ಕನ್ನಡ ಸುದ್ದಿ  /  Lifestyle  /  Food Peanut Chutney Recipe How To Make Peanut Chutney Health Benefits Of Peanut Special Chutney Recipe Rst

Peanut Chutney: ಈ ರೀತಿ ಶೇಂಗಾ ಚಟ್ನಿ ಮಾಡಿದ್ರೆ ಇನ್ನೆರಡು ರೊಟ್ಟಿ ಎಕ್ಸ್ಟ್ರಾ ಸೇರೋದು ಪಕ್ಕಾ; ಟ್ರೈ ಮಾಡಿ

ಶೇಂಗಾ ಚಟ್ನಿ ರುಚಿ ತಿಂದೋರಿಗಷ್ಟೇ ಗೊತ್ತು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಶೇಂಗಾ ಚಟ್ನಿ ಫೇಮಸ್‌. ಇದು ಅನ್ನ, ದೋಸೆ, ರೊಟ್ಟಿಗೆ ಮಸ್ತ್‌ ಕಾಂಬಿನೇಷನ್‌. ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಇದು ಬೆಸ್ಟ್‌. ಸಿಂಪಲ್‌ ಆಗಿ, ಟೇಸ್ಟಿಯಾಗಿ ಮಾಡೋ ಶೇಂಗಾ ಚಟ್ನಿ ರೆಸಿಪಿ ಇಲ್ಲಿದೆ.

ಈ ರೀತಿ ಶೇಂಗಾ ಚಟ್ನಿ ಮಾಡಿದ್ರೆ ಇನ್ನೆರಡು ರೊಟ್ಟಿ ಎಕ್ಸ್ಟ್ರಾ ಸೇರೋದು ಪಕ್ಕಾ; ಟ್ರೈ ಮಾಡಿ
ಈ ರೀತಿ ಶೇಂಗಾ ಚಟ್ನಿ ಮಾಡಿದ್ರೆ ಇನ್ನೆರಡು ರೊಟ್ಟಿ ಎಕ್ಸ್ಟ್ರಾ ಸೇರೋದು ಪಕ್ಕಾ; ಟ್ರೈ ಮಾಡಿ

ಕರ್ನಾಟಕವು ಆಹಾರ ವೈವಿಧ್ಯಗಳ ರಾಜ್ಯ. ಇಲ್ಲಿನ ಪ್ರತಿ ಜಿಲ್ಲೆಯಲ್ಲೂ ವಿಶೇಷ ಖಾದ್ಯಗಳನ್ನ ನೀವು ಸವಿಯಬಹುದು. ಅಲ್ಲದೇ ಕರ್ನಾಟಕದ ಆಹಾರಪದ್ಧತಿಯೂ ಆರೋಗ್ಯಪೂರ್ಣವಾಗಿಯೂ ಇರುತ್ತದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ತಯಾರಿಸುವ ಒಂದು ವಿಶೇಷ ಸೈಡ್‌ ಡಿಶ್‌ ಶೇಂಗಾ ಚಟ್ನಿ. ಶೇಂಗಾ ಬೀಜ ಹುರಿದು ತಯಾರಿಸುವ ಈ ಚಟ್ನಿಯ ಸ್ವಾದವನ್ನು ಸವಿದೇ ನೋಡಬೇಕು.

ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹೀಗೆ ಎಲ್ಲದ್ದಕ್ಕೂ ಈ ಚಟ್ನಿ ಮಸ್ತ್‌ ಕಾಂಬಿನೇಷನ್‌ ಎನ್ನುವುದರಲ್ಲಿ ಅನುಮಾನ ಬೇಡ. ಶೇಂಗಾ ಬೀಜವು ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾರಣ ಇದರ ಸೇವನೆಯಿಂದ ನಮ್ಮ ದೇಹಕ್ಕೆ ಸಾಕಷ್ಟು ಅನುಕೂಲಗಳಿವೆ. ಇದೊಂದು ಸಿಂಪಲ್‌ ರೆಸಿಪಿಯಾಗಿದ್ದು, 5 ನಿಮಿಷಗಳಲ್ಲಿ ಇದನ್ನು ಮಾಡಬಹುದು. ಈ ರೆಸಿಪಿಯನ್ನು ನೀವು ಕಲಿತು ನಿಮ್ಮ ಮನೆಯಲ್ಲೂ ತಯಾರಿಸಿ.

