ಮಸಾಲೆ ದೋಸೆ, ಸೆಟ್ ದೋಸೆ, ರವೆ ದೋಸೆ; ಎಲ್ಲರೂ ಇಷ್ಟಪಟ್ಟು ತಿನ್ನುವ ದೋಸೆಯ ಮೂಲ ಯಾವುದು? ಯಾವ ರಾಜ್ಯಕ್ಕೆ ಸೇರಿದ್ದು?
ಎಲ್ಲರೂ ಇಷ್ಟಪಟ್ಟುವ ದಕ್ಷಿಣ ಭಾರತದ ತಿಂಡಿಗಳಲ್ಲಿ ದೋಸೆ ಮೊದಲ ಸ್ಥಾನದಲ್ಲಿದೆ. ಈಗಂತೂ ಹೋಟೆಲ್‌ಗಳಲ್ಲಿ ವಿವಿಧ ವೆರೈಟಿ ದೋಸೆಗಳು ದೊರೆಯುತ್ತದೆ. ದೋಸೆ ಯಾವ ರಾಜ್ಯಕ್ಕೆ ಸೇರಿದ್ದು? ಅದರ ಮೂಲವೇನು ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಕೆಲವರು ಅದನ್ನು ಕರ್ನಾಟಕಕ್ಕೆ ಸೇರಿದ್ದು ಎಂದರೆ ಕೆಲವರು ತಮಿಳುನಾಡಿಗೆ ಸೇರಿದವರು ಎನ್ನುತ್ತಾರೆ.
ಹೋಟೆಲ್‌ಗೆ ಹೋದರೆ ಸಾಕು, ಮೆನುವಿನಲ್ಲಿ ವಿಧ ವಿಧವಾದ ರೆಸಿಪಿಗಳು ಕಾಣಸಿಗುತ್ತವೆ. ಆದರೆ ಅದರಲ್ಲಿ ಮೊದಲಿಗೆ ನಮ್ಮ ಮನಸ್ಸಿಗೆ ಬರುವುದು ದೋಸೆ. ಮಸಾಲೆ ದೋಸೆ ಮೊದಲ ಆಯ್ಕೆ ಅದರೆ ಈರುಳ್ಳಿ ದೋಸೆ, ರವಾ ದೋಸೆ, ಸೆಟ್ ದೋಸೆ, ಬೆಣ್ಣೆ ದೋಸೆ ಹೀಗೆ ವಿವಿಧ ದೋಸೆ ರೆಸಿಪಿಗಳು
ಅವಿಷ್ಟೇ ಅಲ್ಲ ಚಿಲ್ಲಿ ದೋಸೆ, ಮೊಟ್ಟೆ ದೋಸೆ, ಮಸಾಲೆ ದೋಸೆ, ಚೀಸ್ ದೋಸೆ, ಪನೀರ್ ದೋಸೆ ಹೀಗೆ ಹೋಟೆಲ್ ಬ್ಯುಸ್ನೆಸ್‌ನಲ್ಲಿ ಪ್ರಯೋಗ ಮಾಡಿದ ಈ ಹೊಸ ರೆಸಿಪಿಗಳು ಇದುವರೆಗೆ ಯಾವುದೂ ವಿಫಲವಾಗಿಲ್ಲ. ಒಂದೊಂದು ವೆರೈಟಿ ದೋಸೆಯೂ ಒಂದೊಂದು ರುಚಿ ನೀಡುತ್ತಾ ಬಂದಿದೆ. ದೋಸೆ ದಕ್ಷಿಣ ಭಾರತದಲ್ಲಿ ಅಚ್ಚುಮೆಚ್ಚಿನ ಉಪಹಾರ ಮಾತ್ರವಲ್ಲ, ಅದೊಂದು ಫೀಲಿಂಗ್ ಅಗಿ ಬದಲಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಹೊರ ರಾಜ್ಯ, ವಿದೇಶದಲ್ಲಿ ಕೂಡಾ ದೋಸೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಎಲ್ಲರೂ ಇಷ್ಟೆಲ್ಲಾ ಇಷ್ಟ ಪಟ್ಟು ತಿನ್ನುವ ದೋಸೆ ಮೂಲದ ಬಗ್ಗೆ ಯಾರಿಗಾದರೂ ಮಾಹಿತಿ ಇದೆಯಾ? ದೋಸೆ ಮೊದಲು ತಯಾರಾಗಿದ್ದು ಎಲ್ಲಿ? ಅದು ತಯಾರಾದ ಸಂದರ್ಭ ಯಾವುದು? ದೋಸೆ ಅಸಲಿಗೆ ಯಾವ ರಾಜ್ಯಕ್ಕೆ ಸೇರಬೇಕು? ಇದರ ಬಗ್ಗೆ ಬಹಳಷ್ಟು ಜನರಿಗೆ ಕುತೂಹಲ ಇದೆ.
ದೋಸೆ ಜನಿಸಿದ್ದು ಯಾವ ರಾಜ್ಯದಲ್ಲಿ?
