Paneer Egg Popcorn: ಸಂಜೆಯ ಬೇಸರ ಕಳೆಯಲು ಸ್ಪೆಷಲ್ ಸ್ನ್ಯಾಕ್ಸ್ ಮಾಡಬೇಕು ಅಂತಿದೀರಾ, ಪನೀರ್ ಎಗ್ ಪಾಪ್‌ಕಾರ್ನ್ ಟ್ರೈ ಮಾಡಿ
ಸಂಜೆ ಹೊತ್ತಿಗೆ ಏನಾದ್ರೂ ತಿನ್‌ಬೇಕು ಅನ್ನೋ ಕಡುಬಯಕೆ ಆಗೋದು ಸಹಜ. ಅದರಲ್ಲೂ ತಂಪಾದ ವಾತಾವರಣದಲ್ಲಿ ರುಚಿಯಾದ ಖಾದ್ಯಗಳು ನಾಲಿಗೆಗೆ ಹಿತ ಎನ್ನಿಸುತ್ತವೆ. ಮನೆಯಲ್ಲೇ ಏನಾದ್ರೂ ಸ್ಪೆಷಲ್ ಸ್ನ್ಯಾಕ್ಸ್ ಮಾಡಬೇಕು ಅಂತಿದ್ರೆ ಪನೀರ್ ಎಗ್ ಪಾಪ್‌ಕಾರ್ನ್ ಟ್ರೈ ಮಾಡಿ,ಹೆಸರಷ್ಟೇ ಅಲ್ಲ ರುಚಿಯೂ ಡಿಫ್ರೆಂಟ್.
ಮನೆಯಲ್ಲಿ ಸುಮ್ಮನೆ ಕೂತಿದ್ದಾಗ ತಿನ್ನುವ ಬಯಕೆ ಹೆಚ್ಚೋದು ಸಹಜ. ಅದರಲ್ಲೂ ಸಂಜೆ ಹೊತ್ತಿಗೆ ಏನಾದ್ರೂ ಸ್ನ್ಯಾಕ್ಸ್ ಬೇಕು ಅನ್ನಿಸುತ್ತೆ, ಮಕ್ಕಳು ಕೂಡ ಶಾಲೆ ಬಿಟ್ಟು ಬಂದ ಮೇಲೆ ಪ್ರತಿದಿನ ವೈರೆಟಿ ಆಗಿರೋ ತಿಂಡಿ ಮಾಡಿಕೊಡುವಂತೆ ಹಟ ಮಾಡುತ್ತಾರೆ. ಹಾಗಾಗಿದ್ದಾಗ ಏನ್ ಮಾಡೋದಲ್ಲ ಅಂತ ನಿಮಗೆ ತಲೆ ಕೆಡೋದು ಖಂಡಿತ. ಅದಕ್ಕಾಗಿ ನೀವು ಈ ಸ್ಪೆಷಲ್ ಪಾಪ್‌ಕಾರ್ನ್ ತಯಾರಿಸಬಹುದು.
ಇದೇನಪ್ಪಾ ಅಂಥದ್ದು ಸ್ಪೆಷಲ್ ಪಾಪ್‌ಕಾರ್ನ್ ಏನೋ ಮಸಾಲೆ ಬದಲಿಸಿ ಸ್ಪೆಷಲ್ ಅಂತಾರೆ ಅಂದ್ಕೋಬೇಡಿ. ಇದು ಮಸಾಲೆ ಬದಲಿಸುವುದಲ್ಲ. ಬದಲಿಗೆ ಹೆಸರಷ್ಟೇ ಪಾಪ್‌ಕಾರ್ನ್ ತಿನ್ನೋದು ಡಿಫ್ರೆಂಟ್. ನಾವೀಗ ಹೇಳ್ತಾ ಇರೋದು ಪನೀರ್ ಎಗ್ ಪಾಪ್‌ಕಾರ್ನ್ ಬಗ್ಗೆ. ಮಳೆ. ಚಳಿ ವಾತಾವರಣ ಇರುವಾಗ ಈ ಪನೀರ್ ಎಗ್ ಪಾಪ್‌ಕಾರ್ನ್ ತಿಂತಾ ಇದ್ರೆ ಯಾವ ಹೋಟೆಲ್‌ಗೆ ಹೋಗೋಕು ಮನಸ್ಸು ಬರೊಲ್ಲ, ಅಷ್ಟು ರುಚಿಯಾಗಿ ಇರುತ್ತೆ ಈ ರೆಸಿಪಿ. ಇದನ್ನ ಒಮ್ಮೆ ಮಾಡಿ ತಿಂದ್ರೆ ಮತ್ತೆ ಮತ್ತೆ ಬೇಕು ಅನ್ನಿಸೋದು ಸುಳ್ಳಲ್ಲ. ಹಾಗಾದ್ರೆ ಇದನ್ನು ಮಾಡೋಕೆ ಏನೆಲ್ಲಾ ಬೇಕು, ತಯಾರಿಸೋದು ಹೇಗೆ ನೋಡಿ.
