ಕಪ್‌ ಕೇಕ್‌ ಬೇಕು ಅಂತ ಮಕ್ಕಳು ಹಟ ಮಾಡ್ತಿದ್ದಾರಾ? ಕೇಕ್‌ ಮೌಲ್ಡ್‌ , ಮೈದಾಹಿಟ್ಟು ಏನೂ ಬೇಡ ಹೀಗೆ ಮಾಡಿ ಕೊಡಿ; ರೆಸಿಪಿ-food news simple oreo cup cake recipe for kids how to prepare oreo cup cake baking recipes rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕಪ್‌ ಕೇಕ್‌ ಬೇಕು ಅಂತ ಮಕ್ಕಳು ಹಟ ಮಾಡ್ತಿದ್ದಾರಾ? ಕೇಕ್‌ ಮೌಲ್ಡ್‌ , ಮೈದಾಹಿಟ್ಟು ಏನೂ ಬೇಡ ಹೀಗೆ ಮಾಡಿ ಕೊಡಿ; ರೆಸಿಪಿ

ಕಪ್‌ ಕೇಕ್‌ ಬೇಕು ಅಂತ ಮಕ್ಕಳು ಹಟ ಮಾಡ್ತಿದ್ದಾರಾ? ಕೇಕ್‌ ಮೌಲ್ಡ್‌ , ಮೈದಾಹಿಟ್ಟು ಏನೂ ಬೇಡ ಹೀಗೆ ಮಾಡಿ ಕೊಡಿ; ರೆಸಿಪಿ

ಕೇಕ್‌ ವೆರೈಟಿಗಳಲ್ಲಿ ಮಕ್ಕಳಿಗೆ ಹೆಚ್ಚು ಇಷ್ಟ ಆಗೋದು ಕಪ್‌ ಕೇಕ್‌ಗಳು. ಒಂದು ವೇಳೆ ಮನೆಯಲ್ಲಿ ನಿಮ್ಮ ಮಕ್ಕಳು ಕಪ್‌ ಕೇಕ್‌ ಬೇಕು ಅಂತ ಹಟ ಹಿಡಿದರೆ ಈ ರೀತಿ ಕೇಕ್‌ ಮಾಡಿಕೊಡಿ. ಇದಕ್ಕೆ ಕಪ್‌ ಕೇಕ್‌ ಮೌಲ್ಡ್‌ ಬೇಕಿಲ್ಲ, ಮೈದಾ ಹಿಟ್ಟು ಕೂಡಾ ಅವಶ್ಯಕತೆಯಿಲ್ಲ.

ಕಪ್‌ ಕೇಕ್‌ ಬೇಕು ಅಂತ ಮಕ್ಕಳು ಹಠ ಮಾಡ್ತಿದ್ದಾರಾ? ಕೇಕ್‌ ಮೌಲ್ಡ್‌ , ಮೈದಾಹಿಟ್ಟು ಏನೂ ಬೇಡ ಹೀಗೆ ಮಾಡಿ ಕೊಡಿ; ರೆಸಿಪಿ
ಕಪ್‌ ಕೇಕ್‌ ಬೇಕು ಅಂತ ಮಕ್ಕಳು ಹಠ ಮಾಡ್ತಿದ್ದಾರಾ? ಕೇಕ್‌ ಮೌಲ್ಡ್‌ , ಮೈದಾಹಿಟ್ಟು ಏನೂ ಬೇಡ ಹೀಗೆ ಮಾಡಿ ಕೊಡಿ; ರೆಸಿಪಿ (PC: @mighascooking)

ಮೊದಲೆಲ್ಲಾ ಬರ್ತ್‌ಡೇಗೆ ಮಾತ್ರ ಕೇಕ್‌ ಕಟಿಂಗ್‌ ಮಾಡಲಾಗುತ್ತಿತ್ತು. ಆದರೆ ಈಗ ನಾಮಕರಣ, ನಿಶ್ಚಿತಾರ್ಥ, ಮದುವೆ, ಗೃಹಪ್ರವೇಶ, ಆನಿವರ್ಸರಿ ಸೇರಿದಂತೆ ಬಹುತೇಕ ಎಲ್ಲಾ ಶುಭ ಸಮಾರಂಭವನ್ನು ಕೇಕ್‌ ಕಟ್‌ ಮಾಡಿ ಸಂಭ್ರಮಿಸಲಾಗುತ್ತಿದೆ.

