ಸಿಗಡಿ ಸ್ಪೆಷಲ್‌; ಈ ರೀತಿ ಮಸಾಲೆ ತಯಾರಿಸಿ ಪ್ರಾನ್ಸ್‌ ಪೆಪ್ಪರ್ ಫ್ರೈ ಮಾಡಿ, ಸಿಗಡಿ ತಿನ್ನದವರು ತಿಂತಾರೆ, ಒಮ್ಮೆ ಟ್ರೈ ಮಾಡಿ-food non veg recipes how to make prawn pepper fry at home prawns recipes nonveg sides rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಗಡಿ ಸ್ಪೆಷಲ್‌; ಈ ರೀತಿ ಮಸಾಲೆ ತಯಾರಿಸಿ ಪ್ರಾನ್ಸ್‌ ಪೆಪ್ಪರ್ ಫ್ರೈ ಮಾಡಿ, ಸಿಗಡಿ ತಿನ್ನದವರು ತಿಂತಾರೆ, ಒಮ್ಮೆ ಟ್ರೈ ಮಾಡಿ

ಸಿಗಡಿ ಸ್ಪೆಷಲ್‌; ಈ ರೀತಿ ಮಸಾಲೆ ತಯಾರಿಸಿ ಪ್ರಾನ್ಸ್‌ ಪೆಪ್ಪರ್ ಫ್ರೈ ಮಾಡಿ, ಸಿಗಡಿ ತಿನ್ನದವರು ತಿಂತಾರೆ, ಒಮ್ಮೆ ಟ್ರೈ ಮಾಡಿ

ಮಾಂಸಾಹಾರ ಖಾದ್ಯಗಳಲ್ಲಿ ಅತ್ಯಂತ ರುಚಿಕರವಾಗಿರುವುದು ಸಿಗಡಿ ಎಂದರೆ ತಪ್ಪಲ್ಲ. ಬಹುತೇಕರಿಗೆ ಸಿಗಡಿ ಖಾದ್ಯಗಳು ಇಷ್ಟವಾಗುತ್ತದೆ. ಸಿಗಡಿಯ ಡ್ರೈ ಐಟಂಗಳು ಬಾಯಲ್ಲಿ ನೀರೂರಿಸದೇ ಬಿಡುವುದಿಲ್ಲ. ನಿಮಗೂ ಸಿಗಡಿ ಫೇವರಿಟ್ ಅಂತಾದ್ರೆ ನೀವು ಸಿಗಡಿಯಿಂದ ರುಚಿಕರವಾಗ ಪೆಪ್ಪರ್ ಫ್ರೈ ಮಾಡಿ ತಿನ್ನಿ, ಇದರ ಮಸಾಲೆಯ ರುಚಿಗೆ ನೀವು ಕಳೆದುಹೋಗ್ತೀರಿ.

ಪ್ರಾನ್ಸ್‌ ಪೆಪ್ಪರ್ ಫ್ರೈ
ಪ್ರಾನ್ಸ್‌ ಪೆಪ್ಪರ್ ಫ್ರೈ

ಮಾಂಸಾಹಾರಿಗಳಲ್ಲಿ ಹಲವರಿಗೆ ಸಮುದ್ರಾಹಾರಗಳೆಂದರೆ ಪಂಚಪ್ರಾಣ. ಮೀನು, ಸಿಗಡಿ, ಮರುವಾಯಿಯಂತಹ ಮಾಂಸಗಳ ರುಚಿಯೇ ಬೇರೆ. ಅದರಲ್ಲೂ ಪ್ರಾನ್ಸ್ ಭಿನ್ನ ರುಚಿ ಹೊಂದಿರುತ್ತದೆ. ಇದು ವಿಭಿನ್ನ ಪರಿಮಳವನ್ನೂ ಹೊಂದಿದ್ದು ಹಲವರಿಗೆ ಇಷ್ಟವಾಗುತ್ತದೆ. ದರ ಕೊಂಚ ಜಾಸ್ತಿ ಅಂತಾದ್ರೂ ಖಂಡಿತ ಕೊಟ್ಟ ಹಣಕ್ಕೆ ಮೋಸ ಇರುವುದಿಲ್ಲ.

ಸಿಗಡಿಯಿಂದ ಸಾರು, ಫ್ರೈ, ಸುಕ್ಕಾ, ಘೀ ರೋಸ್ಟ್ ಮುಂತಾದವನ್ನೆಲ್ಲಾ ತಯಾರಿಸಬಹುದು. ನೀವು ಸಿಗಡಿಯಿಂದ ಸ್ಪೆಷಲ್ ಏನಾದ್ರೂ ಮಾಡಬೇಕು ಅಂತಿದ್ರೆ ಪೆಪ್ಪರ್ ಫ್ರೈ ಟ್ರೈ ಮಾಡಬಹುದು. ಇದಕ್ಕೆ ಹೆಚ್ಚಿನ ಮಸಾಲೆಯ ಅಗತ್ಯವಿಲ್ಲ, ಆದರೂ ರುಚಿ ಮಾತ್ರ ಅದ್ಭುತ. ಇದನ್ನ ಮನೆಯಲ್ಲೂ ಕೂಡ ಸುಲಭವಾಗಿ ತಯಾರಿಸಬಹುದು. ನೀವು ಸಿಗಡಿಯಿಂದ ವಿಶೇಷ ಖಾದ್ಯ ಮಾಡಬೇಕು ಅಂತಿದ್ರೆ ಪೆಪ್ಪರ್ ಟ್ರೈ ಮಾಡಿ, ಹೇಗೆ ಮಾಡೋದು ಎನ್ನುವ ವಿವರ ಇಲ್ಲಿದೆ.

