Food: ನಿಮ್ಮ ಪುಟಾಣಿಗಳ ಲಂಚ್ ಬಾಕ್ಸ್ ಹೇಗಿರಬೇಕು; ಈ ಸಲಹೆ ಸೂಚನೆಗಳು ನಿಮಗೆ ಹೆಲ್ಪ್ ಆಗಬಹುದು ನೋಡಿ
Kids Lunch Box: ನಿಮ್ಮ ಮಗು ಪ್ರೀಕೆಜಿ, ಎಲ್‌ಕೆಜಿ ಅಥವಾ ಯುಕೆಜಿ ಆಗಿದ್ದಲ್ಲಿ ಆ ಮಗುವಿನ ಬ್ಯಾಗ್ , ಲಂಚ್ ಬ್ಯಾಗ್ ಕೂಡಾ ಚಿಕ್ಕದಾಗಿರುತ್ತದೆ. ಆದ್ದರಿಂದ ಅದರೊಳಗೆ ಹಿಡಿಸಬಹುದಾದ ಡಬ್ಬಿಯನ್ನು ಖರೀದಿಸಿ. ಹೆಚ್ಚು ಊಟ ಹಿಡಿಯಲಿ ಎಂಬ ಕಾರಣಕ್ಕೆ ಅತಿ ದೊಡ್ಡ, ಕಡಿಮೆ ಹಿಡಿಯಲಿ ಎಂಬ ಕಾರಣಕ್ಕೆ ಅತಿ ಚಿಕ್ಕ ಲಂಚ್ ಬಾಕ್ಸ್ ಬೇಡ.
Kids Lunch Box: ಬೆಳಗ್ಗೆ ಎದ್ದು ಮನೆಯ ಇತರ ಕೆಲಸಗಳೊಂದಿಗೆ ಮಕ್ಕಳ ಲಂಚ್ ಬಾಕ್ಸ್ ರೆಡಿ ಮಾಡೋದು ಗೃಹಿಣಿಯರಿಗೆ ಒಂದು ದೊಡ್ಡ ಸವಾಲು. ಆದರೆ ಕೆಲವೊಮ್ಮೆ ನೀವು ಮಾಡಿದ ತಿಂಡಿಯನ್ನು ಮಕ್ಕಳ ಟಿಫನ್ ಬಾಕ್ಸ್‌ಗೆ ಹಾಕಿದಾಗ ಅದು ಸೋರುವುದು, ಚೆಲ್ಲುವ ಸಮಸ್ಯೆ ಹೆಚ್ಚಾಗಿರುತ್ತದೆ. ಇದರಿಂದ ಆ ತಿಂಡಿ ಮಗುವಿನ ಬಟ್ಟೆ ಮೇಲೆ ಬಿದ್ದು ಕೊಳೆಯಾಗಬಹುದು. ಎಲ್ಲಾ ಹೊರಗೆ ಚೆಲ್ಲುವುದರಿಂದ ಮಗುವಿಗೆ ಏನೂ ತಿನ್ನಲು ಸಿಗದೆ ಇರಬಹುದು.
ಈ ಕಾರಣದಿಂದಲೇ ನೀವು ಮಗುವಿಗೆ ಲಂಚ್ ಬಾಕ್ಸ್ ಖರೀದಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಡಬೇಕು. ನೀವು ಮೊದಲ ಬಾರಿಗೆ ನಿಮ್ಮ ಕಂದನನ್ನು ಸ್ಕೂಲ್‌ಗೆ ಕಳಿಸುತ್ತಿದ್ದರೆ, ಮಗುವಿಗೆ ಲಂಚ್ ಬಾಕ್ಸ್ ಖರೀದಿಸಬೇಕು ಎಂದಾದರೆ ಇಲ್ಲಿ ತಿಳಿಸಿರುವ ಈ ಟಿಪ್ಸ್ ನಿಮಗೆ ಉಪಯೋಗವಾಗಬಹುದು.
