ಭಾರತೀಯರ ಫೇವರಿಟ್ ಫುಡ್ ಬಿರಿಯಾನಿ; ಇಲ್ಲಿದೆ ಒಂದಲ್ಲ ಎರಡಲ್ಲ 11 ವೆರೈಟಿ ಬಿರಿಯಾನಿಗಳ ಲಿಸ್ಟ್‌, ಇದ್ರಲ್ಲಿ ನಿಮ್ಗೆ ಯಾವುದಿಷ್ಟ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತೀಯರ ಫೇವರಿಟ್ ಫುಡ್ ಬಿರಿಯಾನಿ; ಇಲ್ಲಿದೆ ಒಂದಲ್ಲ ಎರಡಲ್ಲ 11 ವೆರೈಟಿ ಬಿರಿಯಾನಿಗಳ ಲಿಸ್ಟ್‌, ಇದ್ರಲ್ಲಿ ನಿಮ್ಗೆ ಯಾವುದಿಷ್ಟ

ಭಾರತೀಯರ ಫೇವರಿಟ್ ಫುಡ್ ಬಿರಿಯಾನಿ; ಇಲ್ಲಿದೆ ಒಂದಲ್ಲ ಎರಡಲ್ಲ 11 ವೆರೈಟಿ ಬಿರಿಯಾನಿಗಳ ಲಿಸ್ಟ್‌, ಇದ್ರಲ್ಲಿ ನಿಮ್ಗೆ ಯಾವುದಿಷ್ಟ

ಭಾರತದಲ್ಲಿ ಬಿರಿಯಾನಿ ಸಖತ್‌ ಫೇಮಸ್‌. ಇಲ್ಲಿ ಒಂದಲ್ಲ ಎರಡರಲ್ಲ ಹತ್ತು ಹಲವು ಬಗೆಯ ಬಿರಿಯಾನಿಗಳನ್ನು ತಯಾರಿಸಲಾಗುತ್ತೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತದಲ್ಲಿ ಸಿಗುವ 11 ವೈರೆಟಿ ಬಿರಿಯಾನಿಗಳ ಬಗ್ಗೆ ನೀವು ತಿಳಿಯಲೇಬೇಕು.

ಇಲ್ಲಿದೆ ಒಂದಲ್ಲ ಎರಡಲ್ಲ 11 ವೈರೆಟಿ ಬಿರಿಯಾನಿಗಳ ಪರಿಚಯ, ಇದ್ರಲ್ಲಿ ನಿಮ್ಗೆ ಯಾವುದಿಷ್ಟ
ಇಲ್ಲಿದೆ ಒಂದಲ್ಲ ಎರಡಲ್ಲ 11 ವೈರೆಟಿ ಬಿರಿಯಾನಿಗಳ ಪರಿಚಯ, ಇದ್ರಲ್ಲಿ ನಿಮ್ಗೆ ಯಾವುದಿಷ್ಟ

ಭಾರತದಲ್ಲಿ ಫುಡ್‌ ಡೆಲಿವರಿ ಆಪ್‌ಗಳ ಮೂಲಕ ಜನರು ಅತಿ ಹೆಚ್ಚು ಆರ್ಡರ್‌ ಮಾಡಿದ ಐಟಂ ಎಂದರೆ ಅದು ಬಿರಿಯಾನಿ. ಭಾರತೀಯರು ಬಿರಿಯಾನಿ ಪ್ರಿಯರು. ಭಾರತದಲ್ಲಿ ಬಿರಿಯಾನಿ ಎಷ್ಟು ಫೇಮಸ್‌ ಎಂದರೆ ಬೀದಿ ಬದಿಯಲ್ಲಿ ಗಾಡಿಯಿಂದ ಹಿಡಿದು ಫೈವ್‌ ಸ್ಟಾರ್‌ ಹೋಟೆಲ್‌ವರೆಗೆ ಬಿರಿಯಾಗಿ ಸಿಗುತ್ತದೆ. ಇಲ್ಲಿ ಹತ್ತಾರು ಬಗೆಯ ಬಿರಿಯಾನಿಗಳು ಲಭ್ಯವಿವೆ.