ಸಿಗಡಿ ಪೆಪ್ಪರ್‌ ಫ್ರೈಗೆ ಬೇಕಾಗುವ ಸಾಮಗ್ರಿಗಳು

ಸಿಗಡಿ – ಕಾಲು ಕೆಜಿ, ಈರುಳ್ಳಿ – 1 ದೊಡ್ಡದು, ಬೆಳ್ಳುಳ್ಳಿ ಎಸಳು – 3, ಶುಂಠಿ – ಸ್ವಲ್ಪ, ಹಸಿಮೆಣಸು – 4, ಕೊತ್ತಂಬರಿ ಪುಡಿ – 2 ಟೀ ಚಮಚ, ಜೀರಿಗೆ – ಚಿಟಿಕೆ, ಮೆಣಸು – 100 ಗ್ರಾಂ, ಚಕ್ಕೆ – ಅರ್ಧ ಇಂಚು, ಲವಂಗ – ಸ್ವಲ್ಪ, ಏಲಕ್ಕಿ – ಎರಡು, ಎಣ್ಣೆ – ಸ್ವಲ್ಪ, ಉಪ್ಪು – ರುಚಿಗೆ, ಕರಿಬೇವು – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ

ಸಿಗಡಿ ಪೆಪ್ಪರ್ ಫ್ರೈ ಮಾಡುವ ವಿಧಾನ

ಮೊದಲು ಸಿಗಡಿಯನ್ನು ಬಿಡಿಸಿ ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಿ. ಈರುಳ್ಳಿ ಹಾಗೂ ಕರಿಬೇವನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಸ್ವಲ್ಪ ಎಣ್ಣೆ ಬಾಣಲಿಗೆ ಹಾಕಿ ಬಿಸಿಯಾದ ಮೇಲೆ ಧನಿಯಾ ಪುಡಿ, ಜೀರಿಗೆ, ಮೆಣಸು ಹಾಕಿ ಹುರಿಯಿರಿ. ಹುರಿದ ಮಸಾಲ ತಣ್ಣಗಾದ ಮೇಲೆ ರುಬ್ಬಿಕೊಳ್ಳಿ. ಒಲೆಯ ಮೇಲೆ ಬಾಣಲಿ ಇಟ್ಟು ಮಧ್ಯಮ ಉರಿಯಲ್ಲಿ ಬೆಂಕಿ ಇಟ್ಟು ಎಣ್ಣೆ ಹಾಕಿ. ಬಿಸಿಯಾದ ಮೇಲೆ ಚಕ್ಕೆ, ಲವಂಗ, ಒಣಮೆಣಸು ಹಾಕಿ ಹುರಿಯಿರಿ. ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ, ಈರುಳ್ಳಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ನಂತರ ಈ ಮಿಶ್ರಣಕ್ಕೆ ತೊಳೆದಿಟ್ಟುಕೊಂಡ ಸಿಗಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಹೊತ್ತು ಬೇಯಲು ಬಿಡಿ.

ಒಂದು ನಿಮಿಷದ ನಂತರ ರುಬ್ಬಿಟ್ಟುಕೊಂಡ ಮಸಾಲಾ ಮತ್ತು ಅಗತ್ಯ ಪ್ರಮಾಣದ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಸುಮಾರು 4 ರಿಂದ 5 ನಿಮಿಷ ಬೇಯಿಸಿ. 5 ನಿಮಿಷಗಳ ನಂತರ, ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ ಚೆನ್ನಾಗಿ ಮಿಶ್ರಣ ಮಾಡಿ, ಪುನಃ ಒಂದೆರಡು ನಿಮಿಷ ಬೇಯಿಸಿ. ಒಂದು ನಿಮಿಷದ ನಂತರ ಸ್ಟವ್ ಆಫ್ ಮಾಡಿ ಮತ್ತು ಪ್ರಾನ್ ಪೆಪ್ಪರ್ ಫ್ರೈ ಅನ್ನು ತೆಗೆದುಕೊಂಡು ಅದನ್ನು ಪ್ಲೇಟ್‌ನಲ್ಲಿ ಇರಿಸಿ ಮತ್ತು ಬಿಸಿಯಾಗಿ ಬಡಿಸಿ.ಇದನ್ನು ಸ್ಲೈಡ್ಸ್ ಆಗಿ ಸೇವಿಸಬಹುದು. ಬಿಸಿ ಬಿಸಿ ಅನ್ನದ ಜೊತೆ ಕಲೆಸಿ ತಿನ್ನಲು ಚೆನ್ನಾಗಿರುತ್ತದೆ. ಈ ರೀತಿ ಸಿಗಡಿ ಪೆಪ್ಪರ್ ಫ್ರೈ ಮಾಡಿ ಖಂಡಿತ ಎಲ್ಲರೂ ಇಷ್ಟಪಟ್ಟು ತಿಂತಾರೆ.

mysore-dasara_Entry_Point