ಹೆಚ್ಚು ಟೈಟ್ ಇಲ್ಲದಿರಲಿ
ಸ್ಕೂಲ್‌ನಲ್ಲಿ ಮಗುವಿಗೆ ಆಯಾಗಳು ಅಥವಾ ಟೀಸರ್‌ಗಳು ಲಂಚ್ ಬಾಕ್ಸ್ ಓಪನ್ ಮಾಡಿಕೊಡುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳೇ ಅದನ್ನು ಓಪನ್ ಮಾಡಲು ಇಷ್ಟಪಡುತ್ತಾರೆ. ಡಬ್ಬಿ ಒಳಗಿನ ಆಹಾರ ಸಾಮಗ್ರಿ ಚೆಲ್ಲಬಾರದು ಎಂಬ ಕಾರಣಕ್ಕೆ ಅತಿ ಟೈಟ್ ಆದ ಲಂಚ್ ಬಾಕ್ಸ್ ಖರೀದಿಸಬೇಡಿ. ಮಗು, ಸುಲಭವಾಗಿ ತೆಗೆಯಬಹುದಾದ, ಮುಚ್ಚಬಹುದಾದ ಡಬ್ಬಿಗಳನ್ನು ಖರೀದಿಸಿ ತನ್ನಿ.
ಅತಿ ದೊಡ್ಡದೂ ಬೇಡ, ಚಿಕ್ಕದೂ ಬೇಡ
ನಿಮ್ಮ ಮಗು ಪ್ರೀಕೆಜಿ, ಎಲ್‌ಕೆಜಿ ಅಥವಾ ಯುಕೆಜಿ ಆಗಿದ್ದಲ್ಲಿ ಆ ಮಗುವಿನ ಬ್ಯಾಗ್ , ಲಂಚ್ ಬ್ಯಾಗ್ ಕೂಡಾ ಚಿಕ್ಕದಾಗಿರುತ್ತದೆ. ಆದ್ದರಿಂದ ಅದರೊಳಗೆ ಹಿಡಿಸಬಹುದಾದ ಡಬ್ಬಿಯನ್ನು ಖರೀದಿಸಿ. ಹೆಚ್ಚು ಊಟ ಹಿಡಿಯಲಿ ಎಂಬ ಕಾರಣಕ್ಕೆ ಅತಿ ದೊಡ್ಡ, ಕಡಿಮೆ ಹಿಡಿಯಲಿ ಎಂಬ ಕಾರಣಕ್ಕೆ ಅತಿ ಚಿಕ್ಕ ಲಂಚ್ ಬಾಕ್ಸ್ ಬೇಡ. ಮಗು ತಿನ್ನಬಹುದಾದಷ್ಟು ಫುಡ್ ಅದರಲ್ಲಿ ಹಿಡಿಸಿದರೆ ಸಾಕು.
ಗ್ಲಾಸ್ ಬಾಕ್ಸ್ ಬೇಡ
ಮಕ್ಕಳಿಗೆ ಯಾವ ವಸ್ತುಗಳನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಅರಿವು ಇರುವುದಿಲ್ಲ. ಆಕರ್ಷಕವಾಗಿ ಕಾಣಬೇಕೆಂದ ಉದ್ದೇಶದಿಂದ ಮಕ್ಕಳಿಗೆ ಗ್ಲಾಸ್ ಲಂಚ್ ಬಾಕ್ಸ್ ತಂದೀರಾ ಎಚ್ಚರ. ಇದರಿಂದ ಅಪಾಯವೇ ಹೆಚ್ಚು. ಅದರ ಬದಲಿಗೆ ಅಪ್ಪಿ ತಪ್ಪಿ ಬಾಕ್ಸ್ ಕೆಳ ಬಿದ್ದಾಗ ಅದು ಡ್ಯಾಮೇಜ್ ಆಗದಂತೆ ಇರುವ ಬಾಕ್ಸ್ ಆಯ್ಕೆ ಮಾಡಿಕೊಳ್ಳಿ.
