ಅತಿಥಿಗಳಿಗೆ ಗುಲಾಬ್‌ ಜಾಮೂನು ಮಾಡಬೇಕೆಂದುಕೊಂಡಿದ್ದೀರಾ? ಉಪ್ಪಿಟ್ಟು ರವೆಯಿಂದಲೂ ರುಚಿಯಾದ ಜಾಮೂನು ತಯಾರಿಸಬಹುದು ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅತಿಥಿಗಳಿಗೆ ಗುಲಾಬ್‌ ಜಾಮೂನು ಮಾಡಬೇಕೆಂದುಕೊಂಡಿದ್ದೀರಾ? ಉಪ್ಪಿಟ್ಟು ರವೆಯಿಂದಲೂ ರುಚಿಯಾದ ಜಾಮೂನು ತಯಾರಿಸಬಹುದು ನೋಡಿ

ಅತಿಥಿಗಳಿಗೆ ಗುಲಾಬ್‌ ಜಾಮೂನು ಮಾಡಬೇಕೆಂದುಕೊಂಡಿದ್ದೀರಾ? ಉಪ್ಪಿಟ್ಟು ರವೆಯಿಂದಲೂ ರುಚಿಯಾದ ಜಾಮೂನು ತಯಾರಿಸಬಹುದು ನೋಡಿ

ಗುಲಾಬ್ ಜಾಮೂನ್‌ ಮಾಡಲು ಜಾಮೂನ್‌ ಪುಡಿಯನ್ನು ಬಳಸಲಾಗುತ್ತದೆ. ಆದರೆ ಇದರಲ್ಲಿ ಮೈದಾ ಹಿಟ್ಟು ಇರುತ್ತದೆ. ಆದರೆ ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲಿಗೆ ನೀವು ಉಪ್ಪಿಟ್ಟು ರವೆ ಬಳಸಿ ಕೂಡಾ ಜಾಮೂನು ತಯಾರಿಸಬಹುದು.

ಗೆಸ್ಟ್‌ಗಳಿಗೆ ಗುಲಾಬ್‌ ಜಾಮೂನು ಮಾಡಬೇಕೆಂದುಕೊಂಡಿದ್ದೀರಾ? ಉಪ್ಪಿಟ್ಟು ರವೆಯಿಂದಲೂ ರುಚಿಯಾದ ಜಾಮೂನು ತಯಾರಿಸಬಹುದು ನೋಡಿ
ಗೆಸ್ಟ್‌ಗಳಿಗೆ ಗುಲಾಬ್‌ ಜಾಮೂನು ಮಾಡಬೇಕೆಂದುಕೊಂಡಿದ್ದೀರಾ? ಉಪ್ಪಿಟ್ಟು ರವೆಯಿಂದಲೂ ರುಚಿಯಾದ ಜಾಮೂನು ತಯಾರಿಸಬಹುದು ನೋಡಿ

ಆರೋಗ್ಯದ ದೃಷ್ಟಿಯಿಂದ ಮೈದಾಹಿಟ್ಟಿನ ಸೇವನೆ ಒಳ್ಳೆಯದಲ್ಲ ಎಂದು ವೈದ್ಯರು ಹೇಳಿದರೂ ಇಂದಿಗೂ ಬಹಳಷ್ಟು ಕಡೆ ಮೈದಾಹಿಟ್ಟನ್ನು ಬಳಸುತ್ತಾರೆ. ಬಹಳಷ್ಟು ಸಿಹಿಗಳಲ್ಲಿ ಮೈದಾಹಿಟ್ಟನ್ನು ಬಳಸಲಾಗುತ್ತದೆ. ಅದರಲ್ಲೂ ಗುಲಾಬ್ ಜಾಮೂನು ತಯಾರಿಸಲು ಮೈದಾ ಹಿಟ್ಟು ಮುಖ್ಯ ಇಂಗ್ರೀಡಿಯಂಟ್‌ ಆಗಿದೆ. ಮೈದಾ ಬಳಕೆಯಿಂದ ದೇಹದಲ್ಲಿ ಹಲವು ಬಗೆಯ ರಾಸಾಯನಿಕಗಳು ಶೇಖರಣೆಗೊಳ್ಳುತ್ತವೆ. ಒಂದು ವೇಳೆ ನೀವು ಗುಲಾಬ್ ಜಾಮೂನು ಪ್ರಿಯರಾಗಿದ್ದರೆ ನೀವು ಜಾಮೂನು ಪುಡಿಯಿಂದ ಮಾತ್ರವಲ್ಲ, ಉಪ್ಪಿಟ್ಟಿನ ರವೆಯಿಂದ ಕೂಡಾ ತಯಾರಿಸಬಹುದು. ಉಪ್ಪಿಟ್ಟು ರವೆಯಿಂದ ಜಾಮೂನು ತಯಾರಿಸುವ ವಿಧಾನ ಹೀಗಿದೆ.

