Sambar Recipe: ದೀಪಾವಳಿ ಹಬ್ಬಕ್ಕೆ ತೊಗರಿಬೇಳೆ ಬಳಸದೆ ತಯಾರಿಸಿ ರುಚಿಯಾದ ಹೂರಣದ ಸಾಂಬಾರ್
Sambar Recipe: ಬೆಳಕಿನ ಹಬ್ಬ ದೀಪಾವಳಿ 5 ದಿನಗಳ ಆಚರಣೆ. ಇಂದು ಬಲಿಪಾಡ್ಯಮಿ, ದೀಪಾವಳಿಯ 4ನೇ ದಿನ. ಬೆಳಕಿನ ಹಬ್ಬದಂದು ಪೂಜೆ, ಪಟಾಕಿ ಹೊಡೆಯುವುದು ಸೇರಿದಂತೆ ವಿವಿಧ ಆಚರಣೆಗಳ ಜೊತೆಗೆ ವಿವಿಧ ರೀತಿಯ ಅಡುಗೆ ಪರಿಮಳ ಮನೆಯನ್ನು ಆವರಿಸುತ್ತದೆ. ಸಾಮಾನ್ಯವಾಗಿ ಎಲ್ಲಾ ಹಬ್ಬಗಳಲ್ಲೂ ಹೋಳಿಗೆ ತಯಾರಿಸುತ್ತೇವೆ. ಇದು ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ.
Sambar Recipe: ಹೋಳಿಗೆ ಮಾಡಿದಾಗಲೆಲ್ಲಾ ಬಹುತೇಕರ ಮನೆಯಲ್ಲಿ ಹೂರಣದ ಸಾಂಬಾರು ತಯಾರಿಸಲಾಗುತ್ತದೆ. ತೊಗರಿಬೇಳೆ ಬಳಸದೆ ಅಷ್ಟೇ ರುಚಿಯಾದ ಸಾಂಬಾರ್ ತಯಾರಿಸಬಹುದು. ಇದನ್ನು ಹೋಳಿಗೆ ಸಾಂಬಾರ್, ಒಬ್ಬಟ್ಟು ಸಾಂಬಾರ್, ಹೂರಣದ ಸಾಂಬಾರ್ ಎಂದೆಲ್ಲಾ ಕರೆಯಲಾಗುತ್ತದೆ.
ಹೂರಣದ ಸಾಂಬಾರ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಕಡ್ಲೆಬೇಳೆ - 1 ಕಪ್
- ಒಬ್ಬಟ್ಟಿನ ಹೂರಣ - 2 ಸ್ಪೂನ್
- ಈರುಳ್ಳಿ - 2
- ಟೊಮೆಟೊ - 1
- ಕರಿಮೆಣಸು - 1/2 ಟೀ ಸ್ಪೂನ್
- ಕರಿಬೇವು - 2 ಎಸಳು
- ತೆಂಗಿನ ತುರಿ - 1 ಕಪ್
- ಜೀರ್ಗೆ - 1 ಟೀ ಸ್ಪೂನ್
- ಬ್ಯಾಡಗಿ ಮೆಣಸಿನಕಾಯಿ - 5
- ಒಣ ಮೆಣಸಿನಕಾಯಿ - 4
- ಸಾಂಬಾರ್ ಪುಡಿ - 3 ಟೇಬಲ್ ಚಮಚ
- ಎಣ್ಣೆ - ಒಗ್ಗರಣೆಗೆ
- ಹುಣಿಸೆ ನೀರು - ಅರ್ಧ ಕಪ್
- ಕೊತ್ತಂಬರಿ ಸೊಪ್ಪು - 1/2 ಕಟ್ಟು
- ಉಪ್ಪು - ರುಚಿಗೆ ತಕ್ಕಷ್ಟು
ಹೂರಣದ ಸಾಂಬಾರ್ ತಯಾರಿಸುವ ವಿಧಾನ
ಕಡ್ಲೆಬೇಳೆಯನ್ನು ತೊಳೆದು ಕುಕ್ಕರ್‌ನಲ್ಲಿ ಬೇಯಿಸಿಕೊಂಡು ಆ ನೀರನ್ನು ಪ್ರತ್ಯೇಕವಾಗಿ ತೆಗೆದಿಡಿ
ಕಡ್ಲೆಬೇಳೆ, ಬೆಲ್ಲ, ಏಲಕ್ಕಿ ಸೇರಿಸಿ ಹೋಳಿಗೆ ಹೂರಣ ಮಾಡಿಕೊಳ್ಳಿ
ಒಂದು ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಕರಿಮೆಣಸು, ಜೀರ್ಗೆ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ
ಬೇಕಿದ್ದರೆ ಬೆಳ್ಳುಳ್ಳಿ ಕೂಡಾ ಬಳಸಬಹುದು, ಇದರೊಂದಿಗೆ ಟೊಮೆಟೊ, ಉಪ್ಪು ಸೇರಿಸಿ ಮೆತ್ತಗಾಗುವರೆಗೂ ಹುರಿದು ಸ್ಟೋವ್ ಆಫ್ ಮಾಡಿ
ಹುರಿದ ಮಿಶ್ರಣ ತಣ್ಣಾಗಾದಾಗ, ಸ್ವಲ್ಪ ಖಾರದ ಪುಡಿ, ಹೂರಣ, ಕಡ್ಲೆಬೇಳೆ ಬೇಯಿಸಿದ ನೀರು, ತೆಂಗಿನ ತುರಿ ಸೇರಿಸಿ ಗ್ರೈಂಡ್ ಮಾಡಿ
ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಒಣಮೆಣಸಿನಕಾಯಿ, ಕರಿಬೇವು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ
ಇದಕ್ಕೆ ಹೂರಣದ ನೀರು, ಕಡ್ಲೆಬೇಳೆ ಬೇಯಿಸಿಕೊಂಡು ನೀರು, ಗ್ರೈಂಡ್ ಮಾಡಿಕೊಂಡ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿ
ಸಾಂಬಾರ್ ಕುದಿಯಲು ಆರಂಭವಾದಾಗ ಹುಣಿಸೆ ನೀರು, ಸ್ವಲ್ಪ ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ
10 ನಿಮಿಷ ಮಧ್ಯಮ ಉರಿಯಲ್ಲಿ ಕುಕ್ ಮಾಡಿ ನಂತರ ಸ್ಟೋಫ್ ಆಫ್ ಮಾಡಿ.
ಗಮನಿಸಿ: ಟೊಮೆಟೊ ಬಳಸುವುದರಿಂದ ಹುಣಿಸೆ ಹುಳಿಯನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿಕೊಳ್ಳಿ. ಎರಡೂ ಸಮ ಪ್ರಮಾಣದಲ್ಲಿರಲಿ.
ವಿಭಾಗ