ಪ್ಲಾಸ್ಟಿಕ್ ಬೇಡವೇ ಬೇಡ
ಪ್ಲಾಸ್ಟಿಕ್‌ನಂತ ಕೆಮಿಕಲ್ ಯಾರಿಗೂ ಒಳ್ಳೆಯದಲ್ಲ. ಒಂದು ವೇಳೆ ನೀವು ಬಿಸಿ ಬಿಸಿ ಅನ್ನ ಅಥವಾ ಬೇರೆ ಯಾವುದಾದರೂ ತಿಂಡಿಯನ್ನು ಪ್ಲಾಸ್ಟಿಕ್ ಬಾಕ್ಸ್‌ಗೆ ಹಾಕಿದಾಗ ಅದು ಮೆಲ್ಟ್ ಆಗಿ ಆಹಾರದೊಂದಿಗೆ ಸೇರುತ್ತದೆ. ಇದನ್ನು ಸೇವಿಸುವ ಮಕ್ಕಳಿಗೂ ಬಹಳ ತೊಂದರೆ ಆಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಬದಲಿಗೆ ಸ್ಟೀಲ್ ಬಾಕ್ಸ್‌ಗಳಗಾದರೆ ಉತ್ತಮ.
ನಿಮ್ಮ ಬಜೆಟ್‌ಗೆ ತಕ್ಕಂತೆ ಆಯ್ಕೆ ಮಾಡಿ
ಮಕ್ಕಳಿಗೆ ಲಂಚ್ ಬಾಕ್ಸ್ ಮಾತ್ರವಲ್ಲ, ಅವುಗಳಿಗೆ ಕೊಡಿಸಬೇಕಾದ ಅನೇಕ ವಸ್ತುಗಳಿವೆ. ನೀವು ಲಂಚ್ ಬಾಕ್ಸ್‌ಗೆ ಹೆಚ್ಚು ಹೆಚ್ಚು ಹಣ ಸುರಿದರೆ ಬೇರೆ ವಸ್ತುಗಳನ್ನು ಖರೀದಿಸಲು ಸಮಸ್ಯೆ ಆಗಬಹುದು. ಹಾಗೇ ಮಕ್ಕಳು ಕೆಲವೊಮ್ಮೆ ನೀವು ಕೊಡಿಸಿದ ಲಂಚ್ ಬಾಕ್ಸ್ ಕಳೆದುಕೊಂಡು ಬರಬಹುದು. ಆದ್ದರಿಂದ ಹೆಚ್ಚು ಬೆಲೆಯ ಲಂಚ್ ಬಾಕ್ಸ್ ಕೊಡಿಸಬೇಡಿ.
ಕಂಪಾರ್ಟ್‌ಮೆಂಟ್ ಲಂಚ್ ಬಾಕ್ಸ್ ಖರೀದಿಸಿ
ಮಕ್ಕಳಿಗೆ ಊಟ, ಮೊದಲು ಆಕರ್ಷಕವಾಗಿ ಕಾಣಬೇಕು ಆಗ ಮಾತ್ರ ಅವರು ಇಷ್ಟಪಟ್ಟು ತಿನ್ನುತ್ತಾರೆ. ಮಕ್ಕಳ ಊಟದೊಂದಿಗೆ ಅವರಿಗೆ ಡ್ರೈ ಫ್ರೂಟ್, ಡಿಸೈನ್ ಆಗಿ ಕತ್ತರಿಸಿದ ತರಕಾರಿಗಳು ಇದ್ದರೆ ಖುಷಿ ಪಡುತ್ತಾರೆ. ಆದರೆ ಇವೆಲ್ಲವನ್ನೂ ನೀವು ಒಂದೇ ಬಾಕ್ಸ್‌ಗೆ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಬಾಕ್ಸ್‌ನಲ್ಲಿ ಡಿವೈಡ್ ಆಗಿರವಂತ ಬಾಕ್ಸ್ ಖರೀದಿಸಿ.
ಮುಂದಿನ ಬಾರಿ ನಿಮ್ಮ ಪುಟಾಣಿಗಳಿಗೆ ಲಂಚ್ ಬಾಕ್ಸ್ ಖರೀದಿಸಲು ಹೋದಾಗ ಈ ಅಂಶಗಳನ್ನು ಗಮನದಲ್ಲಿಡಿ.
ವಿಭಾಗ