ವೆಲ್‌ವೆಟ್‌ ಕೇಕ್‌, ಚೀಸ್‌ ಕೇಕ್‌, ಪೈನಾಪಲ್‌ ಕೇಕ್‌, ಚಾಕೊಲೇಟ್‌ ಕೇಕ್‌ ಸೇರಿದಂತೆ ಈಗಂತೂ ಮಾರುಕಟ್ಟೆಯಲ್ಲಿ ವೆರೈಟಿ ಕೇಕ್‌ಗಳು ದೊರೆಯುತ್ತದೆ. ಅದರಲ್ಲಿ ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನೋದು ಕಪ್‌ ಕೇಕ್.‌ ಮಕ್ಕಳ ಬರ್ತ್‌ಡೇ ಪಾರ್ಟಿಯಲ್ಲಿ ಈ ಕಪ್‌ ಕೇಕ್‌ ಇರಲೇಬೇಕು. ಮನೆಯಲ್ಲಿ ಕೂಡಾ ಮಕ್ಕಳು ಕಪ್‌ ಕೇಕ್‌ ಮಾಡಿಕೊಡುವಂತೆ ಆಗ್ಗಾಗ್ಗೆ ಅಮ್ಮನಿಗೆ ಕೇಳುತ್ತವೆ. ನಿಮ್ಮ ಬಳಿ ಕಪ್‌ ಮೌಲ್ಡ್‌ ಇಲ್ಲದಿದ್ದರೂ ಪರವಾಗಿಲ್ಲ. ಕೇಕ್‌ ತಯಾರಿಸಲು 2 ಪ್ಯಾಕ್‌ ಓರಿಯೋ ಬಿಸ್ಕೆಟ್‌, ಬೇಕಿಂಗ್‌ ಸೋಡಾ ಸ್ವಲ್ಪ ಹಾಲು ಇದ್ದರೆ ಸಾಕು. ಓರಿಯೋ ಕಪ್‌ ಕೇಕ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ನೋಡೋಣ.

ಓರಿಯೋ ಕಪ್‌ ಕೇಕ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಓರಿಯೋ ಬಿಸ್ಕೆಟ್‌ - 2 ಪ್ಯಾಕ್‌

ಸಕ್ಕರೆ ಪುಡಿ - 1 ಟೇಬಲ್‌ ಸ್ಪೂನ್‌

ಬೇಕಿಂಗ್‌ ಪೌಡರ್‌ - 1 ಟೀ ಸ್ಪೂನ್‌

ಹಾಲು 1/2 ಕಪ್‌

ಚಿಕ್ಕ ಪೇಪರ್‌ ಕಪ್‌ಗಳು - ಅಗತ್ಯವಿರುವಷ್ಟು

ಓರಿಯೋ ಕಪ್‌ ಕೇಕ್‌ ತಯಾರಿಸುವ ವಿಧಾನ

ಬಿಸ್ಕೆಟ್‌ಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ

ಇದರೊಂದಿಗೆ ಸಕ್ಕರೆ ಪುಡಿ ಸೇರಿಸಿಕೊಳ್ಳಿ

ಜೊತೆಗೆ ಬೇಕಿಂಗ್‌ ಪೌಡರ್‌ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ

ಅವಶ್ಯವಿರುವಷ್ಟು ಹಾಲು ಸೇರಿಸಿ ಮಿಕ್ಸ್‌ ಮಾಡಿ

ಪೇಪರ್‌ ಕಪ್‌ಗಳಿಗೆ ಸ್ವಲ್ಪ ಎಣ್ಣೆ ಸವರಿ ಗ್ರೀಸ್‌ ಮಾಡಿ

ಕೇಕ್‌ ಮಿಶ್ರಣವನ್ನು ಎಲ್ಲಾ ಪೇಪರ್‌ ಕಪ್‌ಗಳಿಗೂ ಮುಕ್ಕಾಲು ಭಾಗ ಫಿಲ್‌ ಮಾಡಿ

ಕುಕ್ಕರ್‌ ಅಥವಾ ಬೇರೆ ಪಾತ್ರೆಯೊಳಗೆ ಪೇಪರ್‌ ಕಪ್‌ಗಳನ್ನು ಇಟ್ಟು 30 ನಿಮಿಷ ಬೇಕ್‌ ಮಾಡಿ

ಮಕ್ಕಳು ಇಷ್ಟಪಡುವ ಕಪ್‌ ಕೇಕನ್ನು ಅವರಿಗೆ ಕೊಡಿ, ಖಂಡಿತ ಇಷ್ಟಪಟ್ಟು ತಿನ್ನುತ್ತಾರೆ

mysore-dasara_Entry_Point