Masala Omelette: ಒಂದೇ ರುಚಿಯ ಆಮ್ಲೆಟ್‌ ತಿಂದು ಬೇಸರ ಮೂಡಿದ್ರೆ, ಮಸಾಲಾ ಆಮ್ಲೆಟ್‌ ಟ್ರೈ ಮಾಡಿ, ಟೇಸ್ಟ್‌ ಸಖತ್‌ ಆಗಿರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Masala Omelette: ಒಂದೇ ರುಚಿಯ ಆಮ್ಲೆಟ್‌ ತಿಂದು ಬೇಸರ ಮೂಡಿದ್ರೆ, ಮಸಾಲಾ ಆಮ್ಲೆಟ್‌ ಟ್ರೈ ಮಾಡಿ, ಟೇಸ್ಟ್‌ ಸಖತ್‌ ಆಗಿರುತ್ತೆ

Masala Omelette: ಒಂದೇ ರುಚಿಯ ಆಮ್ಲೆಟ್‌ ತಿಂದು ಬೇಸರ ಮೂಡಿದ್ರೆ, ಮಸಾಲಾ ಆಮ್ಲೆಟ್‌ ಟ್ರೈ ಮಾಡಿ, ಟೇಸ್ಟ್‌ ಸಖತ್‌ ಆಗಿರುತ್ತೆ

ಮೊಟ್ಟೆಯಿಂದ ಮಾಡುವ ಖಾದ್ಯಗಳಲ್ಲಿ ಬಹಳ ಬೇಗ ತಯಾರಿಸಬಹುದಾದ ಖಾದ್ಯ ಎಂದರೆ ಆಮ್ಲೆಟ್‌. ಇದು ಹಲವರಿಗೆ ಫೇವರಿಟ್‌. ಆದರೆ ದಿನಾ ಆಮ್ಲೆಟ್‌ ರುಚಿ ಕಂಡ್ರೆ ನಾಲಿಗೆಯೂ ಒಲ್ಲೆ ಎನ್ನುತ್ತೆ. ಹಾಗಿದ್ದಾಗ ನೀವು ಮಸಾಲಾ ಆಮ್ಲೆಟ್‌ ತಯಾರಿಸಬಹುದು. ಇದರ ರುಚಿಗೆ ನೀವಷ್ಟೇ ಅಲ್ಲ ಮಕ್ಕಳು ಕೂಡ ಫಿದಾ ಆಗ್ತಾರೆ.

ಒಂದೇ ರುಚಿಯ ಆಮ್ಲೆಟ್‌ ತಿಂದು ಬೇಸರ ಮೂಡಿದ್ರೆ, ಮಸಾಲಾ ಆಮ್ಲೇಟ್‌ ಟ್ರೈ ಮಾಡಿ, ಟೇಸ್ಟ್‌ ಸಖತ್‌ ಆಗಿರುತ್ತೆ
ಒಂದೇ ರುಚಿಯ ಆಮ್ಲೆಟ್‌ ತಿಂದು ಬೇಸರ ಮೂಡಿದ್ರೆ, ಮಸಾಲಾ ಆಮ್ಲೇಟ್‌ ಟ್ರೈ ಮಾಡಿ, ಟೇಸ್ಟ್‌ ಸಖತ್‌ ಆಗಿರುತ್ತೆ

ನಾನ್‌ವೆಜ್‌ ಪ್ರಿಯರಿಗೆ ಊಟದ ಜೊತೆ ನೆಂಜಿಕೊಳ್ಳಲು ಏನು ಇಲ್ಲದೇ ಇದ್ದಾಗ ಆಮ್ಲೆಟ್‌ ಸಂಗಾತಿಯಾಗುತ್ತದೆ. ಆಮ್ಲೆಟ್‌ ನಿಮಗೆ ಎರಡು ತುತ್ತು ಊಟ ಹೆಚ್ಚಿಗೆ ಸೇರುವಂತೆ ಮಾಡುವುದು ಸುಳ್ಳಲ್ಲ. ಹಾಗಂತ ಪ್ರತಿದಿನ ಒಂದೇ ರುಚಿಯ ಆಮ್ಲೆಟ್‌ ತಿಂದ್ರೆ ನಾಲಿಗೆ ಬೇಸರ ಮೂಡೋದು ಖಂಡಿತ. ಅದಕ್ಕಾಗಿ ನೀವು ಮಸಾಲೆ ಆಮ್ಲೆಟ್‌ ಟ್ರೈ ಮಾಡಬಹುದು. ಇದರ ರುಚಿಗೆ ಮನೆಮಂದಿಯೆಲ್ಲಾ ಫಿದಾ ಆಗೋದು ಖಂಡಿತ.

ಕಡಿಮೆ ಸಮಯದಲ್ಲಿ, ಕಡಿಮೆ ಪದಾರ್ಥಗಳನ್ನು ಬಳಸಿ ತಯಾರಿಸುವ ಮಸಾಲೆ ಆಮ್ಲೆಟ್‌ ಆರೋಗ್ಯಕ್ಕೂ ಉತ್ತಮ. ಇದು ಮಕ್ಕಳಿಗೂ ಇಷ್ಟವಾಗುವ ರೆಸಿಪಿ. ಹಾಗಾದ್ರೆ ಇದನ್ನು ತಯಾರಿಸಲು ಏನೇನು ಬೇಕು, ಮಾಡೋದು ಹೇಗೆ ನೋಡಿ.

