Hyderabad Biryani: ಹೊಸ ತೊಡಕು ಜೋರಾ, ಏನ್ ಅಡುಗೆ? ಹೈದರಾಬಾದ್ ಬಿರಿಯಾನಿ ಮಾಡಿ ನೋಡಿ: ರೆಸಿಪಿ ಇಲ್ಲಿದೆ
Hyderabad Biryani: ಮುತ್ತಿನ ನಗರಿ ಹೈದರಾಬಾದ್ ಎಂದರೆ ತಕ್ಷಣ ನೆನಪಾಗೋದು ಅಲ್ಲಿನ ಬಿರಿಯಾನಿ. ಇದು ಹೊರ ರಾಜ್ಯ, ಹೊರ ದೇಶಗಳಲ್ಲೂ ಫೇಮಸ್. ತಯಾರಿಸುವುದು ಕೂಡಾ ಬಹಳ ಸುಲಭ. ಬನ್ನಿ ಹೈದರಾಬಾದ್ ಬಿರಿಯಾನಿ ತಯಾರಿಸಲು ಬೇಕಾದ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.
Hyderabad Biryani: ನಿನ್ನೆ ( ಜ 15) ಯಷ್ಟೇ ಸಂಕ್ರಾಂತಿ ಮುಗಿದಿದೆ. ಹಬ್ಬ ಮುಗಿದ ಮರುದಿನ ಸಾಮಾನ್ಯವಾಗಿ ನಾನ್‌ವೆಜಿಟೆರಿಯನ್ಸ್ ಮನೆಯಲ್ಲಿ ಹೊಸತೊಡಕು ಆಚರಿಸಲಾಗುತ್ತದೆ. ಅಂದರೆ ಹಬ್ಬದ ದಿನ ಸಿಹಿ ಊಟ ಮಾಡಿದ ಮರುದಿನ ಖಾರ ಅಡುಗೆ ತಯಾರಿಸಲಾಗುತ್ತದೆ. ಆ ದಿನ ಮಟನ್, ಚಿಕನ್, ಫಿಶ್ ಅಥವಾ ಮೊಟ್ಟೆಯ ಅಡುಗೆ ತಯಾರಿಸಿ ಸವಿಯಲಾಗುತ್ತದೆ. ಕೆಲವೆಡೆ ಮನೆಗೆ ಸ್ನೇಹಿತರು, ಸಂಬಂಧಿಕರನ್ನೂ ಆಹ್ವಾನಿಸಲಾಗುತ್ತದೆ.
ನಿಮ್ಮ ಮನೇಲಿ ಇಂದು ಹೊಸತೊಡಕು ಆಚರಣೆ ಹೇಗಿದೆ? ಏನು ಅಡುಗೆ ಮಾಡಬೇಕು ಅಂದುಕೊಂಡಿದ್ದೀರಾ? ಒಂದು ವೇಳೆ ಇಂದು ಏನು ಅಡುಗೆ ಮಾಡೋದು ಅಂತ ಕನ್ಫ್ಯೂಸ್ ಆಗಿದ್ದಲ್ಲಿ ಹೈದರಾಬಾದ್ ಬಿರ್ಯಾನಿ ತಯಾರಿಸಿ ನೋಡಿ.
ಬೇಕಾದ ಸಾಮಗ್ರಿಗಳು
- ಚಿಕನ್ - 1 ಕಿಲೋ
- ಬಾಸ್ಮತಿ ಅಕ್ಕಿ - 1/2 ಕಿಲೋ
- ಬಿರಿಯಾನಿ ಎಲೆ - 4
- ಸ್ಟಾರ್ ಅನೀಸ್ - 4
- ಚೆಕ್ಕೆ - 2 ತುಂಡು
- ಏಲಕ್ಕಿ - 6
- ಶಾಹಿ ಜೀರಾ - 1 ಟೀ ಸ್ಪೂನ್
- ಕರಿಮೆಣಸು - 1 ಟೀ ಸ್ಪೂನ್
- ಜಾವಿತ್ರಿ - 2
- ಬಿರಿಯಾನಿ ಮಸಾಲೆ - 2 ಟೇಬಲ್ ಸ್ಪೂನ್
- ಕಂದುಬಣ್ಣಕ್ಕೆ ಹುರಿದ ಈರುಳ್ಳಿ - 1 ಕಪ್
- ಅಚ್ಚ ಖಾರದ ಪುಡಿ - 2 ಟೇಬಲ್ ಸ್ಪೂನ್
- ಧನಿಯಾ ಪುಡಿ - 1 ಟೇಬಲ್ ಸ್ಪೂನ್
- ಜೀರ್ಗೆ - 1 ಟೀ ಸ್ಪೂನ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಸ್ಪೂನ್
- ಯೋಗರ್ಟ್ - 1 ಕಪ್
- ಅರಿಶಿನ - 1/4 ಟೀ ಸ್ಪೂನ್
- ಕತ್ತರಿಸಿದ ಕೊತ್ತಂಬರಿ ಸೊಪ್ಪು - 1 ಕಪ್
- ಕತ್ತರಿಸಿದ ಪುದೀನಾ - 1/2 ಕಪ್
- ಹಸಿ ಮೆಣಸಿನಕಾಯಿ - 5
- ಎಣ್ಣೆ - 1/2 ಕಪ್
- ನಿಂಬೆ ರಸ - 2 ಟೇಬಲ್ ಸ್ಪೂನ್
- ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲು 4-5 ಬಾರಿ ಚಿಕನ್ ತೊಳೆದು ನೀರು ಸೋರಲು ಬಿಡಿ.