ಗುಲಾಬ್ ಜಾಮೂನ್ ರೆಸಿಪಿಗೆ ಬೇಕಾದ ಪದಾರ್ಥಗಳು

  • ಉಪ್ಪಿಟ್ಟು ರವೆ - 2 ಕಪ್‌
  • ಏಲಕ್ಕಿ ಪುಡಿ - 1 ಟೀ ಚಮಚ
  • ಹಾಲು - 2 ಕಪ್‌
  • ತುಪ್ಪ - 3 ಚಮಚ
  • ಸಕ್ಕರೆ - 2 ಕಪ್
  • ಎಣ್ಣೆ - ಕರಿಯಲು
  • ನೀರು - ಅಗತ್ಯವಿರುವಷ್ಟು

ಇದನ್ನೂ ಓದಿ: 1,2,3,4 ರೂಲ್ಸ್‌ ಫಾಲೋ ಮಾಡಿ ಮದುವೆ ಮನೆ ಶೈಲಿಯ ರುಚಿಯಾದ ಪೈನಾಪಲ್‌ ಕೇಸರಿಬಾತ್‌ ತಯಾರಿಸಿ; ರೆಸಿಪಿ ಇಲ್ಲಿದೆ

ಗುಲಾಬ್‌ ಜಾಮೂನು ತಯಾರಿಸುವ ವಿಧಾನ

  • ಮೊದಲು ಪಾತ್ರೆಗೆ ಸಕ್ಕರೆ , ನೀರು ಸೇರಿಸಿ ಪಾಕ ತಯಾರಿಸಿಕೊಳ್ಳಿ, ಪಾಕ ಕುದಿಯುವಾಗ 1 ಚಮಚ ಹಾಲು, ಏಲಕ್ಕಿ ಪುಡಿ ಸೇರಿಸಿ ಮಿಕ್ಸ್‌ ಮಾಡಿ
  • ಮತ್ತೊಂದು ಪಾತ್ರೆ ಬಿಸಿ ಮಾಡಿ ಒಲೆ ಮೇಲಿಟ್ಟು ತುಪ್ಪ ಬಿಸಿ ಮಾಡಿ
  • ತುಪ್ಪ ಕರಗಿದ ನಂತರ ಉಪ್ಪಿಟ್ಟು ರವೆ ಸೇರಿಸಿ ಸ್ವಲ್ಪ ಸಮಯ ಹುರಿಯಿರಿ, ಬಣ್ಣ ಬದಲಾಗುವರೆಗೂ ಫ್ರೈ ಮಾಡಿ
  • ಇದಕ್ಕೆ 2 ಚಮಚ ಪುಡಿ ಮಾಡಿದ ಸಕ್ಕರೆ ಮತ್ತು 1/2 ಚಮಚ ಏಲಕ್ಕಿ ಪುಡಿ ಸೇರಿಸಿ ಕಡಿಮೆ ಉರಿಯಲ್ಲಿ ತಿರುವುತ್ತಿರಿ
  • ಮಿಶ್ರಣ ಗಟ್ಟಿಯಾದ ನಂತರ ಸ್ಟೌವ್‌ ಆಫ್‌ ಮಾಡಿ ಸ್ವಲ್ಪ ತಣ್ಣಗಾಗುವವರೆಗೂ ಬಿಡಿ
  • ನಂತರ ಎರಡೂ ಕೈಗೆ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ
  • ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ, ಕರಿದ ಜಾಮೂನು ಉಂಡೆಗಳನ್ನು ಸಕ್ಕರೆ ಪಾಕದೊಳಗೆ ಹಾಕಿ ಒಂದು ಗಂಟೆ ಬಿಡಿ ನಂತರ ಸರ್ವ್‌ ಮಾಡಿ.

ಮೈದಾ ಹಿಟ್ಟಿನಿಂದ ಮಾಡಿದ ಯಾವುದೇ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೈದಾವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಬೇರೆ ಯಾವುದನ್ನಾದರೂ ಹಿಟ್ಟಿನಿಂದ ಮಾಡಿದ ಆಹಾರ ಪದಾರ್ಥಗಳನ್ನು ಮಾಡಲು ಪ್ರಯತ್ನಿಸಿ. ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಬೇಗ ಮಧುಮೇಹ ಬರಬಹುದು. ಆದ್ದರಿಂದ ನೀವು ಗುಲಾಬ್ ಜಾಮ್ ತಿನ್ನಲು ಬಯಸಿದರೆ, ಅದನ್ನು ಉಪ್ಪಿಟ್ಟಿನ ರವೆಯಿಂದ ತಯಾರಿಸಿ.

Whats_app_banner