ಕನ್ನಡ ಸುದ್ದಿ  /  ಜೀವನಶೈಲಿ  /  Buns Recipe: ಮಂಗಳೂರು ಶೈಲಿಯಲ್ಲಿ ರುಚಿರುಚಿಯಾಗಿ ಬನ್ಸ್​ ಮಾಡಿ; ಇಲ್ಲಿದೆ ರೆಸಿಪಿ

Buns Recipe: ಮಂಗಳೂರು ಶೈಲಿಯಲ್ಲಿ ರುಚಿರುಚಿಯಾಗಿ ಬನ್ಸ್​ ಮಾಡಿ; ಇಲ್ಲಿದೆ ರೆಸಿಪಿ

Buns Recipe in Kannada: ನಾವಿಲ್ಲಿ ನಿಮಗೆ ಹೋಟೆಲ್​​ಗಿಂತಲೂ ರುಚಿಯಾಗಿ ಮಂಗಳೂರು ಶೈಲಿಯಲ್ಲಿ ಬನ್ಸ್ ಮಾಡುವ ವಿಧಾನವನ್ನ ಹೇಳುತ್ತಿದ್ದೇವೆ. ಬನ್ಸ್ ಅನ್ನು ನೀವು ಬೆಳಗ್ಗೆ ಉಪಹಾರವಾಗಿಯೂ ತಿನ್ನಬಹುದು ಅಥವಾ ಸಂಜೆ ಟೀ ಜೊತೆ ಸ್ನ್ಯಾಕ್ಸ್ ಆಗಿಯೂ ಸವಿಯಬಹುದು.

ಮಂಗಳೂರು ಶೈಲಿಯಲ್ಲಿ ಬನ್ಸ್ (twitter/@CMahanasa)
ಮಂಗಳೂರು ಶೈಲಿಯಲ್ಲಿ ಬನ್ಸ್ (twitter/@CMahanasa)

ಹೋಟೆಲ್​​ನಲ್ಲಿ ಸಾಮಾನ್ಯವಾಗಿ ಎಲ್ಲರೂ ಬನ್ಸ್ ತಿಂದಿರುತ್ತೀರ. ಮನೆಯಲ್ಲಿ ಹೋಟೆಲ್​​ನಷ್ಟೇ ರುಚಿಯಾಗಿ ಮಾಡುವುದು ಎಲ್ಲರಿಗೂ ಬರುವುದಿಲ್ಲ. ನಾವಿಲ್ಲಿ ನಿಮಗೆ ಹೋಟೆಲ್​​ಗಿಂತಲೂ ರುಚಿಯಾಗಿ ಮಂಗಳೂರು ಶೈಲಿಯಲ್ಲಿ ಬನ್ಸ್ ಮಾಡುವ ವಿಧಾನವನ್ನ ಹೇಳುತ್ತಿದ್ದೇವೆ. ಬನ್ಸ್ ಅನ್ನು ನೀವು ಬೆಳಗ್ಗೆ ಉಪಹಾರವಾಗಿಯೂ ತಿನ್ನಬಹುದು ಅಥವಾ ಸಂಜೆ ಟೀ ಜೊತೆ ಸ್ನ್ಯಾಕ್ಸ್ ಆಗಿಯೂ ಸವಿಯಬಹುದು.

ಬನ್ಸ್ ಮಾಡಲು ಬೇಕಾಗುವ ಪದಾರ್ಥಗಳು

ಪಚ್ಚ ಬಾಳೆಹಣ್ಣು

ಸಕ್ಕರೆ

ಟ್ರೆಂಡಿಂಗ್​ ಸುದ್ದಿ

ಮೊಸರು

ಜೀರಿಗೆ

ಅಡಿಗೆ ಸೋಡ

ಉಪ್ಪು

ಮೈದಾಹಿಟ್ಟು

ಗೋಧಿ ಹಿಟ್ಟು (ಬೇಕಾದರೆ)