ಪನೀರ್ ಎಗ್ ಪಾಪ್ ಕಾರ್ನ್ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಪನೀರ್/ತೋಫು - 250 ಗ್ರಾಂ, ಖಾರದ ಪುಡಿ - 1 ಟೀ ಚಮಚ, ಓರೆಗಾನೊ - 1/2 ಟೀ ಚಮಚ, ಕರಿಮೆಣಸು ಪುಡಿ - 1/4 ಟೀ ಚಮಚ, ಹರುಳಿಹಿಟ್ಟು - 1/2 ಕಪ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಅರಿಶಿನ - ಚಿಟಿಕೆ, ಅಡಿಗೆ ಸೋಡಾ - ಚಿಟಿಕೆ, ಬ್ರೆಡ್ ತುಂಡುಗಳು - ಅರ್ಧ ಕಪ್, ಉಪ್ಪು - ರುಚಿಗೆ ತಕ್ಕಷ್ಟು. ಮೊಟ್ಟೆ - 2
ಪನೀರ್ ಪಾಪ್ ಕಾರ್ನ್ ಮಾಡುವ ವಿಧಾನ
ಮೊದಲು ಪನೀರ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಒಂದು ಪಾತ್ರೆಯಲ್ಲಿ ಪನೀರ್ ತುಂಡುಗಳು, ಕಾಳುಮೆಣಸಿನ ಪುಡಿ, ಖಾರದಪುಡಿ, ಹಳದಿ ಓರೆಗಾನೊ, ಸ್ವಲ್ಪ ಉಪ್ಪು ಸೇರಿಸಿ ಮತ್ತು ಅರ್ಧ ಗಂಟೆ ಮ್ಯಾರಿನೇಟ್ ಮಾಡಿ ಇಡಿ. ಇನ್ನೊಂದು ಪಾತ್ರೆಯಲ್ಲಿ ಬಕ್‌ವೀಟ್ (ಹುರುಳಿಹಿಟ್ಟು), ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಡುಗೆ ಸೋಡಾ, ಸ್ವಲ್ಪ ಕಾಳುಮೆಣಸಿನ ಪುಡಿ, ಸ್ವಲ್ಪ ಮೆಣಸಿನ ಪುಡಿ, ಸ್ವಲ್ಪ ಉಪ್ಪು, ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ.
ಈಗ ಮ್ಯಾರಿನೇಟ್ ಮಾಡಿರುವ ಪನೀರ್ ತುಂಡುಗಳನ್ನು ಈ ಹಿಟ್ಟಿನ ಮಿಶ್ರಣದಲ್ಲಿ ಒಂದೊಂದಾಗಿ ಅದ್ದಿ ಮತ್ತು ನಂತರ ಅವುಗಳನ್ನು ಬ್ರೆಡ್ ತುಂಡುಗಳನ್ನು ಪುಡಿ ಮಾಡಿಟ್ಟುಕೊಂಡ ಪಾತ್ರೆಗೆ ಅದ್ದಿ. ಇದನ್ನು ಒಡೆದು ಚೆನ್ನಾಗಿ ಮಿಶ್ರಣ ಮಾಡಿಕೊಂಡ ಮೊಟ್ಟೆ ಮಿಶ್ರಣದಲ್ಲಿ ಅದ್ದಿ. ಹೆಚ್ಚುವರಿ ಕ್ರಂಚ್‌ಗಾಗಿ ನೀವು ಪನೀರ್ ಅನ್ನು ಮೊಟ್ಟೆ ಅಥವಾ ಬ್ಯಾಟರ್‌ನಲ್ಲಿ ಅದ್ದುವ ಮೂಲಕ ಡಬಲ್ ಕೋಟ್ ಮಾಡಬಹುದು. ನೀವು ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದರೆ, ನೀವು ಪನೀರ್ ಬದಲಿಗೆ ತೋಫುವನ್ನು ಬದಲಿಸಬಹುದು ಮತ್ತು ಜೊತೆಗೆ ಮೊಟ್ಟೆಯನ್ನು ಸ್ಕಿಪ್ ಮಾಡಬಹುದು. ಆದರೆ ಇದರ ರುಚಿ ಮಾತ್ರ ಸಖತ್ ಟೇಸ್ಟಿ ಆಗಿರೋದು ಸುಳ್ಳಲ್ಲ.