ಕಾಂಬಿನೇಷನ್​ ಅಂದ್ರೆ ಸಾಗು; ಆಲೂಗಡ್ಡೆ ಸಾಗು ಮಾಡುವ ಸರಳ ವಿಧಾನ ಇಲ್ಲಿದೆ

Aloo Sagu Recipe in Kannada: ನಾವಿಲ್ಲಿ ನಿಮಗೆ ಆಲೂ ಸಾಗು ಮಾಡುವ ಸರಳ ವಿಧಾನವನ್ನು ಹೇಳುತ್ತಿದ್ದೇವೆ. ನೀವೂ ಒಮ್ಮೆ ಟ್ರೈ ಮಾಡಿ..

ಆಲೂಗಡ್ಡೆ ಸಾಗು  ( twitter/@rajpurvii)
ಆಲೂಗಡ್ಡೆ ಸಾಗು ( twitter/@rajpurvii)

ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೆಳಗಿನ ಉಪಹಾರಕ್ಕೆ ಪೂರಿ ಮಾಡುತ್ತಾರೆ. ಹೋಟೆಲ್​ಗಳಲ್ಲಿ ಬೆಳಗಿನ ಉಪಹಾರಕ್ಕೆ ಮಾತ್ರವಲ್ಲದೆ ಮಧ್ಯಾಹ್ನದ ಭೋಜನದ ಭಾಗವಾಗಿಯೂ ಪೂರಿಯನ್ನು ಸರ್ವ್ ಮಾಡಲಾಗುತ್ತದೆ. ಆದರೆ ಪೂರಿನ ಚಟ್ನಿ-ಸಾಂಬಾರ್​ ಜೊತೆ ತಿನ್ನುವುದಕ್ಕಿಂತಲೂ ಆಲೂಗಡ್ಡೆ ಸಾಗು ಜೊತೆ ತಿಂದರೆ ರುಚಿ ಜಾಸ್ತಿ. ಹೋಟೆಲ್​ಗಳಲ್ಲೇನೋ ಪೂರಿಗೆ ಸಾಗು ಕೊಡಬಹುದು ಆದರೆ ಮನೆಯಲ್ಲಿ ಪೂರಿ ಮಾಡುವ ಎಲ್ಲರೂ ಸಾಗು ಮಾಡುವುದಿಲ್ಲ. ಮಾಡಿದರೂ ಕೆಲವೊಮ್ಮೆ ಹೋಟೆಲ್​ನಷ್ಟು ರುಚಿ ಬರುವುದಿಲ್ಲ. ನಾವಿಲ್ಲಿ ನಿಮಗೆ ಆಲೂ ಸಾಗು ಮಾಡುವ ಸರಳ ವಿಧಾನವನ್ನು ಹೇಳುತ್ತಿದ್ದೇವೆ. ನೀವೂ ಒಮ್ಮೆ ಟ್ರೈ ಮಾಡಿ..

ಆಲೂಗಡ್ಡೆ ಸಾಗು ಮಾಡಲು ಬೇಕಾಗುವ ಪದಾರ್ಥಗಳು

ಆಲುಗಡ್ಡೆ

ಕ್ಯಾರೆಟ್​

ಹಸಿ ಬಟಾಣಿ

ಈರುಳ್ಳಿ

ಬೆಳ್ಳುಳ್ಳಿ

ಜೀರಿಗೆ

ಸಾಸಿವೆ

ಬೇವಿನೆಲೆ

ಹಸಿಮೆಣಸು

ಕೊತ್ತಂಬರಿ ಸೊಪ್ಪು

ಅರಿಶಿನ

ಕಡಲೆ ಹಿಟ್ಟು

ಎಣ್ಣೆ

ಉಪ್ಪು

ಆಲೂಗಡ್ಡೆ ಸಾಗು ಮಾಡುವ ವಿಧಾನ

ಸ್ಟವ್​ ಮೇಲೆ ಪ್ಯಾನ್​ ಇಟ್ಟು 4 ಟೇಬಲ್​ ಸ್ಪೂನ್​ ಎಣ್ಣೆ ಹಾಕಿ ಸಾಸಿವೆ, ಬೆಳ್ಳುಳ್ಳಿ, 10 ಬೇವಿನ ಎಲೆ, ಜೀರಿಗೆ, 4-5ಹಸಿಮೆಣಸು, ಕತ್ತರಿಸಿದ ಈರುಳ್ಳಿ, ಸಣ್ಣಗೆ ಕತ್ತರಿಸಿದ ಒಂದು ಕ್ಯಾರೆಟ್​ ಚೂರುಗಳು ಮತ್ತು ಕಾಲು ಕಪ್​ ಹಸಿ ಬಟಾಣಿ, ಸ್ವಲ್ಪ ಉಪ್ಪು ಹಾಕಿ. ಸಣ್ಣ ಉರಿಯಲ್ಲಿ 2-3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಅರ್ಧ ಟೀ ಸ್ಪೂನ್​ ಅರಿಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಈಗ ಒಂದು ಬೌಲ್​ ನೀರಿನಲ್ಲಿ ಒಂದು ಟೇಬಲ್​ ಸ್ಪೂನ್​ ಕಡಲೆ ಹಿಟ್ಟು ಹಾಕಿ ಕಲಸಿಕೊಳ್ಳಿ. ಕಡಲೆ ಹಿಟ್ಟಿನ ಈ ನೀರನ್ನು ಸ್ಟವ್​ ಮೇಲೆ ಇರುವ ಪ್ಯಾನ್​ಗೆ ಹಾಕಿ. ಎಲ್ಲವನ್ನೂ ಚೆನ್ನಾಗಿ ಕಲಸಿ ಒಂದು ನಿಮಿಷ ಫ್ರೈ ಆಗಲು ಬಿಡಿ.

ಈಗ ಬೇಯಿಸಿದ 3 ಆಲೂಗಡ್ಡೆಯನ್ನು ಸ್ಮ್ಯಾಶ್​ ಮಾಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಂದು ಕಪ್​ ನೀರು ಮತ್ತು ಉಪ್ಪು ಹಾಕಿ. ಖಾರ ಕಮ್ಮಿ ಆಯಿತು ಎನಿಸಿದರೆ ಚೂರು ಖಾರದ ಪುಡಿ ಸೇರಿಸಬಹುದು. ಹೆಚ್ಚು ದಪ್ಪ ಅಥವಾ ಹೆಚ್ಚು ತೆಳು ಮಾಡಿಕೊಳ್ಳಬೇಡಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಈಗ ಆಲೂಗಡ್ಡೆ ಸಾಗು ಸಿದ್ಧ.

ಪೂರಿ ಮಾತ್ರವಲ್ಲದೇ ಆಲೂಗಡ್ಡೆ ಸಾಗುನ ನೀವು ದೋಸೆ, ಚಪಾತಿ, ಇಡ್ಲಿ ಜೊತೆಯೂ ಸವಿಯಬಹುದು. ಅಷ್ಟೇ ಅಲ್ಲ ಸಾಂಬಾರು ಬದಲು ಬಿಸಿಬಿಸ ಅನ್ನವನ್ನೂ ಸಾಗು ಜೊತೆ ತಿನ್ನಬಹುದು.

Whats_app_banner