ಚಿಕನ್ ಜೊತೆಗೆ ಉಪ್ಪು, ಅಚ್ಚ ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಶೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಮಧ್ಯಕ್ಕೆ ಸೀಳಿಕೊಂಡ ಹಸಿಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು ಸೇರಿಸಿ .
ಇದರೊಂದಿಗೆ ಬಿರಿಯಾನಿ ಮಸಾಲೆ, ಜೀರ್ಗೆ ಪುಡಿ, ಧನಿಯಾ ಪುಡಿ, ಫ್ರೈ ಮಾಡಿದ ಈರುಳ್ಳಿ, ಸ್ವಲ್ಪ ಎಣ್ಣೆ ಸೇರಿಸಿ ಮತ್ತೆ ಮಿಕ್ಸ್ ಮಾಡಿ.
ಇದರೊಂದಿಗೆ ಉಪ್ಪು ಸೇರಿಸಿದ ಮೊಸರು ಸೇರಿಸಿ ಮಿಕ್ಸ್ ಮಾಡಿ 1 ಗಂಟೆ ಮ್ಯಾರಿನೇಟ್ ಆಗಲು ಬಿಡಿ.
ಬಾಸ್ಮತಿ ಅಕ್ಕಿಯನ್ನು ಒಮ್ಮೆ ತೊಳೆದು ನೀರು ಸೇರಿಸಿ ಅರ್ಧ ಗಂಟೆ ನೆನೆಯಲು ಬಿಡಿ.
ಅಕ್ಕಿಗೆ 2ರಷ್ಟು ಅಳತೆ ನೀರನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ.
ನಂತರ ಶಾಹಿ ಜೀರ್ಗೆ, ಸ್ವಲ್ಪ ಎಣ್ಣೆ, ನೆನಸಿದ ಅಕ್ಕಿ ಸೇರಿಸಿ ಒಮ್ಮೆ ತಿರುವಿ
ಕರಿಮೆಣಸು, ಚೆಕ್ಕೆ, ಲವಂಗ, ಜಾವಿತ್ರಿ, ಸ್ಟಾರ್ ಅನೀಸ್, ಚೆಕ್ಕೆ, ಲವಂಗ, ಏಲಕ್ಕಿ ಎಲ್ಲವನ್ನೂ ಮ್ಯಾರಿನೇಟ್ ಮಾಡಿದ ಚಿಕನ್ ಜೊತೆ ಸೇರಿಸಿ
ಸುಮಾರು 80 ಭಾಗ ಕುಕ್ ಆದ ಬಾಸ್ಮತಿ ಅಕ್ಕಿಯನ್ನು ಮ್ಯಾರಿನೇಟ್ ಮಾಡಿದ ಚಿಕನ್ ಮೇಲೆ ಹರಡಿ.
ಅಕ್ಕಿ ಮೇಲೆ ಸಣ್ಣಗೆ ಹೆಚ್ಚಿದ ಪುದೀನಾ, ಉಳಿದ ಆನಿಯನ್ ಫ್ರೈ, ಕೊತ್ತಂಬರಿ ಸೊಪ್ಪು, ನಿಂಬೆರಸ ಸೇರಿಸಿ.
ಮತ್ತೆ ಮೇಲೆ ಇನ್ನೊಂದು ಲೇಯರ್ ಅಕ್ಕಿ ಸೇರಿಸಿ ಮೇಲೆ ಕೇಸರಿ ಹಾಲು ಹಾಕಿ ಬಿಗಿಯಾಗಿ ಮುಚ್ಚಳ ಮುಚ್ಚಿ
ಅತಿ ಕಡಿಮೆ ಉರಿಯಲ್ಲಿ 15 ನಿಮಿಷ ಕುಕ್ ಮಾಡಿದರೆ ಹೈದರಾಬಾದ್ ಬಿರ್ಯಾನಿ ತಿನ್ನಲು ರೆಡಿ.
ರಾಯತದ ಜೊತೆ ಹೈದರಾಬಾದ್ ಬಿರ್ಯಾನಿ ಎಂಜಾಯ್ ಮಾಡಿ.
ವಿಭಾಗ