ಎಣ್ಣೆ

ಮಂಗಳೂರು ಬನ್ಸ್ ಮಾಡುವ ವಿಧಾನ

ಪೂರ್ತಿ ಹಣ್ಣಾದ 2 ಪಚ್ಚಬಾಳೆ ಹಣ್ಣು ತೆಗೆದುಕೊಂಡು ಸಿಪ್ಪೆ ಬಿಡಿಸಿ ಅದಕ್ಕೆ ಒಂದು ಕಪ್​ ಸಕ್ಕರೆ ಹಾಕಿಕೊಳ್ಳಿ. ಈಗ ಬಾಳೆಹಣ್ಣನ್ನು ಸಕ್ಕರೆ ಜೊತೆ ಪೇಸ್ಟ್ ಆಗುವಂತೆ ಸ್ಮ್ಯಾಶ್​ ಮಾಡಿಕೊಳ್ಳಿ. ಇದಕ್ಕೆ ಅರ್ಧ ಕಪ್​ ಮೊಸರು, ಸ್ವಲ್ಪ ಜೀರಿಗೆ, ಸ್ವಲ್ಪ ಅಡಿಗೆ ಸೋಡಾ ಹಾಗೂ ಒಂದು ಚಿಟಿಕೆ ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಇದಕ್ಕೆ ಮೈದಾಹಿಟ್ಟು ಹಾಗೂ ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಹಾಕಿ ಕಲಸುತ್ತಾ ಬನ್ನಿ. ಗೋಧಿ ಹಿಟ್ಟು ಬೇಡವಾದರೆ ಮೈದಾ ಮಾತ್ರ ಹಾಕಿಕೊಳ್ಳಿ. ಚಪಾತಿಗಿಂತಲೂ ಸ್ವಲ್ಪ ಮೆದುವಾಗಿ ಹಿಟ್ಟಿನ ಹದ ಬರುವಂತೆ ಸ್ವಲ್ಪ ಸ್ವಲ್ಪ ಹಿಟ್ಟು ಹಾಕಿಕೊಂಡು ಕಲಸುತ್ತಾ ಬನ್ನಿ. ಕಲಸುವಾಗ ಬೇಕಾದರೆ ಎಣ್ಣೆ ಬೆರೆಸಬಹುದು.

ಆದರೆ ಗಮನಿಸಿ. ರಾತ್ರಿಯೇ ಹಿಟ್ಟು ಕಲಸಿ ಗಾಳಿ ತಗುಲದಂತೆ ಮುಚ್ಚಿಟ್ಟು ಬೆಳಗ್ಗೆ ಬನ್ಸ್ ಮಾಡಬೇಕು ಅಥವಾ ಬೆಳಗ್ಗೆ ಕಲಸಿಟ್ಟು ಸಂಜೆ ಮಾಡಬಹುದು. ಹಿಟ್ಟು ಕಲಸಿದ ತಕ್ಷಣವೇ ಬನ್ಸ್ ಮಾಡಲು ಆಗಲ್ಲ. 6 ರಿಂದ 8 ಗಂಟೆ ಹಿಟ್ಟನ್ನು ಮುಚ್ಚಿಡಬೇಕು.

ಹಿಟ್ಟು ಕಲಸಿಟ್ಟು 6 ರಿಂದ 8 ಗಂಟೆಗಳ ನಂತರ ಬನ್ಸ್ ಮಾಡುವ ವೇಳೆ ಮತ್ತೊಮ್ಮೆ ಹಿಟ್ಟನ್ನು ನಾದಿಕೊಳ್ಳಿ. ನೀವು ಕೈಗೆ ಅಂಟದಂತೆ ಮೈದಾಹಿಟ್ಟು ಕೈಗೆ ಹಾಕಿಕೊಳ್ಳುತ್ತಾ ಉಂಡೆ ಕಟ್ಟಿ ಚಪಾತಿಗಿಂತ ಚಿಕ್ಕ ಸೈಜ್​ನಲ್ಲಿ ವೃತ್ತಾಕಾರದಲ್ಲಿ ಹಿಟ್ಟು ಒರೆಯಿರಿ. ಈಗ ಕಾದ ಎಣ್ಣೆಗೆ ಅನ್ನು ಬಿಡಿ. ಬಿಟ್ಟ ಕೆಲ ಸೆಕೆಂಡ್​ಗಳಲ್ಲಿ ಹುಟ್ಟಿನಿಂದ ಅದರ ಮೇಲೆ ಸ್ವಲ್ಪ ಪ್ರೆಸ್​ ಮಾಡಿದರೆ ಅದು ಉಬ್ಬಿಕೊಳ್ಳುತ್ತದೆ. ಎಲ್ಲರೂ ಬದಿ ಎಣ್ಣೆಯಲ್ಲಿ ಬೇಯಿಸಿ ಹೊರತೆಗೆದರೆ ಬನ್ಸ್ ಸಿದ್ಧ. ಬನ್ಸ್ ಅನ್ನು ನೀವು ತೆಂಗಿನಕಾಯಿ ಚಟ್ನಿ, ಸಾಂಬಾರ್ ಅಥವಾ ಆಲೂಗಡ್ಡೆ ಸಾಗು ಜೊತೆ ಸವಿಯಬಹುದು.