ಭಾರತೀಯ ಮೂಲದ ಖಾದ್ಯ ಈಗ ದಕ್ಷಿಣ ಆಫ್ರಿಕಾ ಜನರ ಮೆಚ್ಚಿನ ತಿಂಡಿ; ಈ ಬನ್ನಿ ಚೌ ಹುಟ್ಟಿದ ಕಥೆ ಹೀಗಿದೆ
ಬಹಳಷ್ಟು ಖಾದ್ಯಗಳು ನಮ್ಮ ದೇಶದಲ್ಲಿ ಹುಟ್ಟಿದರೂ ಅದು ವಿದೇಶಗಳಲ್ಲಿ ಬಹಳ ಫೇಮಸ್ ಆಗಿದೆ. ಕೆಲವೊಂದು ಡಿಶ್‌ಗಳು ಈಗ ಭಾರತದಲ್ಲಿ ಉಳಿದೇ ಇಲ್ಲ. ಆ ಖಾದ್ಯಗಳಲ್ಲಿ ಬನ್ನಿ ಚೌ ಕೂಡಾ ಒಂದು. ಇದು ಈಗ ದಕ್ಷಿಣ ಆಫ್ರಿಕಾ ಜನರ ಮೋಸ್ಟ್ ಫೇವರೆಟ್ ತಿಂಡಿಯಾಗಿದೆ.
ಭಾರತದ ಎಷ್ಟೋ ಖಾದ್ಯಗಳು ವಿದೇಶದಲ್ಲಿ ಬಹಳ ಫೇಮಸ್ ಆಗಿದೆ. ಈ ತಿಂಡಿಗಳನ್ನು ವಿದೇಶಿಗರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಭಾರತದಲ್ಲೆ ಹುಟ್ಟಿದ ಕೆಲವೊಂದು ಖಾದ್ಯಗಳು ಈಗ ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚು ಮನೆ ಮಾತಾಗಿದೆ. ಅಲ್ಲದೆ, ಕೆಲವೊಂದು ಇಲ್ಲಿ ತಿನ್ನಲು ಸಿಗುವುದೇ ಇಲ್ಲ. ಈ ಖಾದ್ಯವನ್ನು ತಿನ್ನಲು ಹೊರ ದೇಶಕ್ಕೆ ಹೋಗಬೇಕು. ಅದರಲ್ಲಿ ಬನ್ನಿ ಚೌ ಕೂಡಾ ಒಂದು.
ದಕ್ಷಿಣ ಆಫ್ರೀಕಾದಲ್ಲಿ ಫೇಮಸ್ ಆಗಿರುವ ಬನ್ನಿ ಚೌ
ಬನ್ನಿ ಚೌ, ಭಾರತೀಯ ಖಾದ್ಯ ಆದರೆ ಈಗ ಭಾರತದಿಂದ ಕಣ್ಮರೆಯಾಗಿದೆ. ಈ ಖಾದ್ಯವನ್ನು ತಿನ್ನಬೇಕಾದರೆ ಹೊರ ದೇಶಕ್ಕೆ ಹೋಗಬೇಕು. ಅದರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಇವುಗಳನ್ನು ತಿನ್ನುವವರೇ ಹೆಚ್ಚು. ಬನ್ನಿ ಚೌ, ಬ್ರೆಡ್‌ನಿಂದ ತಯಾರಿಸಿದ ಖಾದ್ಯ. ಬ್ರೆಡ್ ಮಾಡಿದ ನಂತರ, ಅದನ್ನು ತಟ್ಟೆಯಲ್ಲಿ ಹಾಕಿ ಮತ್ತು ಮಸಾಲೆಯನ್ನು ಹಾಕಿ ಸರ್ವ್ ಮಾಡಲಾಗುತ್ತದೆ. ಆದರೆ ಇದನ್ನು ಫೋರ್ಕ್ ಅಥವಾ ಚಮಚದಿಂದ ತಿನ್ನಲಾಗುವುದಿಲ್ಲ. ಕೈಯಿಂದ ಮಾತ್ರ ತಿನ್ನಬೇಕಾಗುತ್ತದೆ. ಬ್ರೆಡ್ ಮೇಲ್ಭಾಗವನ್ನು ತೆಗೆದುಹಾಕಿ ಮತ್ತು ಅದನ್ನು ಸ್ವಲ್ಪ ಆಳವಾಗಿ ಮಾಡಿ. ಆ ಆಳವಾದ ಪ್ರದೇಶದಲ್ಲಿ ಗ್ರೇವಿಯನ್ನು ಇಡಲಾಗುತ್ತದೆ. ಇದು ದಕ್ಷಿಣ ಆಫ್ರಿಕಾದ ಡರ್ಬನ್ ಪ್ರದೇಶದಲ್ಲಿ ರಸ್ತೆ ಬದಿ ಆಹಾರವಾಗಿ ಫೇಮಸ್ ಆಗಿದೆ.