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರತಿ ರಾಜ್ಯವೂ ತನ್ನದೇ ಆದ ವಿಶೇಷ ಶೈಲಿಯ ಬಿರಿಯಾನಿಯನ್ನು ಹೊಂದಿದೆ. ನೀವು ಬೇರೆ ಬೇರೆ ರಾಜ್ಯಕ್ಕೆ ಪ್ರಯಾಣ ಮಾಡುವವರಾಗಿದ್ದರೆ ಈ ರಾಜ್ಯದ ಬಿರಿಯಾನಿಯನ್ನು ತಪ್ಪದೇ ಟ್ರೈ ಮಾಡಬೇಕು. ಭಾರತದಲ್ಲಿ ಸಿಗುವ 11 ವಿವಿಧ ಬಗೆಯ ಬಿರಿಯಾನಿಗಳ ಬಗ್ಗೆ ಇಲ್ಲಿದೆ ವಿವರ.

1. ಹೈದ್ರಾಬಾದ್‌ ಬಿರಿಯಾನಿ

ಭಾರತದಲ್ಲಿ ಸಿಗುವ ಬಿರಿಯಾನಿಗಳ ಪೈಕಿ ಹೈದ್ರಾಬಾದ್‌ ಬಿರಿಯಾನಿಗೆ ಅಗ್ರಸ್ಥಾನ. ಹೈದರಾಬಾದ್‌ ನಿಜಾಮರು ಈ ಬಿರಿಯಾನಿಯನ್ನು ಮೊದಲು ಕಂಡುಹಿಡಿದರು ಎನ್ನಲಾಗುತ್ತದೆ. ಇದು ಮೊಘಲ್‌ ಹಾಗೂ ದಕ್ಷಿಣ ಭಾರತದ ಅಡುಗಶೈಲಿಯ ಮಿಶ್ರಣವಾಗಿದೆ. ಹೈದ್ರಾಬಾದಿ ಬಿರಿಯಾನಿಯ ರುಚಿಯೇ ಬೇರೆ.

2. ಸಿಂಧಿ ಬಿರಿಯಾನಿ

ಈಗ ಪಾಕಿಸ್ತಾನದಲ್ಲಿರುವ ಸಿಂಧ್‌ ಪ್ರಾಂತ್ಯದವರು ಆರಂಭಿಸಿದ ಬಿರಿಯಾನಿ ಇದು. ಈ ವಿಶೇಷ ಭಕ್ಷ್ಯವು ಮುಸ್ಲಿಮರು ಮತ್ತು ಸಿಖ್ಖರು ಸೇರಿದಂತೆ ವೈವಿಧ್ಯಮಯ ಸಮುದಾಯಗಳ ಪಾಕಪದ್ಧತಿಯ ಸಮೃದ್ಧ ಮಿಶ್ರಣವಾಗಿದೆ.

3. ಅವಧಿ ಬಿರಿಯಾನಿ

ಇದು ಬಿರಿಯಾನಿಗಳಲ್ಲೇ ಅತ್ಯಂತ ಸ್ವಾದಿಷ್ಟ ಪರಿಮಳ ಹೊಂದಿರುವ ಬಿರಿಯಾನಿಯಾಗಿದೆ. ಅವಧ್‌ ನವಾಬರು ಈ ಬಿರಿಯಾನಿಯನ್ನು ಮೊದಲು ತಯಾರಿಸಿದ್ದರು. ಇದು ಮೊಘಲ್, ಪರ್ಷಿಯನ್ ಮತ್ತು ಸ್ಥಳೀಯ ಅಡುಗೆ ಶೈಲಿಗಳ ಮಿಶ್ರಣವಾಗಿದೆ. ಇದು ಭಾರತದಲ್ಲಿ ಸಿಗುವ ಇತರ ಬಿರಿಯಾನಿಗಳಿಗಿಂತ ಭಿನ್ನ ಎಂದರೂ ತಪ್ಪಲ್ಲ.

