ಆಂಧ್ರ ಸ್ಟೈಲ್ ರೆಸಿಪಿ ಇಷ್ಟಪಡೋರಿಗಾಗಿ ಇಲ್ಲಿದೆ ಗೊಂಗುರ ಎಗ್ ಕರಿ, ಇದು ಅನ್ನಕ್ಕೂ ಚಪಾತಿಗೂ ಬೆಸ್ಟ್ ಕಾಂಬಿನೇಷನ್; ಮಾಡೋದು ಸುಲಭ
ಆಂಧ್ರ ಶೈಲಿಯ ಆಹಾರ ಖಾದ್ಯಗಳು ಮಾಂಸಾಹಾರ ಪ್ರಿಯರಿಗೆ ಸಖತ್ ಇಷ್ಟವಾಗೋದು ಸುಳ್ಳಲ್ಲ. ಯಾಕೆಂದರೆ ಇದರ ಭಿನ್ನವಾದ ರುಚಿ. ಖಾರ ಖಾರವಾಗಿ, ಮಸಾಲೆಭರಿತ ಆಹಾರಗಳು ಬಾಯಿ ರುಚಿಯನ್ನ ಇನ್ನಷ್ಟು ಹೆಚ್ಚಿಸೋದು ಸುಳ್ಳಲ್ಲ. ಅಂತಹ ಖಾದ್ಯಗಳಲ್ಲಿ ಗೊಂಗುರ ಎಗ್ ಕರಿ ಕೂಡ ಒಂದು. ಇದನ್ನ ಮಾಡೋದು ಹೇಗೆ ನೋಡಿ.
ಭಾನುವಾರದ ದಿನ ಮನೆಯಲ್ಲಿ ಏನಾದ್ರೂ ವಿಶೇಷವಾದ ಖಾದ್ಯ ಮಾಡಬೇಕು ಎಂದು ಮಾಂಸಾಹಾರಿಗಳು ಇಷ್ಟಪಡುತ್ತಾರೆ. ನೀವು ಮಾಂಸಾಹಾರಿಗಳಾಗಿದ್ದು ಭಾನುವಾರದ ಸಂಜೆ ಅನ್ನ ಅಥವಾ ಚಪಾತಿ ಜೊತೆ ನೆಂಜಿಕೊಳ್ಳಲು ಏನಾದ್ರೂ ಮಾಡೋಣ ಅಂದುಕೊಳ್ಳುತ್ತಿದ್ದರೆ ಗೊಂಗುರ ಎಗ್ ಕರಿ ಟ್ರೈ ಮಾಡಬಹುದು. ಇದು ರುಚಿ ಜೊತೆ ಆರೋಗ್ಯಕ್ಕೂ ಒಳ್ಳೆಯದು.
ಗೊಂಗುರ ಹಾಗೂ ಮೊಟ್ಟೆ ಎರಡೂ ಆರೋಗ್ಯಕ್ಕೆ ಉತ್ತಮ. ಈ ಎರಡನ್ನೂ ಸೇರಿಸಿ ಸ್ವಲ್ಪ ಮಸಾಲೆಯುಕ್ತ ಕರಿ ತಯಾರಿಸಿದ್ರೆ ಆಹಾ ಅದರ ರುಚಿ ತಿಂದರವರಿಗಷ್ಟೇ ಗೊತ್ತು. ಈ ರೆಸಿಪಿಯನ್ನು ತಯಾರಿಸೋದು ಸುಲಭ. ಅನ್ನಕ್ಕೆ ಇದು ಮಸ್ತ್ ಕಾಂಬಿನೇಷನ್. ದೋಸೆ, ಚಪಾತಿಗೂ ಹೊಂದುತ್ತೆ. ಹಾಗಾದರೆ ಆಂಧ್ರ ಶೈಲಿ ಗೊಂಗುರ ಎಗ್ ಕರಿ ಮಾಡುವುದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ಎಂಬ ವಿವರ ಇಲ್ಲಿದೆ.
ಗೊಂಗುರ ಎಗ್ ಕರಿ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 4, ಗೊಂಗುರ ಎಲೆ – 2 ಕಟ್ಟು, ಎಣ್ಣೆ – 2 ಚಮಚ, ಈರುಳ್ಳಿ – 2, ಹಸಿಮೆಣಸು – 4, ಅರಿಸಿನ – ಅರ್ಧ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್– ಅರ್ಧ ಚಮಚ, ಟೊಮೆಟೊ – 2, ಖಾರದಪುಡಿ – ಅರ್ಧ ಚಮಚ, ಕೊತ್ತಂಬರಿ ಪುಡಿ – 1 ಚಮಚ, ಜೀರಿಗೆ ಪುಡಿ – 1ಚಮಚ, ಗರಂ ಮಸಾಲ – 1 ಚಮಚ,
ಗೊಂಗುರ ಎಗ್ ಕರಿ ರೆಸಿಪಿ
ಮೊಟ್ಟೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಅರ್ಧಕ್ಕೆ ಕತ್ತರಿಸಿ ಬದಿಗಿರಿಸಿ. ಗೊಂಗುರ ಎಲೆಗಳನ್ನು ಚೆನ್ನಾಗಿ ತೊಳೆದು ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಕುದಿಸಿದರೆ ರುಚಿ ಹೆಚ್ಚುತ್ತದೆ. ಈಗ ಒಲೆಯ ಮೇಲೆ ಬಾಣಲಿ ಇಟ್ಟು ಎಣ್ಣೆ ಹಾಕಿ. ಎಣ್ಣೆಯನ್ನು ಮೊಟ್ಟೆಗಳನ್ನು ಫ್ರೈ ಮಾಡಿ ಪಕ್ಕಕ್ಕೆ ಇರಿಸಿ. ಅದೇ ಎಣ್ಣೆಗೆ ವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಹಾಕಿ ಫ್ರೈ ಮಾಡಿ. ನಂತರ ಜೀರಿಗೆ ಹಾಕಿ ಹುರಿಯಿರಿ. ಇದಕ್ಕಾಗಿ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ಇದಕ್ಕೆ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಟೊಮೆಟೊ ಚೂರುಗಳನ್ನು ಸೇರಿಸಿ ಮಿಶ್ರಣ ಮಾಡಿ ಪಾತ್ರೆಗೆ ಮುಚ್ಚಳ ಮುಚ್ಚಿ ಬೇಯಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಆ ಮಿಶ್ರಣಕ್ಕೆ ಕೊತ್ತಂಬರಿ ಪುಡಿ, ಖಾರದಪುಡಿ, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಮೊದಲೇ ಪೇಸ್ಟ್ ಮಾಡಿಟ್ಟುಕೊಂಡ ಗೊಂಗುರ ಪೇಸ್ಟ್ ಸೇರಿಸಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ 10 ನಿಮಿಷಗಳ ಕಾಲ ಬೇಯಿಸಿ. ಕೊನೆಯಲ್ಲಿ ಬೇಯಿಸಿಟ್ಟುಕೊಂಡ ಮೊಟ್ಟೆ ಸೇರಿಸಿ 10 ನಿಮಿಷಗಳ ಕಾಲ ಹಾಗೆ ಬಿಡಿ. ಇದು ದಪ್ಪ ಗ್ರೇವಿಯಂತಾಗಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟೌ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಗೊಂಗುರ ಮೊಟ್ಟೆ ಕರಿ ಸವಿಯಲು ಸಿದ್ಧ.