ಶೇಂಗಾ ಚಟ್ನಿ

ಬೇಕಾಗುವ ಪದಾರ್ಥಗಳು: ಶೇಂಗಾ - 1ಕಪ್‌, ಹಸಿಮೆಣಸು - 4, ಬೆಳ್ಳುಳ್ಳಿ - 10 ಎಸಳು, ಬೆಲ್ಲ - ಚಿಟಿಕೆ, ಉಪ್ಪು - ರುಚಿಗೆ, ಹುಣಸೆಹಣ್ಣು - ಅರ್ಧ ನಿಂಬೆಗಾತ್ರದ್ದು ಒಗ್ಗರಣೆಗೆ: ಕರಿಬೇವು, ಸಾಸಿವೆ, ಜೀರಿಗೆ, ಎಣ್ಣೆ

ತಯಾರಿಸುವ ವಿಧಾನ: ಶೇಂಗಾವನ್ನು ಪರಿಮಳ ಬರುವವರೆಗೂ ಹುರಿದುಕೊಂಡು ತಣ್ಣಗಾಗಲು ಬಿಡಿ. ನಂತರ ಅದರ ಸಿಪ್ಪೆ ಬೇರ್ಪಡಿಸಿ. ಒಂದು ಪ್ಯಾನ್‌ನಲ್ಲಿ ಅರ್ಧ ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹಸಿಮೆಣಸು, ಬೆಳ್ಳುಳ್ಳಿ ಸೇರಿಸಿ ಹುರಿದುಕೊಳ್ಳಿ. ಮಿಕ್ಸಿ ಜಾರಿಗೆ ಹುರಿದು ಸಿಪ್ಪೆ ಬೇರ್ಪಡಿಸಿದ ಶೇಂಗಾ, ಹುರಿದುಕೊಂಡ ಹಸಿಮೆಣಸು, ಬೆಳ್ಳುಳ್ಳಿ, ಬೆಲ್ಲ, ಹುಣಸೆರಸ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಗ್ಗರಣೆ ಮಾಡಿ ಇದಕ್ಕೆ ಸೇರಿಸಿ. ಬೇಕಿದ್ದರೆ ಹಸಿ ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಸೇರಿಸಿಕೊಳ್ಳಬಹುದು. ದೋಸೆ, ಪೂರಿ, ಇಡ್ಲಿ, ಅನ್ನ, ರೊಟ್ಟಿಗೆ ಇದು ಸಖತ್‌ ಆಗಿ ಹೊಂದುತ್ತೆ.

ಶೇಂಗಾ ಬೀಜದ ಆರೋಗ್ಯ ಪ್ರಯೋಜನಗಳು

ಶೇಂಗಾ ಬೀಜದ ಸೇವನೆಯಿಂದ ದೇಹಕ್ಕೆ ನೂರಾರು ಪ್ರಯೋಜನಗಳಿವೆ. ಶೇಂಗಾ ಬೀಜದಿಂದ ಚಟ್ನಿ ಮಾತ್ರವಲ್ಲದ್ದೇ, ಚಟ್ನಿ ಪುಡಿ ಕೂಡ ತಯಾರಿಸಿ ತಿನ್ನಬಹುದು. ಇದು ಹೃದಯದ ಆರೋಗ್ಯಕ್ಕೆ ತುಂಬಾ ಉತ್ತಮ. ಶೇಂಗಾವು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಮೆದುಳನ್ನು ಚುರುಕುಗೊಳಿಸುವ ಜೊತೆಗೆ ಮೂಳೆಗಳನ್ನೂ ಸದೃಢವಾಗಿಸುತ್ತದೆ. ಕ್ಯಾನ್ಸರ್‌ನ ಅಪಾಯವನ್ನು ತಡೆಯಲು ಕೂಡ ಇದು ಸಹಕಾರಿ.

ಶೇಂಗಾ ಬೀಜವು ಪ್ರೊಟೀನ್‌ ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಶಕ್ತಿಯಂತಹ ಸಮಸ್ಯೆಗಳು ಕೂಡ ದೂರಾಗುತ್ತದೆ. ಕಣ್ಣಿನ ದೃಷ್ಟಿ ಚುರುಕಾಗಲೂ ಕೂಡ ಇದು ಸಹಕಾರಿ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