4. ಕೋಲ್ಕತ್ತಾ ಬಿರಿಯಾನಿ

 ಈ ಸಾಂಪ್ರದಾಯಿಕ ಶೈಲಿಯ ಬಿರಿಯಾನಿಯು ಮೊದಲು ಕೋಲ್ಕತ್ತಾದಲ್ಲಿ ಆರಂಭವಾದ ಕಾರಣ ಇದನ್ನು ಕೋಲ್ಕತ್ತಾ ಬಿರಿಯಾನಿ ಎಂದು ಕರೆಯಲಾಗುತ್ತದೆ. ಇದು ವಿಭಿನ್ನ ಸುವಾಸನೆ ಮತ್ತು ವಿಶಿಷ್ಟ ಸಂಯೋಜನೆಯಿಂದ ಜನಪ್ರಿಯವಾಗಿದೆ. ಬೇರೆಲ್ಲಾ ಬಿರಿಯಾನಿಗಳು ಅಕ್ಕಿ ಮತ್ತು ಮಾಂಸಗಳಿಂದ ರುಚಿ ಪಡೆದರೆ, ಈ ಬಿರಿಯಾನಿ ರುಚಿ ಹೆಚ್ಚಿಸುವುದು ಆಲೂಗೆಡ್ಡೆ.

5. ಥಲ್ಸೆಸರಿ ಬಿರಿಯಾನಿ

 ಇದು ಕೇರಳ ಶೈಲಿಯ ಬಿರಿಯಾನಿ. ಕೇರಳದ ಥಲ್ಸೆಸರಿ ಪಟ್ಟಣದಿಂದ ಬಂದಿರುವ ಬಿರಿಯಾನಿಯಾಗಿರುವ ಕಾರಣ ಇದಕ್ಕೆ ಆ ಹೆಸರು ಬಂದಿದೆ. ಈ ಬಿರಿಯಾನಿ ತಯಾರಿಸಲು ವಿಶಿಷ್ಟವಾದ ಸಣ್ಣ ಅಕ್ಕಿಯನ್ನು ಬಳಸಲಾಗುತ್ತದೆ. ಸ್ಥಳೀಯ ಮಸಾಲೆಗಳ ಪರಿಮಳವು ಬಿರಿಯಾನಿ ರುಚಿಯನ್ನು ದುಪ್ಪಟ್ಟು ಮಾಡುವುದರಲ್ಲಿ ಅನುಮಾನವಿಲ್ಲ.

6. ಮುರದಬಾದಿ ಬಿರಿಯಾನಿ

 ಇದು ಉತ್ತರ ಭಾರತ ಶೈಲಿ ಬಿರಿಯಾನಿ. ಉತ್ತರಪ್ರದೇಶದ ಮೊರದಾಬಾದ್‌ ಮೂಲದ ಬಿರಿಯಾನಿ ಇದಾಗಿದ್ದು, ಅಲ್ಲಿನ ಸಾಂಪ್ರದಾಯಿಕ ಭಕ್ಷ್ಯ ಇದಾಗಿದೆ. ಇದನ್ನು ಚಿಕನ್ ತುಂಡುಗಳು, ಅಕ್ಕಿ, ಹಸಿ ಮೆಣಸಿನಕಾಯಿ, ಗರಂ ಮಸಾಲಾ, ದಪ್ಪ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಲವಂಗ, ದಾಲ್ಚಿನ್ನಿ ಎಲೆಗಳು, ಏಲಕ್ಕಿ, ಜಾಯಿಕಾಯಿ, ಕರಿಮೆಣಸು, ಕೊತ್ತಂಬರಿ, ಫೆನ್ನೆಲ್ ಈ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ತಯಾರಿಸಲಾಗುತ್ತದೆ.

7. ಅಂಬೂರ್‌ ಬಿರಿಯಾನಿ

ಅಂಬೂರ್‌ ಬಿರಿಯಾನಿ ಚೆನ್ನೈ ಶೈಲಿಯ ಬಿರಿಯಾನಿ. ತಮಿಳುನಾಡಿನಿಂದ ಬಂದ ಈ ಖಾದ್ಯವನ್ನು ಆರ್ಕಾಟ್ ನವಾಬರ ಕಾಲದ ಅಡುಗೆಯವರು ಪರಿಚಯಿಸಿದರು. ಇದನ್ನು ಸೀರಗ ಸಾಂಬಾ ಅಕ್ಕಿಯಿಂದ ತಯಾರಿಸಲಾಗುತ್ತದೆ, ಇದನ್ನು ಮಸಾಲೆಯುಕ್ತ ಗ್ರೇವಿ ಮತ್ತು ಕೋಮಲ ಮಾಂಸದೊಂದಿಗೆ ಬೆರೆಸಲಾಗುತ್ತದೆ.