ಮಸಾಲಾ ಆಮ್ಲೆಟ್ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಮೊಟ್ಟೆಗಳು - ನಾಲ್ಕು, ಈರುಳ್ಳಿ - ಒಂದು, ಹಸಿರು ಮೆಣಸಿನಕಾಯಿ - ಎರಡು, ಕ್ಯಾರೆಟ್ - ಒಂದು, ಕ್ಯಾಪ್ಸಿಕಂ - ಎರಡು, ಉಪ್ಪು - ರುಚಿಗೆ, ಹಾಲು - ಎರಡು ಚಮಚಗಳು, ಕಾಳುಮೆಣಸಿನ ಪುಡಿ - ಕಾಲು ಚಮಚ, ಅರಿಶಿನ - ಕಾಲು ಚಮಚ, ಕೊತ್ತಂಬರಿ ಪುಡಿ - ಎರಡು ಚಮಚ, ಎಣ್ಣೆ - ಎರಡು ಚಮಚ, ಗರಂ ಮಸಾಲಾ ಪುಡಿ - ಕಾಲು ಚಮಚ

ಮಸಾಲಾ ಆಮ್ಲೆಟ್ ತಯಾರಿಸುವ ವಿಧಾನ

ಒಂದು ಬೌಲ್‌ನಲ್ಲಿ ಮೊಟ್ಟೆಗಳನ್ನು ಒಡೆದು ಹಾಕಿ. ನೊರೆ ಬರುವವರೆಗೆ ಅವುಗಳನ್ನು ಚೆನ್ನಾಗಿ ತಿರುಗಿಸಿ. ಇದಕ್ಕೆ ಬೇಕಾದಷ್ಟು ಉಪ್ಪು, ಅರಿಶಿನ ಮತ್ತು ಗರಂ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಹೆಚ್ಚಿಟ್ಟುಕೊಂಡ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಖಾರದ ಪುಡಿ, ಧನಿಯಾ ಪುಡಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಲೆಯ ಮೇಲೆ ಪಾನ್‌ ಇಟ್ಟು ಸ್ವಲ್ಪ ಎಣ್ಣೆ ಹಾಕಿ. ಮೊಟ್ಟೆಯ ಮಿಶ್ರಣವನ್ನು ಆಮ್ಲೆಟ್‌ನಂತೆ ಹರಡಿ. ಕಡಿಮೆ ಉರಿಯಲ್ಲಿ ಇಡಬೇಕು ಅನ್ನೋದು ಮರಿಬೇಡಿ. ಹೀಗೆ ಕಡಿಮೆ ಉರಿಯಲ್ಲಿ ಇಟ್ಟುಕೊಳ್ಳುವುದರಿಂದ, ಆಮ್ಲೆಟ್‌ಗೆ ಹಾಕಿದ ತರಕಾರಿಗಳು ಚೆನ್ನಾಗಿ ಬೇಯುತ್ತವೆ. ಈ ಮಸಾಲಾ ಆಮ್ಲೆಟ್ ತಿನ್ನುವುದರಿಂದ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಮೊಟ್ಟೆ ನಮಗೆ ಹಲವಾರು ಪೋಷಕಾಂಶಗಳನ್ನು ನೀಡುತ್ತದೆ. ಈ ಆಮ್ಲೆಟ್‌ನಲ್ಲಿ ಮೊಟ್ಟೆಯೊಂದಿಗೆ ವಿವಿಧ ತರಕಾರಿಗಳಿವೆ. ಆದ್ದರಿಂದ ಹೆಚ್ಚಿನ ಪೋಷಕಾಂಶಗಳು ಲಭ್ಯವಿವೆ. ಮೊಟ್ಟೆಯಲ್ಲಿ ವಿಟಮಿನ್ ಬಿ 12, ಕಬ್ಬಿಣ, ಸೆಲೆನಿಯಮ್ ಮತ್ತು ವಿಟಮಿನ್ ಡಿ ನಂತಹ ಅಗತ್ಯ ಪೋಷಕಾಂಶಗಳಿವೆ. ಒಮೆಗಾ 3 ಕೊಬ್ಬಿನಾಮ್ಲಗಳು ಲಭ್ಯವಿದೆ. ಕ್ಯಾರೆಟ್ ಮತ್ತು ಕ್ಯಾಪ್ಸಿಕಂನಂತಹ ತರಕಾರಿಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇವು ಮೆದುಳಿಗೆ ತುಂಬಾ ಒಳ್ಳೆಯದು. ಮೊಟ್ಟೆ ಮಸಾಲಾ ಆಮ್ಲೆಟ್ ಸಂಪೂರ್ಣ ಊಟಕ್ಕೆ ಪರ್ಫೆಕ್ಟ್‌ ಜೋಡಿ. ಇದರಿಂದ ಸುಲಭವಾಗಿ ಹೊಟ್ಟೆ ತುಂಬುತ್ತದೆ.

Whats_app_banner