ದೋಸೆ ಹುಟ್ಟಿದ್ದು ಎಲ್ಲಿ? ಯಾವ ರಾಜ್ಯಕ್ಕೆ ಸೇರಿದ್ದು ಎಂಬುದರ ಬಗ್ಗೆ ನಿರ್ದಿಷ್ಟ ಆಧಾರವಿಲ್ಲ. ಏಕೆಂದರೆ ಕೆಲವರು ದೋಸೆ ಹುಟ್ಟಿದ್ದು ಕರ್ನಾಟಕದಲ್ಲಿ ಎಂದರೆ, ಇನ್ನೂ ಕೆಲವರು ತಮಿಳುನಾಡಿನಲ್ಲಿ ಎನ್ನುತ್ತಾರೆ. ಕರ್ನಾಟಕದ ಕೆಲವು ಭಾಗಗಳನ್ನು ಆಳಿದ ಮೂರನೇ ರಾಜ ಸೋಮೇಶ್ವರನು 12 ನೇ ಶತಮಾನದಲ್ಲಿ ತನ್ನ ಸಂಸ್ಕೃತ ಸಾಹಿತ್ಯದಲ್ಲಿ ದೋಸೆಯ ಬಗ್ಗೆ ಉಲ್ಲೇಖಿಸಿದ್ದಾನೆ ಎಂದು ಹೇಳಲಾಗುತ್ತದೆ. ಅಂದರೆ ನಾವು 12ನೇ ಶತಮಾನದಿಂದಲೂ ದೋಸೆ ತಿನ್ನುತ್ತಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಆದರೆ ಅದಕ್ಕೂ ಮುನ್ನವೇ ದೋಸೆ ಇತ್ತು ಎಂದು ಕೆಲವರು ಹೇಳುತ್ತಾರೆ.
ದೋಸೆಯಂತೆ ಇರುವ ಅಪ್ಪಂ ತಮಿಳುನಾಡಿನಲ್ಲಿ ಪ್ರಾಚೀನ ಕಾಲದಿಂದಲೂ ಇದೆ ಎಂದು ಹೇಳಲಾಗುತ್ತಿದೆ. ಮಧುರೈನಲ್ಲಿ ಅಪ್ಪಂ ಮತ್ತು ಮೇಲ್ ಅಡೈ ತಿಂಡಿಗಳ ಬಗ್ಗೆ ಪ್ರಾಚೀನ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೆಲ್ಲಾ ವಾದ ವಿವಾದಗಳ ನಡುವೆಯೂ ದೋಸೆಯು ಕರ್ನಾಟಕ ಅಥವಾ ತಮಿಳುನಾಡು ಎಲ್ಲಿಗೆ ಸೇರಿದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದೋಸೆಯ ಮೂಲ ಯಾವುದಾದರೇನು? ಇದು ಎಲ್ಲರ ಮೆಚ್ಚಿನ ತಿಂಡಿಯಾಗಿದೆ ಅಷ್ಟು ಸಾಕಲ್ಲವೇ ಅನ್ನೋದು ದೋಸೆ ಪ್ರಿಯರ ಆಂಬೋಣ.
ದೋಸೆಯಲ್ಲಿದೆ ಅಗತ್ಯ ಪೋಷಕಾಂಶಗಳು
ದೋಸೆಯ ಬಗ್ಗೆ ಆಯುರ್ವೇದಲ್ಲಿ ಕೂಡಾ ಉಲ್ಲೇಖಿಸಲಾಗಿದೆ. ಅಕ್ಕಿ, ಉದ್ದಿನ ಕಾಳು, ಮೆಂತ್ಯ ಎಲ್ಲವನ್ನೂ ನೆನೆ ಹಾಕಿ ಆ ಹಿಟ್ಟನ್ನು 8 ಗಂಟೆಗಳ ಕಾಲ ನೆನೆಸಬೇಕು. ನಂತರ ಅದನ್ನು ರುಬ್ಬಿದರೆ ದೋಸೆ ಹಿಟ್ಟು ತಯಾರಾಗುತ್ತದೆ. ಇದನ್ನು ಫರ್ಮೆಂಟ್ ಆಗಲು ಬಿಟ್ಟು ಮರುದಿನ ಹಿಟ್ಟನ್ನು ಕಾವಲಿ ಮೇಲೆ ಹೊಯ್ದುರೆ ದೋಸೆ ರೆಡಿ. ಈ ರೀತಿ ಫರ್ಮೆಂಟ್ ಆದ ಹಿಟ್ಟು ನಮ್ಮ ದೇಹಕ್ಕೆ ಬಹಳ ಅವಶ್ಯಕವಾದ ಪೋಷಕಾಂಶಗಳನ್ನು ಒಳಗೊಂಡಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಆಯುರ್ವೇದಲ್ಲಿ ದೋಸೆಯನ್ನು ದೋಶಕಾ ಎಂದು ಕರೆಯುತ್ತಾರೆ. ಅಮೆರಿಕದಂಥ ಹೊಸ ದೇಶಗಳಲ್ಲಿ ದೋಸೆ ಮಳಿಗೆಗಳು ಹೆಚ್ಚಾಗುತ್ತಿವೆ. ಪ್ರಸ್ತುತ ಸುಮಾರು 70ಕ್ಕೂ ಹೆಚ್ಚು ವೆರೈಟಿ ದೋಸೆಗಳನ್ನು ತಯಾರಿಸಲಾಗುತ್ತಿದೆ.
ಈ ದೋಸೆಯನ್ನು ಯಾರು ಕಂಡುಹಿಡಿದರೋ ಗೊತ್ತಿಲ್ಲ. ಆದರೆ ಅದನ್ನು ಮೊದಲು ತಯಾರಿಸಿದವರಿಗೆ ನಾವು ಕೈ ಮುಗಿಯಲೇಬೇಕು ಎನ್ನುತ್ತಾರೆ ದೋಸೆ ಪ್ರಿಯರು.
ವಿಭಾಗ