ಅಷ್ಟಕ್ಕೂ ಇದನ್ನು ದಕ್ಷಿಣ ಆಫ್ರಿಕಾಗೆ ಪರಿಚಯಿಸಿದವರು ನಮ್ಮ ಭಾರತೀಯರೇ. ದಕ್ಷಿಣ ಆಫ್ರಿಕಾದ ಡರ್ಬನ್‌ಗೆ ಕಾರ್ಮಿಕರಾಗಿ ಹೋಗುತ್ತಿದ್ದವರು ಅಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಈ ಬನ್ನಿ ಚೌ ರೆಸಿಪಿಯನ್ನು ಪರಿಚಯಿಸಿದರು. ಈಗ ಇದು ಆಫ್ರಿಕಾದಲ್ಲಿ ಬಹಳ ಫೇಮಸ್ ಆಗಿದೆ. ಇದನ್ನು ಬಡವರ ಆಹಾರ ಎಂದು ಗುರುತಿಸಲಾಗಿದೆ. ಇದರು ರುಚಿಯಲ್ಲೂ ಬಹಳ ಅದ್ಭುತವಾಗಿದೆ. ಹಾಗೇ ಬನ್ನಿ ಚೌ ಎಂಬ ತಮಾಷೆಯ ಹೆಸರಿನ ಹಿಂದೆ ಒಂದು ಕಾರಣವಿದೆ.
ಭಾರತೀಯ ಕಾರ್ಮಿಕರು ಪರಿಚಯಿಸಿದ ಖಾದ್ಯ
ಆ ಸಮಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹೋದ ಭಾರತೀಯ ಕಾರ್ಮಿಕರನ್ನು ಬನಿಯಾ ಎಂದು ಕರೆಯಲಾಗುತ್ತಿತ್ತು. ದಿನವೂ ಸಿಗುವ ಆಹಾರವಾಗಿರುವುದರಿಂದ ಇದನ್ನು ಬನ್ನಿ ಚೌ ಎಂದು ಕರೆಯುತ್ತಿದ್ದರು ಎನ್ನುತ್ತಾರೆ. ಇದು ಸಂಪೂರ್ಣ ಸಸ್ಯಾಹಾರಿ. ಬ್ರೆಡ್ ಮಧ್ಯದಲ್ಲಿ ತರಕಾರಿಗಳನ್ನು ಬೇಯಿಸಲಾಗುತ್ತದೆ . ಆದರೆ ಈಗ ಮಾಂಸಾಹಾರಿಗಳೂ ಬನ್ನಿ ಚೌ ಅಡುಗೆ ಆರಂಭಿಸಿದ್ದಾರೆ.
ತರಕಾರಿ ಗ್ರೇವಿಯ ಬದಲಿಗೆ ಮೊಟ್ಟೆಯ ಕರಿ ಮತ್ತು ಮಟನ್ ಕರಿಗಳನ್ನು ಬಳಸಲಾಗುತ್ತದೆ. ಈ ತಿಂಡಿಯ ಜೊತೆಗೆ ತುರಿದ ಕ್ಯಾರೆಟ್ ಇರಬೇಕು. ಬನ್ನಿ ಚೌ ಅನ್ನು ಕ್ಯಾರೆಟ್ ಸಲಾಡ್ ಜೊತೆ ಸೇವಿಸಿದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಭಾರತದಲ್ಲಿ ಮಾತ್ರ ಇದ್ದ ಈ ಖಾದ್ಯ ಈಗ ಕಣ್ಮರೆಯಾಗಿದೆ. ಆದರೆ ಇನ್ನೂ ಯಾರದ್ದಾದರೂ ಮನೆಯಲ್ಲಿ ಈ ಖಾದ್ಯವನ್ನು ತಯಾರಿಸುವರೋ ಇಲ್ಲವೋ ಗೊತ್ತಿಲ್ಲ.
ವಿಭಾಗ