8. ದಿಂಡಿಗಲ್ ಬಿರಿಯಾನಿ

 ತಮಿಳುನಾಡಿನ ಮತ್ತೊಂದು ಜನಪ್ರಿಯ ಶೈಲಿಯಾದ ದಿಂಡಿಗಲ್ ಬಿರಿಯಾನಿಯನ್ನು ಬಿರಿಯಾನಿ ಪ್ರಿಯರು ಒಮ್ಮೆಯಾದ್ರೂ ತಿನ್ನಲೇಬೇಕು. ಇದನ್ನು ಸೀರೆಜ್ ಸಾಂಬಾ ಅಕ್ಕಿಯಿಂದ ತಯಾರಿಸಲಾಗುತ್ತದೆ. ಅದ್ಭುತ ರುಚಿಗೆ ಈ ಬಿರಿಯಾನಿ ಹೆಸರುವಾಸಿಯಾಗಿದೆ.

9. ಮೆಮೋನಿ ಬಿರಿಯಾನಿ

 ಸಿಂಧ್-ಗುಜರಾತ್‌ನ ಸಮ್ಮಿಶ್ರಣದ ಬಿರಿಯಾನಿ ಇದು. ಇದು ಸಿಂಧಿ ಬಿರಿಯಾನಿ ರುಚಿಗಿಂತ ಭಿನ್ನವಾಗಿದೆ. ವಿಭಿನ್ನ ಮಸಾಲೆ ರುಚಿಯ ಮೂಲಕ ಇದು ಹೆಸರು ಗಳಿಸಿದೆ.

10. ದೊನ್ನೆ ಬಿರಿಯಾನಿ

 ಇದು ಬೆಂಗಳೂರಿನ ಸಿಗ್ನೇಚರ್‌ ಡಿಶ್‌ ಎನ್ನಬಹುದು. ಎಲೆ, ಅಡಿಕೆ ಹಾಳೆಯಿಂದ ತಯಾರಿಸಿದ ದೊನ್ನೆಯಲ್ಲಿ ಈ ಬಿರಿಯಾನಿಯನ್ನು ನೀಡಲಾಗುತ್ತದೆ. ಸ್ಥಳೀಯ ಮಸಾಲೆಗಳ ರುಚಿ, ಪರಿಮಳದಿಂದ ಈ ಬಿರಿಯಾನಿ ಜನರ ಮನಸ್ಸು ಗೆದ್ದಿದೆ.

11. ಚೆನ್ನೈ ಭಾಯ್‌ ಬಿರಿಯಾನಿ

ಚೆನ್ನೈನ ಶ್ರೀಮಂತ ಸಾಂಸ್ಕೃತಿಕ ಮಿಶ್ರಣವನ್ನು ಆಚರಿಸುವ ಈ ಖಾದ್ಯವು ಅರಬ್, ಪರ್ಷಿಯನ್ ಮತ್ತು ತಮಿಳು ಅಡುಗೆ ಶೈಲಿಗಳಿಂದ ವಿಭಿನ್ನ ರುಚಿಗಳ ಮಿಶ್ರಣವಾಗಿದೆ. ಸ್ಥಳೀಯರು ಈ ಬಿರಿಯಾನಿಯನ್ನು ಸಖತ್‌ ಇಷ್ಟಪಡುತ್ತಾರೆ.

ನೋಡಿದ್ರಲ್ಲ ಭಾರತದಲ್ಲಿ ಎಷ್ಟೆಲ್ಲಾ ವಿಧದ ಬಿರಿಯಾನಿಗಳಿವೆ. ಈ ಬಿರಿಯಾನಿಗಳನ್ನು ಎಲ್ಲೆಲ್ಲೋ ತಿನ್ನುವುದಕ್ಕಿಂತ ಆ ಜಾಗಕ್ಕೆ ಹೋದಾಗ ಒರಿಜಿನಲ್‌ ರುಚಿಯನ್ನು ಸವಿಯುವುದೇ ಬೆಸ್ಟ್‌.

Whats_app_banner